IPL 2021, SRH Vs DC: ಡೆಲ್ಲಿ ಕ್ಯಾಪಿಟಲ್ಸ್ ಅಬ್ಬರ: SRH ಗೆ 7ನೇ ಸೋಲು..!

TV9 Web
| Updated By: ಝಾಹಿರ್ ಯೂಸುಫ್

Updated on:Sep 22, 2021 | 11:15 PM

SRH Vs DC: ಉಭಯ ತಂಡಗಳು 19 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ SRH ತಂಡವು 11 ಗೆಲುವು ದಾಖಲಿಸಿ ಮೇಲುಗೈ ಸಾಧಿಸಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್​ 8 ರಲ್ಲಿ ಜಯಗಳಿಸಿದೆ.

IPL 2021, SRH Vs DC: ಡೆಲ್ಲಿ ಕ್ಯಾಪಿಟಲ್ಸ್ ಅಬ್ಬರ: SRH ಗೆ 7ನೇ ಸೋಲು..!
DC

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2021) ದ್ವಿತೀಯಾರ್ಧದ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ದ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. SRH ನೀಡಿದ 135 ರನ್​ಗಳ ಸಾಧಾರಣ ಸವಾಲನ್ನು ಕೇವಲ 17.5 ಓವರ್​ನಲ್ಲಿ ಬೆನ್ನತ್ತುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ಇದಕ್ಕೂ ಮುನ್ನ  ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್​ ಹೈದರಾಬಾದ್ ಉತ್ತಮ ಆರಂಭ ಪಡೆದಿರಲಿಲ್ಲ.

ಮೊದಲ ಓವರ್​ನಲ್ಲಿ ಸನ್​ರೈಸರ್ಸ್​​ ಹೈದರಾಬಾದ್​ ತಂಡಕ್ಕೆ ಆಘಾತ ನೀಡುವಲ್ಲಿ ಅನ್ರಿಕ್ ನೋಕಿಯಾ ಯಶಸ್ವಿಯಾದರು. ಮೊದಲ ಓವರ್​ನ 3ನೇ ಎಸೆತದಲ್ಲಿ ಡೇವಿಡ್ ವಾರ್ನರ್ (0) ವಿಕೆಟ್ ಪಡೆದು ಪ್ರಥಮ ಯಶಸ್ಸು ತಂದುಕೊಟ್ಟರು. ಇದಾಗ್ಯೂ ಒಂದಷ್ಟು ಹೊತ್ತು ವೃದ್ದಿಮಾನ್ ಸಾಹ (18) ಮಿಂಚಿದರೂ ಪವರ್​ಪ್ಲೇನಲ್ಲೇ ರಬಾಡಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಕೇನ್ ವಿಲಿಯಮ್ಸನ್ (18), ಮನೀಷ್ ಪಾಂಡೆ (17) ಬೇಗನೆ ನಿರ್ಗಮಿಸಿದರು.

ಈ ವೇಳೆ ಸಂಪೂರ್ಣ ಹಿಡಿತ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್​ ಬೌಲರುಗಳು ಸನ್​ರೈಸರ್ಸ್​ ಹೈದರಾಬಾದ್​ ತಂಡದ ರನ್​ಗತಿಯನ್ನು ಸಂಪೂರ್ಣ ನಿಯಂತ್ರಿಸಿದರು. ಅಂತಿಮ ಹಂತದಲ್ಲಿ ಅಬ್ದುಲ್ ಸಮದ್ 21 ಎಸೆತಗಳಲ್ಲಿ 28 ರನ್ ಬಾರಿಸಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಇನ್ನೊಂದೆಡೆ ರಶೀದ್ ಖಾನ್ 22 ರನ್​ಗಳ ಕಾಣಿಕೆ ನೀಡುವುದರೊಂದಿಗೆ ಸನ್​ರೈಸರ್ಸ್​ ಹೈದರಾಬಾದ್ ಮೊತ್ತ 9 ವಿಕೆಟ್ ನಷ್ಟಕ್ಕೆ 134ಕ್ಕೆ ಬಂದು ನಿಂತಿತು. ಡೆಲ್ಲಿ ಪರ 4 ಓವರ್​ನಲ್ಲಿ 37 ರನ್​ ನೀಡಿ ಕಗಿಸೋ ರಬಾಡ 3 ಪ್ರಮುಖ ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.

135 ರನ್​ಗಳ ಸಾಧಾರಣ ಸವಾಲು ಪಡೆದ ಡೆಲ್ಲಿ ಕ್ಯಾಪಿಟಲ್ಸ್​ಗೆ ಶಿಖರ್ ಧವನ್ (42) ಹಾಗೂ ಪೃಥ್ವಿ ಶಾ (11) ಉತ್ತಮ ಆರಂಭ ಒದಗಿಸಿದರು. ಆ ಬಳಿಕ ಜೊತೆಯಾದ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. 3ನೇ ವಿಕೆಟ್​ಗೆ 67 ರನ್​ಗಳ ಜೊತೆಯಾಟವಾಡುವ ಮೂಲಕ ಈ ಜೋಡಿ 17.5 ಓವರ್​ನಲ್ಲಿ 139 ರನ್​ ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಜಯ ತಂದುಕೊಟ್ಟರು. ಶ್ರೇಯಸ್ ಅಯ್ಯರ್ ಅಜೇಯ 47 ರನ್​ ಬಾರಿಸಿದರೆ, ರಿಷಭ್ ಪಂತ್ 35 ರನ್ ಬಾರಿಸಿ ಅಜೇಯರಾಗುಳಿದರು. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

SRH 134/9 (20)

DC 139/2 (17.5)

ಈ ಸೋಲಿನೊಂದಿಗೆ ಸನ್​ರೈಸರ್ಸ್​ ಹೈದರಾಬಾದ್ ತಂಡ ಆಡಿದ 8 ಪಂದ್ಯಗಳಲ್ಲಿ 7 ರಲ್ಲಿ ಪರಾಜಯಗೊಂಡು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಉಭಯ ತಂಡಗಳು 20 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ SRH ತಂಡವು 11 ಗೆಲುವು ದಾಖಲಿಸಿ ಮೇಲುಗೈ ಸಾಧಿಸಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್​ 9 ರಲ್ಲಿ ಜಯಗಳಿಸಿದೆ.

ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್: ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹಾ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ಕೇದರ್ ಜಾಧವ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್

ದೆಹಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (w/c), ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೆಯರ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅನ್ರಿಕ್ ನೊಕಿಯಾ, ಅವೇಶ್ ಖಾನ್

LIVE NEWS & UPDATES

The liveblog has ended.
  • 22 Sep 2021 11:14 PM (IST)

    ಡೆಲ್ಲಿ ಕ್ಯಾಪಿಟಲ್ಸ್​ಗೆ 8 ವಿಕೆಟ್​ಗಳ ಭರ್ಜರಿ ಜಯ

  • 22 Sep 2021 10:58 PM (IST)

    ಡೆಲ್ಲಿ ಕ್ಯಾಪಿಟಲ್ಸ್​ಗೆ 8 ವಿಕೆಟ್​ಗಳ ಭರ್ಜರಿ

    SRH 134/9 (20)

    DC 139/2 (17.5)

    ಡೆಲ್ಲಿ ಕ್ಯಾಪಿಟಲ್ಸ್​ಗೆ 8 ವಿಕೆಟ್​ಗಳ ಭರ್ಜರಿ

  • 22 Sep 2021 10:57 PM (IST)

    DC 139/2 (17.5)

    ಭರ್ಜರಿ ಸಿಕ್ಸರ್​ನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್​ ಗುರಿ ಮುಟ್ಟಿಸಿದ ಶ್ರೇಯಸ್ ಅಯ್ಯರ್

  • 22 Sep 2021 10:55 PM (IST)

    ಪಂತ್ ಪವರ್​

    ಜೇಸನ್ ಹೋಲ್ಡರ್ ಎಸೆತದಲ್ಲಿ ಆನ್​ ಸೈಡ್​ನಲ್ಲಿ ಭರ್ಜರಿ ಬೌಂಡರಿ ಬಾರಿಸಿದ ರಿಷಭ್ ಪಂತ್

  • 22 Sep 2021 10:53 PM (IST)

    ಬಿರುಸಿನ ಬ್ಯಾಟಿಂಗ್

    ಖಲೀಲ್ ಅಹ್ಮದ್​ ಅಂತಿಮ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರಿಷಭ್ ಪಂತ್

    DC 126/2 (17)

  • 22 Sep 2021 10:52 PM (IST)

    ಪಂತ್ ಪವರ್​ಫುಲ್ ಶಾಟ್

    ರಿಷಭ್ ಪಂತ್​ಗೆ ಸ್ಲೋ ಬಾಲ್ ಎಸೆದ ಖಲೀಲ್…ಬೌಂಡರಿ ಉತ್ತರ ನೀಡಿದ ಡೆ್ಲ್ಲಿ ನಾಯಕ

  • 22 Sep 2021 10:49 PM (IST)

    ಟಿ20 ಕ್ರಿಕೆಟ್​ನಲ್ಲಿ 4 ಸಾವಿರ ರನ್​ ಪೂರೈಸಿದ ಶ್ರೇಯಸ್ ಅಯ್ಯರ್

  • 22 Sep 2021 10:47 PM (IST)

    DC 110/2 (16)

    ಡೆಲ್ಲಿ ಕ್ಯಾಪಿಟಲ್ಸ್ ಗೆ 24 ಎಸೆತಗಳಲ್ಲಿ 25 ರನ್ ಗಳ ಅವಶ್ಯಕತೆ

  • 22 Sep 2021 10:46 PM (IST)

    ಈ ಸೀಸನ್​ ಸಿಕ್ಸರ್ ಕಿಂಗ್

    ಈ ಬಾರಿಯ ಐಪಿಎಲ್​ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್​ ನಾಯಕ ಕೆಎಲ್ ರಾಹುಲ್ ಅಗ್ರಸ್ಥಾನದಲ್ಲಿ. ಇದುವರೆಗೆ ಕೆಎಲ್ ರಾಹುಲ್ 18 ಸಿಕ್ಸ್​ ಸಿಡಿಸಿದ್ದಾರೆ.

  • 22 Sep 2021 10:44 PM (IST)

    ಪಂತ್​-ಸ್ಟಿಕ್

    ಭುವನೇಶ್ವರ್ ಕುಮಾರ್ ಎಸೆತದಲ್ಲಿ ಶಾರ್ಟ್ ಮಿಡ್ ವಿಕೆಟ್​ನತ್ತ ರಿಷಭ್ ಪಂತ್​ ಭರ್ಜರಿ ಹೊಡೆತ…ಸಿಕ್ಸರ್

  • 22 Sep 2021 10:42 PM (IST)

    DC 100/2 (15.1)

    ಶತಕ ಪೂರೈಸಿದ ಡೆಲ್ಲಿ ಕ್ಯಾಪಿಟಲ್ಸ್

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್-ರಿಷಭ್ ಪಂತ್ ಬ್ಯಾಟಿಂಗ್

  • 22 Sep 2021 10:41 PM (IST)

    ರಶೀದ್ ಖಾನ್ 4 ಓವರ್ ಮುಕ್ತಾಯ

    4 ಓವರ್​ನಲ್ಲಿ 26 ರನ್​ ನೀಡಿ 1 ವಿಕೆಟ್ ಪಡೆದ ರಶೀದ್ ಖಾನ್

    ಡೆಲ್ಲಿ ಕ್ಯಾಪಿಟಲ್ಸ್​- 99/2 (15)

    ಡೆಲ್ಲಿ ಕ್ಯಾಪಿಟಲ್ಸ್ ಗೆ 30 ಎಸೆತಗಳಲ್ಲಿ 36 ರನ್ ಗಳ ಅವಶ್ಯಕತೆ
  • 22 Sep 2021 10:36 PM (IST)

    DC 96/2 (14)

    ಡೆಲ್ಲಿ ಕ್ಯಾಪಿಟಲ್ಸ್ ಗೆ 36 ಎಸೆತಗಳಲ್ಲಿ 39 ರನ್​ಗಳ ಅವಶ್ಯಕತೆ

  • 22 Sep 2021 10:25 PM (IST)

    ಪಂಟರ್ ಪಂತ್

    ಜೇಸನ್ ಹೋಲ್ಡರ್ ಎಸೆದ 12ನೇ ಓವರ್​ನ 4ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ರಿಷಭ್ ಪಂತ್. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​​ಗೆ ಮುಂದಾದ ಡೆಲ್ಲಿ ಕ್ಯಾಪಿಟಲ್ಸ್​ ನಾಯಕ.

    DC 80/2 (12)

     

  • 22 Sep 2021 10:20 PM (IST)

    ಶಿಖರ್ ಧವನ್ ಔಟ್

    ರಶೀದ್ ಖಾನ್ ಎಸೆತದಲ್ಲಿ ಭರ್ಜರಿ ಹೊಡೆತ….ಬೌಂಡರಿ ಲೈನ್​ನಲ್ಲಿ ಅಬ್ದುಲ್ ಸಮದ್ ಉತ್ತಮ ಕ್ಯಾಚ್.

    37 ಎಸೆತಗಳಲ್ಲಿ 42 ರನ್ ಬಾರಿಸಿದ ಶಿಖರ್ ಧವನ್ ಔಟ್. ಸನ್​ರೈಸರ್ಸ್​ಗೆ 2ನೇ ಯಶಸ್ಸು

    DC 72/2 (10.5)

  • 22 Sep 2021 10:17 PM (IST)

    10 ಓವರ್​ ಮುಕ್ತಾಯ: ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಬ್ಯಾಟಿಂಗ್

    ಮೊದಲ ಹತ್ತು ಓವರ್​ಗಳಲ್ಲಿ DC 69 ರನ್​ ಬಾರಿಸಿದ ಡೆಲ್ಲಿ ಕ್ಯಾಪಿಟಲ್ಸ್​.

