AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿವೀಸ್ ಪ್ರವಾಸ ರದ್ದು.. ಟ್ವಿಟರ್​ನಲ್ಲಿ ತಪ್ಪಾದ ಇಂಗ್ಲಿಷ್ ಬಳಕೆ! ವಿಶ್ವದ ಮುಂದೆ ಮುಜುಗರಕ್ಕೀಡಾದ ಪಾಕಿಸ್ತಾನ

ಟ್ವೀಟ್ ಮಾಡುವ ಭರದಲ್ಲಿ ಪಾಕಿಸ್ತಾನ ಎಡವಟ್ಟು ಮಾಡಿಕೊಂಡಿದೆ. ಫುಲ್ ಎಂದು ಬರೆಯುವ ಬದಲು ಫೂಲ್ ಎಂದು ಬರೆದುಕೊಂಡಿದೆ. ಇದನ್ನು ಕಂಡ ನೆಟಿಜನ್‌ಗಳು ಪಾಕಿಸ್ತಾವನ್ನು ಅಪಹಾಸ್ಯ ಮಾಡಿದ್ದಾರೆ.

ಕಿವೀಸ್ ಪ್ರವಾಸ ರದ್ದು.. ಟ್ವಿಟರ್​ನಲ್ಲಿ ತಪ್ಪಾದ ಇಂಗ್ಲಿಷ್ ಬಳಕೆ! ವಿಶ್ವದ ಮುಂದೆ ಮುಜುಗರಕ್ಕೀಡಾದ ಪಾಕಿಸ್ತಾನ
ಉಭಯ ತಂಡದ ನಾಯಕರು
TV9 Web
| Edited By: |

Updated on: Sep 17, 2021 | 10:38 PM

Share

ಕ್ರಿಕೆಟ್ ಪಂದ್ಯಗಳ ಪ್ರವಾಸಕ್ಕಾಗಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನಕ್ಕೆ ಹೋಗಿತ್ತು. ಪ್ರವಾಸವು 3 ಏಕದಿನ ಮತ್ತು 5 ಟಿ 20 ಪಂದ್ಯಗಳನ್ನು ಒಳಗೊಂಡಿತ್ತು. ಏಕದಿನ ಸರಣಿಯೊಂದಿಗೆ ಪ್ರವಾಸ ಆರಂಭವಾಗಬೇಕಿತ್ತು. ಮೊದಲ ಏಕದಿನ ಪಂದ್ಯ ಇಂದು (ಸೆಪ್ಟೆಂಬರ್ 17) ನಡೆಯಬೇಕಿತ್ತು. ಆದಾಗ್ಯೂ, ಮೊದಲ ಪಂದ್ಯದ ಟಾಸ್‌ಗೆ 20 ನಿಮಿಷಗಳ ಮೊದಲು ಭದ್ರತೆಯ ಕಾರಣದಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು. ಮತ್ತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ದೊಡ್ಡ ಹೊಡೆತ ನೀಡಿತು. ಅದೇ ಸಮಯದಲ್ಲಿ, ಸರಣಿಯನ್ನು ರದ್ದುಗೊಳಿಸುವ ನ್ಯೂಜಿಲೆಂಡ್ ನಿರ್ಧಾರದ ಬಗ್ಗೆ ಟ್ವೀಟ್ ಮಾಡುವಲ್ಲಿ ಪಾಕಿಸ್ತಾನ ಮಾಡಿದ ತಪ್ಪು ಅವರನ್ನು ಮತ್ತಷ್ಟು ಮುಜುಗರಕ್ಕೀಡು ಮಾಡಿದೆ.

