IPL 2022: ಐಪಿಎಲ್ ಸೀಸನ್ 15 ನಲ್ಲಿ ಆರ್‌ಸಿಬಿ (RCB) ತಂಡವು ಉತ್ತಮ ಆರಂಭವನ್ನೇ ಪಡೆದಿದೆ. ಮೊದಲ ಪಂದ್ಯದಲ್ಲಿ ಸೋತರೂ ಸತತ ಮೂರು ಗೆಲುವು ದಾಖಲಿಸಿದೆ. ಇದೀಗ ಆಡಿರುವ 5 ಪಂದ್ಯಗಳಲ್ಲಿ 3 ಗೆಲುವು ಹಾಗೂ 2 ಸೋಲಿನೊಂದಿಗೆ ಪಾಯಿಂಟ್ ಟೇಬಲ್ನಲ್ಲಿ (ಏಪ್ರಿಲ್ 14) 6ನೇ ಸ್ಥಾನದಲ್ಲಿದೆ. ಇತ್ತ 3 ಗೆಲುವು ದಾಖಲಿಸಿದರೂ ಆರ್‌ಸಿಬಿ ತಂಡದ ಚಿಂತೆ ದೂರವಾಗಿಲ್ಲ ಎಂಬುದೇ ವಿಶೇಷ. ಏಕೆಂದರೆ ಆರ್‌ಸಿಬಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗುತ್ತಿದೆ. 22ರ ಹರೆಯದ ಆರಂಭಿಕ ಅನೂಜ್ ರಾವತ್ ಐದು ಪಂದ್ಯಗಳಲ್ಲಿ ಒಟ್ಟು 125 ರನ್ ಗಳಿಸಿದ್ದಾರೆ, ಹಾಗೆಯೇ ನಾಯಕ ಡು ಪ್ಲೆಸಿಸ್ ಒಟ್ಟು 146 ರನ್ ಗಳಿಸಿದ್ದಾರೆ. ಈ ಇಬ್ಬರು ಆಟಗಾರರಿಂದ ನಿರೀಕ್ಷಿತ ಆಟ ಮೂಡಿ ಬರದಿರುವುದೇ ಈಗ ಆರ್‌ಸಿಬಿ ಚಿಂತೆಗೆ ಕಾರಣವಾಗಿದೆ. ಅಲ್ಲದೆ ಆರ್‌ಸಿಬಿ ತಂಡದ ಆರಂಭಿಕರ ಬದಲಾವಣೆ ಬಗ್ಗೆ ಚರ್ಚೆಗಳು ಕೂಡ ಕೇಳಿ ಬರುತ್ತಿವೆ. ಈ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್ ಹಾಗ್, ಆರ್‌ಸಿಬಿ ಟಾಪ್-3 ಬ್ಯಾಟ್ಸ್ಮನ್ಗಳನ್ನು ಬದಲಿಸಬಾರದೆಂದು ಸಲಹೆ ನೀಡಿದ್ದಾರೆ.
ಯುವ ಅನೂಜ್ ರಾವತ್ ಓಪನರ್ ಆಗಿ ಮುಂದುವರೆಯಬೇಕು. ಹಾಗೆಯೇ ಮತ್ತು ವಿರಾಟ್ ಕೊಹ್ಲಿ ಮೂರನೇ ಸ್ಥಾನಕ್ಕೆ ಸೂಕ್ತ. ಈಗ ದಿಢೀರಣೆ ಬ್ಯಾಟಿಂಗ್ ಲೈನಪ್ನಲ್ಲಿ ಬದಲಾವಣೆ ತರುವುದು ಉತ್ತಮ ನಡೆಯಲ್ಲ ಎಂದು ಬ್ರಾಡ್ ಹಾಗ್ ಅಭಿಪ್ರಾಯಪಟ್ಟಿದ್ದಾರೆ. ನನ್ನ ಪ್ರಕಾರ ಫಾಫ್ ಡುಪ್ಲೆಸಿಸ್ ಹಾಗೂ ಅನೂಜ್ ರಾವತ್ ಆರಂಭಿಕರಾಗಿ ಮುಂದುವರೆಯಬೇಕು. ಅಲ್ಲದೆ ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲೇ ಆಡಲಿ. 3 ಪದ್ಯಗಳನ್ನು ಗೆದ್ದಿರುವ ಆರ್‌ಸಿಬಿ ಆರಂಭಿಕ ಜೋಡಿಯನ್ನು ಬದಲಾಯಿಸುವ ಅಗತ್ಯವಿಲ್ಲ. ಒಂದು ವೇಳೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿದರೆ ಅದು ತಂಡದ ಮೇಲೆ ಪರಿಣಾಮ ಬೀರುತ್ತೆ ಎಂದು ಎಚ್ಚರಿಸಿದ್ದಾರೆ.
