IPL 2022: ಐಪಿಎಲ್ ಆರಂಭಕ್ಕೆ ಆಟಗಾರರನ್ನು ಕಳಿಸಲ್ಲ ಎಂದ ಕ್ರಿಕೆಟ್ ಆಸ್ಟ್ರೇಲಿಯಾ..!

IPL 2022: ಮಾರ್ಚ್ 4 ರಿಂದ 25 ವರೆಗೆ ನಡೆಯುವ ಪಾಕಿಸ್ತಾನ ವಿರುದ್ದದ ಟೆಸ್ಟ್ ಸರಣಿಗಾಗಿ ವಾರ್ನರ್, ಹ್ಯಾಝಲ್‌ವುಡ್ ಮತ್ತು ಕಮ್ಮಿನ್ಸ್ ತಂಡದ ಭಾಗವಾಗಿದ್ದಾರೆ.

IPL 2022: ಐಪಿಎಲ್ ಆರಂಭಕ್ಕೆ ಆಟಗಾರರನ್ನು ಕಳಿಸಲ್ಲ ಎಂದ ಕ್ರಿಕೆಟ್ ಆಸ್ಟ್ರೇಲಿಯಾ..!
Australia Players
Follow us
TV9 Web
| Updated By: ಝಾಹಿರ್ ಯೂಸುಫ್

Updated on: Feb 22, 2022 | 6:03 PM

ಐಪಿಎಲ್ ಮೆಗಾ ಹರಾಜು (IPL 2022 Mega Auction) ಮುಗಿದು ಎಲ್ಲಾ ತಂಡಗಳು ಟೂರ್ನಿಗೆ ಬೇಕಾದ ಸಿದ್ದತೆಗಳು ಆರಂಭಿಸಿದೆ. ಅದರಂತೆ ಮುಂದಿನ ತಿಂಗಳಾಂತ್ಯದಲ್ಲಿ ಐಪಿಎಲ್ ಸೀಸನ್ 15 ಗೆ ಚಾಲನೆ ದೊರೆಯಲಿದೆ. ಆದರೆ ಅತ್ತ ಆಸ್ಟ್ರೇಲಿಯಾ ಕ್ರಿಕೆಟಿಗರು (Australia Players) ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಗೈರಾಗುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಮಾರ್ಚ್​ ತಿಂಗಳಲ್ಲಿ ಆಸ್ಟ್ರೇಲಿಯಾ ಪಾಕಿಸ್ತಾನ್ ವಿರುದ್ದ ಸರಣಿ ಆಡಲು ತೆರಳಲಿದೆ. ಈಗಾಗಲೇ ಇದಕ್ಕೆ ತಂಡವನ್ನು ಕೂಡ ಘೋಷಿಸಿದೆ. ಆದರೆ ಈ ತಂಡದಿಂದ ವಿಶ್ರಾಂತಿಯ ಕಾರಣ ನೀಡಿ ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್​ವೆಲ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಝಲ್​ವುಡ್​ನಂತಹ ಸ್ಟಾರ್ ಆಟಗಾರರು ಹೊರಗುಳಿದಿದ್ದಾರೆ. ಮೇಲ್ನೋಟಕ್ಕೆ ಈ ಆಟಗಾರರು ಐಪಿಎಲ್​ನಲ್ಲಿ ಭಾಗವಹಿಸಲು ಸರಣಿಯಿಂದ ಹೊರಗುಳಿದಿದ್ದಾರೆ. ಇದಕ್ಕೆ ಪ್ರತಿತಂತ್ರವಾಗಿ ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ದೇಶದ ಆಟಗಾರರು ಪಾಕಿಸ್ತಾನ್ ವಿರುದ್ದದ ಸರಣಿ ಮುಗಿಯುವವರೆಗೆ ಐಪಿಎಲ್​ನಲ್ಲಿ ಭಾಗವಹಿಸುವಂತಿಲ್ಲ ಎಂದು ತಿಳಿಸಿದೆ.

