IPL 2022: ಬರೋಬ್ಬರಿ 26 ವಿದೇಶಿ ಆಟಗಾರರು ಮೊದಲ ವಾರದ ಪಂದ್ಯಗಳಿಗೆ ಅಲಭ್ಯ! ಕಾರಣವೇನು ಗೊತ್ತಾ?

IPL 2022: ಈ ಲೀಗ್​ನ ಆರಂಭದ ಕೆಲವು ಪಂದ್ಯಗಳಿಂದ 26 ಆಟಗಾರರು ದೂರ ಉಳಿಯಲಿದ್ದಾರೆ. ಈ ಆಟಗಾರರ ಅಂತರದ ಪರಿಣಾಮವು IPL 2022 ರ ಪ್ರತಿಯೊಂದು ಫ್ರಾಂಚೈಸಿಯ ಮೇಲೂ ಇರಲಿದೆ. ಆದರೆ ದೊಡ್ಡ ನಷ್ಟ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿಗೆ ಆಗಲಿದೆ.

IPL 2022: ಬರೋಬ್ಬರಿ 26 ವಿದೇಶಿ ಆಟಗಾರರು ಮೊದಲ ವಾರದ ಪಂದ್ಯಗಳಿಗೆ ಅಲಭ್ಯ! ಕಾರಣವೇನು ಗೊತ್ತಾ?
ವಿದೇಶಿ ಆಟಗಾರರು
Follow us
TV9 Web
| Updated By: ಪೃಥ್ವಿಶಂಕರ

Updated on:Mar 14, 2022 | 3:12 PM

ಐಪಿಎಲ್ 2022 (IPL 2022)ರ ದಿನಗಳು ಈಗ ಹತ್ತಿರವಾಗಿವೆ. ಲೀಗ್ ಹತ್ತಿರವಾಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳ ಕ್ರೇಜ್ ಹೆಚ್ಚಾಗುತ್ತಿದೆ. ಈ ಬಾರಿ ಎರಡು ಹೊಸ ತಂಡಗಳು ಹೆಚ್ಚಿರುವುದರಿಂದ ರೋಚಕತೆ ಇನ್ನಷ್ಟು ಹೆಚ್ಚಿದೆ. ಇದಲ್ಲದೇ ಹಲವು ತಂಡಗಳ ಜೆರ್ಸಿಯ ಬಣ್ಣವೂ ಬದಲಾಗಲಿದೆ. ಆದರೆ ಇದೆಲ್ಲದರ ನಡುವೆ ದೊಡ್ಡ ಸುದ್ದಿ ಏನೆಂದರೆ ಈ ಲೀಗ್​ನ ಆರಂಭದ ಕೆಲವು ಪಂದ್ಯಗಳಿಂದ 26 ಆಟಗಾರರು ದೂರ ಉಳಿಯಲಿದ್ದಾರೆ. ಈ ಆಟಗಾರರ ಅಂತರದ ಪರಿಣಾಮವು IPL 2022 ರ ಪ್ರತಿಯೊಂದು ಫ್ರಾಂಚೈಸಿಯ ಮೇಲೂ ಇರಲಿದೆ. ಆದರೆ ದೊಡ್ಡ ನಷ್ಟ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಮತ್ತು ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡಗಳಿಗೆ ಆಗಲಿದೆ. ಐಪಿಎಲ್ 2022 ರಿಂದ ದೂರ ಉಳಿಯಲಿರುವ 26 ಆಟಗಾರರು ಅದರ ಈವೆಂಟ್‌ನ ಮೊದಲ ವಾರದಲ್ಲಿ ಮಾತ್ರ ಆಡುವುದಿಲ್ಲ. ಅಂದರೆ, ಎರಡನೇ ವಾರದಿಂದ ಅವರು ಲೀಗ್‌ಗೆ ಸೇರುವ ಎಲ್ಲಾ ಸಾಧ್ಯತೆಗಳಿವೆ. ಅಂದರೆ ಮೊದಲ ವಾರ ಮಾತ್ರ ಫ್ರಾಂಚೈಸಿಗಳು ಆ 26 ಆಟಗಾರರ ಸೇವೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಕೆಲವರ ಅಂತರಾಷ್ಟ್ರೀಯ ಬದ್ಧತೆ, ಕೆಲವರಿಗೆ ವೈಯಕ್ತಿಕ ಕಾರಣಗಳು ಮತ್ತು ಹಲವರಿಗೆ ಇಂಜುರಿಗಳಾಗಿರುವುದರಿಂದ ಈ ಆಟಗಾರರು ಮೊದಲ ವಾರ ಅಲಭ್ಯರಾಗಲಿದ್ದಾರೆ.

