ಕೊರೊನಾ ವೈರಸ್ (Corona virus) ಕಾರಣದಿಂದ ಕಳೆದ ಮೇ ತಿಂಗಳಲ್ಲಿ ಅರ್ಧಕ್ಕೆ ನಿಂತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ (IPL 2021) ಪುನರಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ಸೆಪ್ಟೆಂಬರ್ 19 ಭಾನುವಾರದಿಂದ ಐಪಿಎಲ್ 2021 ಎರಡನೇ ಚರಣಕ್ಕೆ ಕ್ವಿಕ್ ಸ್ಟಾರ್ಟ್ ಸಿಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (MI vs CSK) ಕಾದಾಟ ನಡೆಸಲಿದ್ದು, ಅಭಿಮಾನಿಗಳು ಕಾದುಕುಳಿತಿದ್ದಾರೆ. ಈಗಾಗಲೇ ಬಹುತೇಕ ಎಲ್ಲ ಆಟಗಾರರು ಬಯೋಬಬಲ್ನಿಂದ ನೇರವಾಗಿ ಯುಎಇಗೆ (UAE) ತಲುಪಿ ತಮ್ಮ ಫ್ರಾಂಚೈಸಿ ಸೇರಿಕೊಂಡಿದ್ದು, ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಎರಡು ವರ್ಷಗಳ ಬಳಿಕ ಜನಸಾಮಾನ್ಯರು ಸ್ಟೇಡಿಯಂನಲ್ಲಿ ಕೂತು ಐಪಿಎಲ್ ಪಂದ್ಯಗಳನ್ನ ವೀಕ್ಷಿಸುವ ಅವಕಾಶ ಸಿಗುತ್ತಿದೆ. ಭಾರತದಲ್ಲಿ ನಡೆದ ಪಂದ್ಯಗಳಲ್ಲಿ ಪ್ರೇಕ್ಷಕರಿಗೆ ಸ್ಟೇಡಿಯಂ ಪ್ರವೇಶ ಇರಲಿಲ್ಲ. ಕಳೆದ ವರ್ಷದ ಐಪಿಎಲ್ ಟೂರ್ನಿಯೂ ಕೋವಿಡ್ ಕಾರಣಕ್ಕೆ ಯುಎಇಯಲ್ಲಿ ನಡೆದಿತ್ತು. ಆಗ ಪ್ರೇಕ್ಷಕರಿಲ್ಲದೇ ಪಂದ್ಯಗಳು ನಡೆದಿದ್ದವು. ಕಳೆದ ವರ್ಷ ಕೋವಿಡ್ ಮೊದಲು ಕಾಣಿಸಿಕೊಂಡಂದಿನಿಂದ ವಿಶ್ವದೆಲ್ಲೆಡೆ ಬಹುತೇಕ ಕ್ರಿಕೆಟ್ ಪಂದ್ಯಗಳು ಪ್ರೇಕ್ಷಕರ ಉಪಸ್ಥಿತಿಯಲ್ಲಿ ನಡೆದಿಲ್ಲ. ಟಿವಿಯಲ್ಲಿ ಪ್ರೇಕ್ಷಕರ ಧ್ವನಿಯನ್ನ ಕೃತಕವಾಗಿ ಸೃಷ್ಟಿಸಿ ಪಂದ್ಯಗಳ ಪ್ರಸಾರ ಮಾಡಲಾಗುತ್ತಿತ್ತು.
ಈಗ ದುಬೈ, ಅಬುಧಾಬಿ ಮತ್ತು ಶಾರ್ಜಾದಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ. ಆದರೆ, ಅರ್ಧ ಸ್ಟೇಡಿಯಂ ಮಾತ್ರ ಭರ್ತಿ ಮಾಡಬಹುದು. ದೈಹಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಇತ್ಯಾದಿ ಕ್ರಮಗಳನ್ನ ಜಾರಿಗೆ ತರಲಾಗುತ್ತಿದೆ. ಹಾಗೂ ಯುಎಇ ದೇಶದ ಕೊವಿಡ್ ನಿಯಮಗಳ ಪಾಲನೆಯಾಗುವಂತೆ ಎಚ್ಚರ ವಹಿಸಲಾಗುತ್ತಿದೆ. 20 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಇರುವ ಸ್ಟೇಡಿಯಂನಲ್ಲಿ 10 ಸಾವಿರ ಪ್ರೇಕ್ಷಕರಿಗೆ ಮಾತ್ರ ಬರಲು ಅನುವು ಮಾಡಿಕೊಡಲಾಗುತ್ತಿದೆ.
