T20 World Cup: ಐಸಿಸಿ ಟಿ-20 ವಿಶ್ವಕಪ್‌ಗೆ ಆಯ್ಕೆಯಾಗದ ಬಗ್ಗೆ ಮನಬಿಚ್ಚಿ ಮಾತನಾಡಿದ ಮೊಹಮ್ಮದ್ ಸಿರಾಜ್
ಐಸಿಸಿ ಟಿ-20 ವಿಶ್ವಕಪ್‌ಗೆ ಬಿಸಿಸಿಐ ಭಾರತ ತಂಡ ಪ್ರಕಟಿಸುವಾಗ ಮೊಹಮ್ಮದ್ ಸಿರಾಜ್‌ಗೆ ನಿರಾಸೆಯಾಗಿತ್ತು. ಕೆಲ ಹೊಸ ಮುಖಗಳಿಗೆ ಆಯ್ಕೆ ಸಮಿತಿ ಮಣೆಹಾಕಿತಾದರೂ ಅದರಲ್ಲಿ ಸಿರಾಜ್ ಹೆಸರಿರಲಿಲ್ಲ.
ಟೀಮ್ ಇಂಡಿಯಾಕ್ಕೆ (Team India) ಆಯ್ಕೆ ಆಗಬೇಕು ಎಂಬುವುದು ಪ್ರತಿಯೊಬ್ಬ ಭಾರತೀಯ ಕ್ರಿಕೆಟಿಗನ ಕನಸು. ಆಯ್ಕೆಯಾದ ಬಳಿಕ ವಿಶ್ವಕಪ್ನಂತಹ ಮಹತ್ವದ ಟೂರ್ನಿಗಳಲ್ಲಿ ಭಾಗವಹಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ, ಈ ಅವಕಾಶ ಎಲ್ಲರ ಪಾಲಿಗೆ ಸುಲಭದಲ್ಲಿ ದಕ್ಕುವುದಿಲ್ಲ. ಸದ್ಯ ಇದೇ ಸಾಲಿನಲ್ಲಿ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಮಿಂಚುತ್ತಿರುವ ಮೊಹಮ್ಮದ್ ಸಿರಾಜ್ (Mohammed Siraj) ಕೂಡ ಇದ್ದು, ಐಸಿಸಿ ಟಿ-20 ವಿಶ್ವಕಪ್ (ICC T20 World Cup) ಟೂರ್ನಿಗೆ ಆಯ್ಕೆಯಾಗದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಯಾವುದೇ ಟೂರ್ನಿ ಅಥವಾ ಸರಣಿಯಾಗಿರಲಿ ತಂಡಕ್ಕೆ ಆಯ್ಕೆಯಾಗುವುದು ನಮ್ಮ ಕೈಯಲ್ಲಿಲ್ಲ ಎಂದು ಸಿರಾಜ್ ಹೇಳಿದ್ದಾರೆ.
ಇತ್ತೀಚೆಗಷ್ಟೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ವೇಳೆ ಮೊಹಮ್ಮದ್ ಸಿರಾಜ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆದ್ದು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಯ ಮುನ್ನಡೆ ಪಡೆದುಕೊಳ್ಳುವಲ್ಲಿ ಸಿರಾಜ್ ಕೊಡುಗೆ ಮಹತ್ವದ್ದಾಗಿತ್ತು. ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಸಿರಾಜ್ 8 ವಿಕೆಟ್ ಉರುಳಿಸಿದ್ದರು. ಈ ಪಂದ್ಯದಲ್ಲಿ ಭಾರತ 151 ರನ್‌ಗಳಿಂದ ಗೆದ್ದಿತ್ತು.
ಆದರೆ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್‌ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂಡ ಪ್ರಕಟಿಸುವಾಗ ಮೊಹಮ್ಮದ್ ಸಿರಾಜ್‌ಗೆ ನಿರಾಸೆಯಾಗಿತ್ತು. ಕೆಲ ಹೊಸ ಮುಖಗಳಿಗೆ ಆಯ್ಕೆ ಸಮಿತಿ ಮಣೆಹಾಕಿತಾದರೂ ಅದರಲ್ಲಿ ಸಿರಾಜ್ ಹೆಸರಿರಲಿಲ್ಲ. ಈ ವಿಚಾರದ ಬಗ್ಗೆ ಸಿರಾಜ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
“ತಂಡಕ್ಕೆ ಆಯ್ಕೆಯಾಗುವುದು ನಮ್ಮ ಕೈಲಿಲ್ಲ. ಸಹಜವಾಗೇ ಟಿ-20 ವಿಶ್ವಕಪ್‌ನಲ್ಲಿ ತಂಡದ ಪರ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರತ್ತದೆ. ಹಾಗಂತ ಇದೇ ಕೊನೆ ಅಂತೇನೂ ಅಲ್ಲ. ನನ್ನ ಮುಂದೆ ಇನ್ನೂ ಅನೇಕ ಗುರಿಗಳಿವೆ. ಇವುಗಳಲ್ಲಿ ದೊಡ್ಡ ಗುರಿಯೆಂದರೆ ಭಾರತ ತಂಡದ ಪರ ಆಡಿ ಪಂದ್ಯಗಳನ್ನು ಗೆಲ್ಲಲು ಮುಂಚೂಣಿ ಪಾತ್ರ ವಹಿಸಬೇಕು,” ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಓಮನ್‌ನಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ಟಿ-20 ವಿಶ್ವಕಪ್ ಟೂರ್ನಿ ಜರುಗಲಿದೆ. ಇದಕ್ಕೂ ಮುನ್ನ ಅರ್ಧಕ್ಕೆ ನಿಂತಿದ್ದ ಐಪಿಎಲ್ 2021 ಟೂರ್ನಿ ನಡೆಯಲಿದ್ದು, ಸೆಪ್ಟೆಂಬರ್ 19ಕ್ಕೆ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಖಾಮುಖಿ ಆಗಲಿದೆ. ಸೋಮವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕಾದಾಟ ನಡೆಸಲಿದೆ.
ಕಿವೀಸ್ ಪ್ರವಾಸ ರದ್ದು.. ಟ್ವಿಟರ್ನಲ್ಲಿ ತಪ್ಪಾದ ಇಂಗ್ಲಿಷ್ ಬಳಕೆ! ವಿಶ್ವದ ಮುಂದೆ ಮುಜುಗರಕ್ಕೀಡಾದ ಪಾಕಿಸ್ತಾನ
ಜೂನಿಯರ್ ತಂಡಕ್ಕೆ ಹೊಸ ಆಯ್ಕೆ ಸಮಿತಿ ರಚಿಸಿದ ಬಿಸಿಸಿಐ; ಶರತ್ ಶ್ರೀಧರನ್ ಅಧ್ಯಕ್ಷರಾಗಿ ಆಯ್ಕೆ
(T20 World Cup Mohammed Siraj has opened up about his snub from the T20 World Cup squad)