ದೆಹಲಿ ಮತ್ತು ಲಕ್ನೋಗೆ ತಲಾ 5 ಆಟಗಾರರು ಗೈರು IPL 2022 ರ ಮೊದಲ ವಾರದಲ್ಲಿ ಆಡದಿರುವ 26 ಆಟಗಾರರ ಪಟ್ಟಿಯನ್ನು ನೋದುವುದಾದರೆ, ಅವರಲ್ಲಿ ಹೆಚ್ಚಿನ ಸಂಖ್ಯೆಯ ಆಟಗಾರರು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಫ್ರಾಂಚೈಸಿಯವರಾಗಿದ್ದಾರೆ. ಈ ಎರಡೂ ತಂಡಗಳ ತಲಾ 5 ಆಟಗಾರರು IPL 2022ರ ಮೊದಲ ವಾರದ ಪಂದ್ಯಗಳಿಗೆ ಗೈರಾಗಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಎನ್ರಿಖ್ ನಾರ್ಖಿಯಾ (ಗಾಯ), ಮುಸ್ತಾಫಿಜುರ್ ರೆಹಮಾನ್ ಮತ್ತು ಲುಂಗಿ ಎನ್‌ಗಿಡಿ ಅವರ ಹೆಸರುಗಳು ಕಾಣೆಯಾಗಲಿವೆ. ಮಾರ್ಕಸ್ ಸ್ಟೊಯಿನಿಸ್, ಜೇಸನ್ ಹೋಲ್ಡರ್, ಕೈಲ್ ಮೈಯರ್ಸ್, ಮಾರ್ಕ್ ವುಡ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ಆಟವನ್ನು ಲಕ್ನೋ ಸೂಪರ್ ಜೈಂಟ್ಸ್‌ ಮಿಸ್ ಮಾಡಿಕೊಳ್ಳಲಿದೆ. ಇವರುಗಳಲ್ಲಿ ಮಾರ್ಕ್ ವುಡ್ ಕೂಡ ಗಾಯದ ಸಮಸ್ಯೆಯಿಂದ ಲೀಗ್‌ನಿಂದ ಹಿಂದೆ ಸರಿದಿದ್ದಾರೆ.

ಈ ಆಟಗಾರರು ಸಹ ಗೈರು! ಇವರಲ್ಲದೆ, ಜಾನಿ ಬೈರ್‌ಸ್ಟೋವ್, ಕಗಿಸೊ ರಬಾಡ ಮತ್ತು ನಾಥನ್ ಎಲ್ಲಿಸ್ ಪಂಜಾಬ್ ಕಿಂಗ್ಸ್‌ ತಂಡದಲ್ಲಿ ಮೊದಲ ವಾರ ಕಾಣಿಸಿಕೊಳ್ಳುವುದಿಲ್ಲ. ಆರ್‌ಸಿಬಿಯಿಂದ ಗ್ಲೆನ್ ಮ್ಯಾಕ್ಸ್‌ವೆಲ್, ಜೋಸ್ ಹ್ಯಾಜಲ್‌ವುಡ್ ಮತ್ತು ಬೆಹ್ರೆನ್‌ಡಾರ್ಫ್. ಸನ್‌ರೈಸರ್ಸ್ ಹೈದರಾಬಾದ್‌ನಿಂದ ಏಡನ್ ಮಾರ್ಕ್ರಾಮ್, ಸ್ಯಾನ್ ಅಬಾಟ್ ಮತ್ತು ಮಾರ್ಕೊ ಯಾನ್ಸನ್. ರಾಜಸ್ಥಾನ ರಾಯಲ್ಸ್‌ನಿಂದ ರಾಸಿ ವಾನ್ ಡೆರ್ ಡುಸ್ಸೆ. ಕೆಕೆಆರ್‌ನಿಂದ ಆರನ್ ಫಿಂಚ್ ಮತ್ತು ಪ್ಯಾಟ್ ಕಮ್ಮಿನ್ಸ್. ಸಿಎಸ್‌ಕೆಯಿಂದ ಡ್ವೇನ್ ಪ್ರಿಟೋರಿಯಸ್ ಹೊರತುಪಡಿಸಿ, ಮುಂಬೈ ಇಂಡಿಯನ್ಸ್‌ನ ಜೋಫ್ರಾ ಆರ್ಚರ್ ಮೊದಲ ವಾರದ ಪಂದ್ಯಗಳಿಗೆ ಗೈರಾಗಲಿದ್ದಾರೆ.

ಅವರಲ್ಲಿ ಹೆಚ್ಚಿನವರು ಐಪಿಎಲ್ 2022 ಪ್ರಾರಂಭವಾದಾಗ ತಮ್ಮ ತಂಡಗಳಿಗಾಗಿ ಟೆಸ್ಟ್ ಸರಣಿಯನ್ನು ಆಡುವ ಆಟಗಾರರಾಗಿದ್ದಾರೆ. ಟೆಸ್ಟ್ ಸರಣಿಯು ಏಪ್ರಿಲ್ ಮೊದಲ ಮತ್ತು ಎರಡನೇ ವಾರದಲ್ಲಿ ಮುಕ್ತಾಯಗೊಳ್ಳಲಿದೆ, ನಂತರ ಅವರು ತಮ್ಮ ಐಪಿಎಲ್ ಫ್ರಾಂಚೈಸಿಗಳನ್ನು ಸೇರಲು ಸಾಧ್ಯವಾಗುತ್ತದೆ. ಆದಾಗ್ಯೂ, ಕೆಲವು ಆಟಗಾರರಿಗೆ ಗಾಯಗಳಾಗಿವೆ, ಇದರಿಂದಾಗಿ ಅವರು ಲೀಗ್‌ನಲ್ಲಿ ಆಡುವ ಬಗ್ಗೆ ಸಸ್ಪೆನ್ಸ್ ಇದೆ.

ಇದನ್ನೂ ಓದಿ:PAK W vs BAN W: 13 ಎಸೆತಗಳಲ್ಲಿ ಅರ್ಧದಷ್ಟು ತಂಡ ಪೆವಿಲಿಯನ್​ಗೆ! ಪಾಕ್ ಮಣಿಸಿ ಮೊದಲ ಗೆಲುವು ಕಂಡ ಬಾಂಗ್ಲಾ

Published On - 3:10 pm, Mon, 14 March 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