IPL 2022: ಪಂಜಾಬ್ ಕಿಂಗ್ಸ್ ತಂಡ ಖರೀದಿಸಿದ ಆಟಗಾರನಿಗೆ ಶ್ರೀಲಂಕಾ ತಂಡದಲ್ಲೇ ಇಲ್ಲ ಸ್ಥಾನ..!

Bhanuka Rajapaksa: ಕೇವಲ 15 ಟಿ20 ಇನ್ನಿಂಗ್ಸ್‌ಗಳನ್ನು ಆಡಿರುವ 30 ವರ್ಷದ ರಾಜಪಕ್ಸೆ ಇದುವರೆಗೆ 320 ರನ್ ಗಳಿಸಿದ್ದಾರೆ. ವಿಶೇಷ ಎಂದರೆ ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಬಿಡ್ ಆದ ಏಕೈಕ ಶ್ರೀಲಂಕಾ ಬ್ಯಾಟ್ಸ್​ಮನ್​ ಕೂಡ ಭಾನುಕಾ.

IPL 2022: ಪಂಜಾಬ್ ಕಿಂಗ್ಸ್ ತಂಡ ಖರೀದಿಸಿದ ಆಟಗಾರನಿಗೆ ಶ್ರೀಲಂಕಾ ತಂಡದಲ್ಲೇ ಇಲ್ಲ ಸ್ಥಾನ..!
Bhanuka Rajapaksa
Follow us
TV9 Web
| Updated By: ಝಾಹಿರ್ ಯೂಸುಫ್

Updated on: Feb 21, 2022 | 5:11 PM

ಟೀಮ್ ಇಂಡಿಯಾ ವಿರುದ್ದ ಟಿ20 ಸರಣಿಗಾಗಿ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ. 18 ಸದಸ್ಯರ ಈ ಬಳಗದಲ್ಲಿ ಸ್ಟಾರ್ ಆಟಗಾರ ಭಾನುಕಾ ರಾಜಪಕ್ಸೆ ಸ್ಥಾನ ಪಡೆದಿಲ್ಲ ಎಂಬುದು ವಿಶೇಷ. ಏಕೆಂದರೆ ಭಾನುಕಾ ರಾಜಪಕ್ಸೆಯನ್ನು ಈ ಬಾರಿ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು 50 ಲಕ್ಷ ರೂ. ನೀಡಿ ಖರೀದಿಸಿತ್ತು. ಆದರೆ ಇದೀಗ ಶ್ರೀಲಂಕಾ ತಂಡದಲ್ಲೇ ಭಾನುಕಾಗೆ ಅವಕಾಶ ಸಿಕ್ಕಿಲ್ಲ. ಕಳಪೆ ಫಿಟ್​ನೆಸ್ ಹೊಂದಿರುವ ಕಾರಣ ಭಾನುಕಾ ರಾಜಪಕ್ಸೆಯನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಆದರೆ ಇತ್ತ ಪಂಜಾಬ್ ಕಿಂಗ್ಸ್ ತಂಡವು 50 ಲಕ್ಷ ರೂ. ನೀಡಿ ಲಂಕಾ ಆಟಗಾರನನ್ನು ಖರೀದಿಸಿದೆ.