    ಕ್ರೀಸ್​ನಲ್ಲಿ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್

    DC 69/1 (10)

  • 22 Sep 2021 10:16 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಸಂದೀಪ್ ಶರ್ಮಾ ಎಸೆತದಲ್ಲಿ ವೈಡ್ ಲಾಂಗ್​ ಆಫ್​ನತ್ತ ಬೌಂಡರಿ ಬಾರಿಸಿದ ಶಿಖರ್ ಧವನ್

  • 22 Sep 2021 10:15 PM (IST)

    ಸ್ವೀಪ್​ಪ್​ಪ್​ಪ್​ಪ್​ಪ್​

    ಸಂದೀಪ್ ಎಸೆತವನ್ನು ಸ್ವೀಪ್ ಮಾಡಿದ ಲೆಗ್ ಸೈಡ್​ನಲ್ಲಿ ಬೌಂಡರಿ ಬಾರಿಸಿದ ಶಿಖರ್ ಧವನ್

  • 22 Sep 2021 10:12 PM (IST)

    ಡೆಲ್ಲಿಗೆ 75 ರನ್​ಗಳ ಅವಶ್ಯಕತೆ

    ಡೆಲ್ಲಿ ಕ್ಯಾಪಿಟಲ್ಸ್​ಗೆ ಗೆಲ್ಲಲು 66 ಎಸೆತಗಳಲ್ಲಿ 75 ರನ್​ಗಳ ಅವಶ್ಯಕತೆ.

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್-ಶಿಖರ್ ಧವನ್ ಬ್ಯಾಟಿಂಗ್.

    DC 60/1 (9)

  • 22 Sep 2021 10:11 PM (IST)

    ಶ್ರೇ….ಎಸ್​ ಎಸ್​ ಎಸ್​

    ವಾಟ್ ಎ ಶಾಟ್….ರಶೀದ್ ಖಾನ್ ಎಸೆತದಲ್ಲಿ ಆನ್​ ಸೈಡ್​ನತ್ತ ಶ್ರೇಯಸ್ ಅಯ್ಯರ್ ಸೂಪರ್ ಸಿಕ್ಸರ್

    DC 60/1 (8.5)

  • 22 Sep 2021 10:01 PM (IST)

    8ನೇ ಓವರ್ ಸಂದೀಪ್ ಶರ್ಮಾ

    ಬೌಲಿಂಗ್​ನಲ್ಲಿ ಬದಲಾವಣೆ ಮಾಡಿದ ಕೇನ್ ವಿಲಿಯಮ್ಸನ್​

    ರಶೀದ್ ಖಾನ್ ಸ್ಥಾನದಲ್ಲಿ ಸಂದೀಪ್​ ಶರ್ಮಾ ಕೈಗೆ ಚೆಂಡಿತ್ತ ಎಸ್​ಆರ್​ಹೆಚ್​ ನಾಯಕ.

  • 22 Sep 2021 09:59 PM (IST)

    DC 45/1 (7)

  • 22 Sep 2021 09:58 PM (IST)

    ಧವನ್ ಧಮಾಲ್

    ಜೇಸನ್ ಹೋಲ್ಡರ್ ಎಸೆತದಲ್ಲಿ ಲೆಗ್ ಸೈಡ್​ನಲ್ಲಿ ಬ್ಯೂಟಿಫುಲ್ ಫೋರ್…ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್

  • 22 Sep 2021 09:56 PM (IST)

    ಪವರ್​ ಪ್ಲೇ ಮುಕ್ತಾಯ: ಡೆಲ್ಲಿ ಉತ್ತಮ ಆರಂಭ

    ಮೊದಲ 6 ಓವರ್​ನಲ್ಲಿ 39 ರನ್ ಬಾರಿಸಿದ ಡೆಲ್ಲಿ ಕ್ಯಾಪಿಟಲ್ಸ್​.

    ಒಂದು ವಿಕೆಟ್ ಪಡೆದು ಮೊದಲ ಯಶಸ್ಸು ಸಾಧಿಸಿದ ಸನ್​ರೈಸರ್ಸ್​

    ಕ್ರೀಸ್​ನಲ್ಲಿ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್

    DC 39/1 (6)

  • 22 Sep 2021 09:55 PM (IST)

    ಶಿಖರ್ ಸಿಕ್ಸ್

    ರಶೀದ್ ಖಾನ್ ಎಸೆತಕ್ಕೆ ಭರ್ಜರಿ ಪ್ರತ್ಯುತ್ತರ ನೀಡಿದ ಶಿಖರ್ ಧವನ್…ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸರ್

  • 22 Sep 2021 09:42 PM (IST)

    DC 20/1 (3)

    ಕ್ರೀಸ್​ನಲ್ಲಿ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.

    ಇದು ಶ್ರೇಯಸ್ ಅಯ್ಯರ್ ಕಂಬ್ಯಾಕ್ ಮ್ಯಾಚ್ ಎಂಬುದು ವಿಶೇಷ.

    ಮೊದಲಾರ್ಧದಲ್ಲಿ ಗಾಯದ ಕಾರಣ ಕಣಕ್ಕಿಳಿಯದ ಅಯ್ಯರ್.

  • 22 Sep 2021 09:41 PM (IST)

    ವಾಟ್ ಎ ಕ್ಯಾಚ್…ಯು ಕೇನ್ ವಿಲಿಯಮ್ಸನ್

    ಖಲೀಲ್ ಅಹ್ಮದ್​ ಸ್ಲೋ ಬಾಲ್…ಭರ್ಜರಿ ಹೊಡೆತಕ್ಕೆ ಮುಂದಾದ ಪೃಥ್ವಿ ಶಾ…ಬ್ಯಾಕ್ ರನ್ನಿಂಗ್ ಮೂಲಕ ಅದ್ಭುತವಾಗಿ ಕ್ಯಾಚ್ ಹಿಡಿದ ಕೇನ್ ವಿಲಿಯಮ್ಸನ್..ಪೃಥ್ವಿ ಶಾ (11) ಔಟ್.

  • 22 Sep 2021 09:39 PM (IST)

    ಲಕ್ಕಿ ಪೃಥ್ವಿ ಶಾ

    ಬ್ಯಾಟ್ ಎಡ್ಜ್​… ವಿಕೆಟ್ ಕೀಪರ್ ಮೇಲಿಂದ ಚೆಂಡು ಬೌಂಡರಿಗೆ…ಮತ್ತೊಂದು ಫೋರ್

  • 22 Sep 2021 09:37 PM (IST)

    ಪಂಟರ್ ಪೃಥ್ವಿ

    3ನೇ ಓವರ್​ನ ಮೊದಲ ಎಸೆತದಲ್ಲೇ ಖಲೀಲ್ ಅಹ್ಮದ್​ಗೆ ಬೌಂಡರಿ ಉತ್ತರ ನೀಡಿದ ಪೃಥ್ವಿ ಶಾ. ಓವರ್ ಮಿಡ್ ವಿಕೆಟ್ ಮೂಲಕ ಫೋರ್

  • 22 Sep 2021 09:35 PM (IST)

    ಆರಂಭದಲ್ಲೇ ಗಬ್ಬರ್ ಘರ್ಜನೆ

    ಭುವನೇಶ್ವರ್ ಕುಮಾರ್​ 2ನೇ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಶಿಖರ್ ಧವನ್.

