Ipl 2022 auction: ಈ ಬಾರಿ ಐಪಿಎಲ್ ಆಡೋದು ಡೌಟ್, ಆದ್ರೂ 8 ಕೋಟಿಗೆ ಹರಾಜಾದ ಜೋಫ್ರಾ ಆರ್ಚರ್
ಜೋಫ್ರಾ ಆರ್ಚರ್ ಮೊದಲ ಸೀಸನ್ನಲ್ಲಿ ಉತ್ತಮ ಪ್ರದರ್ಶನ ನೀಡಿದರು. 10 ಪಂದ್ಯಗಳಲ್ಲಿ 15 ವಿಕೆಟ್ಗಳನ್ನು ಪಡೆದಿದ್ದರು. 2019 ರಲ್ಲಿ, ಆರ್ಚರ್ 11 ಪಂದ್ಯಗಳಲ್ಲಿ 11 ವಿಕೆಟ್ ಪಡೆದರು. ಈ ವೇಳೆ ಆರ್ಥಿಕ ದರವು ಪ್ರತಿ ಓವರ್‌ಗೆ 6.76 ರನ್ ಆಗಿತ್ತು
ಇಂಗ್ಲೆಂಡ್‌ನ ಬಲಗೈ ವೇಗದ ಬೌಲರ್ ಜೋಫ್ರಾ ಆರ್ಚರ್ ಗಾಯದ ಕಾರಣ ಈ ವರ್ಷ ಐಪಿಎಲ್ ಆಡುವುದು ಅನುಮಾನ. ಇದರ ಹೊರತಾಗಿಯೂ ಅವರು ಹರಾಜಿನಲ್ಲಿ (ipl 2022 auction) ಭರ್ಜರಿ ಮೊತ್ತ ಪಡೆದಿದ್ದಾರೆ. ಜೋಫ್ರಾ ಆರ್ಚರ್ ಅವರನ್ನು ಮುಂಬೈ ಇಂಡಿಯನ್ಸ್ 8 ಕೋಟಿ ರೂಪಾಯಿಗೆ ಖರೀದಿಸಿದೆ. ಆರ್ಚರ್ ಕಳೆದ ವರ್ಷವೂ ಐಪಿಎಲ್‌ನಲ್ಲಿ ಆಡಿರಲಿಲ್ಲ. ಅಲ್ಲದೆ ಕೆಲ ತಿಂಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಜೋಫ್ರಾ ಆರ್ಚರ್ ಐಪಿಎಲ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದು, ಇದುವರೆಗೆ 35 ಐಪಿಎಲ್ ಪಂದ್ಯಗಳಲ್ಲಿ 46 ವಿಕೆಟ್ ಪಡೆದಿದ್ದಾರೆ. ಈ ವೇಳೆ ಪ್ರತಿ ಓವರ್‌ಗೆ ಕೇವಲ 7.13 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. ಹೀಗಾಗಿ ಆರ್ಚರ್ ಖರೀದಿಗೆ ಭರ್ಜರಿ ಪೈಪೋಟಿ ಕಂಡು ಬಂತು. ಅಂತಿಮವಾಗಿ ಮುಂಬೈ ಇಂಡಿಯನ್ಸ್ 8 ಕೋಟಿ ನೀಡಿ ಖರೀದಿಸಿದೆ.
