IPL 2022 Auction: RCB ತಂಡಕ್ಕೆ ವೆಸ್ಟ್ ಇಂಡೀಸ್ ಆಟಗಾರ

| Updated By: ಝಾಹಿರ್ ಯೂಸುಫ್

Updated on: Feb 13, 2022 | 4:44 PM

IPL 2022 Auction: ಇದಕ್ಕೂ ಮುನ್ನ ಆರ್​ಸಿಬಿ ಮೊದಲ ದಿನದ ಹರಾಜಿನಲ್ಲಿ ಫಾಫ್​ ಡುಪ್ಲೆಸಿಸ್​ಗೆ 7 ಕೋಟಿ ನೀಡಿದರೆ, ಹರ್ಷಲ್ ಪಟೇಲ್​ ಅವರನ್ನು 10.75 ಕೋಟಿಗೆ ಖರೀದಿಸಿದೆ.

IPL 2022 Auction: RCB ತಂಡಕ್ಕೆ ವೆಸ್ಟ್ ಇಂಡೀಸ್ ಆಟಗಾರ
sherfane rutherford
Follow us on

ಐಪಿಎಲ್ ಮೆಗಾ ಹರಾಜಿನ ಎರಡನೇ ದಿನದ ಬಿಡ್ಡಿಂಗ್​ನಲ್ಲಿ ಆರ್​ಸಿಬಿ ಮೂವರು ಆಟಗಾರರನ್ನು ಖರೀದಿಸಿದೆ. ಮೊದಲ ದಿನದಲ್ಲಿ 8 ಆಟಗಾರರನ್ನು ಖರೀದಿಸಿದ್ದ ಆರ್​ಸಿಬಿ 2ನೇ ದಿನ ಹೆಚ್ಚಿನ ಬಿಡ್ಡಿಂಗ್ ಆಸಕ್ತಿ ತೋರಲಿಲ್ಲ. ಇದಾಗ್ಯೂ 2ನೇ ಹಂತದ ಸುತ್ತಿನಲ್ಲಿ ಆರ್​ಸಿಬಿ ಮಹಿಪಾಲ್ ಲೋಮ್ರರ್, ಫಿನ್ ಅಲೆನ್ ಹಾಗೂ ಶೆರ್ಫಾನ್ ರುದರ್​​ಫೋರ್ಡ್​ ರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಮೊದಲು 22 ವರ್ಷದ ಯುವ ಆಲ್​ರೌಂಡರ್ ಮಹಿಪಾಲ್ ಲೋಮ್ರರ್​ ಅವರನ್ನು 95 ಲಕ್ಷ ರೂ. ನೀಡಿ ಖರೀದಿಸಿದರೆ, ಆ ಬಳಿಕನ್ಯೂಜಿಲೆಂಡ್​ನ ಯುವ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಫಿನ್ ಅಲೆನ್ ಅವರನ್ನೂ ಕೂಡ ಆರ್​ಸಿಬಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದರ ಬೆನ್ನಲ್ಲೇ ವೆಸ್ಟ್ ಇಂಡೀಸ್​ನ ಸ್ಪೋಟಕ ಬ್ಯಾಟ್ಸ್​ಮನ್ ಶೆರ್ಫಾನ್ ರುದರ್​ಫೋರ್ಡ್​ ಅವರನ್ನು 1 ಕೋಟಿ ನೀಡಿ ಖರೀದಿಸಿತು.

ಇದಕ್ಕೂ ಮುನ್ನ ಆರ್​ಸಿಬಿ ಮೊದಲ ದಿನದ ಹರಾಜಿನಲ್ಲಿ ಫಾಫ್​ ಡುಪ್ಲೆಸಿಸ್​ಗೆ 7 ಕೋಟಿ ನೀಡಿದರೆ, ಹರ್ಷಲ್ ಪಟೇಲ್​ ಅವರನ್ನು 10.75 ಕೋಟಿಗೆ ಖರೀದಿಸಿದೆ. ಅಲ್ಲದೆ ವನಿಂದು ಹಸರಂಗ ಅವರಿಗೆ 10.75 ಕೋಟಿ ನೀಡಿ ಅಚ್ಚರಿ ಮೂಡಿಸಿತ್ತು. ಇನ್ನು ದಿನೇಶ್ ಕಾರ್ತಿಕ್ ( 5.50 ಕೋಟಿ), ಯುವ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಅನೂಜ್ ರಾವತ್​ (3.40 ಕೋಟಿ) ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಝಲ್​ವುಡ್ ಅವರನ್ನು​ 7.75 ಕೋಟಿ ರೂ. ನೀಡಿ ತನ್ನದಾಗಿಸಿಕೊಂಡಿದೆ.

ಇನ್ನು ಶಹಬಾಜ್ ಅಹಮದ್ ಅವರನ್ನು 2. 40 ಕೋಟಿ ರೂ.ಗೆ ಹಾಗೂ ಆಕಾಶ್ ದೀಪ್ ಅವರನ್ನು 20 ಲಕ್ಷ ರೂ.ಗೆ ಆರ್​ಸಿಬಿ ಖರೀದಿಸಿದೆ. ಅದರಂತೆ ಮೊದಲ ದಿನವೇ ಆರ್​ಸಿಬಿ ತಂಡವು ಕೇವಲ 8 ಆಟಗಾರರಿಗೆ 47 ಕೋಟಿ 75 ಲಕ್ಷ ರೂ. ಖರ್ಚು ಮಾಡಿತ್ತು. ಇದೀಗ 2ನೇ ದಿನ 95 ಲಕ್ಷ ರೂ. ನೀಡಿ ಮಹಿಪಾಲ್ ಲೋಮ್ರರರ್​ ಹಾಗೂ 80 ಲಕ್ಷ ರೂ. ನೀಡಿ ಫಿನ್ ಅಲೆನ್ ಅವರನ್ನು ಖರೀದಿಸಿದೆ. ಹಾಗೆಯೇ ರುದರ್​ಫೋರ್ಡ್​ ಎಂಟ್ರಿಯೊಂದಿಗೆ ಇದೀಗ ರಿಟೈನ್ ಆಟಗಾರರು ಸೇರಿದಂತೆ ಆರ್​ಸಿಬಿ ತಂಡದಲ್ಲಿ 14 ಆಟಗಾರರಿದ್ದಾರೆ.

ಇದನ್ನೂ ಓದಿ: IPL 2022 RCB Players: Rcb ತಂಡಕ್ಕೆ ಎಂಟ್ರಿ ಕೊಟ್ಟ ಹೊಸ ಆಟಗಾರರು ಇವರೇ..!

ಇದನ್ನೂ ಓದಿ: IPL 2022 Auction: ಹರಾಜಾದ ಮತ್ತು ಹರಾಜಾಗದ ಆಟಗಾರರ ಸಂಪೂರ್ಣ ಪಟ್ಟಿ ಹೀಗಿದೆ

(IPL 2022 Auction: sherfane rutherford Sold To RCB)