Anil Kumble: ದ್ರಾವಿಡ್​ ಅಲ್ಲ: ಟೀಮ್ ಇಂಡಿಯಾಕ್ಕೆ ಪವರ್ ಫುಲ್ ಕೋಚ್ ಬೇಕೆಂದು ಬಿಸಿಸಿಐ ಆಫರ್ ನೀಡಿದ್ದು ಯಾರಿಗೆ ಗೊತ್ತಾ?

Team India head coach: ಬಿಸಿಸಿಐ ಈಗಾಗಲೇ ಅನಿಲ್ ಕುಂಬ್ಳೆ ಅವರಿಗೆ ಭಾರತ ತಂಡದ ಕೋಚ್ ಆಗಲು ಆಫರ್ ನೀಡಿದೆಯಂತೆ. ಆದರೆ, ಜಂಬೋ ಈ ಬಗ್ಗೆ ಇನ್ನೂ ಉತ್ತರಿಸಿಲ್ಲ ಎಂದು ತಿಳಿದುಬಂದಿದೆ.

Anil Kumble: ದ್ರಾವಿಡ್​ ಅಲ್ಲ: ಟೀಮ್ ಇಂಡಿಯಾಕ್ಕೆ ಪವರ್ ಫುಲ್ ಕೋಚ್ ಬೇಕೆಂದು ಬಿಸಿಸಿಐ ಆಫರ್ ನೀಡಿದ್ದು ಯಾರಿಗೆ ಗೊತ್ತಾ?
Team India
Follow us
TV9 Web
| Updated By: Vinay Bhat

Updated on:Sep 18, 2021 | 8:35 AM

ಕಳೆದ ಎರಡು ವಾರಗಳಿಂದ ಭಾರತ ಕ್ರಿಕೆಟ್ ತಂಡದ ಮುಂದಿನ ಕೋಚ್ (Team India Coach) ಯಾರು ಎಂಬ ಕುರಿತ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಇದಕ್ಕೆ ಪ್ರಮುಖ ಕಾರಣ ಅಕ್ಟೋಬರ್‌ 17 ರಿಂದ ನವೆಂಬರ್‌ 15 ರವರೆಗೆ ನಡೆಯಲಿರುವ ಐಸಿಸಿ ಟಿ-20 ಕ್ರಿಕೆಟ್‌ ವಿಶ್ವಕಪ್‌ (T20 World Cup 2021) ಟೂರ್ನಿ ಬಳಿಕ ಭಾರತ ತಂಡದ ಮುಖ್ಯ ಕೋಚ್‌ ಹುದ್ದೆಯಿಂದ ರವಿ ಶಾಸ್ತ್ರಿ (Ravi Shastri) ಕೆಳಗಿಳಿಯಲಿದ್ದಾರೆ ಎಂಬ ವರದಿ. ಈ ಬಗ್ಗೆ ಬಿಸಿಸಿಐ (BCCI) ಮೂಲಗಳು ಕೂಡ ಖಚಿತ ಪಡಿಸಿವೆ. ಹೀಗಾಗಿ ಮುಂದಿನ ಕೋಚ್ ಯಾರು ಎಂಬ ಬಗ್ಗೆ ಬಿಸಿಬಿಸಿ ಚರ್ಚೆಗಳು ಎದ್ದಿವೆ. ಇತ್ತೀಚೆಗಷ್ಟೆ ರಾಹುಲ್ ದ್ರಾವಿಡ್ (Rahul Dravid) ಭಾರತ ತಂಡದ ಮುಂದಿನ ಕೋಚ್ ಆಗಲಿದ್ದಾರೆ ಎಂದು ವರದಿಗಳಾಗಿದ್ದವು. ಆದರೆ, ದ್ರಾವಿಡ್‌ಗೆ ಕಾಯಂ ಆಗಿ ಕೋಚ್ ಆಗಲು ಇಷ್ಟವಿಲ್ಲ, ತಾತ್ಕಾಲಿಕವಾಗಿ ಕೆಲಸ ಮಾಡಲು ಸಿದ್ಧರಿದ್ದಾರೆ ಎಂದು ಸೌರವ್ ಗಂಗೂಲಿ (Sourav Ganguly) ಹೇಳಿದ್ದರು. ಸದ್ಯ ಮತ್ತೊಂದು ಮಾಹಿತಿ ಹೊರಬಿದ್ದಿದ್ದು, ಬಿಸಿಸಿಐ ಅನಿಲ್ ಕುಂಬ್ಳೆ (Anil Kumble) ಅವರನ್ನು ಮತ್ತೆ ಕೋಚ್ ಆಗಿಸಲು ಒಲವು ತೋರಿದೆಯಂತೆ.

