Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ20 ವಿಶ್ವಕಪ್ ಮುಗಿದರೂ ತಾಯ್ನಾಡಿಗೆ ಮರಳದ ಅಫ್ಘನ್ ಆಟಗಾರರು! ಆಶ್ರಯ ಕೇಳಿ ಹೋಗಿದ್ದೆಲ್ಲಿಗೆ ಗೊತ್ತಾ?​

ಅಫ್ಘಾನಿಸ್ತಾನದ ಅಂಡರ್-19 ಆಟಗಾರರು ವಿದೇಶದಲ್ಲಿ ಆಶ್ರಯ ಪಡೆದಿರುವುದು ಇದೇ ಮೊದಲಲ್ಲ. ಕೆಲವು ವರ್ಷಗಳ ಹಿಂದೆಯೂ ಐದಾರು ಆಟಗಾರರು ಕೆನಡಾದಲ್ಲಿ ಆಶ್ರಯ ಪಡೆದಿದ್ದರು.

ಟಿ20 ವಿಶ್ವಕಪ್ ಮುಗಿದರೂ ತಾಯ್ನಾಡಿಗೆ ಮರಳದ ಅಫ್ಘನ್ ಆಟಗಾರರು! ಆಶ್ರಯ ಕೇಳಿ ಹೋಗಿದ್ದೆಲ್ಲಿಗೆ ಗೊತ್ತಾ?​
ಅಫ್ಘಾನಿಸ್ತಾನ ಕ್ರಿಕೆಟ್ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on:Feb 07, 2022 | 5:32 PM

ಅಫ್ಘಾನಿಸ್ತಾನ ಕ್ರಿಕೆಟ್‌ (Afghanistan Cricket)ಗೆ ಸಂಬಂಧಿಸಿದಂತೆ ಹೊಸ ವದಂತಿಯೊಂದು ಹುಟ್ಟಿಕೊಂಡಿದೆ. ಅಫ್ಘಾನಿಸ್ತಾನ ಅಂಡರ್ 19 ಕ್ರಿಕೆಟ್ ತಂಡದ ಕೆಲವು ಸದಸ್ಯರು ಮತ್ತು ಸಹಾಯಕ ಸಿಬ್ಬಂದಿ ಬ್ರಿಟನ್‌ನಲ್ಲಿ ಆಶ್ರಯ ಕೋರಿದ್ದಾರೆ ಎಂದು ವರದಿಯಾಗಿದೆ. ವಿಶ್ವಕಪ್ ಮುಗಿದ ಬಳಿಕ ವೆಸ್ಟ್ ಇಂಡೀಸ್‌ನಿಂದ ಅಫ್ಘಾನಿಸ್ತಾನಕ್ಕೆ ಹಿಂದಿರುಗುವ ಬದಲು, ಅಫ್ಘನ್ ತಂಡದ ಕೆಲವು ಆಟಗಾರರು ಹಾಗೂ ಸದಸ್ಯರು ಲಂಡನ್‌ನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅಫ್ಘಾನಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಆಶ್ರಯ ಪಡೆದಿರುವ ಆಟಗಾರರು ಮತ್ತು ಇತರ ಸದಸ್ಯರ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಅಫ್ಘಾನಿಸ್ತಾನ ಅಂಡರ್ 19 ತಂಡವು ವಿಶ್ವಕಪ್ (Under 19 World Cup 2022) ಆಡಲು ವೆಸ್ಟ್ ಇಂಡೀಸ್‌ಗೆ ತೆರಳಿತ್ತು. ಈ ಟೂರ್ನಿಯಲ್ಲಿ ಅಫ್ಘನ್ ತಂಡ ನಾಲ್ಕನೇ ಸ್ಥಾನ ಗಳಿಸಿತು. ಇದು ಯಾವುದೇ ಪ್ರಮುಖ ಐಸಿಸಿ ಟೂರ್ನಿಯಲ್ಲಿ ಅಫ್ಘಾನಿಸ್ತಾನದ ಅತ್ಯುತ್ತಮ ಪ್ರದರ್ಶನವಾಗಿತ್ತು.