ಅಂದರೆ ಆಸ್ಟ್ರೇಲಿಯಾ-ಪಾಕಿಸ್ತಾನ್ ನಡುವಣ ಸರಣಿ ಏಪ್ರಿಲ್ 6 ಕ್ಕೆ ಮುಗಿಯಲಿದೆ. ಅದುವರೆಗೆ ತಂಡದಿಂದ ಹೊರಗುಳಿದಿರುವ ಆಟಗಾರರು ಕೂಡ ಯಾವುದೇ ಲೀಗ್​ನಲ್ಲಿ ಕಾಣಿಸಿಕೊಳ್ಳುವಂತಿಲ್ಲ ಎಂದು ತಿಳಿಸಿದೆ. ಇತ್ತ ಸ್ಟಾರ್ ಆಟಗಾರರಿಗಾಗಿ ಕೋಟಿಗಟ್ಟಲೆ ಹಣ ಸುರಿದು ತಂಡ ಕಟ್ಟಿರುವ ಐಪಿಎಲ್ ಫ್ರಾಂಚೈಸಿಗಳು ಕ್ರಿಕೆಟ್ ಆಸ್ಟ್ರೇಲಿಯಾ ನಡೆಯಿಂದ ಕೋಪಗೊಂಡಿದ್ದಾರೆ.

ಏಕೆಂದರೆ ಏಪ್ರಿಲ್ 6ರ ಬಳಿಕ ಆಸ್ಟ್ರೇಲಿಯಾದ ಆಟಗಾರರು ಐಪಿಎಲ್​ನಲ್ಲಿ ಭಾಗವಹಿಸಲು ಭಾರತಕ್ಕೆ ಬಂದರೂ ಕನಿಷ್ಠ ಎಂದರೂ ಐದು ದಿನಗಳ ಕಾಳ ಕ್ವಾರಂಟೈನ್​ನಲ್ಲಿರಬೇಕಾಗುತ್ತದೆ. ಅದರಂತೆ ಏಪ್ರಿಲ್ 11 ಅಥವಾ 12 ರಂದು ಆಸ್ಟ್ರೇಲಿಯಾದ ಆಟಗಾರರು ತಮ್ಮ ತಂಡಗಳನ್ನು ಸೇರಿಕೊಳ್ಳುತ್ತಾರೆ. ಅಷ್ಟರಲ್ಲಾಗಲೇ ಈ ಆಟಗಾರರು 4-5 ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಪ್ರಮುಖ ಆಟಗಾರರ ಅಲಭ್ಯತೆಯಿಂದ ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಇದೀಗ ಆಸ್ಟ್ರೇಲಿಯಾ ಆಟಗಾರರನ್ನು ಖರೀದಿಸಿರುವ ಫ್ರಾಂಚೈಸಿಗಳಿಗೆ ಹೊಸ ಚಿಂತೆ ಶುರುವಾಗಿದೆ.

ಮಾರ್ಚ್ 4 ರಿಂದ 25 ವರೆಗೆ ನಡೆಯುವ ಪಾಕಿಸ್ತಾನ ವಿರುದ್ದದ ಟೆಸ್ಟ್ ಸರಣಿಗಾಗಿ ವಾರ್ನರ್, ಹ್ಯಾಝಲ್‌ವುಡ್ ಮತ್ತು ಕಮ್ಮಿನ್ಸ್ ತಂಡದ ಭಾಗವಾಗಿದ್ದಾರೆ. ಈ ಸರಣಿಯ ನಂತರ, ಈ ಆಟಗಾರರು ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ಇದಾಗ್ಯೂ ಈ ಆಟಗಾರರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಏಪ್ರಿಲ್ 6 ರವರೆಗೆ ನಿರ್ಬಂಧ ವಿಧಿಸಲು ಮುಂದಾಗಿರುವುದು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.

