ನ್ಯೂಜಿಲೆಂಡ್ ಪ್ರವಾಸ ರದ್ದುಗೊಳ್ಳಲು ಭಾರತ ಕಾರಣ! ತನ್ನ ತಪ್ಪಿಗೆ ಭಾರತದ ಮೇಲೆ ಗೂಬೆ ಕೂರಿಸಿದ ಪಾಕಿಸ್ತಾನ
ಒಂದು ದಿನದ ನಂತರ ನ್ಯೂಜಿಲ್ಯಾಂಡ್ ತಂಡಕ್ಕೆ ಮತ್ತೊಂದು ಬೆದರಿಕೆ ಮೇಲ್ ಕಳುಹಿಸಲಾಗಿದ್ದು, ಇದಕ್ಕಾಗಿ ಹಮ್ಜಾ ಅಫ್ರಿದಿ ಐಡಿ ಬಳಸಲಾಗಿದೆ ಎಂದು ಪಾಕ್ ಹೇಳಿದೆ. ಭಾರತ ಮೂಲದ ಸಾಧನದಿಂದ ಇಮೇಲ್ ಕಳುಹಿಸಲಾಗಿದೆ ಎಂದು ತನಿಖಾ ಅಧಿಕಾರಿಗಳಿಗೆ ತಿಳಿದು ಬಂದಿದೆ
ನ್ಯೂಜಿಲ್ಯಾಂಡ್ ತಂಡ ಈ ತಿಂಗಳು ಪಾಕಿಸ್ತಾನ ಪ್ರವಾಸ ಮಾಡಿತ್ತು. ಇದು 18 ವರ್ಷಗಳ ನಂತರ ಅವರ ಪಾಕಿಸ್ತಾನದ ಪ್ರವಾಸವಾಗಿತ್ತು, ಆದರೆ ಸರಣಿಯ ಆರಂಭದ ಮೊದಲು ಕಿವಿ ತಂಡವು ಪ್ರವಾಸವನ್ನು ರದ್ದುಗೊಳಿಸಿತು. ಏಕೆಂದರೆ ತಂಡದ ಭದ್ರತೆಗೆ ಬೆದರಿಕೆ ಇದೆ ಎಂದು ತನ್ನ ಸರ್ಕಾರದಿಂದ ಮಾಹಿತಿ ಪಡೆದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಈ ಪ್ರವಾಸದಲ್ಲಿ ನ್ಯೂಜಿಲ್ಯಾಂಡ್ ಮೂರು ಏಕದಿನ ಮತ್ತು ಐದು ಟಿ 20 ಪಂದ್ಯಗಳ ಸರಣಿಯನ್ನು ಆಡಬೇಕಿತ್ತು. ಆದರೆ ಮೊದಲ ಏಕದಿನ ಪಂದ್ಯದ ಆರಂಭದ ಮೊದಲು, ನ್ಯೂಜಿಲೆಂಡ್ ಪ್ರವಾಸವನ್ನು ರದ್ದುಗೊಳಿಸಿತು. ಇದರ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಭಾರತದ ಮೇಲೆ ಆರೋಪ ಹೊರಿಸಿದೆ. ಭಾರತದಿಂದ ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ ಬೆದರಿಕೆ ಇಮೇಲ್ ಕಳುಹಿಸಲಾಗಿದೆ ಎಂದು ಪಾಕಿಸ್ತಾನ ಬುಧವಾರ ಆರೋಪಿಸಿದ್ದು, ಹೀಗಾಗಿಯೆ ನ್ಯೂಜಿಲ್ಯಾಂಡ್ ದೇಶದ ಪ್ರವಾಸವನ್ನು ರದ್ದುಗೊಳಿಸಿದೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಸೋಮವಾರವೂ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ದ್ವಿಪಕ್ಷೀಯ ಸರಣಿಯನ್ನು ಸೋಮವಾರ ರದ್ದುಗೊಳಿಸಿದ್ದು, ಕಳೆದ ಶುಕ್ರವಾರ ನ್ಯೂಜಿಲ್ಯಾಂಡ್ ತಂಡವು ಪಾಕಿಸ್ತಾನದ ಪ್ರವಾಸವನ್ನು ಭದ್ರತೆ ಬೆದರಿಕೆಗಳನ್ನು ಮುಂದಿಟ್ಟು ರದ್ದುಗೊಳಿಸಿದೆ. ದೇಶದಲ್ಲಿ ಇತ್ತೀಚೆಗೆ ನಡೆದ ಕೆಲವು ಭಯೋತ್ಪಾದಕ ದಾಳಿಯ ಹಿಂದೆ ಭಾರತವಿದೆ ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಿದೆ. ಭಾರತವು ಈ ಹೇಳಿಕೆಗಳನ್ನು ಆಧಾರರಹಿತವೆಂದು ತಿರಸ್ಕರಿಸಿದೆ ಮತ್ತು ಇಸ್ಲಾಮಾಬಾದ್ ತನ್ನ ನೆಲದಲ್ಲಿ ಬೆಳೆಯುತ್ತಿರುವ ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾತನಾಡಿ, ಪಾಕಿಸ್ತಾನವು ಭಾರತದ ವಿರುದ್ಧ ಆಧಾರರಹಿತ ಪ್ರಚಾರವನ್ನು ಹರಡುವುದು ಹೊಸ ವಿಷಯವಲ್ಲ. ಪಾಕಿಸ್ತಾನವು ತನ್ನ ನೆಲದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆ ಮತ್ತು ಅಲ್ಲಿ ಸುರಕ್ಷಿತ ಆಶ್ರಯವನ್ನು ಕಂಡುಕೊಳ್ಳುವ ಭಯೋತ್ಪಾದಕರ ವಿರುದ್ಧ ವಿಶ್ವಾಸಾರ್ಹ ಕ್ರಮ ಕೈಗೊಂಡರೆ ಒಳ್ಳೆಯದು. ಭಯೋತ್ಪಾದನೆಯ ವಿಚಾರದಲ್ಲಿ ಪಾಕಿಸ್ತಾನದ ಪರಿಸ್ಥಿತಿಯ ಬಗ್ಗೆ ಅಂತರಾಷ್ಟ್ರೀಯ ಸಮುದಾಯಕ್ಕೆ ತಿಳಿದಿದೆ ಎಂದಿದ್ದಾರೆ.