ಇಂಗ್ಲಿಷ್ ಪತ್ರಿಕೆಯೊಂದು ಮಾಡಿರುವ ವರದಿಯ ಪ್ರಕಾರ, ಬಿಸಿಸಿಐ ಈಗಾಗಲೇ ಅನಿಲ್ ಕುಂಬ್ಳೆ ಅವರಿಗೆ ಭಾರತ ತಂಡದ ಕೋಚ್ ಆಗಲು ಆಫರ್ ನೀಡಿದೆಯಂತೆ. ಆದರೆ, ಜಂಬೋ ಈ ಬಗ್ಗೆ ಇನ್ನೂ ಉತ್ತರಿಸಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ ಬಿಸಿಸಿಐನ ಎಲ್ಲಾ ಸದಸ್ಯರು ಕುಂಬ್ಳೆ ಕೋಚ್ ಆಗಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಕೋಚ್ ಹುದ್ದೆಗೆ ಕುಂಬ್ಳೆ ಅವರನ್ನು ಮತ್ತೆ ಕರೆತರಲು ಬಿಸಿಸಿಐ ಕಸರತ್ತು ನಡೆಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ಕನ್ನಡಿಗ ಅನಿಲ್‌ ಕುಂಬ್ಳೆ ಈ ಹಿಂದೆ ಯಶಸ್ಸು ಸಾಧಿಸಿದ್ದರು. ಆದರೆ, ಅವರು ಆ ಸ್ಥಾನದಲ್ಲಿ ದೀರ್ಘ ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಇವರ ಮಾರ್ಗದರ್ಶನದಲ್ಲಿ ವಿರಾಟ್‌ ಕೊಹ್ಲಿ ಪಡೆ 2017ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ ತಲುಪಿತ್ತು. ಇವರ ಅವಧಿಯಲ್ಲಿ ಭಾರತ ಆಡಿದ್ದ 19 ಟೆಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಇದರ ಹೊರತಾಗಿಯೂ ಅವರು ಟೀಮ್‌ ಇಂಡಿಯಾ ಮುಖ್ಯ ಕೋಚ್‌ ಸ್ಥಾನದಿಂದ ಕೆಳಗೆ ಇಳಿಯಬೇಕಾಯಿತು.

ಭಾರತ ತಂಡವನ್ನು ಅನಿಲ್‌ ಕುಂಬ್ಳೆ ನಿರ್ವಹಿಸುತ್ತಿದ್ದ ಹಾದಿಯ ಬಗ್ಗೆ ನಾಯಕ ವಿರಾಟ್‌ ಕೊಹ್ಲಿಗೆ ಅಸಮಾಧಾನವಿತ್ತು. ಈ ಕಾರಣದಿಂದಲೇ ಕುಂಬ್ಳೆ ತಮ್ಮ ಮುಖ್ಯ ಕೋಚ್‌ ಸ್ಥಾನದಿಂದ ಕೆಳಗೆ ಇಳಿಯಬೇಕಾಯಿತು. ಭಾರತ ತಂಡದ ಜವಾಬ್ದಾರಿ ತೆಗೆದುಕೊಂಡಿದ್ದು ಮಾಜಿ ಲೆಗ್‌ ಸ್ಪಿನ್ನರ್‌ಗೆ ತೃಪ್ತಿದಾಯಕ ಕೆಲಸವಾಗಿತ್ತು ಹಾಗೂ ಅದರಂತೆ ಅವರು ಯಶಸ್ವಿಯಾಗಿದ್ದರು. ಅತ್ಯುತ್ತಮ ಪ್ರದರ್ಶನ ತೋರುವ ಆಟಗಾರರು ಇರುವುದರಿಂದ ತಂಡದ ಒಂದು ಭಾಗವಾಗಿರುವುದು ಅದ್ಭುತ ಅನುಭವ ನೀಡಿತ್ತು ಎಂದು ಅವರು ಈ ಹಿಂದೆ ಹೇಳಿಕೊಂಡಿದ್ದರು.

ಮೂಲಗಳ ಪ್ರಕಾರ, ಬಿಸಿಸಿಐ ಪವರ್ ಪ್ಯಾಕ್ ಇರುವಂತಹ ಬಲಿಷ್ಠ ಕೋಚ್ ಅನ್ನು ಎದುರುನೋಡುತ್ತಿದೆಯಂತೆ. ಅದು ತಂಡದ ನಾಯಕನಿಗೆ ಇಷ್ಟವಾಗಲಿ ಅಥವಾ ಇಷ್ಟವಾಗದಿರಲಿ. ಹೀಗಾಗಿ ಭಾರತ ತಂಡವನ್ನು ಮತ್ತಷ್ಟು ಬಲಿಷ್ಠ ಮಾಡಲು ಕುಂಬ್ಳೆ ಸೂಕ್ತ ವ್ಯಕ್ತಿ ಎಂದು ಪರಿಗಣಿಸಿ ಇವರಿಗೆ ಆಫರ್ ನೀಡಿದೆಯಂತೆ.

ಕುಂಬ್ಳೆ ಪ್ರಸ್ತುತ ಐಪಿಎಲ್ ಫ್ರಾಂಚೈಸಿಯ ಪಂಜಾಬ್ ಕಿಂಗ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತ ತಂಡದ ಕೋಚ್ ಇವರಾದಲ್ಲಿ ಈ ಸ್ಥಾನದಿಂದ ಕೆಳಗಿಳಿಯ ಬೇಕು. ಕುಂಬ್ಳೆ ಈ ಹಿಂದೆ 2017 ರವರೆಗೆ ಒಂದು ವರ್ಷದ ಕಾಲ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿದ್ದರು.

T20 World Cup: ಐಸಿಸಿ ಟಿ-20 ವಿಶ್ವಕಪ್​ಗೆ ಆಯ್ಕೆಯಾಗದ ಬಗ್ಗೆ ಮನಬಿಚ್ಚಿ ಮಾತನಾಡಿದ ಮೊಹಮ್ಮದ್ ಸಿರಾಜ್

ಕಿವೀಸ್ ಪ್ರವಾಸ ರದ್ದು.. ಟ್ವಿಟರ್​ನಲ್ಲಿ ತಪ್ಪಾದ ಇಂಗ್ಲಿಷ್ ಬಳಕೆ! ವಿಶ್ವದ ಮುಂದೆ ಮುಜುಗರಕ್ಕೀಡಾದ ಪಾಕಿಸ್ತಾನ

(Anil Kumble BCCI is reportedly looking to bring back Anil Kumble as the Team India head coach)

Published On - 8:30 am, Sat, 18 September 21

ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