    DC 12/0 (2)

     

  • 22 Sep 2021 09:25 PM (IST)

    ಡೆಲ್ಲಿ ಕ್ಯಾಪಿಟಲ್ಸ್​ಗೆ 135 ರನ್​ಗಳ ಗುರಿ

  • 22 Sep 2021 09:24 PM (IST)

    ಟಾರ್ಗೆಟ್ 135

  • 22 Sep 2021 09:17 PM (IST)

    ಡೆಲ್ಲಿ ಕ್ಯಾಪಿಟಲ್ಸ್​ಗೆ ಸಾಧಾರಣ ಸವಾಲು ನೀಡಿದ ಸನ್​ರೈಸರ್ಸ್​

    ಸಂಕ್ಷಿಪ್ತ ಸ್ಕೋರ್ ವಿವರ:

    ಸನ್​ರೈಸರ್ಸ್​ ಹೈದರಾಬಾದ್- 134/9

    ಅಬ್ದುಲ್ ಸಮದ್-28

    ರಶೀದ್ ಖಾನ್-22

    ಡೆಲ್ಲಿ ಕ್ಯಾಪಿಟಲ್ಸ್​:-

    ಕಗಿಸೊ ರಬಾಡ- 37/3

    ಅನ್ರಿಕ್ ನೋಕಿಯ- 12/2

    ಅಕ್ಷರ್ ಪಟೇಲ್- 21/2

  • 22 Sep 2021 09:13 PM (IST)

    SRH 134/9 (20)

    ಕೊನೆಯ ಎಸೆತದಲ್ಲಿ ಯಾವುದೇ ರನ್ ಇಲ್ಲ. ಸಂದೀಪ್ ಶರ್ಮಾ ರನೌಟ್.

    ನಿಗದಿತ 20 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 134 ರನ್​ ಕಲೆಹಾಕಿದ ಸನ್​ರೈಸರ್ಸ್​ ಹೈದರಾಬಾದ್.

  • 22 Sep 2021 09:11 PM (IST)

    SRH 134/9 (20)

    SRH 134/9 (20)

  • 22 Sep 2021 09:10 PM (IST)

    ರಶೀದ್ ಖಾನ್ ರನೌಟ್

    ಸ್ಟ್ರೈಟ್ ಬಾರಿಸಿ 2 ರನ್ ಕದಿಯುವ ಪ್ರಯತ್ನ ರಶೀದ್ ಖಾನ್ (22) ರನೌಟ್

    SRH 133/8 (19.4)

  • 22 Sep 2021 09:08 PM (IST)

    ಭುವಿ ಬೌಂಡರಿ

    ಅವೇಶ್ ಖಾನ್ 2ನೇ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಬೌಂಡರಿ ಬಾರಿಸಿದ ಭುವನೇಶ್ವರ್ ಕುಮಾರ್

  • 22 Sep 2021 09:07 PM (IST)

    ಕೊನೆಯ ಓವರ್- ಅವೇಶ್ ಖಾನ್

    ಸ್ಟ್ರೈಕ್​ನಲ್ಲಿ ಭುವನೇಶ್ವರ್ ಕುಮಾರ್

    ಮೊದಲ ಎಸೆತ ವೈಡ್.

    2ನೇ ಎಸೆತ ವೈಡ್.

  • 22 Sep 2021 09:06 PM (IST)

    ಮತ್ತೊಂದು ಬೌಂಡರಿ

    ರಬಾಡ ಎಸೆತದಲ್ಲಿ ಬ್ಯಾಟ್ ಬದಿ ತಗುಲಿ ಚೆಂಡು ಬೌಂಡರಿಗೆ…ರಶೀದ್ ಖಾನ್ ಖಾತೆಗೆ ಮತ್ತೊಂದು ಫೋರ್.

    SRH 111/6 (18)

     

  • 22 Sep 2021 09:04 PM (IST)

    ರಶೀದ್ ಖಾನ್ ಬ್ಯಾಟ್ ಸ್ವಿಂಗ್

    ರಬಾಡ ಎಸೆತದಲ್ಲಿ ಭರ್ಜರಿ ಸಿಕ್ಸ್​.

    ಥರ್ಡ್​ ಮ್ಯಾನ್​ನತ್ತ ಭರ್ಜರಿ ಸಿಕ್ಸ್​ ಸಿಡಿಸಿದ ರಶೀದ್ ಖಾನ್

  • 22 Sep 2021 09:03 PM (IST)

    ಸಮದ್ ಔಟ್

    ರಬಾಡ ಎಸೆತದಲ್ಲಿ ಮತ್ತೊಂದು ಭರ್ಜರಿ ಹೊಡೆತಕ್ಕೆ ಮುಂದಾದ ಸಮದ್…ಬ್ಯಾಟ್ ತುದಿಗೆ ತಗುಲಿದೆ ಚೆಂಡು ನೇರವಾಗಿ ವಿಕೆಟ್ ಕೀಪರ್ ರಿಷಭ್ ಪಂತ್ ಕೈಗೆ…ಪೆವಿಲಿಯನ್​ನತ್ತ ಸಮದ್​ (28)

  • 22 Sep 2021 09:02 PM (IST)

    ವಾವ್ಹ್…ವಾಟ್ ಎ ಶಾಟ್

    ರಬಾಡಾ ಎಸೆತಕ್ಕೆ ನೇರವಾಗಿ ಬೌಂಡರಿ ಬಾರಿಸಿದ ಅಬ್ದುಲ್ ಸಮದ್

  • 22 Sep 2021 08:58 PM (IST)

    ಕೊನೆಯ 3 ಓವರ್

    SRH 107/6 (17.1)

     ಸ್ಪರ್ಧಾತ್ಮಕ ಮೊತ್ತ ಪೇರಿಸಲು ರಶೀದ್ ಖಾನ್-ಅಬ್ದುಲ್ ಸಮದ್ ಪ್ರಯತ್ನ

  • 22 Sep 2021 08:57 PM (IST)

    ಫ್ರೀ ಹಿಟ್​

    ಅವೇಶ್ ಖಾನ್ ಎಸೆದ 17ನೇ ಓವರ್​ನ ಕೊನೆಯ ಎಸೆತದಲ್ಲಿ ಲೈನ್ ನೋಬಾಲ್.

    ಫ್ರೀ ಹಿಟ್​ನಲ್ಲಿ ಸೂಪರ್ ಶಾಟ್…ಸ್ಟ್ರೈಟ್​ನತ್ತ ಭರ್ಜರಿ ಸಿಕ್ಸರ್ ಸಿಡಿಸಿದ ಅಬ್ದುಲ್ ಸಮದ್.

  • 22 Sep 2021 08:55 PM (IST)

    17ನೇ ಓವರ್ ಅವೇಶ್ ಖಾನ್

    17ನೇ ಓವರ್​ನಲ್ಲಿ 100 ರನ್ ಪೂರೈಸಿದ ಸನ್​ರೈಸರ್ಸ್​ ಹೈದರಾಬಾದ್.