ಭಾರತದಿಂದ ಮೇಲ್ ಕಳುಹಿಸಲಾಗಿದೆ ಒಂದು ದಿನದ ನಂತರ ನ್ಯೂಜಿಲ್ಯಾಂಡ್ ತಂಡಕ್ಕೆ ಮತ್ತೊಂದು ಬೆದರಿಕೆ ಮೇಲ್ ಕಳುಹಿಸಲಾಗಿದ್ದು, ಇದಕ್ಕಾಗಿ ಹಮ್ಜಾ ಅಫ್ರಿದಿ ಐಡಿ ಬಳಸಲಾಗಿದೆ ಎಂದು ಪಾಕ್ ಹೇಳಿದೆ. ಭಾರತ ಮೂಲದ ಸಾಧನದಿಂದ ಇಮೇಲ್ ಕಳುಹಿಸಲಾಗಿದೆ ಎಂದು ತನಿಖಾ ಅಧಿಕಾರಿಗಳಿಗೆ ತಿಳಿದು ಬಂದಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನು ‘ವರ್ಚುವಲ್ ಪ್ರೈವೇಟ್ ನೆಟ್ವರ್ಕ್’ (ವಿಪಿಎನ್) ನಿಂದ ಕಳುಹಿಸಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಸಾಧನದಲ್ಲಿ ಇನ್ನೂ 13 ಗುರುತಿನ ಚೀಟಿಗಳಿವೆ, ಅವುಗಳಲ್ಲಿ ಹೆಚ್ಚಿನವು ಭಾರತೀಯ ಹೆಸರುಗಳು ಎಂದು ಅವರು ಹೇಳಿದರು. ಚೌಧರಿ ಹೇಳುವಂತೆ, ನ್ಯೂಜಿಲೆಂಡ್ ತಂಡಕ್ಕೆ ಬೆದರಿಕೆ ಹಾಕಲು ಈ ಸಾಧನವನ್ನು ಭಾರತದಲ್ಲಿ ಬಳಸಲಾಗಿದೆ. ನಕಲಿ ಐಡಿ ಬಳಸಲಾಗಿದೆ. ಜೊತೆಗೆ ಬೆದರಿಕೆ ಮೇಲ್ ಅನ್ನು ಮಹಾರಾಷ್ಟ್ರದಿಂದ ಕಳುಹಿಸಲಾಗಿದೆ ಎಂದಿದ್ದಾರೆ.
ಗೃಹ ಸಚಿವಾಲಯ ಪ್ರಕರಣ ದಾಖಲಿಸಿದೆ ಗೃಹ ವ್ಯವಹಾರಗಳ ಸಚಿವಾಲಯವು ಪ್ರಕರಣವನ್ನು ದಾಖಲಿಸಿದೆ ಮತ್ತು ತೆಹ್ರೀಕ್-ಇ-ಲಬ್ಬೈಕ್ ಪ್ರೋಟಾನ್ಮೇಲ್ ಮತ್ತು ಹಮ್ಜಾ ಅಫ್ರಿದಿ ಅವರ ಐಡಿ ಮಾಹಿತಿಗಾಗಿ ಇಂಟರ್ ಪೋಲ್ ಸಹಾಯಕ್ಕಾಗಿ ಕೋರಿದೆ ಎಂದು ಅವರು ಹೇಳಿದರು. ವೆಸ್ಟ್ ಇಂಡೀಸ್ ತಂಡ ಡಿಸೆಂಬರ್ನಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದು. ಈಗಾಗಲೇ ವಿಂಡಿಸ್ ತಂಡಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.