AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022 Auction: RCB ತಂಡಕ್ಕೆ ಕೊನೆಗೂ ಕನ್ನಡಿಗ ಆಯ್ಕೆ

IPL 2022 Auction: ಮೊದಲ ದಿನವೇ ಆರ್​ಸಿಬಿ ತಂಡವು ಕೇವಲ 8 ಆಟಗಾರರಿಗೆ 47 ಕೋಟಿ 75 ಲಕ್ಷ ರೂ. ಖರ್ಚು ಮಾಡಿತ್ತು. ಇದೀಗ 2ನೇ ದಿನ 95 ಲಕ್ಷ ರೂ. ನೀಡಿ ಮಹಿಪಾಲ್ ಲೋಮ್ರರರ್​ ಹಾಗೂ 80 ಲಕ್ಷ ರೂ. ನೀಡಿ ಫಿನ್ ಅಲೆನ್ ಅವರನ್ನು ಖರೀದಿಸಿದೆ.

IPL 2022 Auction: RCB ತಂಡಕ್ಕೆ ಕೊನೆಗೂ ಕನ್ನಡಿಗ ಆಯ್ಕೆ
Aneeshwar Gautam
TV9 Web
| Edited By: |

Updated on: Feb 13, 2022 | 6:54 PM

Share

ಐಪಿಎಲ್ ಮೆಗಾ ಹರಾಜಿನ ಎರಡನೇ ದಿನದ ಬಿಡ್ಡಿಂಗ್​ನಲ್ಲಿ ಆರ್​ಸಿಬಿ ಫ್ರಾಂಚೈಸಿ ಇದುವರೆಗೆ 7 ಆಟಗಾರರನ್ನು ಖರೀದಿಸಿದೆ. ಈ ಪಟ್ಟಿಯಲ್ಲಿ ಕನ್ನಡಿಗನಿಗೂ ಅವಕಾಶ ಸಿಕ್ಕಿದೆ. ಹೌದು, ಆರ್​ಸಿಬಿ ತಂಡಕ್ಕೆ ಕರ್ನಾಟಕ ಯುವ ಆಟಗಾರ ಅನೀಶ್ವರ್ ಗೌತಮ್ ಆಯ್ಕೆಯಾಗಿದ್ದಾರೆ. 19 ವರ್ಷದ ಅನೀಶ್ವರ್ ಈ ಹಿಂದೆ ಅಂಡರ್ 19 ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಅಲ್ಲದೆ ಕರ್ನಾಟಕ ಪರ ಕೂಡ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದೀಗ ಆರ್​ಸಿಬಿ ಅನೀಶ್ವರ್ ಗೌತಮ್ ಅವರನ್ನು 20 ಲಕ್ಷ ರೂ.ಗೆ ಖರೀದಿಸುವ ಮೂಲಕ ತಂಡದಲ್ಲಿ ಕನ್ನಡಿಗನೊಬ್ಬನಿಗೆ ಸ್ಥಾನ ನೀಡಿದೆ. ಇದಕ್ಕೂ ಮೊದಲು 22 ವರ್ಷದ ಯುವ ಆಲ್​ರೌಂಡರ್ ಮಹಿಪಾಲ್ ಲೋಮ್ರರ್​ ಅವರನ್ನು 95 ಲಕ್ಷ ರೂ. ನೀಡಿ ಖರೀದಿಸಿದರೆ, ಆ ಬಳಿಕ ನ್ಯೂಜಿಲೆಂಡ್​ನ ಯುವ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಫಿನ್ ಅಲೆನ್ ಅವರನ್ನೂ 80 ಲಕ್ಷಕ್ಕೆ ಆರ್​ಸಿಬಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದರ ಬೆನ್ನಲ್ಲೇ ವೆಸ್ಟ್ ಇಂಡೀಸ್​ನ ಸ್ಪೋಟಕ ಬ್ಯಾಟ್ಸ್​ಮನ್ ಶೆರ್ಫಾನ್ ರುದರ್​ಫೋರ್ಡ್​ ಅವರನ್ನು 1 ಕೋಟಿ ನೀಡಿ ಖರೀದಿಸಿತು. ಇದರೊಂದಿಗೆ ಆರ್​ಸಿಬಿ ತಂಡದ ಒಟ್ಟು ಆಟಗಾರರ ಸಂಖ್ಯೆ 18 ಕ್ಕೇರಿದೆ.