ಏಕೆಂದರೆ ಅನೂಜ್ ರಾವತ್ಗೆ ಮೂರನೇ ಕ್ರಮಾಂಕದಲ್ಲಿ ಆಡುವುದು ಕಠಿಣವಾಗಲಿದೆ. ಒಂದು ವೇಳೆ ವಿರಾಟ್ ಕೊಹ್ಲಿ-ಡುಪ್ಲೆಸಿಸ್ ಆರಂಭಿಕರಾಗಿ ಆಡಿ ವಿಕೆಟ್ ಹೋದರೆ, ಅನೂಜ್ ಮೂರನೇ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ. ಇದರಿಂದ ಯುವ ಆಟಗಾರನ ಮೇಲೆ ಹೆಚ್ಚಿನ ಒತ್ತಡ ಇರಲಿದೆ. ಇದರಿಂದ ಆತ ಉತ್ತಮವಾಗಿ ಬ್ಯಾಟ್ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರಸ್ತುತ ಇರುವ ಬ್ಯಾಟಿಂಗ್ ಕ್ರಮಾಂಕವನ್ನು ಮುಂದುವರೆಸುವುದು ಸೂಕ್ತ ಎಂದು ಬ್ರಾಡ್ ಹಾಗ್ ಹೇಳಿದ್ದಾರೆ.
ಆರ್‌ಸಿಬಿ ಉತ್ತಮ ಸಮತೋಲಿತ ಲೈನ್-ಅಪ್ ಹೊಂದಿದೆ. ಆರ್ಡರ್‌ನ ಮೇಲ್ಭಾಗದಲ್ಲಿ ಡು ಪ್ಲೆಸಿಸ್ ಜೊತೆ ರಾವತ್ ಉತ್ತಮವಾಗಿ ಆಡಿದ್ದಾರೆ. ಡು ಪ್ಲೆಸಿಸ್ ಮತ್ತು ಕೊಹ್ಲಿಯನ್ನು ಜೊತೆ ಬ್ಯಾಟ್ ಮಾಡುವುದರಿಂದ ರಾವತ್ ಹೆಚ್ಚು ಒತ್ತಡವಿಲ್ಲದೆ ಸ್ವತಂತ್ರವಾಗಿ ಆಡಲು ಸಾಧ್ಯವಾಗುತ್ತದೆ. ಹಾಗಾಗಿ ಈಗಿರುವ ಬ್ಯಾಟಿಂಗ್ ಕ್ರಮಾಂಕ ಉತ್ತಮ. ಇನ್ನು ಮ್ಯಾಕ್ಸ್‌ವೆಲ್ 4 ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ದಿನೇಶ್ ಕಾರ್ತಿಕ್ ಅನ್ನು ಫ್ಲೋಟರ್ ಆಗಿ ಬಳಸಲಾಗುತ್ತಿದೆ. ಅಲ್ಲದೆ ಆರ್‌ಸಿಬಿ ಆಲ್ರೌಂಡರ್ಗಳನ್ನೂ ಸಹ ಹೊಂದಿದೆ. ಹೀಗಾಗಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಆರ್‌ಸಿಬಿ ಬದಲಾವಣೆ ಮಾಡುವುದು ಉತ್ತಮ ನಿರ್ಧಾರವಲ್ಲ ಎಂದು ಬ್ರಾಡ್ ಹಾಗ್ ಅಭಿಪ್ರಾಯಪಟ್ಟಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB):
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.
ಇದನ್ನೂ ಓದಿ: Hardik Pandya: ಪಾಂಡ್ಯ ಪವರ್: ಸಿಕ್ಸ್ ಸಿಡಿಸಿ ದಾಖಲೆ ಬರೆದ ಹಾರ್ದಿಕ್
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?