IPL 2021: ಪಂಜಾಬ್ ಅಂಗಳದಲ್ಲಿ ಕನ್ನಡದ ಕಂಪು: ಅನಿಲ್ ಕುಂಬ್ಳೆ ಹಾಡಿಗೆ ಅಭಿಮಾನಿಗಳು ಫಿದಾ

| Updated By: ಝಾಹಿರ್ ಯೂಸುಫ್

Updated on: Sep 14, 2021 | 5:16 PM

PBKS Anil Kumble: ಕನ್ನಡದ ಚಿತ್ರರಂಗದ ಎವರ್​ಗ್ರೀನ್ ಗೀತೆ ಎನಿಸಿಕೊಂಡಿರುವ ಮಾಮರವೆಲ್ಲೊ ಕೋಗಿಲೆ ಎಲ್ಲೋ ಏನೀ ಸ್ನೇಹ-ಸಂಬಂಧ ಎಲ್ಲಿಯದೋ ಈ ಅನುಬಂಧ...ಹಾಡಿಗೆ ಸಂಗೀತ ಸಂಯೋಜಿಸಿದ್ದು ಖ್ಯಾತ ಸಂಗೀತ ನಿರ್ದೇಶಕರಾದ ರಾಜನ್-ನಾಗೇಂದ್ರ.

IPL 2021: ಪಂಜಾಬ್ ಅಂಗಳದಲ್ಲಿ ಕನ್ನಡದ ಕಂಪು: ಅನಿಲ್ ಕುಂಬ್ಳೆ ಹಾಡಿಗೆ ಅಭಿಮಾನಿಗಳು ಫಿದಾ
pbks coach anil kumble
Follow us on

ಕರ್ನಾಟಕದ ಐಪಿಎಲ್ (IPL 2021) ಅಭಿಮಾನಿಗಳಿಗೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತಂಡ ಬಿಟ್ಟರೆ ನಿಮ್ಮ ನೆಚ್ಚಿನ ತಂಡ ಯಾವುದು ಎಂದು ಕೇಳಿದ್ರೆ ಬಹುತೇಕರ ಉತ್ತರ ಪಂಜಾಬ್ ಕಿಂಗ್ಸ್ (PBKS)​. ಇದಕ್ಕೆ ಬಹುಮುಖ್ಯ ಕಾರಣ ಪಂಜಾಬ್ ಕಿಂಗ್ಸ್ (Punjab Kings)​ ತಂಡದಲ್ಲಿ ಕನ್ನಡಿಗರು ಇರುವುದು. ತಂಡದ ಕೋಚ್ ಅನಿಲ್ ಕುಂಬ್ಳೆ (Anil Kumble) ಆದರೆ, ನಾಯಕ ಕೆಎಲ್ ರಾಹುಲ್ (KL Rahul). ಇನ್ನು ತಂಡದ ಆರಂಭಿಕ ಮಯಾಂಕ್ ಅಗರ್ವಾಲ್ (Mayank Agarwal). ಹೀಗೆ ಕನ್ನಡಿಗರನ್ನು ಹೊಂದಿರುವ ಪಂಜಾಬ್ ಕಿಂಗ್ಸ್​ ತಂಡದಲ್ಲಿ ಕನ್ನಡದ ಕಲವರ ಈ ಹಿಂದೆ ಕೂಡ ಇತ್ತು. ಅದು ಈಗಲೂ ಮುಂದುವರೆದಿದೆ ಎನ್ನಬಹುದು.

ಹೌದು, ಯುಎಇನಲ್ಲಿ ಐಪಿಎಲ್​ನ ದ್ವಿತಿಯಾರ್ಧಕ್ಕಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿರುವ ಪಂಜಾಬ್ ಕಿಂಗ್ಸ್​​ ತಂಡವು ಇಳಿ ಸಂಜೆಯಲ್ಲಿ ಮನರಂಜನೆಯ ಮೊರೆ ಹೋಗುತ್ತಿದ್ದಾರೆ. ಈ ಮೋಜು ಮಸ್ತಿ ಸಮಯದಲ್ಲಿ ರಸಸಂಜೆ ಕಾರ್ಯಕ್ರಮವನ್ನು ಸೃಷ್ಟಿಸಿದ್ದಾರೆ ಪಂಜಾಬ್ ಕಿಂಗ್ಸ್​. ಈ ಕಾರ್ಯಕ್ರಮದಲ್ಲಿ ತಂಡದ ಕೋಚ್ ಅನಿಲ್ ಕುಂಬ್ಳೆ, ಬ್ಯಾಟಿಂಗ್ ಕೋಚ್ ವಾಸಿಂ ಜಾಫರ್ ಸೇರಿದಂತೆ ಅನೇಕರು ತಮ್ಮ ಹಾಡುಗಾರಿಕೆ ಮೂಲಕ ಆಟಗಾರರಿಗೆ ಮನರಂಜನೆ ಒದಗಿಸಿದ್ದಾರೆ.