ಪಾಕಿಸ್ತಾನ ವಿರುದ್ಧದ ಸೀಮಿತ ಓವರ್​ಗಳ ಸರಣಿಗೆ ಆಸ್ಟ್ರೇಲಿಯಾ ತಂಡ ಹೀಗಿದೆ: ಆರೋನ್ ಫಿಂಚ್ (ನಾಯಕ), ಸೀನ್ ಅಬಾಟ್, ಆಸ್ಟನ್ ಅಗರ್, ಜೇಸನ್ ಬೆಹ್ರೆಂಡಾರ್ಫ್, ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಟ್ರಾವಿಸ್ ಹೆಡ್, ಜೋಸ್ ಇಂಗ್ಲಿಸ್, ಮಾರ್ನಸ್ ಲ್ಯಾಬುಶೇನ್, ಮಿಚೆಲ್ ಮಾರ್ಷ್‌, ಬೆನ್ ಮೆಕ್‌ಡಿಮಾರ್ಟ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಆ್ಯಡಂ ಝಂಪಾ.

IPL 2022 ನಲ್ಲಿ ಭಾಗವಹಿಸಲಿರುವ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು: ಪ್ಯಾಟ್ ಕಮ್ಮಿನ್ಸ್ – ಕೋಲ್ಕತ್ತಾ ನೈಟ್ ರೈಡರ್ಸ್ (7.25 ಕೋಟಿ ರೂ.) ಮಿಚೆಲ್ ಮಾರ್ಷ್- ಡೆಲ್ಲಿ ಕ್ಯಾಪಿಟಲ್ಸ್ (6.50 ಕೋಟಿ ರೂ.) ಡೇವಿಡ್ ವಾರ್ನರ್ – ಡೆಲ್ಲಿ ಕ್ಯಾಪಿಟಲ್ಸ್ (6.25 ಕೋಟಿ ರೂ.) ಮುಂಬೈ ಇಂಡಿಯನ್ಸ್‌ – ಡೇನಿಯಲ್ ಸ್ಯಾಮ್ಸ್ (2.6 ಕೋಟಿ ರೂ.) ಮ್ಯಾಥ್ಯೂ ವೇಡ್ – ಗುಜರಾತ್ ಲಯನ್ಸ್ (2.4 ಕೋಟಿ ರೂ.) ಸೀನ್ ಅಬಾಟ್ – ಸನ್ ರೈಸರ್ಸ್ ಹೈದರಾಬಾದ್ (2.4 ಕೋಟಿ ರೂ.) ನಾಥನ್ ಕೌಲ್ಟರ್ ನೈಲ್ – ರಾಜಸ್ಥಾನ್ ರಾಯಲ್ಸ್ (2 ಕೋಟಿ ರೂ.) ರಿಲೆ ಮೆರೆಡಿತ್ – ಮುಂಬೈ ಇಂಡಿಯನ್ಸ್ (1 ಕೋಟಿ ರೂ.) ನಾಥನ್ ಎಲ್ಲಿಸ್ – ಪಂಜಾಬ್ ಕಿಂಗ್ಸ್ (75 ಲಕ್ಷ ರೂ.) ಜೇಸನ್ ಬೆಹ್ರೆಂಡಾರ್ಫ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು (75 ಲಕ್ಷ ರೂ.) ಗ್ಲೆನ್ ಮ್ಯಾಕ್ಸ್‌ವೆಲ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು (14 ಕೋಟಿ ರೂ.) ಮಾರ್ಕಸ್ ಸ್ಟೊಯಿನಿಸ್ – ಲಕ್ನೋ ಸೂಪರ್ ಜೈಂಟ್ಸ್ (9.20 ಕೋಟಿ ರೂ.)

ಇದನ್ನೂ ಓದಿ: World Record: ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಯುವ ಬ್ಯಾಟ್ಸ್​ಮನ್

(IPL 2022: Cricket Australia not allowing Players in league till April 6th)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್