AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥಿಯೇಟರ್​ನಲ್ಲಿ ಮುಗಿಯಿತು ‘ಧುರಂಧರ್ 2’ ಆಟ; ಅಂತಿಮ ಕಲೆಕ್ಷನ್ ಎಷ್ಟು?

ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2: ದಿ ರಿವೆಂಜ್' ಚಿತ್ರ ಈ ವಾರ ಒಟಿಟಿಗೆ ಬರಲು ಸಿದ್ಧವಾಗಿದೆ. ಭಾರತದಲ್ಲಿ ಜಿಯೋ ಹಾಟ್‌ಸ್ಟಾರ್‌ನಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಥಿಯೇಟರ್‌ಗಳಲ್ಲಿ ಕತ್ತರಿಸಿದ ದೃಶ್ಯಗಳನ್ನು ಒಳಗೊಂಡಿರುವ ಒಟಿಟಿ ಆವೃತ್ತಿ ಹೆಚ್ಚು ರೋಚಕವಾಗಿದೆ. ಈಗಾಗಲೇ ವಿಶ್ವದಾದ್ಯಂತ 1796 ಕೋಟಿಗೂ ಹೆಚ್ಚು ಗಳಿಕೆ ಕಂಡಿರುವ ಈ ಚಿತ್ರ, 'ಬಾಹುಬಲಿ 2' ದಾಖಲೆ ಮುರಿಯುವ ಸನಿಹದಲ್ಲಿದೆ.

ಥಿಯೇಟರ್​ನಲ್ಲಿ ಮುಗಿಯಿತು ‘ಧುರಂಧರ್ 2’ ಆಟ; ಅಂತಿಮ ಕಲೆಕ್ಷನ್ ಎಷ್ಟು?
ಧುರಂಧರ್ 2
ರಾಜೇಶ್ ದುಗ್ಗುಮನೆ
|

Updated on:May 15, 2026 | 7:06 AM

Share

ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ‘ಧುರಂಧರ್ 2: ದಿ ರಿವೆಂಜ್’ ಚಿತ್ರ ಈ ವಾರವೇ ಒಟಿಟಿಗೆ ಕಾಲಿಡಲು ರೆಡಿ ಆಗಿದೆ. ಈ ಸಿನಿಮಾ ಏಕಕಾಲದಲ್ಲಿ ಎರಡು ವಿಭಿನ್ನ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ ಥಿಯೇಟರ್​​ನಲ್ಲಿ ಈ ಸಿನಿಮಾದ ಕಲೆಕ್ಷನ್ ಬಹುತೇಕವಾಗಿ ಕೊನೆಗೊಂಡಂತೆ ಆಗಿದೆ. ಹಾಗಾದರೆ ಅಂತಿಮವಾಗಿ ಈ ಸಿನಿಮಾ ಎಷ್ಟು ಕೋಟಿ ಗಳಿಸಿತು ಎಂಬುದರ ಲೆಕ್ಕ ಇಲ್ಲಿದೆ.

