Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022 Auction: ಈ ಕೆರಿಬಿಯನ್ ಆಲ್​ರೌಂಡರ್​ಗಾಗಿ ಹಣದ ಮಳೆಯನ್ನೇ ಸುರಿಸಲಿದೆಯಂತೆ ಆರ್​ಸಿಬಿ..!

IPL 2022 Auction: ಜೇಸನ್ ಹೋಲ್ಡರ್ 2013 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಅವರು ಇದುವರೆಗೆ 26 ಪಂದ್ಯಗಳನ್ನು ಆಡಿದ್ದು, 35 ವಿಕೆಟ್ ಪಡೆದಿದ್ದಾರೆ.

IPL 2022 Auction: ಈ ಕೆರಿಬಿಯನ್ ಆಲ್​ರೌಂಡರ್​ಗಾಗಿ ಹಣದ ಮಳೆಯನ್ನೇ ಸುರಿಸಲಿದೆಯಂತೆ ಆರ್​ಸಿಬಿ..!
ಆರ್​ಸಿಬಿ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on: Feb 07, 2022 | 7:29 PM

ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಜೇಸನ್ ಹೋಲ್ಡರ್ (Jason Holder)​ ಮೇಲೆ ಐಪಿಎಲ್ 2022 ಹರಾಜಿ (IPL 2022 Auction)ನಲ್ಲಿ ದೊಡ್ಡ ಮೊತ್ತದ ಮಳೆ ಸುರಿಯುವ ನಿರೀಕ್ಷೆ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಈ ಆಟಗಾರನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಪ್ರಯತ್ನದಲ್ಲಿದೆ ಎಂದು ವರದಿಯಾಗಿದೆ. ಜೊತೆಗೆ ತಂಡದ ನಾಯಕತ್ವ ವಹಿಸುವ ಸಾಂಥ್ಯ್ರವು ಹೊಲ್ಡರ್​ಗಿರುವುದು ಇದಕ್ಕೆ ಪುಷ್ಠಿ ನೀಡಿದೆ. ಅಂತಹ ಪರಿಸ್ಥಿತಿಯಲ್ಲಿ, ಜೇಸನ್ ಹೋಲ್ಡರ್ ಐಪಿಎಲ್ 2022 ರ ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರಾಗಬಹುದು. ಜೇಸನ್ ಹೋಲ್ಡರ್ ಇದುವರೆಗೆ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಂತಹ ತಂಡಗಳ ಭಾಗವಾಗಿದ್ದಾರೆ. ಐಪಿಎಲ್ 2022 ರ ಹರಾಜಿಗೆ ಮೊದಲು ವಿರಾಟ್ ಕೊಹ್ಲಿ , ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಸಿರಾಜ್ ಅವರ ರೂಪದಲ್ಲಿ ಆರ್‌ಸಿಬಿ ಮೂರು ಆಟಗಾರರನ್ನು ಉಳಿಸಿಕೊಂಡಿತ್ತು.

ಆರ್‌ಸಿಬಿಗೆ ಸಂಬಂಧಿಸಿದ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ, ಈ ಫ್ರಾಂಚೈಸ್ ಜೇಸನ್ ಹೋಲ್ಡರ್‌ಗಾಗಿ 12 ಕೋಟಿ ರೂಪಾಯಿವರೆಗೆ ಖರ್ಚು ಮಾಡಬಹುದು ಎಂದು ಬರೆದುಕೊಂಡಿದೆ. ಈ ವಿಂಡೀಸ್ ಆಟಗಾರ ಆಲ್ ರೌಂಡ್ ಸಾಮರ್ಥ್ಯವನ್ನು ಹೊಂದಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಯಾವ ತಂಡದ ಭಾಗವಾಗುತ್ತಾರೋ ಅದು ಆ ತಂಡಕ್ಕೆ ಬಂಪರ್ ಹೊಡೆಯಲುದೆ. ಹೋಲ್ಡರ್ ಕಳೆದ ಎರಡು ಸೀಸನ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನಲ್ಲಿದ್ದರು. ಅವರು ಬದಲಿ ಆಟಗಾರನಾಗಿ ಈ ತಂಡದೊಂದಿಗೆ ಆಡಿದ್ದರು.

