ಐಪಿಎಲ್ನ (IPL 2021) 42ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ (MI vs PBKS) ಮುಖಾಮಖಿಯಾಗಿತ್ತು. ಈ ಪಂದ್ಯದಲ್ಲಿ ಕೆಎಲ್ ರಾಹುಲ್ (KL Rahul) ಪಡೆಯನ್ನು 6 ವಿಕೆಟ್ಗಳಿಂದ ಮಣಿಸುವ ಮೂಲಕ ರೋಹಿತ್ ಶರ್ಮಾ (Rohit Sharma) ಪಡೆ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನ ಹೊರತಾಗಿ ಮುಂಬೈ-ಪಂಜಾಬ್ ನಡುವಣ ಪಂದ್ಯವು ಎಲ್ಲರ ಗಮನ ಸೆಳೆದಿದ್ದು ರೋಹಿತ್ ಶರ್ಮಾ ಅವರ ನಡೆಯಿಂದ ಎಂಬುದು ವಿಶೇಷ. ಹೌದು, ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಪಂಜಾಬ್ ಕಿಂಗ್ಸ್ ಪರ ಕೆಎಲ್ ರಾಹುಲ್-ಮಂದೀಪ್ ಸಿಂಗ್ ಇನಿಂಗ್ಸ್ ಆರಂಭಿಸಿದ್ದರು. ಮಂದೀಪ್ ಸಿಂಗ್ ಔಟಾದ ಬಳಿಕ ಕ್ರೀಸ್ಗೆ ಆಗಮಿಸಿದ್ದು ಸ್ಪೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್.
ಇತ್ತ 6ನೇ ಓವರ್ ಎಸೆದ ಕೃನಾಲ್ ಪಾಂಡ್ಯ ಎಸೆತಕ್ಕೆ ಸ್ಟ್ರೈಕ್ನಲ್ಲಿದ್ದ ಕ್ರಿಸ್ ಗೇಲ್ ಭರ್ಜರಿ ಶಾಟ್ ಬಾರಿಸಿದ್ದರು. ಆದರೆ ಚೆಂಡು ನೇರವಾಗಿ ನಾನ್ ಸ್ಟ್ರೈಕ್ ಎಂಡ್ ನಲ್ಲಿದ್ದ ಕೆಎಲ್ ರಾಹುಲ್ ಕಾಲಿಗೆ ಬಲವಾಗಿ ಬಡಿದು ಕೃನಾಲ್ ಪಾಂಡ್ಯ ಕೈ ಸೇರಿತು. ಇತ್ತ ರನ್ಗಾಗಿ ಓಡಲು ಮುಂದಾಗಿದ್ದ ರಾಹುಲ್ ಅವರನ್ನು ಪಾಂಡ್ಯ ರನೌಟ್ ಮಾಡಿದರು. ಅಲ್ಲದೆ ಅಂಪೈರ್ಗೆ ಬಲವಾದ ಮನವಿ ಮಾಡಿದ್ದರು.
ಅಷ್ಟರಲ್ಲೇ ಧಾವಿಸಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮನವಿಯನ್ನು ಹಿಂಪಡೆಯಲು ಕೃನಾಲ್ ಪಾಂಡ್ಯಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಮೂರನೇ ಅಂಪೈರ್ಗೆ ಮನವಿ ಮಾಡದಂತೆ ಅಂಪೈರ್ಗೆ ಸೂಚಿಸಿದ್ದಾರೆ. ರೋಹಿತ್ ಅವರ ಈ ಕ್ರೀಡಾ ಸ್ಪೂರ್ತಿಯ ನಡೆಗೆ ಥಂಬ್ಸ್ ಅಪ್ನೊಂದಿಗೆ ಕೆಎಲ್ ರಾಹುಲ್ ಮೆಚ್ಚುಗೆ ಸೂಚಿಸಿದರು. ರೋಹಿತ್ ಶರ್ಮಾ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣ, ಚೆಂಡು ಬಲವಾಗಿ ಕೆಎಲ್ ರಾಹುಲ್ ಕಾಲಿಗೆ ಬಡಿದಿರುವುದು. ಇದರಿಂದಾಗಿ ರಾಹುಲ್ ಕ್ರೀಸ್ಗೆ ಹಿಂತಿರುಗಲು ಸಾಧ್ಯವಾಗಿರಲಿಲ್ಲ. ಹಾಗಾಗಿ ರನೌಟ್ ಅವಕಾಶವನ್ನು ಕೈ ಬಿಟ್ಟು ರೋಹಿತ್ ಶರ್ಮಾ ಕ್ರೀಡಾಸ್ಪೂರ್ತಿಯನ್ನು ಎತ್ತಿ ಹಿಡಿದಿದ್ದರು. ಇದೀಗ ರೋಹಿತ್ ಶರ್ಮಾ ಅವರ ಈ ಕ್ರೀಡಾ ಮನೋಭಾವದ
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಮುಂಬೈ ಇಂಡಿಯನ್ಸ್ ನಾಯಕನ ನಡೆಗೆ ಮೆಚ್ಚುಗೆಗಳ ಮಹಾಪೂರ ಹರಿದು ಬರುತ್ತಿದೆ.
ಇದನ್ನೂ ಓದಿ: IPL 2021: ಇದು ಅಂತಿಂಥ ಗೆಲುವಲ್ಲ…ಮುಂಬೈ ದಾಖಲೆಯನ್ನು ಅಳಿಸಿ ಹಾಕಿದ RCB
ಇದನ್ನೂ ಓದಿ: IPL 2021: RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು ಇವರೇ..!
ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು
ಇದನ್ನೂ ಓದಿ: Mumbai Indians: ಸಾಲು ಸಾಲು ಪಂದ್ಯ ಸೋತು ಮುಂಬೈ ಪ್ಲೇ ಆಫ್ ಪ್ರವೇಶಿಸಿತ್ತು..!
(Ipl 2021 rohit sharma showing sportsmanship on punjab kings captain kl rahul run out)