1. ‘ಧುರಂಧರ್ 2’ ಒಟಿಟಿಗೆ ಬರಲು ರೆಡಿ

2. ವಿಶ್ವಾದ್ಯಂತ ಭರ್ಜರಿ ಕಲೆಕ್ಷನ್

3. ರಣವೀರ್ ಸಿಂಗ್​​ಗೆ ದೊಡ್ಡ ಜಯ

ಭಾರತದಲ್ಲಿ ಜಿಯೋ ಹಾಟ್​ಸ್ಟಾರ್ ಸಂಸ್ಥೆ ಬರೋಬ್ಬರಿ 150 ಕೋಟಿ ರೂಪಾಯಿಗಳಿಗೆ ಒಟಿಟಿ ಹಕ್ಕನ್ನು ಖರೀದಿಸಿದೆ ಎನ್ನಲಾಗಿದೆ. ಭಾರತೀಯ ಪ್ರೇಕ್ಷಕರು ಜಿಯೋಹಾಟ್‌ಸ್ಟಾರ್‌ನಲ್ಲಿ ಮಾತ್ರ ಈ ಚಿತ್ರವನ್ನು ವೀಕ್ಷಿಸಬಹುದಾಗಿದೆ. ಮೊದಲ ಭಾಗ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದರಿಂದ, ಎರಡನೇ ಭಾಗವೂ ಅಲ್ಲಿಯೇ ಬರಬಹುದು ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಈ ಸುದ್ದಿ ಅಚ್ಚರಿ ಮೂಡಿಸಿದೆ. ಭಾರತದ ಹೊರಗಿನ ಪ್ರೇಕ್ಷಕರಿಗಾಗಿ ನೆಟ್‌ಫ್ಲಿಕ್ಸ್ ಈ ಚಿತ್ರವನ್ನು ಪ್ರಸಾರ ಮಾಡಲಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ‘ಧುರಂದರ್: ದಿ ರಿವೇಂಜ್ (ರಾ ಆ್ಯಂಡ್ ಅನ್​​ಸಿನ್) ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ. ಅಂದರೆ, ಥಿಯೇಟರ್‌ನಲ್ಲಿ ಬಿಡುಗಡೆಯಾದ ಆವೃತ್ತಿಗಿಂತ ಒಟಿಟಿ ಆವೃತ್ತಿ ಹೆಚ್ಚು ರೋಚಕವಾಗಿರಲಿದೆ: ಚಿತ್ರಮಂದಿರದಲ್ಲಿ 3 ಗಂಟೆ 49 ನಿಮಿಷಗಳಿದ್ದ ಈ ಸಿನಿಮಾ, ಒಟಿಟಿಯಲ್ಲಿ 3 ಗಂಟೆ 52 ನಿಮಿಷಗಳ ಕಾಲ ಇರಲಿದೆ. ಸೆನ್ಸಾರ್ ಮಂಡಳಿಯಿಂದ ಕತ್ತರಿ ಬಿದ್ದಿದ್ದ ಹಿಂಸಾತ್ಮಕ ದೃಶ್ಯಗಳು ಮತ್ತು ಸಂಭಾಷಣೆಗಳನ್ನು ಈ ಆವೃತ್ತಿಯಲ್ಲಿ ಮರುಸೇರ್ಪಡೆ ಮಾಡಲಾಗಿದೆ. ಇಂದು ಸಿನಿಮಾ ಪ್ರಸಾರ ಆಗುವ ಸಾಧ್ಯತೆ ಇದೆ.

ಒಟ್ಟಾರೆ ಗಳಿಕೆ

‘ಧುರಂಧರ್ 2’ ಸಿನಿಮಾ ಭಾರತಾದ್ಯಂತ 1369 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಹಾಗೂ 1,144.56 ನೆಟ್ ಕಲೆಕ್ಷನ್ ಮಾಡಿದೆ. ವಿಶ್ವಾದ್ಯಂತ ಈ ಚಿತ್ರದ ಗ್ರಾಸ್ ಕಲೆಕ್ಷನ್ 1,796.51 ಕೋಟಿ ರೂಪಾಯಿ ಆಗಿದೆ. ಹೆಚ್ಚುವರಿಯಾಗಿ 10-20 ಕೋಟಿ ರೂಪಾಯಿ ಸೇರ್ಪಡೆಯಾಗಬಹುದು ಅಷ್ಟೇ ಎಂದು ಅಂದಾಜಿಸಲಾಗಿದೆ. ‘ಬಾಹುಬಲಿ 2’ ಚಿತ್ರದ ಒಟ್ಟಾರೆ ಗಳಿಕೆ 1,810 ಕೋಟಿ ರೂಪಾಯಿ ಇದೆ. ಇದನ್ನು ಈ ಚಿತ್ರಕ್ಕೆ ಬೀಟ್ ಮಾಡಲಾಗುತ್ತದೆಯೇ ಎಂಬುದು ಸದ್ಯದ ಪ್ರಶ್ನೆ.

