IPL 2022 Auction: RCB ತಂಡಕ್ಕೆ ವೆಸ್ಟ್ ಇಂಡೀಸ್ ಆಟಗಾರ
IPL 2022 Auction: ಇದಕ್ಕೂ ಮುನ್ನ ಆರ್ಸಿಬಿ ಮೊದಲ ದಿನದ ಹರಾಜಿನಲ್ಲಿ ಫಾಫ್ ಡುಪ್ಲೆಸಿಸ್ಗೆ 7 ಕೋಟಿ ನೀಡಿದರೆ, ಹರ್ಷಲ್ ಪಟೇಲ್ ಅವರನ್ನು 10.75 ಕೋಟಿಗೆ ಖರೀದಿಸಿದೆ.
ಐಪಿಎಲ್ ಮೆಗಾ ಹರಾಜಿನ ಎರಡನೇ ದಿನದ ಬಿಡ್ಡಿಂಗ್ನಲ್ಲಿ ಆರ್ಸಿಬಿ ಮೂವರು ಆಟಗಾರರನ್ನು ಖರೀದಿಸಿದೆ. ಮೊದಲ ದಿನದಲ್ಲಿ 8 ಆಟಗಾರರನ್ನು ಖರೀದಿಸಿದ್ದ ಆರ್ಸಿಬಿ 2ನೇ ದಿನ ಹೆಚ್ಚಿನ ಬಿಡ್ಡಿಂಗ್ ಆಸಕ್ತಿ ತೋರಲಿಲ್ಲ. ಇದಾಗ್ಯೂ 2ನೇ ಹಂತದ ಸುತ್ತಿನಲ್ಲಿ ಆರ್ಸಿಬಿ ಮಹಿಪಾಲ್ ಲೋಮ್ರರ್, ಫಿನ್ ಅಲೆನ್ ಹಾಗೂ ಶೆರ್ಫಾನ್ ರುದರ್ಫೋರ್ಡ್ ರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಮೊದಲು 22 ವರ್ಷದ ಯುವ ಆಲ್ರೌಂಡರ್ ಮಹಿಪಾಲ್ ಲೋಮ್ರರ್ ಅವರನ್ನು 95 ಲಕ್ಷ ರೂ. ನೀಡಿ ಖರೀದಿಸಿದರೆ, ಆ ಬಳಿಕನ್ಯೂಜಿಲೆಂಡ್ನ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಫಿನ್ ಅಲೆನ್ ಅವರನ್ನೂ ಕೂಡ ಆರ್ಸಿಬಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದರ ಬೆನ್ನಲ್ಲೇ ವೆಸ್ಟ್ ಇಂಡೀಸ್ನ ಸ್ಪೋಟಕ ಬ್ಯಾಟ್ಸ್ಮನ್ ಶೆರ್ಫಾನ್ ರುದರ್ಫೋರ್ಡ್ ಅವರನ್ನು 1 ಕೋಟಿ ನೀಡಿ ಖರೀದಿಸಿತು.
ಇದಕ್ಕೂ ಮುನ್ನ ಆರ್ಸಿಬಿ ಮೊದಲ ದಿನದ ಹರಾಜಿನಲ್ಲಿ ಫಾಫ್ ಡುಪ್ಲೆಸಿಸ್ಗೆ 7 ಕೋಟಿ ನೀಡಿದರೆ, ಹರ್ಷಲ್ ಪಟೇಲ್ ಅವರನ್ನು 10.75 ಕೋಟಿಗೆ ಖರೀದಿಸಿದೆ. ಅಲ್ಲದೆ ವನಿಂದು ಹಸರಂಗ ಅವರಿಗೆ 10.75 ಕೋಟಿ ನೀಡಿ ಅಚ್ಚರಿ ಮೂಡಿಸಿತ್ತು. ಇನ್ನು ದಿನೇಶ್ ಕಾರ್ತಿಕ್ ( 5.50 ಕೋಟಿ), ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಅನೂಜ್ ರಾವತ್ (3.40 ಕೋಟಿ) ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಝಲ್ವುಡ್ ಅವರನ್ನು 7.75 ಕೋಟಿ ರೂ. ನೀಡಿ ತನ್ನದಾಗಿಸಿಕೊಂಡಿದೆ.
Joining RCB’s #ClassOf2022:
Name: Sherfane Rutherford Price: 1 CR
Welcome to the family! ?#PlayBold #WeAreChallengers #IPLMegaAuction #IPL2022 pic.twitter.com/A1bIgCFrfw
— Royal Challengers Bangalore (@RCBTweets) February 13, 2022
ಇನ್ನು ಶಹಬಾಜ್ ಅಹಮದ್ ಅವರನ್ನು 2. 40 ಕೋಟಿ ರೂ.ಗೆ ಹಾಗೂ ಆಕಾಶ್ ದೀಪ್ ಅವರನ್ನು 20 ಲಕ್ಷ ರೂ.ಗೆ ಆರ್ಸಿಬಿ ಖರೀದಿಸಿದೆ. ಅದರಂತೆ ಮೊದಲ ದಿನವೇ ಆರ್ಸಿಬಿ ತಂಡವು ಕೇವಲ 8 ಆಟಗಾರರಿಗೆ 47 ಕೋಟಿ 75 ಲಕ್ಷ ರೂ. ಖರ್ಚು ಮಾಡಿತ್ತು. ಇದೀಗ 2ನೇ ದಿನ 95 ಲಕ್ಷ ರೂ. ನೀಡಿ ಮಹಿಪಾಲ್ ಲೋಮ್ರರರ್ ಹಾಗೂ 80 ಲಕ್ಷ ರೂ. ನೀಡಿ ಫಿನ್ ಅಲೆನ್ ಅವರನ್ನು ಖರೀದಿಸಿದೆ. ಹಾಗೆಯೇ ರುದರ್ಫೋರ್ಡ್ ಎಂಟ್ರಿಯೊಂದಿಗೆ ಇದೀಗ ರಿಟೈನ್ ಆಟಗಾರರು ಸೇರಿದಂತೆ ಆರ್ಸಿಬಿ ತಂಡದಲ್ಲಿ 14 ಆಟಗಾರರಿದ್ದಾರೆ.
ಇದನ್ನೂ ಓದಿ: IPL 2022 RCB Players: Rcb ತಂಡಕ್ಕೆ ಎಂಟ್ರಿ ಕೊಟ್ಟ ಹೊಸ ಆಟಗಾರರು ಇವರೇ..!
ಇದನ್ನೂ ಓದಿ: IPL 2022 Auction: ಹರಾಜಾದ ಮತ್ತು ಹರಾಜಾಗದ ಆಟಗಾರರ ಸಂಪೂರ್ಣ ಪಟ್ಟಿ ಹೀಗಿದೆ
(IPL 2022 Auction: sherfane rutherford Sold To RCB)