AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kuldeep Yadav: ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಕುಲ್ದೀಪ್ ಯಾದವ್; ವೃತ್ತಿಜೀವನದ ಬಗ್ಗೆ ಚೈನಾಮನ್ ಬೌಲರ್ ಹೇಳಿದ್ದಿದು

Kuldeep Yadav: ಕುಲದೀಪ್ ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ. ಕುಲದೀಪ್ ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ, ಆಪರೇಷನ್ ಯಶಸ್ವಿಯಾಗಿದೆ ಮತ್ತು ಚೇತರಿಕೆ ಪ್ರಕ್ರಿಯೆ ಆರಂಭವಾಗಿದೆ. ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು.

Kuldeep Yadav: ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಕುಲ್ದೀಪ್ ಯಾದವ್; ವೃತ್ತಿಜೀವನದ ಬಗ್ಗೆ ಚೈನಾಮನ್ ಬೌಲರ್ ಹೇಳಿದ್ದಿದು
ಕುಲ್ದೀಪ್ ಯಾದವ್
TV9 Web
| Edited By: |

Updated on: Sep 29, 2021 | 6:17 PM

Share

ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ ಐಪಿಎಲ್ -2021 ರ ದ್ವಿತೀಯಾರ್ಧವನ್ನು ಮಧ್ಯದಲ್ಲಿಯೇ ಬಿಟ್ಟು ಭಾರತಕ್ಕೆ ಮರಳಿದರು. ಇದಕ್ಕೆ ಕಾರಣ ಅವರ ಮೊಣಕಾಲು ಗಾಯ. ಅವರು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಅಭ್ಯಾಸದ ವೇಳೆ ಈ ಗಾಯಕ್ಕೆ ತುತ್ತಾದರು. ಮನೆಗೆ ಮರಳಿದ ನಂತರ, ಕುಲದೀಪ್ ಈಗ ತನ್ನ ಮೊಣಕಾಲು ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದಾರೆ. ಕುಲದೀಪ್ ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ. ಕುಲದೀಪ್ ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ, ಆಪರೇಷನ್ ಯಶಸ್ವಿಯಾಗಿದೆ ಮತ್ತು ಚೇತರಿಕೆ ಪ್ರಕ್ರಿಯೆ ಆರಂಭವಾಗಿದೆ. ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಈಗ ಪುನರ್ವಸತಿಯನ್ನು ಚೆನ್ನಾಗಿ ಮುಗಿಸಿ ನಂತರ ಮೈದಾನಕ್ಕೆ ಮರಳಲು ಮತ್ತು ನಾನು ಇಷ್ಟಪಡುವದನ್ನು ಮಾಡಲು ಗಮನ ಕೇಂದ್ರೀಕರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಸುದ್ದಿ ಸಂಸ್ಥೆ ಪಿಟಿಐ ಸೆಪ್ಟೆಂಬರ್ 27 ರಂದು ತನ್ನ ಸುದ್ದಿಯಲ್ಲಿ ಕುಲ್ದೀಪ್​ ಮೊಣಕಾಲಿಗೆ ಗಂಭೀರ ಗಾಯವಾಗಿದೆ. ಮುಂಬರುವ ದೇಶೀಯ ಋತುವಿನಲ್ಲಿ ಆಡಲ್ಲ ಎಂದು ವರದಿಯಾಗಿತ್ತು. ಅಲ್ಲದೆ ಐಪಿಎಲ್​ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಆಡುವ ಕುಲದೀಪ್ ಭಾರತೀಯ ತಂಡದಿಂದ ಹೊರಗುಳಿದಿದ್ದಾರೆ ಮತ್ತು ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳುವ ಮುನ್ನ ಸುದೀರ್ಘ ಪುನರ್ವಸತಿ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ.

ಫೀಲ್ಡಿಂಗ್ ಮಾಡುವಾಗ ಗಾಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಿರಿಯ ಅಧಿಕಾರಿಯೊಬ್ಬರು, ಯುಎಇಯಲ್ಲಿ ಅಭ್ಯಾಸದ ಸಮಯದಲ್ಲಿ ಕುಲ್ದೀಪ್​ ಮೊಣಕಾಲಿಗೆ ಗಂಭೀರ ಗಾಯವಾಗಿದೆ ಎಂದು ನಮಗೆ ಮಾಹಿತಿ ಬಂದಿದೆ. ಅವರು ಫೀಲ್ಡಿಂಗ್ ಮಾಡುವಾಗ ಮೊಣಕಾಲು ಬಾಗಕ್ಕೆ ಗಂಭೀರ ಗಾಯವಾಗಿತ್ತು. ಹೀಗಾಗಿ ಅವರು ಐಪಿಎಲ್‌ನಲ್ಲಿ ಭಾಗವಹಿಸುವ ಸಾಧ್ಯತೆಯಿರಲಿಲ್ಲ. ಆದ್ದರಿಂದ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ಇದುವರೆಗಿನ ವೃತ್ತಿಜೀವನ ಹೀಗಿತ್ತು ಕಾನ್ಪುರದ ಕುಲದೀಪ್ ಏಳು ಟೆಸ್ಟ್, 65 ಏಕದಿನ ಮತ್ತು 23 ಟಿ 20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 174 ವಿಕೆಟ್ ಪಡೆದಿದ್ದಾರೆ. ಅವರು ಕೊನೆಯದಾಗಿ ಶ್ರೀಲಂಕಾ ಪ್ರವಾಸದಲ್ಲಿ ಭಾರತಕ್ಕಾಗಿ ಆಡಿದ್ದರು. ಅವರು ಏಕದಿನದಲ್ಲಿ 48 ರನ್​ಗೆ ಎರಡು ವಿಕೆಟ್ ಮತ್ತು ಟಿ 20 ಪಂದ್ಯಗಳಲ್ಲಿ 30 ರನ್​ಗೆ ಎರಡು ವಿಕೆಟ್ ಪಡೆದರು. ಅವರು ಇನ್ನೂ ಒಂದು ಏಕದಿನ ಮತ್ತು ಒಂದು ಟಿ 20 ಆಡಿದರು ಆದರೆ ಅವರಿಗೆ ಯಾವುದೇ ವಿಕೆಟ್ ಸಿಗಲಿಲ್ಲ. ಒಂದು ಕಾಲದಲ್ಲಿ ಭಾರತದ ಟೆಸ್ಟ್ ತಂಡದ ಸಾಮಾನ್ಯ ಸದಸ್ಯರಾಗಿದ್ದ ಕುಲದೀಪ್ ಅವರಿಗೆ ದೀರ್ಘಕಾಲ ಟೆಸ್ಟ್ ಆಡುವ ಅವಕಾಶ ಸಿಗಲಿಲ್ಲ. ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದರು ಆದರೆ ಆಡಲು ಅವಕಾಶ ಸಿಗಲಿಲ್ಲ. ನಂತರ ಇಂಗ್ಲೆಂಡ್ ಪ್ರವಾಸದಲ್ಲೂ ಅವರಿಗೆ ಅವಕಾಶ ಸಿಗಲಿಲ್ಲ.