ಜೋಫ್ರಾ ಆರ್ಚರ್ 2018 ರಲ್ಲಿ ಮೊದಲ ಬಾರಿಗೆ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಮೂಲ ಬೆಲೆ ಕೇವಲ 40 ಲಕ್ಷ ರೂ.ಗಳೊಂದಿಗೆ ಕಾರಣಿಸಿಕೊಂಡ ಆರ್ಚರ್ ಅವರನ್ನು ಖರೀದಿಸಲು ದೆಹಲಿ, ಚೆನ್ನೈ ಹೆಚ್ಚಿನ ಆಸಕ್ತಿ ತೋರಿದ್ದವು. ಈ ಬಿಡ್ 3.40 ಕೋಟಿ ತಲುಪಿದಾಗ ಪಂಜಾಬ್ ಕಿಂಗ್ಸ್ ಕೂಡ ಖರೀದಿಸಲು ಮುಂದಾಯಿತು. ಸನ್‌ರೈಸರ್ಸ್ ಹೈದರಾಬಾದ್ ಕೂಡ ಜೋಫ್ರಾ ಆರ್ಚರ್ ಅವರನ್ನು 5 ಕೋಟಿಗೆ ಖರೀದಿಸಲು ಬಯಸಿತ್ತು. ಆದರೆ ನಂತರ ರಾಜಸ್ಥಾನ್ ರಾಯಲ್ಸ್ ಅವರಿಗೆ ಹೆಚ್ಚಿನ ಬೆಲೆ ನೀಡಿತು. ಅಂತಿಮವಾಗಿ ರಾಜಸ್ಥಾನ ಅವರನ್ನು 7.20 ಕೋಟಿಗೆ ಖರೀದಿಸಿತು.
ಐಪಿಎಲ್‌ನಲ್ಲಿ ಜೋಫ್ರಾ ಆರ್ಚರ್ ದಾಖಲೆ: ಜೋಫ್ರಾ ಆರ್ಚರ್ ಮೊದಲ ಸೀಸನ್ನಲ್ಲಿ ಉತ್ತಮ ಪ್ರದರ್ಶನ ನೀಡಿದರು. 10 ಪಂದ್ಯಗಳಲ್ಲಿ 15 ವಿಕೆಟ್ಗಳನ್ನು ಪಡೆದಿದ್ದರು. 2019 ರಲ್ಲಿ, ಆರ್ಚರ್ 11 ಪಂದ್ಯಗಳಲ್ಲಿ 11 ವಿಕೆಟ್ ಪಡೆದರು. ಈ ವೇಳೆ ಆರ್ಥಿಕ ದರವು ಪ್ರತಿ ಓವರ್‌ಗೆ 6.76 ರನ್ ಆಗಿತ್ತು. 2020 ರಲ್ಲಿ, ಆರ್ಚರ್ 14 ಪಂದ್ಯಗಳಲ್ಲಿ 20 ವಿಕೆಟ್ ಪಡೆದಿದ್ದರು. ಜೋಫ್ರಾ ಆರ್ಚರ್ ಅವರು T20 ಮಾದರಿಯಲ್ಲಿ 121 ಪಂದ್ಯಗಳ ಅನುಭವವನ್ನು ಹೊಂದಿದ್ದಾರೆ. ಈ ವೇಳೆ ಒಟ್ಟು 153 ವಿಕೆಟ್ಗಳನ್ನು ಕಬಳಿಸಿದ್ದಾರೆ. ಆರ್ಚರ್ ಈ ವರ್ಷ ಐಪಿಎಲ್ ಆಡುವುದಿಲ್ಲ. ಆದರೆ ಮುಂದಿನ ವರ್ಷ ಬುಮ್ರಾ- ಆರ್ಚರ್ ಜೋಡಿ ಎದುರಾಳಿಗಳಿಗೆ ಹೊಸ ಸವಾಲಾಗುವುದರಲ್ಲಿ ಡೌಟೇ ಇಲ್ಲ ಎನ್ನಬಹುದು.
ಇದನ್ನೂ ಓದಿ: IPL 2022 RCB Players: Rcb ತಂಡಕ್ಕೆ ಎಂಟ್ರಿ ಕೊಟ್ಟ ಹೊಸ ಆಟಗಾರರು ಇವರೇ..!
ಇದನ್ನೂ ಓದಿ: IPL 2022 Auction: ಹರಾಜಾದ ಮತ್ತು ಹರಾಜಾಗದ ಆಟಗಾರರ ಸಂಪೂರ್ಣ ಪಟ್ಟಿ ಹೀಗಿದೆ
(Jofra archer ipl 2022 auction mumbai indians buys england player for the auction price of 8 crore rupees)