ಅಂಡರ್-19 ವಿಶ್ವಕಪ್ ಆಡಿದ ನಂತರ ಕೆಲವು ಆಟಗಾರರು ಬ್ರಿಟನ್‌ಗೆ ತೆರಳಿದ್ದಾರೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಅಧಿಕಾರಿಗಳು ಖಚಿತಪಡಿಸಿದ್ದಾರೆ ಎಂದು ಅಫ್ಘಾನ್ ನ್ಯೂಸ್ ಇನ್ಸ್ಟಿಟ್ಯೂಟ್ ಪಶ್ಟೋವೊವಾ ಬರೆದುಕೊಂಡಿದೆ. ಅಫ್ಘನ್ ತಂಡದ ಕೆಲವು ಆಟಗಾರರು ಹಾಗೂ ಸದಸ್ಯರು ಅಫ್ಘಾನಿಸ್ತಾನಕ್ಕೆ ಹಿಂತಿರುಗದಿರಲು ನಿರ್ಧರಿಸಿದ್ದಾರೆ ಎಂದು ಬರೆದುಕೊಂಡಿದೆ. ಪಶ್ಟೋವೊವಾ ವೆಬ್‌ಸೈಟ್‌ನ ಸಂಪಾದಕ ಜಾಫರ್ ಹ್ಯಾಂಡ್ ಟ್ವೀಟ್ ಮಾಡಿ, “ಅಫ್ಘಾನಿಸ್ತಾನ U-19 ತಂಡದ ಆಟಗಾರ ಮತ್ತು ಮೂವರು ಅಧಿಕಾರಿಗಳು ತವರಿಗೆ ಬರಲು ನಿರಾಕರಿಸಿದ್ದಾರೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಎರಡು ಮೂಲಗಳು ನನಗೆ ತಿಳಿಸಿವೆ ಎಂದಿದ್ದಾರೆ.

ಅಫ್ಘಾನ್ ಆಟಗಾರರು ಈಗಾಗಲೇ ಆಶ್ರಯ ಪಡೆದಿದ್ದಾರೆ ಅಫ್ಘಾನಿಸ್ತಾನದ ಅಂಡರ್-19 ಆಟಗಾರರು ವಿದೇಶದಲ್ಲಿ ಆಶ್ರಯ ಪಡೆದಿರುವುದು ಇದೇ ಮೊದಲಲ್ಲ. ಕೆಲವು ವರ್ಷಗಳ ಹಿಂದೆಯೂ ಐದಾರು ಆಟಗಾರರು ಕೆನಡಾದಲ್ಲಿ ಆಶ್ರಯ ಪಡೆದಿದ್ದರು. ಆದಾಗ್ಯೂ, ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಆಟಗಾರರು ವಿದೇಶದಲ್ಲಿ ಆಶ್ರಯ ಪಡೆದಿರುವ ಮೊದಲ ಘಟನೆ ಇದಾಗಿದೆ. ಇಲ್ಲಿಯವರೆಗೆ, ಈ ವಿಷಯದಲ್ಲಿ ಬ್ರಿಟನ್ ಮತ್ತು ತಾಲಿಬಾನ್ ಯಾವುದೇ ಹೇಳಿಕೆ ನೀಡಿಲ್ಲ.

19 ವರ್ಷದೊಳಗಿನವರ ವಿಶ್ವಕಪ್‌ಗೆ ತೆರಳುವ ಅಫ್ಘಾನಿಸ್ತಾನ ತಂಡದಲ್ಲೂ ಹಲವು ಸಮಸ್ಯೆಗಳಿದ್ದವು. ವೀಸಾ ಪಡೆಯಲು ತಂಡಕ್ಕೆ ತೊಂದರೆಯಾಗಿತ್ತು. ಇದರಿಂದಾಗಿ ಅಫ್ಘಾನಿಸ್ತಾನ ತಂಡಕ್ಕೆ ಟೂರ್ನಿಯಲ್ಲಿ ಅಭ್ಯಾಸ ಪಂದ್ಯವನ್ನೂ ಆಡಲಾಗಲಿಲ್ಲ. ಅವರು ಕೊನೆಯ ಸಂದರ್ಭದಲ್ಲಿ ವಿಶ್ವಕಪ್ ಆಡಲು ವೆಸ್ಟ್ ಇಂಡಿಸ್​ಗೆ ತಲುಪಿದ್ದರು.

ಇದನ್ನೂ ಓದಿ:ಅಫ್ಘಾನಿಸ್ತಾನದಿಂದ ಐರ್ಲೆಂಡ್‌ಗೆ: 8 ಸಾವಿರ ಕಿ.ಮೀ ನಡೆದು ಕ್ರಿಕೆಟ್​ಗೆ ಎಂಟ್ರಿ ಕೊಟ್ಟ ಯುವ ಬೌಲರ್..!

Published On - 5:32 pm, Mon, 7 February 22