IPL 2022: ಹಳೆಯ ವೇಗಿಯನ್ನು ಕರೆತರಲು ರೋಹಿತ್ ಶರ್ಮಾ ಪ್ಲ್ಯಾನ್
Ipl 2022: ಮುಂಬೈ ಸತತ 6 ಪಂದ್ಯಗಳಲ್ಲಿ ಸೋತಿದೆ. ಇದಕ್ಕೆ ಮುಖ್ಯ ಕಾರಣ ತಂಡದ ಕಳಪೆ ಬೌಲಿಂಗ್. ಜಸ್ಪ್ರೀತ್ ಬುಮ್ರಾ ಮತ್ತು ಮುರುಗನ್ ಅಶ್ವಿನ್ ಹೊರತುಪಡಿಸಿ, ಯಾವುದೇ ಮುಂಬೈ ಬೌಲರ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ.
ಐಪಿಎಲ್ (IPL 2022) 15 ನೇ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಪ್ರದರ್ಶನವು ನಿರಾಶಾದಾಯಕವಾಗಿದೆ. ಐದು ಬಾರಿಯ ಚಾಂಪಿಯನ್ ತಂಡ ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ ಮತ್ತು ಸತತ 6 ಪಂದ್ಯಗಳಲ್ಲಿ ಸೋತಿದೆ. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಮುಂಬೈ ತಂಡವು ಪ್ರಸ್ತುತ ಐಪಿಎಲ್‌ನಲ್ಲಿ ಕಾಮೆಂಟರಿ ಮಾಡುತ್ತಿರುವ ಆಟಗಾರ ಧವಳ್ ಕುಲಕರ್ಣಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಬಯಸಿದೆ. ಕಳೆದ ಎರಡು ಸೀಸನ್ಗಳಲ್ಲಿ ಧವಲ್ ಕುಲಕರ್ಣಿ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದರು. ಆದರೆ ಈ ಬಾರಿ ತಂಡವು ಅವರನ್ನು ಖರೀದಿಸಿರಲಿಲ್ಲ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ , ಮುಂಬೈ ನಾಯಕ ರೋಹಿತ್ ಶರ್ಮಾ ಧವಳ್ ಕುಲಕರ್ಣಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಬಯಸಿದ್ದಾರೆ. ಇದು ಮುಂಬೈ ಬೌಲಿಂಗ್ ಅನ್ನು ಬಲಪಡಿಸುತ್ತದೆ. ಧವಲ್ ಮುಂಬೈ ಮೂಲದವರಾಗಿದ್ದು, ಪುಣೆಯಲ್ಲಿ ಹೇಗೆ ಬೌಲಿಂಗ್ ಮಾಡಬೇಕೆಂದು ಅವರಿಗೆ ತಿಳಿದಿದೆ ಎಂದು ವಾದವನ್ನು ರೋಹಿತ್ ಶರ್ಮಾ ಮುಂದಿಟ್ಟಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡವು ಧವನ್ ಕುಲಕರ್ಣಿಗೆ ಅವಕಾಶ ನೀಡಬಹುದು. ಏಕೆಂದರೆ ತಂಡಕ್ಕೆ ಆಯ್ಕೆಯಾಗಿದ್ದ ಜೋಫ್ರಾ ಆರ್ಚರ್ ಸ್ಥಾನದಲ್ಲಿ ಒಬ್ಬ ಆಟಗಾರನನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಮುಂಬೈ ದುರ್ಬಲ ಬೌಲಿಂಗ್ ಲೈನಪ್: ಮುಂಬೈ ಸತತ 6 ಪಂದ್ಯಗಳಲ್ಲಿ ಸೋತಿದೆ. ಇದಕ್ಕೆ ಮುಖ್ಯ ಕಾರಣ ತಂಡದ ಕಳಪೆ ಬೌಲಿಂಗ್. ಜಸ್ಪ್ರೀತ್ ಬುಮ್ರಾ ಮತ್ತು ಮುರುಗನ್ ಅಶ್ವಿನ್ ಹೊರತುಪಡಿಸಿ, ಯಾವುದೇ ಮುಂಬೈ ಬೌಲರ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಬಸಿಲ್ ಥಂಪಿ ಅವರ ಎಕಾನಮಿ ರೇಟ್ ಪ್ರತಿ ಓವರ್‌ಗೆ 9.50 ರನ್ ಇದೆ. ಟಿಮಲ್ ಮಿಲ್ಸ್ 11.17 ರ ಎಕಾನಮಿ ರೇಟ್ ರನ್‌ಗಳನ್ನು ನೀಡುತ್ತಿದ್ದಾರೆ. ಡೇನಿಯಲ್ ಸ್ಯಾಮ್ಸ್ ಪ್ರತಿ ಓವರ್‌ಗೆ ನೀಡಿರುವುದು 13 ರನ್ಗಳು. ದುರ್ಬಲ ಬೌಲಿಂಗ್ ಲೈನಪ್ ಹೊಂದಿರುವ ಮುಂಬೈ ಇದೀಗ ಧವಳ್ ಕುಲಕರ್ಣಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.
ಧವಳ್ ಕುಲಕರ್ಣಿ 92 ಐಪಿಎಲ್ ಪಂದ್ಯಗಳಲ್ಲಿ 86 ವಿಕೆಟ್ ಪಡೆದಿದ್ದಾರೆ. ರಾಜಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್, ಗುಜರಾತ್ ಲಯನ್ಸ್ ತಂಡಗಳ ಪರ ಆಡಿರುವ ಧವಳ್ ಕಳೆದ ಎರಡು ವರ್ಷಗಳಲ್ಲಿ ಕೇವಲ ಎರಡು ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿತ್ತು. ಈ ಸೀಸನ್‌ನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸದ ಕಾರಣ ಐಪಿಎಲ್ ಕಾಮೆಂಟರಿ ಪ್ಯಾನಲ್ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