    ಕ್ರೀಸ್​ನಲ್ಲಿ ರಶೀದ್ ಖಾನ್ ಹಾಗೂ ಅಬ್ದುಲ್ ಸಮದ್.

    SRH 107/6 (17)

     

  • 22 Sep 2021 08:52 PM (IST)

    ರಶೀದ್ ಖಾನ್​ ಬ್ಯಾಟ್​ನಿಂದ ಫೋರ್

    ಅಕ್ಷರ್ ಪಟೇಲ್ ಎಸೆತದಲ್ಲಿ ರಶೀದ್ ಖಾನ್ ಬ್ಯಾಟ್​ ಬದಿ ಚೆಂಡು ಬೌಂಡರಿಗೆ…ಥರ್ಡ್​ ಮ್ಯಾನ್​ ಮೂಲಕ ಫೋರ್

  • 22 Sep 2021 08:51 PM (IST)

    ಕ್ರೀಸ್​ನಲ್ಲಿ ರಶೀದ್ ಖಾನ್

    ಸನ್​ರೈಸರ್ಸ್​ ಹೈದರಾಬಾದ್ 6 ವಿಕೆಟ್ ಪತನ

    ಕ್ರೀಸ್​ನಲ್ಲಿ ರಶೀದ್ ಖಾನ್ ಹಾಗೂ ಅಬ್ದುಲ್ ಸಮದ್.

    SRH 96/6 (15.5)

  • 22 Sep 2021 08:49 PM (IST)

    SRH 90/6 (15.1)

  • 22 Sep 2021 08:48 PM (IST)

    ಸನ್​ರೈಸರ್ಸ್​ 6ನೇ ವಿಕೆಟ್ ಪತನ

    ಜೇಸನ್ ಹೋಲ್ಡರ್ ಔಟ್.

    ಅಕ್ಷರ್ ಪಟೇಲ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಹೋಲ್ಡರ್.

    ಚೆಂಡು ನೇರವಾಗಿ ಪೃಥ್ವಿ ಶಾ ಕೈಗೆ…ಜೇಸನ್ ಹೋಲ್ಡರ್ (9) ಇನಿಂಗ್ಸ್​ ಅಂತ್ಯ.

    SRH 90/6 (15.1)

  • 22 Sep 2021 08:45 PM (IST)

    15 ಓವರ್ ಮುಕ್ತಾಯ

    SRH 90/5 (15)

    ಕ್ರೀಸ್​ನಲ್ಲಿ ಜೇಸನ್ ಹೋಲ್ಡರ್ ಹಾಗೂ ಅಬ್ದುಲ್ ಸಮದ್ ಬ್ಯಾಟಿಂಗ್.

  • 22 Sep 2021 08:43 PM (IST)

    ಫ್ರೀ ಹಿಟ್

    14ನೇ ಓವರ್​ನ 2ನೇ ಎಸೆತದಲ್ಲಿ ನೋ ಬಾಲ್​ ಎಸೆದ ಕಗಿಸೋ ರಬಾಡ.

    ಜೇಸನ್ ಹೋಲ್ಡರ್ ಭರ್ಜರಿ ಹೊಡೆತ…ಬ್ಯಾಟ್ ಬದಿ ತಾಗಿ ಥರ್ಡ್​ ಮ್ಯಾನ್​ನತ್ತ ಸಿಕ್ಸ್​.

  • 22 Sep 2021 08:40 PM (IST)

    ರನ್​ ರೇಟ್​ನಲ್ಲಿ ಇಳಿಕೆ

    ರನ್​ಗಳಿಸಲು ಪರದಾಡುತ್ತಿರುವ ಎಸ್​ಆರ್​ಹೆಚ್​ ಬ್ಯಾಟ್ಸ್​ಮನ್​ಗಳು.

    ಪ್ರಸ್ತುತ ರನ್​ ರೇಟ್ 5.5

    SRH 78/5 (14)

  • 22 Sep 2021 08:39 PM (IST)

    SRH 78/5 (14)

  • 22 Sep 2021 08:37 PM (IST)

    SRH 75/5 (13.1)

    ಕ್ರೀಸ್​ನಲ್ಲಿ ಜೇಸನ್ ಹೋಲ್ಡರ್ ಹಾಗೂ ಅಬ್ದುಲ್ ಸಮದ್ ಬ್ಯಾಟಿಂಗ್

  • 22 Sep 2021 08:35 PM (IST)

    ಫಲ ನೀಡಿದ ಬೌಲಿಂಗ್ ಬದಲಾವಣೆ

    ಕೇದರ್ ಜಾಧವ್ ಎಲ್​ಬಿಡಬ್ಲ್ಯೂ…ಅನ್ರಿಕ್ ನೋಕಿಯಾ ಬಲವಾದ ಮನವಿ..ಅಂಪೈರ್ ಔಟ್ ಎಂದು ತೀರ್ಪು.

    ಡಿಆರ್​ಎಸ್ ಮೊರೆ ಹೋದ ಕೇದರ್ ಜಾಧವ್..3ನೇ ಅಂಪೈರ್​ ಔಟ್ ಎಂದು ತೀರ್ಪು. 3 ರನ್​ಗಳಿಸಿ ಪೆವಿಲಿಯನ್​ಗೆ ಮರಳಿದ ಕೇದರ್ ಜಾಧವ್.

  • 22 Sep 2021 08:32 PM (IST)

    ಮತ್ತೆ ದಾಳಿಗಿಳಿದ ಅನ್ರಿಕ್

    3ನೇ ಓವರ್ ಎಸೆಯುತ್ತಿರುವ ಅನ್ರಿಕ್ ನೋಕಿಯಾ.

    ಮೊದಲ 2 ಓವರ್​ನಲ್ಲಿ ಕೇವಲ 5 ರನ್ ನೀಡಿರುವ ನೋಕಿಯಾ.

    ಇತ್ತ ರನ್​ಗಾಗಿ ಪರದಾಡುತ್ತಿರುವ ಸನ್​ರೈಸರ್ಸ್​ ಹೈದರಾಬಾದ್ ಬ್ಯಾಟ್ಸ್​ಮನ್​ಗಳು

    SRH 73/4 (12.2)

  • 22 Sep 2021 08:27 PM (IST)

    SRH 66/4 (11)

    11 ಓವರ್ ಮುಕ್ತಾಯಕ್ಕೆ ಸನ್​ರೈಸರ್ಸ್​ ಹೈದರಾಬಾದ್ ಮೊತ್ತ 66/4

  • 22 Sep 2021 08:23 PM (IST)

    ಇನಿಂಗ್ಸ್​ ಅಂತ್ಯಗೊಳಿಸಿದ ಮನೀಷ್

    ಕಗಿಸೋ ರಬಾಡ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಮನೀಷ್ ಪಾಂಡೆ. ರಬಾಡಾಗೆ ಕ್ಯಾಚ್ ನೀಡಿ ನಿರ್ಗಮನ. 17 ರನ್​ಗೆ ಮನೀಷ್ ಪಾಂಡೆ ಇನಿಂಗ್ಸ್​ ಅಂತ್ಯ.