ಆರ್​ಸಿಬಿ ಮೊದಲ ದಿನದ ಹರಾಜಿನಲ್ಲಿ ಫಾಫ್​ ಡುಪ್ಲೆಸಿಸ್​ಗೆ 7 ಕೋಟಿ ನೀಡಿದರೆ, ಹರ್ಷಲ್ ಪಟೇಲ್​ ಅವರನ್ನು 10.75 ಕೋಟಿಗೆ ಖರೀದಿಸಿದೆ. ಅಲ್ಲದೆ ವನಿಂದು ಹಸರಂಗ ಅವರಿಗೆ 10.75 ಕೋಟಿ ನೀಡಿ ಅಚ್ಚರಿ ಮೂಡಿಸಿತ್ತು. ಇನ್ನು ದಿನೇಶ್ ಕಾರ್ತಿಕ್ ( 5.50 ಕೋಟಿ), ಯುವ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಅನೂಜ್ ರಾವತ್​ (3.40 ಕೋಟಿ) ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಝಲ್​ವುಡ್ ಅವರನ್ನು​ 7.75 ಕೋಟಿ ರೂ. ನೀಡಿ ತನ್ನದಾಗಿಸಿಕೊಂಡಿದೆ.

ಇನ್ನು ಶಹಬಾಜ್ ಅಹಮದ್ ಅವರನ್ನು 2. 40 ಕೋಟಿ ರೂ.ಗೆ ಹಾಗೂ ಆಕಾಶ್ ದೀಪ್ ಅವರನ್ನು 20 ಲಕ್ಷ ರೂ.ಗೆ ಆರ್​ಸಿಬಿ ಖರೀದಿಸಿದೆ. ಅದರಂತೆ ಮೊದಲ ದಿನವೇ ಆರ್​ಸಿಬಿ ತಂಡವು ಕೇವಲ 8 ಆಟಗಾರರಿಗೆ 47 ಕೋಟಿ 75 ಲಕ್ಷ ರೂ. ಖರ್ಚು ಮಾಡಿತ್ತು. ಇದೀಗ 2ನೇ ದಿನ 95 ಲಕ್ಷ ರೂ. ನೀಡಿ ಮಹಿಪಾಲ್ ಲೋಮ್ರರರ್​ ಹಾಗೂ 80 ಲಕ್ಷ ರೂ. ನೀಡಿ ಫಿನ್ ಅಲೆನ್ ಅವರನ್ನು ಖರೀದಿಸಿದೆ. ಅಲ್ಲದೆ ಜೇಸನ್ ಬೆಹ್ರಂಡ್ರೋಫ್ (75 ಲಕ್ಷ ರೂ.) , ಸುಯಶ್ ಪ್ರಭುದೇಸಾಯಿ (30 ಲಕ್ಷ ರೂ.) , ಚಮ ಮಿಲಿಂದ್ (25 ಲಕ್ಷ ರೂ.) ಹಾಗೂ ಅನೀಶ್ವರ್ ಗೌತಮ್ (20 ಲಕ್ಷರೂ.) ಅವರನ್ನು ಖರೀದಿಸಿದೆ.

ಇದನ್ನೂ ಓದಿ: IPL 2022 RCB Players: Rcb ತಂಡಕ್ಕೆ ಎಂಟ್ರಿ ಕೊಟ್ಟ ಹೊಸ ಆಟಗಾರರು ಇವರೇ..!

ಇದನ್ನೂ ಓದಿ: IPL 2022 Auction: ಹರಾಜಾದ ಮತ್ತು ಹರಾಜಾಗದ ಆಟಗಾರರ ಸಂಪೂರ್ಣ ಪಟ್ಟಿ ಹೀಗಿದೆ

(IPL 2022 Auction: Aneeshwar Gautam Sold To RCB)

ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!