ಕಾರ್ಯಕ್ರಮದಲ್ಲಿ ಅನಿಲ್ ಕುಂಬ್ಳೆ ಕನ್ನಡ ಹಾಡನ್ನೂ ಸಹ ಹಾಡುವ ಮೂಲಕ ಕೇಳುಗರ ಮನಕ್ಕೆ ಮುದ ನೀಡಿದರು. ಅದರಲ್ಲೂ ಕರ್ನಾಟಕದ ಅಭಿಮಾನಿಗಳ ಹೃದಯ ಗೆದ್ದರು. ಹೌದು, 1974 ರಲ್ಲಿ ಬಿಡುಗಡೆಯಾಗಿದ್ದ ಸಾಹಸಸಿಂಹ ವಿಷ್ಣುವರ್ಧನ್, ಭಾರತಿ ಅಭಿನಯದ ದೇವರಗುಡಿ ಚಿತ್ರದ ಮಾಮರವೆಲ್ಲೋ…ಕೋಗಿಲೆಯೆಲ್ಲೋ ಗೀತೆಯನ್ನು ಹಾಡುವ ಮೂಲಕ ಕುಂಬ್ಳೆ ಪಂಜಾಬ್ ಹುಡುಗರನ್ನು ರಂಜಿಸಿದರು.

ಕನ್ನಡದ ಚಿತ್ರರಂಗದ ಎವರ್​ಗ್ರೀನ್ ಗೀತೆ ಎನಿಸಿಕೊಂಡಿರುವ ಮಾಮರವೆಲ್ಲೊ ಕೋಗಿಲೆ ಎಲ್ಲೋ
ಏನೀ ಸ್ನೇಹ-ಸಂಬಂಧ ಎಲ್ಲಿಯದೋ ಈ ಅನುಬಂಧ…ಹಾಡಿಗೆ ಸಂಗೀತ ಸಂಯೋಜಿಸಿದ್ದು ಖ್ಯಾತ ಸಂಗೀತ ನಿರ್ದೇಶಕರಾದ ರಾಜನ್-ನಾಗೇಂದ್ರ. ಹಾಗೆಯೇ ಚಿ.ಉದಯಶಂಕರ್ ಸಾಹಿತ್ಯ ಬರೆದಿರುವ ಈ ಸೂಪರ್ ಹಿಟ್​ ಹಾಡಿಗೆ ಧ್ವನಿ ನೀಡಿದ್ದು ಎಸ್​.ಪಿ ಬಾಲಸುಬ್ರಹ್ಮಣ್ಯಂ. ಈ ಗೀತೆಯನ್ನು ಅನಿಲ್ ಕುಂಬ್ಳೆ ಪಂಜಾಬ್ ಕಿಂಗ್ಸ್ ಅಂಗಳದಲ್ಲಿ ಹಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ ಕರ್ನಾಟಕದ ಪಂಜಾಬ್ ಕಿಂಗ್ಸ್​ ತಂಡದ ಅಭಿಮಾನಿಗಳ ಅಭಿಮಾನವನ್ನು ಹೆಚ್ಚಿಸಿದ್ದಾರೆ.

ಸದ್ಯ ಅನಿಲ್ ಕುಂಬ್ಳೆ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಮಾಮರವೆಲ್ಲೊ ಕೋಗಿಲೆ ಎಲ್ಲೋ
ಏನೀ ಸ್ನೇಹ-ಸಂಬಂಧ ಗೀತೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 16 ಸಿಕ್ಸರ್, 4 ಫೋರ್: ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ಬರೆದ ಜಸ್ಕರನ್

ಇದನ್ನೂ ಓದಿ: Rashid Khan: ಟಿ20 ವಿಶ್ವಕಪ್​ಗೆ ಅಫ್ಘಾನ್ ತಂಡ ಪ್ರಕಟ: ನಾಯಕತ್ವಕ್ಕೆ ರಶೀದ್ ಖಾನ್ ರಾಜೀನಾಮೆ

ಇದನ್ನೂ ಓದಿ: Crime News: ಯುವತಿಗೆ ಡ್ರಾಪ್ ಕೊಡಲು ಬೈಕ್ ನಿಲ್ಲಿಸಿದ ಯುವಕ: ಆಮೇಲೆ ಆಗಿದ್ದೇ ಬೇರೆ!

ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು

 

Published On - 5:12 pm, Tue, 14 September 21