ಐಪಿಎಲ್ 2021 ಎಲ್ಲಾ ತಂಡಗಳ ಆಟಗಾರರ ಪಟ್ಟಿ ಇಲ್ಲಿದೆ:
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಎಬಿ ಡಿ ವಿಲಿಯರ್ಸ್, ಮೊಹಮ್ಮದ್ ಸಿರಾಜ್, ಜಾರ್ಜ್ ಗಾರ್ಟನ್, ಪವನ್ ದೇಶಪಾಂಡೆ, ಟಿಮ್ ಡೇವಿಡ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹಮದ್, ನವದೀಪ್ ಸೈನಿ, ವನಿಂದು ಹಸರಂಗ, ಕೈಲ್ ಜೇಮಿಸನ್ , ರಜತ್ ಪಾಟಿದಾರ್, ಸಚಿನ್ ಬೇಬಿ, ಮೊಹಮ್ಮದ್ ಅಜರುದ್ದೀನ್, ಯುಜುವೇಂದ್ರ ಚಾಹಲ್, ಡೇನಿಯಲ್ ಕ್ರಿಶ್ಚಿಯನ್, ಕೆಎಸ್ ಭರತ್, ಆಕಾಶ್ ದೀಪ್, ಸುಯಾಶ್ ಪ್ರಭುದೇಸಾಯಿ, ದುಷ್ಮಂತ ಚಮೀರಾ, ಹರ್ಷಲ್ ಪಟೇಲ್.
ಡೆಲ್ಲಿ ಕ್ಯಾಪಿಟಲ್ಸ್:
ರಿಷಭ್ ಪಂತ್ (ನಾಯಕ), ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್, ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೇಟ್ಮೇರ್, ಆರ್ ಅಶ್ವಿನ್, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ, ಲಲಿತ್ ಯಾದವ್, ಪ್ರವೀಣ್ ದುಬೆ, ಕಾಗಿಸೊ ರಬಾಡಾ, ಅನ್ರಿಕ್ ನಾರ್ಕಿಯಾ, ಇಶಾಂತ್ ಶರ್ಮಾ, ಸ್ಟೀವ್ ಸ್ಮಿತ್, ಅವೇಶ್ ಖಾನ್, ಉಮೇಶ್ ಯಾದವ್, ರಿಪಾಲ್ ಪಟೇಲ್, ವಿಷ್ಣು ವಿನೋದ್, ಲುಕ್ಮನ್ ಮೇರಿವಾಲಾ, ಎಂ ಸಿದ್ದಾರ್ಥ್, ಟಾಮ್ ಕರನ್, ಸ್ಯಾಮ್ ಬಿಲ್ಲಿಂಗ್ಸ್, ಬೆನ್ ಡ್ವಾರಶುಯಿಸ್.
ಚೆನ್ನೈ ಸೂಪರ್ ಕಿಂಗ್ಸ್:
ಮಹೇಂದ್ರ ಸಿಂಗ್ ಧೋನಿ (ನಾಯಕ), ಸುರೇಶ್ ರೈನಾ, ಅಂಬಟಿ ರಾಯುಡು, ರಾಬಿನ್ ಉತ್ತಪ್ಪ, ಕೆಎಂ ಆಸಿಫ್, ದೀಪಕ್ ಚಹಾರ್, ಡ್ವೇನ್ ಬ್ರಾವೋ, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ಎನ್ ಜಗದೀಸನ್, ಕರ್ಣ್ ಶರ್ಮಾ, ಲುಂಗಿ ಎನ್‌ಗಿಡಿ, ರವೀಂದ್ರ ಜಡೇಜಾ, ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್, ಸ್ಯಾಮ್ ಕರನ್, ಆರ್ ಸಾಯಿ ಕಿಶೋರ್, ಮೊಯೀನ್ ಅಲಿ, ಕೆ ಗೌತಮ್, ಚೇತೇಶ್ವರ ಪೂಜಾರ, ಹರಿಶಂಕರ್ ರೆಡ್ಡಿ, ಭಗತ್ ವರ್ಮ, ಸಿ ಹರಿ ನಿಶಾಂತ್, ಜೋಶ್ ಹೇಜಲ್‌ವುಡ್.