ಭಾನುಕಾ ರಾಜಪಕ್ಸೆ ಶ್ರೀಲಂಕಾ ತಂಡದ ಆಯ್ಕೆಗಿರುವ ಫಿಟ್‌ನೆಸ್ ಮಾರ್ಗಸೂಚಿಗಳನ್ನು ಪೂರೈಸಲು ವಿಫಲವಾಗಿದ್ದಾರೆ. ‘ಸ್ಕಿನ್‌ಫೋಲ್ಡ್’ ಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿದ್ದಾರೆ. ಹೀಗಾಗಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂದು ವರದಿಯಾಗಿದೆ. ಕೇವಲ 15 ಟಿ20 ಇನ್ನಿಂಗ್ಸ್‌ಗಳನ್ನು ಆಡಿರುವ 30 ವರ್ಷದ ರಾಜಪಕ್ಸೆ ಇದುವರೆಗೆ 320 ರನ್ ಗಳಿಸಿದ್ದಾರೆ. ವಿಶೇಷ ಎಂದರೆ ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಬಿಡ್ ಆದ ಏಕೈಕ ಶ್ರೀಲಂಕಾ ಬ್ಯಾಟ್ಸ್​ಮನ್​ ಕೂಡ ಭಾನುಕಾ. ಇದೀಗ ಐಪಿಎಲ್​ಗೂ ಮುನ್ನ ಭಾರತದಲ್ಲಿ ನಡೆಯಲಿರುವ ಸರಣಿಗೆ ಲಂಕಾ ಬ್ಯಾಟ್ಸ್​ಮನ್​ಗೆ ಅವಕಾಶ ಸಿಗದಿರುವುದು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಚಿಂತೆಯನ್ನು ಹೆಚ್ಚಿಸಿದೆ.

ಟಿ20 ಸರಣಿಗಾಗಿ ಶ್ರೀಲಂಕಾ ತಂಡ ಹೀಗಿದೆ:

1. ದಾಸುನ್ ಶನಕ – ನಾಯಕ 2. ಪಾತುಂ ನಿಸ್ಸಾಂಕ 3. ಕುಸಾಲ್ ಮೆಂಡಿಸ್ 4. ದಿನೇಶ್ ಚಾಂಡಿಮಾಲ್ 5. ದನುಷ್ಕ ಗುಣತಿಲಕ 6. ಕಾಮಿಲ್ ಮಿಶ್ರಾ 7. ಜನಿತ್ ಲಿಯಾನಗೆ 8. ವನಿಂದು ಹಸರಂಗ 9. ಚಾಮಿಕಾ ಕರುಣಾರತ್ನೆ 10. ದುಷ್ಮಂತ ಚಮೀರ 11. ಲಹಿರು ಕುಮಾರ 12. ಬಿನೂರ ಫೆರ್ನಾಂಡೋ 13. ಶಿರಾನ್ ಫೆರ್ನಾಂಡೋ 14. ಮಹೇಶ್ ತೀಕ್ಷಣ 15. ಜೆಫ್ರಿ ವಾಂಡರ್ಸೆ 16. ಪ್ರವೀಣ್ ಜಯವಿಕ್ರಮ 17. ಆಶಿಯನ್ ಡೇನಿಯಲ್ 18. ಚರಿತ್ ಅಸಲಂಕಾ – ಉಪನಾಯಕ

ಟಿ20 ಸರಣಿಗೆ ಭಾರತ ತಂಡ – ರೋಹಿತ್ ಶರ್ಮಾ, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್ ಮತ್ತು ಅವೇಶ್ ಖಾನ್.

ಶ್ರೀಲಂಕಾ ವಿರುದ್ದದ ಸರಣಿಯ ವೇಳಾಪಟ್ಟಿ ಹೀಗಿದೆ:

1ನೇ ಟಿ20: ಫೆಬ್ರವರಿ 24 (ಲಕ್ನೋ)

ಎರಡನೇ ಟಿ20: ಫೆಬ್ರವರಿ 26 (ಧರ್ಮಶಾಲಾ)

ಮೂರನೇ ಟಿ20: ಫೆಬ್ರವರಿ 27 (ಧರ್ಮಶಾಲಾ)

1ನೇ ಟೆಸ್ಟ್: 4 ರಿಂದ 8 ಮಾರ್ಚ್ (ಮೊಹಾಲಿ)

2ನೇ ಟೆಸ್ಟ್ (ಹಗಲು-ರಾತ್ರಿ): ಮಾರ್ಚ್ 12-16 (ಬೆಂಗಳೂರು)

ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?

ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ

ಇದನ್ನೂ ಓದಿ: Sunil narine: ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸುನಿಲ್ ನರೈನ್

(IPL 2022: Bhanuka Rajapaksa dropped from SL squad)