ಐಪಿಎಲ್ ಮೆಗಾ ಹರಾಜಿಗಾಗಿ ಸಿದ್ದತೆಗಳು ಶುರುವಾಗಿದೆ. ಈಗಾಗಲೇ ಬಹುತೇಕ ಫ್ರಾಂಚೈಸಿಗಳ ತಂಡಗಳು ಬೆಂಗಳೂರಿಗೆ ಆಗಮಿಸಿದೆ. ಅದರಂತೆ ಫೆಬ್ರವರಿ 12 ಮತ್ತು 13 ರಂದು ನಡೆಯಲಿರುವ ಮೆಗಾ ಹರಾಜಿಗಾಗಿ ಬಿಸಿಸಿಐ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳನ್ನು ಪಾಲಿಸಿದವರಿಗೆ ಮಾತ್ರ ಮೆಗಾ ಹರಾಜಿನಲ್ಲಿ ಭಾಗವಹಿಸಲು ಸಾಧ್ಯವಾಗಲಿದೆ. ಬಿಸಿಸಿಐ ಫ್ರಾಂಚೈಸಿಗೆ ತಿಳಿಸಲಾದ ನಿಯಮಗಳೇನು ನೋಡೋಣ…
1- ಫ್ರಾಂಚೈಸಿಗಳನ್ನು ಪ್ರತಿನಿಧಿಸುವ ಅಧಿಕಾರಿಗಳು ಫೆಬ್ರವರಿ 9, 10 ಮತ್ತು 11 ರಂದು RT-PCR ವರದಿ ಪಡೆದಿರಬೇಕು. ಈ ಮೂಲಕ ಕೊರೋನಾ ಸೋಂಕು ಇಲ್ಲ ಎಂಬುದನ್ನು ದೃಢಪಡಿಸಬೇಕಾಗುತ್ತದೆ.
ಪರೀಕ್ಷೆಯನ್ನು BCCI ಮಾನ್ಯತೆ ಪಡೆದ ವೈದ್ಯಕೀಯ ಸಂಸ್ಥೆ ನಡೆಸುತ್ತದೆ.
2- ಒಂದು ತಂಡದ ಪರ್ಸ್ 90 ಕೋಟಿ ರೂ. ಅಂದರೆ ಒಂದು ತಂಡವು ಒಟ್ಟು 90 ಕೋಟಿಯವರೆಗೂ ಹರಾಜು ಕೂಗಬಹುದು. ಅದರಂತೆ ಈಗಾಗಲೇ ಉಳಿಸಿಕೊಂಡ ಆಟಗಾರರ ಒಟ್ಟು ಮೊತ್ತವನ್ನು ಕಳೆದು ಬಾಕಿ ಇರುವ ಮೊತ್ತದಲ್ಲಿ ಹರಾಜ ನಡೆಸಬೇಕಾಗುತ್ತದೆ.
3- ವಿದೇಶದಿಂದ ಬಂದು ಮೆಗಾ ಹರಾಜಿನಲ್ಲಿ ಭಾಗವಹಿಸುವವರು 7 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಅಲ್ಲದೆ 8ನೇ ದಿನ ಮತ್ತು 9ನೇ ದಿನದಂದು (ಎರಡು ಬಾರಿ) ಕೋವಿಡ್ ಟೆಸ್ಟ್ ಮಾಡಿಸಬೇಕು.
3- ಫೆಬ್ರವರಿ 11 ರಂದು ಹರಾಜಿನ ಸ್ಥಳಕ್ಕೆ ಆಗಮಿಸುವವರ ಮೇಲೆ ಬಿಸಿಸಿಐ ನಿಕಟ ನಿಗಾ ಇರಿಸುತ್ತದೆ. ಅವರನ್ನು COVID-19 ರೋಗಲಕ್ಷಣಗಳಿಗಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.
4- ಸೋಂಕಿನ ಲಕ್ಷಣ ಕಂಡು ಬಂದರೆ ನೆಗೆಟಿವ್ ವರದಿ ಬರುವವರೆಗೂ ಯಾವುದೇ ಕಾರಣಕ್ಕೂ ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದಿಲ್ಲ.
5- ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳುವವರು BCCI ವೈದ್ಯಕೀಯ ತಂಡದೊಂದಿಗೆ COVID ಲಸಿಕೆ ಪಡೆದಿರುವ ರಿಪೋರ್ಟ್ (ಯಾವುದಾದರೂ ಇದ್ದರೆ) ಸೇರಿದಂತೆ ಸಂಪೂರ್ಣ ವಿವರಗಳನ್ನು ಹಂಚಿಕೊಳ್ಳಬೇಕಾಗುತ್ತದೆ.
6- ಹರಾಜಿನಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಮುಖವಾಡಗಳನ್ನು ಧರಿಸುವುದು ಕೂಡ ಕಡ್ಡಾಯ ಮಾಡಲಾಗಿದೆ.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ
ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್
(IPL 2022 Auction: BCCI asks all 10 franchises to follow these 6 Rules)
Published On - 9:13 pm, Sat, 5 February 22