ಹೋಲ್ಡರ್ ಏಕೆ ಬೇಡಿಕೆಯಲ್ಲಿದ್ದಾರೆ? ಐಪಿಎಲ್‌ನಲ್ಲಿ ಆಲ್‌ರೌಂಡರ್‌ಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಕಳೆದ ಕೆಲವು ಸೀಸನ್‌ಗಳಿಂದ ಆಲ್‌ರೌಂಡರ್ ಆಟಗಾರರು ಅತ್ಯಂತ ದುಬಾರಿ ಎಂದು ಸಾಬೀತುಪಡಿಸಿದ್ದಾರೆ. ಅನಾಮಧೇಯತೆಯ ಷರತ್ತಿನ ಮೇಲೆ ಫ್ರಾಂಚೈಸಿಯ ಹತ್ತಿರದ ಮೂಲವು ಪಿಟಿಐಗೆ ತಿಳಿಸಿದ್ದು, ಐಪಿಎಲ್​ನಿಂದ ಈಗಾಗಲೇ ಬೆನ್ ಸ್ಟೋಕ್ಸ್ ಹಿಂದೆ ಸರಿದಿದ್ದಾರೆ. ಜೊತೆಗೆ ಹಾರ್ದಿಕ್ ಪಾಂಡ್ಯ ಮತ್ತು ಮಾರ್ಕಸ್ ಸ್ಟೊಯಿನಿಸ್ ಇತರ ತಂಡವನ್ನು ಸೇರಿಕೊಂಡಿದ್ದಾರೆ. ಮಿಚೆಲ್ ಮಾರ್ಷ್ ಗಾಯದ ಸಮಸ್ಯೆಯಿಂದ ಇಡೀ ಐಪಿಎಲ್ ಆಡವುದು ಅನುಮಾನವಾಗಿದೆ. ಹೀಗಾಗಿ ದಾಖಲೆಯನ್ನು ನೋಡಿದರೆ, ಹೋಲ್ಡರ್ ಅವರ ಪ್ರದರ್ಶನ ಅದ್ಭುತವಾಗಿದೆ. RCB ಅವರಿಗೆ ಬಿಡ್ ಮಾಡಬಹುದು ಮತ್ತು ಇತರ ತಂಡಗಳು ಅದೇ ರೀತಿ ಮಾಡಬಹುದು ಎಂದು ಹೇಳಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಆಟಗಾರನ ಆಟ ಹೇಗಿದೆ? ಜೇಸನ್ ಹೋಲ್ಡರ್ 2013 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಅವರು ಇದುವರೆಗೆ 26 ಪಂದ್ಯಗಳನ್ನು ಆಡಿದ್ದು, 35 ವಿಕೆಟ್ ಪಡೆದಿದ್ದಾರೆ. ಕಳೆದ ಎರಡು ಋತುಗಳಲ್ಲಿ ಅವರು 26 ಪಂದ್ಯಗಳಲ್ಲಿ 15 ಪಂದ್ಯಗಳನ್ನು ಆಡಿದ್ದಾರೆ. ಈ 29 ವರ್ಷದ ಆಟಗಾರನಿಗೆ ಆರಂಭಿಕ ವರ್ಷಗಳಲ್ಲಿ ಐಪಿಎಲ್‌ನಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ ಆದರೆ ಈಗ ಅವರ ಆಟವು ಸಾಕಷ್ಟು ಸುಧಾರಿಸಿದೆ.

ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು
Daily Devotional: ಪ್ರದೂಷ ಕಾಲದ ಮಹತ್ವ ಹಾಗೂ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪ್ರದೂಷ ಕಾಲದ ಮಹತ್ವ ಹಾಗೂ ಹಿಂದಿನ ರಹಸ್ಯ ತಿಳಿಯಿರಿ
ಬಾಂಬೆ ಹೈಕೋರ್ಟ್​ ಆವರಣದಲ್ಲಿ ವಾಮಾಚಾರ?
ಬಾಂಬೆ ಹೈಕೋರ್ಟ್​ ಆವರಣದಲ್ಲಿ ವಾಮಾಚಾರ?
Daily Horoscope: ಈ ರಾಶಿಯವರಿಗೆ ಇಂದು ಸಾಲ ಮಾಡುವ ಸಂದರ್ಭ ಬರಬಹುದು
Daily Horoscope: ಈ ರಾಶಿಯವರಿಗೆ ಇಂದು ಸಾಲ ಮಾಡುವ ಸಂದರ್ಭ ಬರಬಹುದು
ರಜತ್, ವಿನಯ್ ಗೌಡ ಮೆಡಿಕಲ್ ಚೆಕಪ್; ಲಾಂಗ್ ಹಿಡಿದವರಿಗೆ ಕಾದಿದೆ ಕಷ್ಟ ಕಾಲ
ರಜತ್, ವಿನಯ್ ಗೌಡ ಮೆಡಿಕಲ್ ಚೆಕಪ್; ಲಾಂಗ್ ಹಿಡಿದವರಿಗೆ ಕಾದಿದೆ ಕಷ್ಟ ಕಾಲ
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