    SRH 61/4 (10.1)

     

  • 22 Sep 2021 08:21 PM (IST)

    10 ಓವರ್ ಮುಕ್ತಾಯ

    SRH 61/3 (10)

    ಕ್ರೀಸ್​ನಲ್ಲಿ ಮನೀಷ್ ಪಾಂಡೆ ಹಾಗೂ ಕೇದರ್ ಜಾಧವ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 22 Sep 2021 08:20 PM (IST)

    3 ಜೀವದಾನ ಪಡೆದಿದ್ದ ಕೇನ್

    3 ಜೀವದಾನ ಸಿಕ್ಕರೂ ಬಳಸಿಕೊಳ್ಳದ  ಕೇನ್ ವಿಲಿಯಮ್ಸನ್. 26 ಎಸೆತಗಳಲ್ಲಿ 18 ರನ್​ಗಳಿಸಿ ಔಟ್.

  • 22 Sep 2021 08:19 PM (IST)

    ಕೇನ್ ವಿಲಿಯಮ್ಸನ್ ಔಟ್

    ಕೇನ್ ವಿಲಿಯಮ್ಸನ್ ಔಟ್. ಅಕ್ಷರ್ ಪಟೇಲ್ ಎಸೆತದಲ್ಲಿ ಭರ್ಜರಿ ಹೊಡೆತ. ಬೌಂಡರಿ ಲೈನ್​ನಲ್ಲಿ ಅದ್ಭುತವಾಗಿ ಕ್ಯಾಚ್ ಹಿಡಿದ ಶಿಮ್ರಾನ್ ಹೆಟ್ಮೆಯರ್.

  • 22 Sep 2021 08:15 PM (IST)

    ಫ್ರೀ ಹಿಟ್​

    8ನೇ ಓವರ್​ನ 3ನೇ ಎಸೆತದಲ್ಲಿ ನೋ ಬಾಲ್ ಹಾಕಿದ ಅಶ್ವಿನ್

    ಫೀ ಹಿಟ್ ಎಸೆತದಲ್ಲಿ ಸ್ಟ್ರೈಟ್ ಬೌಂಡರಿ ಬಾರಿಸಿದ ಮನೀಷ್ ಪಾಂಡೆ.

  • 22 Sep 2021 08:14 PM (IST)

    ಫೀಲ್ಡಿಂಗ್​ನಲ್ಲಿ ಬದಲಾವಣೆ

    ಮಾರ್ಕಸ್ ಸ್ಟೋಯಿನಿಸ್ ಬದಲಿಗೆ ಸಬ್ ಫೀಲ್ಡರ್ ಆಗಿ ಕಣಕ್ಕಿಳಿದ ಸ್ಟೀವ್ ಸ್ಮಿತ್.

  • 22 Sep 2021 08:13 PM (IST)

    ಅಶ್ವಿನ್ ಓವರ್ ಆರಂಭ

    2ನೇ ಎಸೆತದಲ್ಲಿ ಭರ್ಜರಿ ಬೌಂಡರಿ. ಡೀಪ್ ಮಿಡ್ ವಿಕೆಟ್​ನತ್ತ ಫೋರ್ ಬಾರಿಸಿದ ಕೇನ್ ವಿಲಿಯಮ್ಸನ್

  • 22 Sep 2021 08:06 PM (IST)

    SRH 43/2 (8)

  • 22 Sep 2021 08:04 PM (IST)

    ರನ್​ಗಾಗಿ ಸನ್​ರೈಸರ್ಸ್​ ಪರದಾಟ

    ರನ್​ಗಾಗಿ ಸನ್​ರೈಸರ್ಸ್​ ಪರದಾಟ

    ಕರಂಟ್ ರನ್​ ರೇಟ್ ಕೇವಲ-  5.57

    SRH 39/2 (7)

  • 22 Sep 2021 08:03 PM (IST)

    7ನೇ ಓವರ್ ಎಸೆದ ಮಾರ್ಕಸ್ ಸ್ಟೋಯಿನಿಸ್

    7ನೇ ಓವರ್ ಎಸೆದ ಮಾರ್ಕಸ್ ಸ್ಟೋಯಿನಿಸ್- ಕೇವಲ 7 ರನ್ ನೀಡಿದ ಆಸೀಸ್ ಆಲ್​ರೌಂಡರ್

    SRH 39/2 (7)

     

  • 22 Sep 2021 08:00 PM (IST)

    ವಿಲಿಯಮ್ಸನ್-ಮನೀಷ್ ಪಾಂಡೆ

    ಮೊದಲ 6 ಓವರ್​ನಲ್ಲಿ ಎಸ್​ಆರ್​ಹೆಚ್​ 2 ವಿಕೆಟ್ ಪತನ

    ಡೇವಿಡ್ ವಾರ್ನರ್ ಹಾಗೂ ವೃದ್ದಿಮಾನ್ ಸಾಹಾ ಔಟ್

    ಕ್ರೀಸ್​ನಲ್ಲಿ ವಿಲಿಯಮ್ಸನ್-ಮನೀಷ್ ಪಾಂಡೆ ಬ್ಯಾಟಿಂಗ್

  • 22 Sep 2021 07:59 PM (IST)

    ಪವರ್​ ಪ್ಲೇನಲ್ಲಿ ಡೆಲ್ಲಿ ಪವರ್

  • 22 Sep 2021 07:58 PM (IST)

    ಪವರ್ ಮುಕ್ತಾಯ: ಡೆಲ್ಲಿ ಕ್ಯಾಪಿಟಲ್ಸ್ ಮೇಲುಗೈ

    ಪವರ್ ಮುಕ್ತಾಯ: ಡೆಲ್ಲಿ ಕ್ಯಾಪಿಟಲ್ಸ್ ಮೇಲುಗೈ.

    6 ಓವರ್​ನಲ್ಲಿ ಕೇವಲ 32 ರನ್ ನೀಡಿ 2 ವಿಕೆಟ್ ಪಡೆದ ಡೆಲ್ಲಿ ಕ್ಯಾಪಿಲಟ್ಸ್​

    SRH 32/2 (6)

  • 22 Sep 2021 07:54 PM (IST)

    ಸಾಹಾ ಔಟ್

    ರಬಾಡಾ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ವೃದ್ದಿಮಾನ್ ಸಾಹಾ….ಚೆಂಡು ನೇರವಾಗಿ ಶಿಖರ್ ಧವನ್ ಕೈಗೆ…ಸಾಹಾ (18) ಔಟ್

    SRH 29/2 (5)

  • 22 Sep 2021 07:51 PM (IST)

    ವಾವ್ಹ್…ಸಾಹ್ಹಾಹಹಹಹಹ

    ರಬಾಡ ಎಸೆತದಲ್ಲಿ ಭರ್ಜರಿ ಸಿಕ್ಸರ್ ತಿರುಗೇಟು- ಚೆಂಡು ಸ್ಟೇಡಿಯಂನಲ್ಲಿ- ತಂಡಕ್ಕೆ 6 ರನ್ ಸೇರ್ಪಡೆ.