ಮುಂಬೈ ಇಂಡಿಯನ್ಸ್:
ರೋಹಿತ್ ಶರ್ಮಾ (ನಾಯಕ), ಆಡಮ್ ಮಿಲ್ನೆ, ಸೂರ್ಯಕುಮಾರ್ ಯಾದವ್, ಆದಿತ್ಯ ತಾರೆ, ಅನ್ಮೋಲ್‌ಪ್ರೀತ್ ಸಿಂಗ್, ಅನುಕುಲ್ ರಾಯ್, ಅರ್ಜುನ್ ತೆಂಡುಲ್ಕರ್, ಕ್ರಿಸ್ ಲಿನ್, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜೇಮ್ಸ್ ನೀಶಮ್, ಜಸ್ಪ್ರೀತ್ ಬೂಮ್ರಾ, ಜಯಂತ್ ಯಾದವ್, ಕಿರಾನ್ ಪೊಲಾರ್ಡ್, ಧವಳ್ ಕುಲಕರ್ಣಿ, ಕೃನಾಲ್ ಪಾಂಡ್ಯ, ಮಾರ್ಕೊ ಜಾನ್ಸೆನ್, ಮೊಹ್ಸಿನ್ ಖಾನ್, ನಾಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ಕ್ವಿಂಟನ್ ಡಿ ಕಾಕ್, ರಾಹುಲ್ ಚಹರ್, ಸೌರಭ್ ತಿವಾರಿ, ಟ್ರೆಂಟ್ ಬೋಲ್ಟ್, ಯುಧ್ವೀರ್ ಸಿಂಗ್.
ರಾಜಸ್ಥಾನ ರಾಯಲ್ಸ್:
ಸಂಜು ಸ್ಯಾಮ್ಸನ್ (ನಾಯಕ), ಯಶಸ್ವಿ ಜೈಸ್ವಾಲ್, ಅನುಜ್ ರಾವತ್, ರಿಯಾನ್ ಪರಾಗ್, ಮನನ್ ವೋಹ್ರಾ, ಡೇವಿಡ್ ಮಿಲ್ಲರ್, ಮಹಿಪಾಲ್ ಲೊಮರ್, ರಾಹುಲ್ ತೆವಾಟಿಯಾ, ಶ್ರೇಯಸ್ ಗೋಪಾಲ್, ಮಯಾಂಕ್ ಮಾರ್ಕಂಡೆ, ಗ್ಲೆನ್ ಫಿಲಿಪ್ಸ್, ತಬ್ರೇಜ್ ಶಮ್ಸಿ, ಜಯದೇವ್ ಉನದ್ಕಟ್, ಕಾರ್ತಿಕ್ ತ್ಯಾಗಿ, ಕ್ರಿಸ್ ಮೋರಿಸ್, ಶಿವಂ ದುಬೆ, ಮುಸ್ತಫಿಜುರ್ ರೆಹಮಾನ್, ಚೇತನ್ ಸಕಾರಿಯಾ, ಕೆಸಿ ಕರಿಯಪ್ಪ, ಲಿಯಾಮ್ ಲಿವಿಂಗ್‌ಸ್ಟನ್, ಕುಲ್ದಿಪ್ ಯಾದವ್, ಆಕಾಶ್ ಸಿಂಗ್.
