
ಐಪಿಎಲ್ನ (IPL 2021) ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ದ ಆರ್ಸಿಬಿ (RCB) ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿತು. ಹೀಗೆ ಆರ್ಸಿಬಿಗೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದು ಯುವ ಬ್ಯಾಟರ್ ಕೆಎಸ್ ಭರತ್ (Ks Bharat). ಇದೀಗ ಆರ್ಸಿಬಿ ಪ್ಲೇಆಫ್ ಪಂದ್ಯಕ್ಕೆ ಸಜ್ಜಾಗಿದೆ. ಅದರಂತೆ ಸೋಮವಾರ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಕೆಕೆಆರ್ ವಿರುದ್ದ ಆಡಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್ಸಿಬಿ ಕ್ವಾಲಿಫೈಯರ್ ಪಂದ್ಯವಾಡಲಿದೆ ಎಂದು ಭರತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ಸಲ ಆರ್ಸಿಬಿ ಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಭರತ್, ಖಂಡಿತವಾಗಿಯೂ ನಾವು ಈ ಸಲ ಕಪ್ ಗೆಲ್ಲಲಿದ್ದೇವೆ. ಏಕೆಂದರೆ ಇದು ನಾಯಕನಾಗಿ ವಿರಾಟ್ ಕೊಹ್ಲಿ ಅವರಿಗೆ ಇದು ಕೊನೆಯ ಟೂರ್ನಿ. ಹೀಗಾಗಿ ನಮ್ಮ ನಾಯಕನಿಗೆ ಕಪ್ ಗೆದ್ದು ಕೊಡುವುದು ನಮ್ಮೆಲ್ಲರ ಕನಸಾಗಿದೆ. ವಿರಾಟ್ ಭಾಯ್ ಜೊತೆ ಆಡುವುದಾದು ಹೆಮ್ಮೆ. ಅವರು ಯುವ ಆಟಗಾರರನ್ನು ತುಂಬಾ ಪ್ರೊತ್ಸಾಹಿಸುತ್ತಾರೆ ಎಂದು ಭರತ್ ತಿಳಿಸಿದರು.
ಈ ಎಲ್ಲಾ ಕಾರಣಗಳಿಂದಾಗಿ ವಿರಾಟ್ ಕೊಹ್ಲಿ ಅವರಿಗೆ ಕಪ್ ಗೆದ್ದು ಕೊಡಬೇಕೆಂಬುದು ನಮ್ಮಲ್ಲೆರ ಆಸೆ. ಆರ್ಸಿಬಿ ನಾಯಕತ್ವಕ್ಕೆ ಅವರು ರಾಜೀನಾಮೆ ನೀಡುವ ಸಂದರ್ಭದಲ್ಲಿ ಕಪ್ ಗೆದ್ದು ಕೊಟ್ಟರೆ ಅದು ಕೇಕ್ ಮೇಲಿರುವ ಚೆರಿಯಂತೆ, ಕೊಹ್ಲಿ ಪಾಲಿಗೆ ಕಿರೀಟವಾಗಿರಲಿದೆ. ಹೀಗಾಗಿ ವಿರಾಟ್ ಕೊಹ್ಲಿ ಅವರಿಗಾಗಿ ಈ ಸಲ ನಾವು ಕಪ್ ಗೆಲ್ಲಲಿದ್ದೇವೆ ಎಂದು ಭರತ್ ತಿಳಿಸಿದರು.
ಇದನ್ನೂ ಓದಿ: KL Rahul: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ 7 ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2021: ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್
ಇದನ್ನೂ ಓದಿ: IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!
(IPL 2021: Winning the cup and giving Virat Kohli, says RCB’s KS Bharat)