  • 22 Sep 2021 07:49 PM (IST)

    4 ಓವರ್ ಮುಕ್ತಾಯ

    4 ಓವರ್ ಮುಕ್ತಾಯದ ವೇಳೆಗೆ ಸನ್​ರೈಸರ್ಸ್​ ಹೈದರಾಬಾದ್ ತಂಡದ ಮೊತ್ತ- 23 ರನ್​ಗಳು.

    ಕ್ರೀಸ್​ನಲ್ಲಿ ವೃದ್ದಿಮಾನ್ ಸಾಹಾ ಹಾಗೂ ಕೇನ್ ವಿಲಿಯಮ್ಸನ್.

    SRH 23/1 (4)

     

  • 22 Sep 2021 07:47 PM (IST)

    ಸಾಹಾ ಸೂಪರ್ ಶಾಟ್

    ಅಕ್ಷರ್ ಪಟೇಲ್ ಮೊದಲ ಎಸೆತದಲ್ಲೇ ಲಾಂಗ್​ನತ್ತ ವೃದ್ದಿಮಾನ್ ಸಾಹಾ ಸೂಪರ್ ಶಾಟ್- ಫೋರ್​.

  • 22 Sep 2021 07:45 PM (IST)

    3ನೇ ಓವರ್ ಅನ್ರಿಕ್ ನೋಕಿಯಾ

    1ನೇ ಎಸೆತ- 1 ರನ್ (ವಿಲಿಯಮ್ಸನ್)

    2ನೇ ಎಸೆತ- 1 ರನ್

    3ನೇ ಎಸೆತ- 0

    4ನೇ ಎಸೆತ- 1 ರನ್

    5ನೇ ಎಸೆತ- 0

    6ನೇ ಎಸೆತ- 0

    3ನೇ ಓವರ್​ನಲ್ಲಿ ಕೇವಲ 4 ರನ್ ಮಾತ್ರ.

    SRH 16/1 (3)

  • 22 Sep 2021 07:41 PM (IST)

    2ನೇ ಓವರ್- ಅವೇಶ್ ಖಾನ್

    1ನೇ ಎಸೆತ- 0 (ವೃದ್ದಿಮಾನ್ ಸಾಹ)

    2ನೇ ಎಸೆತ- 1 ರನ್

    3ನೇ ಎಸೆತ- 1 ರನ್ (ವಿಲಿಯಮ್ಸನ್)

    4ನೇ ಎಸೆತ- 0

    5ನೇ ಎಸೆತ- ವಾಟ್​ ಎ ಶಾಟ್ —ಸ್ಕ್ವೇರ್​ ಕಟ್ ಮೂಲಕ ಆಕರ್ಷಕ ಫೋರ್ ಬಾರಿಸಿದ ಸಾಹಾ.

    6ನೇ ಎಸೆತ- 0

    SRH 12/1 (2)

  • 22 Sep 2021 07:37 PM (IST)

    ಮೊದಲ ಓವರ್ ಮುಕ್ತಾಯ

    ಮೊದಲ ಓವರ್; ಅನ್ರಿಕ್ ನೋಕಿಯಾ

    1ನೇ ಎಸೆತ- 0 (ಡೇವಿಡ್ ವಾರ್ನರ್)

    2ನೇ ಎಸೆತ- 0 (ಡೇವಿಡ್ ವಾರ್ನರ್)

    3ನೇ ಎಸೆತ- ಶೂನ್ಯಕ್ಕೆ ಡೇವಿಡ್ ವಾರ್ನರ್​ ಔಟ್

    4ನೇ ಎಸೆತ- 2 ರನ್ ( ತಂಡದ ರನ್ ಖಾತೆ ತೆರೆದ ಕೇನ್ ವಿಲಿಯಮ್ಸನ್)

    5ನೇ ಎಸೆತ- ಎಲ್​ಬಿಡಬ್ಲ್ಯೂಗೆ ಮನವಿ, ಅಂಪೈರ್ ತೀರ್ಪು ನಾಟೌಟ್- ಡಿಆರ್​ಎಸ್​ ಮೊರೆ ಹೋದ ಪಂತ್- ಚೆಂಡು ಬ್ಯಾಟ್​ಗೆ ತಾಗಿರುವುದು ಸ್ಪಷ್ಟ. 3ನೇ ಅಂಪೈರ್ ತೀರ್ಪು ನಾಟೌಟ್

    6ನೇ ಎಸೆತ- ಲೆಗ್​ ಸೈಡ್​ನತ್ತ ಬಾರಿಸಿದ ವಿಲಿಯಮ್ಸನ್​- ಎಸ್​ಆರ್​ಹೆಚ್​ ತಂಡದ ಮೊದಲ ಬೌಂಡರಿ

    SRH 6/1 (1)

     

  • 22 Sep 2021 07:33 PM (IST)

    ಅನ್ರಿಕ್ ಮ್ಯಾಜಿಕ್

    ಮೊದಲ ಓವರ್​ನ 3ನೇ ಎಸೆತದಲ್ಲಿ ಡೇವಿಡ್​ ವಾರ್ನರ್ ಔಟ್. ಕರಾರುವಾಕ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ವಾರ್ನರ್, ಬ್ಯಾಟ್ ತುದಿ ತಾಗಿ ಫ್ರಂಟ್ ಫೀಲ್ಡರ್​ಗೆ ಸುಲಭ ಕ್ಯಾಚ್

  • 22 Sep 2021 07:31 PM (IST)

    ಡೆಲ್ಲಿ ಕ್ಯಾಪಿಟಲ್ಸ್​ ಮೊದಲ ಓವರ್ ಬೌಲರ್

    ಡೆಲ್ಲಿ ಕ್ಯಾಪಿಟಲ್ಸ್​ ಮೊದಲ ಓವರ್ ಬೌಲರ್:

    -ಅನ್ರಿಕ್ ನೊಕಿಯಾ

  • 22 Sep 2021 07:29 PM (IST)

    SRH- ಆರಂಭಿಕರ ಆಗಮನ

    SRH- ಆರಂಭಿಕರು:

    -ಡೇವಿಡ್ ವಾರ್ನರ್

    -ವೃದ್ಧಿಮಾನ್ ಸಾಹ

  • 22 Sep 2021 07:27 PM (IST)

    ಪವರ್ ಪಂತ್- ಕೂಲ್ ಕೇನ್

  • 22 Sep 2021 07:26 PM (IST)

    ಆರೆಂಜ್ ಆರ್ಮಿ

  • 22 Sep 2021 07:25 PM (IST)

    ಟೀಮ್ ಸನ್​ರೈಸರ್ಸ್​ ಹೈದರಾಬಾದ್

  • 22 Sep 2021 07:24 PM (IST)

    ಟೀಮ್ ಡೆಲ್ಲಿ ಕ್ಯಾಪಿಟಲ್ಸ್

  • 22 Sep 2021 07:15 PM (IST)

    ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

    ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್: ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹಾ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ಕೇದರ್ ಜಾಧವ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್

    ದೆಹಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (w/c), ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೆಯರ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅನ್ರಿಕ್ ನೊಕಿಯಾ, ಅವೇಶ್ ಖಾನ್

  • 22 Sep 2021 07:11 PM (IST)

    ಐ ಆ್ಯಮ್ ಬ್ಯಾಕ್- ಮತ್ತೆ ಕಣಕ್ಕಿಳಿದ ಶ್ರೇಯಸ್ ಅಯ್ಯರ್

  • 22 Sep 2021 07:10 PM (IST)

    ಟಾಸ್ ಗೆದ್ದ ಎಸ್​ಆರ್​ಹೆಚ್​

  • 22 Sep 2021 07:08 PM (IST)

    ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್

    ದೆಹಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (w/c), ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೆಯರ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅನ್ರಿಕ್ ನೊಕಿಯಾ, ಅವೇಶ್ ಖಾನ್

  • 22 Sep 2021 07:06 PM (IST)

    ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್

    ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್): ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹಾ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ಕೇದರ್ ಜಾಧವ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್

  • 22 Sep 2021 07:05 PM (IST)

    ಡೆಲ್ಲಿ ವಿದೇಶಿ ಆಟಗಾರರು

    ನೋಕಿಯಾ, ರಬಾಡಾ, ಸ್ಟೊಯಿನಿಸ್ ಮತ್ತು ಹೆಟ್ಮಿಯರ್ 

  • 22 Sep 2021 07:04 PM (IST)

    ಎಸ್​ಆರ್​ಹೆಚ್​ ವಿದೇಶಿ ಆಟಗಾರರು

    ಹೋಲ್ಡರ್, ರಶೀದ್, ವಾರ್ನರ್ ಮತ್ತು ಕೇನ್ ವಿಲಿಯಮ್ಸನ್

  • 22 Sep 2021 07:01 PM (IST)

    ಟಾಸ್ ಗೆದ್ದ ಕೇನ್ ವಿಲಿಯಮ್ಸನ್: ಬ್ಯಾಟಿಂಗ್ ಆಯ್ಕೆ

    ಟಾಸ್ ಗೆದ್ದ ಎಸ್​ಆರ್​ಹೆಚ್​ ನಾಯಕ ಕೇನ್ ವಿಲಿಯಮ್ಸನ್: ಬ್ಯಾಟಿಂಗ್ ಆಯ್ಕೆ

  • 22 Sep 2021 07:00 PM (IST)

    ಕೆವಿನ್ ಪೀಟರ್ಸನ್ ಮಾಹಿತಿ

    ಕೆವಿನ್ ಪೀಟರ್ಸನ್ ಮಾಹಿತಿ- ಪಿಚ್​ ಬೌಲರುಗಳಿಗೆ ಸಹಕಾರಿಯಾಗುವ ಸಾಧ್ಯತೆ. ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡಲಿದೆ.

  • 22 Sep 2021 06:54 PM (IST)

    SRH vs DC: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ?

    ಉಭಯ ತಂಡಗಳು 19 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ SRH ತಂಡವು 11 ಗೆಲುವು ದಾಖಲಿಸಿ ಮೇಲುಗೈ ಸಾಧಿಸಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್​ 8 ರಲ್ಲಿ ಜಯಗಳಿಸಿದೆ.

  • 22 Sep 2021 06:54 PM (IST)

    ಬಲಿಷ್ಠ ಬಲಗೈ ದಾಂಡಿಗರು: ಶ್ರೇಯಸ್ ಅಯ್ಯರ್ vs ಮನೀಷ್ ಪಾಂಡೆ

  • 22 Sep 2021 06:47 PM (IST)

    ಕೋಚ್ ಪಂಟರ್ ಪಾಂಟಿಂಗ್ ಜೊತೆ ಪಂತ್ ಮಾಸ್ಟರ್ ಪ್ಲ್ಯಾನ್

  • 22 Sep 2021 06:47 PM (IST)

    ಸಂದೀಪ್ ಶರ್ಮಾ-ರಶೀದ್ ಖಾನ್: ಸನ್​ರೈಸರ್ಸ್​ ಬೌಲಿಂಗ್ ಅಸ್ತ್ರಗಳು

  • 22 Sep 2021 06:41 PM (IST)

    ಡೆಲ್ಲಿ ಕ್ಯಾಪಿಟಲ್ಸ್ ತಂಡ ಬೌಲಿಂಗ್ ಅಸ್ತ್ರಗಳು

  • 22 Sep 2021 06:40 PM (IST)

    ಉಭಯ ತಂಡಗಳ ಮುಖಾಮುಖಿ ವಿವರ

  • 22 Sep 2021 06:38 PM (IST)

    ಜಯದ ಹಾದಿಗೆ ಮರಳಲು ಕ್ಯಾಪ್ಟನ್ ಕೇನ್ ಪ್ಲ್ಯಾನ್

  • 22 Sep 2021 06:32 PM (IST)

    ದ್ವಿತೀಯಾರ್ಧ ಭರ್ಜರಿಯಾಗಿ ಆರಂಭಿಸಲು ಡೆಲ್ಲಿ ಕ್ಯಾಪಿಟಲ್ಸ್​ ಸಜ್ಜು

  • 22 Sep 2021 06:28 PM (IST)

    ಡೇಂಜರಸ್ ಡೆಲ್ಲಿ ಕ್ಯಾಪಿಟಲ್ಸ್​

  • 22 Sep 2021 06:27 PM (IST)

    ದುಬೈನಲ್ಲಿ ಸನ್​ರೈಸರ್ಸ್​​ ಹೈದರಾಬಾದ್ ತಂಡ

  • 22 Sep 2021 06:26 PM (IST)

    ಉಭಯ ತಂಡಗಳ ಮುಖಾಮುಖಿ- ಅಂಕಿ ಅಂಶಗಳು

  • 22 Sep 2021 06:25 PM (IST)

    SRH ತಂಡದ ಎಡಗೈ ವೇಗಿ ನಟರಾಜನ್​ ಕೊರೋನಾ ಪಾಸಿಟಿವ್

    ಸನ್​ರೈಸರ್ಸ್​ ಹೈದರಾಬಾದ್ (SRH) ಆಟಗಾರ ಟಿ ನಟರಾಜನ್ (T. Natarajan) ಅವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದೀಗ ನಟರಾಜನ್​ ಅವರನ್ನು ತಂಡದ ಉಳಿದ ಆಟಗಾರರಿಂದ ಪತ್ಯೇಕಿಸಲಾಗಿದ್ದು, ಹಾಗೆಯೇ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಹೈದರಾಬಾದ್‌ನ ಆರು ಸದಸ್ಯರನ್ನು ಕೂಡ ಪ್ರತ್ಯೇಕವಾಗಿ ಇರಿಸಲಾಗಿದೆ.

  • Published On - Sep 22,2021 6:22 PM

    Follow us
    ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
    ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
    ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
    ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
    ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
    ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
    ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
    ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
    ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
    ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
    ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
    ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
    ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
    ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
    Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
    Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
    ‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
    ‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
    Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
    Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