ಪಂಜಾಬ್ ಕಿಂಗ್ಸ್:
ಕೆ. ಎಲ್. ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ಮಂದೀಪ್ ಸಿಂಗ್, ನಿಕೋಲಸ್ ಪೂರನ್, ಸರ್ಫರಾಜ್ ಖಾನ್, ಪ್ರಬ್ಸಿಮ್ರಾನ್ ಸಿಂಗ್, ದೀಪಕ್ ಹೂಡಾ, ರವಿ ಬಿಷ್ಣೋಯ್, ಎಂ ಅಶ್ವಿನ್, ಹರಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ಇಶಾನ್ ಪೊರೆಲ್, ದರ್ಶನ್ ನಲ್ಕಂಡೆ, ಅರ್ಷದೀಪ್ ಸಿಂಗ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಶಾರುಖ್ ಖಾನ್, ನಾಥನ್ ಎಲ್ಲಿಸ್, ಮೊಯಿಸ್ ಹೆನ್ರಿಕ್ಸ್, ಜಲಜ್ ಸಕ್ಸೇನಾ, ಉತ್ಕರ್ಶ್ ಸಿಂಗ್, ಫ್ಯಾಬಿಯನ್ ಅಲೆನ್, ಸೌರಭ್ ಕುಮಾರ್, ಏಡನ್ ಮಾರ್ಕ್ರಮ್
ಕೋಲ್ಕತ್ತಾ ನೈಟ್ ರೈಡರ್ಸ್:
ಇಯಾನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್, ಶುಬ್ಮನ್ ಗಿಲ್, ನಿತೀಶ್ ರಾಣಾ, ಟಿಮ್ ಸೀಫರ್ಟ್, ಆಂಡ್ರೆ ರಸೆಲ್, ಸುನಿಲ್ ನರೈನ್, ರಿಂಕು ಸಿಂಗ್, ಕುಲದೀಪ್ ಯಾದವ್, ಲಾಕಿ ಫರ್ಗ್ಯೂಸನ್, ಟಿಮ್ ಸೌಥಿ, ಕಮಲೇಶ್ ನಾಗರಕೋಟಿ, ಶಿವಂ ಮಾವಿ, ಸಂದೀಪ್ ವಾರಿಯರ್, ಪ್ರಸಿದ್ಧ್ ಕೃಷ್ಣ, ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, ಶಕೀಬ್ ಅಲ್ ಹಸನ್, ಶೆಲ್ಡನ್ ಜಾಕ್ಸನ್, ವೈಭವ್ ಅರೋರಾ, ಹರ್ಭಜನ್ ಸಿಂಗ್, ಕರುಣ್ ನಾಯರ್, ಬೆನ್ ಕಟಿಂಗ್, ವೆಂಕಟೇಶ್ ಅಯ್ಯರ್, ಪವನ್ ನೇಗಿ.
ಸನ್ ರೈಸರ್ಸ್ ಹೈದರಾಬಾದ್:
ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಪ್ರಿಯಂ ಗಾರ್ಗ್, ವೃದ್ಧಿಮಾನ್ ಸಹಾ, ವಿರಾಟ್ ಸಿಂಗ್, ಜೇಸನ್ ರಾಯ್, ಶ್ರೀವತ್ಸ್ ಗೋಸ್ವಾಮಿ, ಕೇದಾರ್ ಜಾಧವ್, ವಿಜಯ್ ಶಂಕರ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ನಬಿ, ಜೆ ಸುಚಿತ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಟಿ ನಟರಾಜನ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್, ಸಿದ್ಧಾರ್ಥ್ ಕೌಲ್, ಬೆಸಿಲ್ ತಂಪಿ, ಶಹಬಾಜ್ ನದೀಮ್, ಮುಜೀಬ್‌ಉರ್ ರಹಮಾನ್, ಶೆರ್ಫೇನ್ ರುದರ್‌ಫೋರ್ಡ್.
T20 World Cup: ಐಸಿಸಿ ಟಿ-20 ವಿಶ್ವಕಪ್ಗೆ ಆಯ್ಕೆಯಾಗದ ಬಗ್ಗೆ ಮನಬಿಚ್ಚಿ ಮಾತನಾಡಿದ ಮೊಹಮ್ಮದ್ ಸಿರಾಜ್
(IPL 2021 Only one day has left for 14th Indian Premier League Phase 2 to start in UAE)