ಇದನ್ನೂ ಓದಿ: ‘ಧುರಂಧರ್’ಗೆ ಕೌಂಟರ್ ಕೊಡಲು ಬಂದ ‘ಮೇರಾ ಲಿಯಾರಿ’ಗೆ ಹೀನಾಯ ಸೋಲು; ಕೇವಲ 22 ಟಿಕೆಟ್ ಮಾರಾಟ

ಆದಿತ್ಯ ಧರ್ ನಿರ್ದೇಶನದ ಈ ಆಕ್ಷನ್ ಡ್ರಾಮಾ, ದೊಡ್ಡ ಮಟ್ಟದ ತಾರಾಗಣವನ್ನು ಹೊಂದಿದೆ. ರಣವೀರ್ ಸಿಂಗ್, ಸಾರಾ ಅರ್ಜುನ್, ಸಂಜಯ್ ದತ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಜಿಯೋ ಹಾಟ್​​ಸ್ಟಾರ್ ಸಂಸ್ಥೆ ಇದನ್ನು ನಿರ್ಮಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:04 am, Fri, 15 May 26

Follow Us
ಮಂಗಳೂರಿಗೆ ಬಂದ ಶಾರುಖ್ ಖಾನ್, ಬಾದ್​​ಶಾನ ನೋಡಲು ಮುಗಿಬಿದ್ದ ಜನ
ಮಂಗಳೂರಿಗೆ ಬಂದ ಶಾರುಖ್ ಖಾನ್, ಬಾದ್​​ಶಾನ ನೋಡಲು ಮುಗಿಬಿದ್ದ ಜನ
ಅಂಗಡಿ ಗೋಡೆ ಕೊರೆದು 10 ಕೆಜಿ ಬೆಳ್ಳಿ ಕಳ್ಳತನ ಕೇಸ್​​: ಯುವಕ ಅರೆಸ್ಟ್
ಅಂಗಡಿ ಗೋಡೆ ಕೊರೆದು 10 ಕೆಜಿ ಬೆಳ್ಳಿ ಕಳ್ಳತನ ಕೇಸ್​​: ಯುವಕ ಅರೆಸ್ಟ್
33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ: ಡಿಕೆಶಿ
33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ: ಡಿಕೆಶಿ
ಜೂ 28ರಂದು ರಾಷ್ಟ್ರೀಯ ಲಸಿಕಾ ದಿನ: ಚಿಕ್ಕ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ
ಜೂ 28ರಂದು ರಾಷ್ಟ್ರೀಯ ಲಸಿಕಾ ದಿನ: ಚಿಕ್ಕ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ
ಮುತ್ತತ್ತಿ ದುರಂತ: ಕೊನೇ ಕ್ಷಣದ ವಿಡಿಯೋ ವೈರಲ್
ಮುತ್ತತ್ತಿ ದುರಂತ: ಕೊನೇ ಕ್ಷಣದ ವಿಡಿಯೋ ವೈರಲ್
ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಕ್ರಸ್ಟ್ ಗೇಟ್‌ಗಳು ಲೋಕಾರ್ಪಣೆ
ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಕ್ರಸ್ಟ್ ಗೇಟ್‌ಗಳು ಲೋಕಾರ್ಪಣೆ
ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ
ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ
ಕಲ್ಲಯ್ಯಜ್ಜ ಶ್ರೀಗಳಿಗೆ ಮಠದ ಟ್ರಸ್ಟಿಗಳಿಂದಲೇ ಜೀವ ಬೆದರಿಕೆ ಆರೋಪ
ಕಲ್ಲಯ್ಯಜ್ಜ ಶ್ರೀಗಳಿಗೆ ಮಠದ ಟ್ರಸ್ಟಿಗಳಿಂದಲೇ ಜೀವ ಬೆದರಿಕೆ ಆರೋಪ
‘11 ವರ್ಷಗಳಾದ್ರೂ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿ ಇಲ್ಲ’
‘11 ವರ್ಷಗಳಾದ್ರೂ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿ ಇಲ್ಲ’
ಐವರು ಜಲಸಮಾಧಿ ಕೇಸ್​: ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಹೇಳಿದ್ದೇನು?
ಐವರು ಜಲಸಮಾಧಿ ಕೇಸ್​: ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಹೇಳಿದ್ದೇನು?