2009 ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ, ಎಲ್ಲಾ ಅಂತಾರಾಷ್ಟ್ರೀಯ ತಂಡಗಳು ಪಾಕಿಸ್ತಾನ ಪ್ರವಾಸವನ್ನು ನಿಲ್ಲಿಸಿದವು. ಆದರೆ ಕಳೆದ ಕೆಲವು ವರ್ಷಗಳಲ್ಲಿ ಇದು ಬದಲಾಗಿದೆ ಮತ್ತು ಕೆಲವು ತಂಡಗಳು ಮತ್ತೆ ಪಾಕಿಸ್ತಾನ ಪ್ರವಾಸಕ್ಕೆ ಹೋಗುತ್ತಿವೆ. ಇತ್ತೀಚೆಗೆ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದವು. ಅದರ ನಂತರ, ನ್ಯೂಜಿಲ್ಯಾಂಡ್ ತಂಡವು ಪಾಕಿಸ್ತಾನದ ಪ್ರವಾಸದಲ್ಲಿತ್ತು ಆದರೆ ನ್ಯೂಜಿಲೆಂಡ್‌ನ ಭದ್ರತಾ ಏಜೆನ್ಸಿಗಳು ಪಂದ್ಯಕ್ಕೆ ಹೋಗದಂತೆ ತಂಡವನ್ನು ಎಚ್ಚರಿಸಿದೆ. ಅದರ ನಂತರ ಇಡೀ ಪ್ರವಾಸವನ್ನು ರದ್ದುಗೊಳಿಸಲಾಯಿತು. ನಿರ್ಧಾರದ ನಂತರ, ಪಾಕಿಸ್ತಾನವು ಪ್ರವಾಸಕ್ಕೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಿದೆ ಎಂದು ಟ್ವೀಟ್​ನಲ್ಲಿ ಹೇಳಿದೆ. ಆದರೆ ಟ್ವೀಟ್ ಮಾಡುವ ಭರದಲ್ಲಿ ಪಾಕಿಸ್ತಾನ ಎಡವಟ್ಟು ಮಾಡಿಕೊಂಡಿದೆ. ಫುಲ್ ಎಂದು ಬರೆಯುವ ಬದಲು ಫೂಲ್ ಎಂದು ಬರೆದುಕೊಂಡಿದೆ. ಇದನ್ನು ಕಂಡ ನೆಟಿಜನ್‌ಗಳು ಪಾಕಿಸ್ತಾವನ್ನು ಅಪಹಾಸ್ಯ ಮಾಡಿದ್ದಾರೆ. ತಪ್ಪನ್ನು ಅರಿತುಕೊಂಡ ನಂತರ ಈ ಟ್ವೀಟ್ ಅನ್ನು ಡಿಲೀಟ್​ ಮಾಡಲಾಗಿದ್ದರೂ, ಅನೇಕ ಜನರು ಇದರ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡಿದ್ದಾರೆ.

ಇಂಗ್ಲೆಂಡ್ ಪ್ರವಾಸದ ಮೇಲೂ ಖಡ್ಗ ನೇತಾಡುತ್ತಿದೆ ಕಿವೀಸ್ ಕೊನೆಯ ಕ್ಷಣದ ರದ್ದತಿ ಇತರ ಸರಣಿಗಳ ಮೇಲೂ ಪರಿಣಾಮ ಬೀರಬಹುದು. ನ್ಯೂಜಿಲ್ಯಾಂಡ್ ಪ್ರವಾಸದ ನಂತರ, ಇಂಗ್ಲೆಂಡ್ ಮಹಿಳಾ ಮತ್ತು ಪುರುಷರ ತಂಡಗಳು ಪಾಕಿಸ್ತಾನಕ್ಕೆ ಭೇಟಿ ನೀಡಬೇಕಿತ್ತು. 16 ವರ್ಷಗಳ ನಂತರ, ಇಂಗ್ಲೆಂಡ್ ತಂಡ ಪಾಕಿಸ್ತಾನದ ಪ್ರವಾಸಕ್ಕೆ ಸಿದ್ಧವಾಗಿತ್ತು. ಟಿ 20 ವಿಶ್ವಕಪ್‌ಗೂ ಮುನ್ನ ಈ ಪ್ರವಾಸವನ್ನು ಆಯೋಜಿಸಲಾಗಿತ್ತು. ಆದರೆ ಈಗ, ಈ ಘಟನೆಯ ನಂತರ, ರದ್ದತಿಯ ಕತ್ತಿ ಈ ಪ್ರವಾಸದ ಮೇಲೂ ನೇತಾಡುತ್ತಿದೆ. ಪುರುಷ ಮತ್ತು ಮಹಿಳಾ ತಂಡಗಳು 2 ಟಿ 20 ಪಂದ್ಯಗಳು ಮತ್ತು ಮಹಿಳಾ 3 ಏಕದಿನ ಪಂದ್ಯಗಳನ್ನು ಆಡಲಿವೆ.

ಆಸ್ಟ್ರೇಲಿಯಾ ಪ್ರವಾಸ ಕೂಡ ಅಪಾಯದಲ್ಲಿದೆ ನ್ಯೂಜಿಲ್ಯಾಂಡ್ ಪ್ರವಾಸ ರದ್ದತಿ ಕೇವಲ ಇಂಗ್ಲೆಂಡ್ ಮಾತ್ರವಲ್ಲದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಬಹುನಿರೀಕ್ಷಿತ ಆಸ್ಟ್ರೇಲಿಯಾ ಪ್ರವಾಸಕ್ಕೂ ಧಕ್ಕೆ ತಂದಿದೆ. ಪ್ರವಾಸವು ಟೆಸ್ಟ್, ಏಕದಿನ ಮತ್ತು ಟಿ 20 ಸೇರಿದಂತೆ ಎಲ್ಲಾ ರೀತಿಯ ಪಂದ್ಯಗಳನ್ನು ಒಳಗೊಂಡಿತ್ತು. ಈ ಸರಣಿಯು ಫೆಬ್ರವರಿ, ಮಾರ್ಚ್ 2022 ರ ನಡುವೆ ನಡೆಯಬೇಕಿತ್ತು. ಆಸ್ಟ್ರೇಲಿಯಾ ಸುಮಾರು 24 ವರ್ಷಗಳಲ್ಲಿ ಪಾಕಿಸ್ತಾನ ಪ್ರವಾಸ ಮಾಡಿರಲಿಲ್ಲ.