ಐಪಿಎಲ್ ಮೆಗಾ ಹರಾಜಿನಲ್ಲಿ ಹರ್ಷಲ್ ಪಟೇಲ್ ಭರ್ಜರಿ ಮೊತ್ತ ಪಡೆದಿದ್ದಾರೆ. ಕಳೆದ ಸೀಸನ್ನಲ್ಲಿ 32 ವಿಕೆಟ್ ಪಡೆದಿದ್ದ ಪಟೇಲ್ ಖರೀದಿಗಾಗಿ ಭರ್ಜರಿ ಪೈಪೋಟಿ ಕಂಡು ಬಂತು. 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡ ಹರ್ಷಲ್ ಪಟೇಲ್ ಖರೀದಿಗಾಗಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪೈಪೋಟಿ ಏರ್ಪಟ್ಟಿತ್ತು. ಆದರೆ ಅಂತಿಮವಾಗಿ 10.75 ಕೋಟಿ ನೀಡಿ ಆರ್ಸಿಬಿ ತಂಡ ಖರೀದಿಸಿತು. ವಿಶೇಷ ಎಂದರೆ ಕಳೆದ ಸೀಸನ್ನಲ್ಲಿ ಹರ್ಷಲ್ ಪಟೇಲ್ಗೆ ಆರ್ಸಿಬಿ ನೀಡಿದ್ದು ಕೇವಲ 20 ಲಕ್ಷ ರೂ. ಮಾತ್ರ.
ಇದೀಗ 10.75 ಕೋಟಿಗೆ ಹರಾಜಾಗುವ ಮೂಲಕ ಹರ್ಷಲ್ ಪಟೇಲ್ 10.55 ಕೋಟಿ ರೂ. ಅಧಿಕ ಮೊತ್ತ ಪಡೆದು ಆರ್ಸಿಬಿ ತಂಡಕ್ಕೆ ಮರಳಿದ್ದಾರೆ. ಇದಕ್ಕೂ ಮುನ್ನ ಆರ್ಸಿಬಿ ತಂಡವು ಫಾಫ್ ಡುಪ್ಲೆಸಿಸ್ ಅವರನ್ನು 7 ಕೋಟಿ ರೂ. ನೀಡಿ ಖರೀದಿಸಿದೆ. ಅದರಂತೆ ಇದೀಗ ಆರ್ಸಿಬಿ ತಂಡದಲ್ಲಿ ಐದು ಆಟಗಾರರು ಇದ್ದಾರೆ.
ಈ ಹಿಂದೆ ಆರ್ಸಿಬಿ ತಂಡವು ರಿಟೈನ್ ಆಯ್ಕೆಯ ಮೂಲಕ ಗ್ಲೆನ್ ಮ್ಯಾಕ್ಸ್ವೆಲ್, ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಿದೆ. ಇದೀಗ ಹರ್ಷಲ್ ಪಟೇಲ್ ಹಾಗೂ ಫಾಫ್ ಡುಪ್ಲೆಸಿಸ್ ಕೂಡ ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮೊದಲ ಸುತ್ತಿನಲ್ಲಿ ಹರಾಜಾದ ಆಟಗಾರರು:
ಶಿಖರ್ ಧವನ್- 8.25 ಕೋಟಿ (ಪಂಜಾಬ್ ಕಿಂಗ್ಸ್)
ರವಿಚಂದ್ರನ್ ಅಶ್ವಿನ್- 5 ಕೋಟಿ ( ರಾಜಸ್ಥಾನ್ ರಾಯಲ್ಸ್)
ಪ್ಯಾಟ್ ಕಮಿನ್ಸ್- 7.25 ಕೋಟಿ (ಕೊಲ್ಕತ್ತಾ ನೈಟ್ ರೈಡರ್ಸ್)
ಕಗಿಸೋ ರಬಾಡ- 9.25 ಕೋಟಿ (ಪಂಜಾಬ್ ಕಿಂಗ್ಸ್)
ಟ್ರೆಂಟ್ ಬೌಲ್ಟ್- 8 ಕೋಟಿ (ರಾಜಸ್ಥಾನ್ ರಾಯಲ್ಸ್)
ಶ್ರೇಯಸ್ ಅಯ್ಯರ್- 12.25 ಕೋಟಿ (ಕೊಲ್ಕತ್ತಾ ನೈಟ್ ರೈಡರ್ಸ್)
ಮೊಹಮ್ಮದ್ ಶಮಿ- 6.25 ಕೋಟಿ (ಗುಜರಾತ್ ಟೈಟನ್ಸ್)
ಫಾಫ್ ಡುಪ್ಲೆಸಿಸ್- 7 ಕೋಟಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ಕ್ವಿಂಟನ್ ಡಿಕಾಕ್- 6.75 ಕೋಟಿ (ಲಕ್ನೋ ಸೂಪರ್ ಜೈಂಟ್ಸ್)
ಡೇವಿಡ್ ವಾರ್ನರ್- 6.25 ಕೋಟಿ (ಡೆಲ್ಲಿ ಕ್ಯಾಪಿಟಲ್ಸ್)
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: IPL 2022: ಐಪಿಎಲ್ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತ ಖರ್ಚು ಮಾಡಿದ ತಂಡ ಯಾವುದು ಗೊತ್ತಾ?
ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
(IPL 2022 Auction: Harshal Patel is sold to RCB)
Published On - 2:07 pm, Sat, 12 February 22