IPL 2022: ವಾರ್ನರ್ ದಾಖಲೆ ಮುರಿದು ಹ್ಯಾಟ್ರಿಕ್ ಬರೆಯಲಿರುವ ಕೆಎಲ್ ರಾಹುಲ್..!

| Updated By: ಝಾಹಿರ್ ಯೂಸುಫ್

Updated on: Mar 21, 2022 | 2:30 PM

IPL 2022: ಎರಡು ಸೀಸನ್​ ಐಪಿಎಲ್​ನಲ್ಲಿ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅಂದರೆ ಪಂಜಾಬ್ ಕಿಂಗ್ಸ್ ನಾಯಕರಾಗಿದ್ದ ರಾಹುಲ್ 2020 ರ ಮತ್ತು 2021 ರ ಸೀಸನ್​ನಲ್ಲಿ ರನ್ ​ಮಳೆ ಹರಿಸಿದ್ದರು.

IPL 2022: ವಾರ್ನರ್ ದಾಖಲೆ ಮುರಿದು ಹ್ಯಾಟ್ರಿಕ್ ಬರೆಯಲಿರುವ ಕೆಎಲ್ ರಾಹುಲ್..!
KL Rahul
Follow us on

ಐಪಿಎಲ್ 2022 ರ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್​ 26 ರಿಂದ ಶುರುವಾಗಲಿರುವ 15ನೇ ಸೀಸನ್​ ಐಪಿಎಲ್​ಗಾಗಿ ಅಭಿಮಾನಿಗಳು ಕೂಡ ಕಾತುರತೆಯಿಂದ ಕಾಯುತ್ತಿದ್ದಾರೆ. ಈ ಬಾರಿ ಹೊಸ ಎರಡು ತಂಡಗಳ ಸೇರ್ಪಡೆಯೊಂದಿಗೆ, ಲೀಗ್‌ನ ವ್ಯಾಪ್ತಿ ಕೂಡ ವಿಸ್ತರಿಸಿದೆ. ಆಟಗಾರರ ಜತೆಗೆ ಹಲವು ತಂಡಗಳ ನಾಯಕರೂ ಬದಲಾಗಿದ್ದಾರೆ. ಮುಂಬೈ, ಚೆನ್ನೈ ಮತ್ತು ಡೆಲ್ಲಿ ಹೊರತುಪಡಿಸಿ, ಪ್ರತಿ ತಂಡಕ್ಕೂ ಹೊಸ ನಾಯಕರಿದ್ದಾರೆ. ಅದರಂತೆ ಈ ಬಾರಿ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ವಿಶೇಷ ಎಂದರೆ ತಂಡ ಬದಲಾದರೂ ಕೆಎಲ್ ರಾಹುಲ್ ನಾಯಕನಾಗಿ ಮುಂದುವರೆಯುತ್ತಿದ್ದಾರೆ. ಹೀಗಾಗಿ ನಾಯಕನಾಗಿ ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆಯುವ ಅವಕಾಶವೊಂದು ಕೆಎಲ್ ರಾಹುಲ್ ಮುಂದಿದೆ.

ಕಳೆದ ಎರಡು ಸೀಸನ್​ ಐಪಿಎಲ್​ನಲ್ಲಿ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅಂದರೆ ಪಂಜಾಬ್ ಕಿಂಗ್ಸ್ ನಾಯಕರಾಗಿದ್ದ ರಾಹುಲ್ 2020 ರ ಮತ್ತು 2021 ರ ಸೀಸನ್​ನಲ್ಲಿ ರನ್ ​ಮಳೆ ಹರಿಸಿದ್ದರು. ಅದರಲ್ಲೂ 2020 ರ ಐಪಿಎಲ್​ನಲ್ಲಿ ಆರೆಂಜ್ ಕ್ಯಾಪ್ ವಿನ್ನರ್ ಆಗಿದ್ದರು. ಹೀಗೆ ಕಳೆದೆರೆಡು ಸೀಸನ್ ಐಪಿಎಲ್​ನಲ್ಲಿ ರಾಹುಲ್ ಸತತ 600+ ರನ್​ಗಳಿಸಿದ್ದಾರೆ. ವಿಶೇಷ ಎಂದರೆ ಈ ಸಾಧನೆ ಮಾಡಿದ 2ನೇ ನಾಯಕ ಕೆಎಲ್ ರಾಹುಲ್.

ಇದಕ್ಕೂ ಮುನ್ನ ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದ ಡೇವಿಡ್ ವಾರ್ನರ್ ಸತತ ಎರಡು ಸೀಸನ್​ನಲ್ಲಿ 600 ಪ್ಲಸ್ ರನ್ ಕಲೆಹಾಕಿದ್ದರು. ವಾರ್ನರ್ ಐಪಿಎಲ್ 2016 ಮತ್ತು ಐಪಿಎಲ್ 2017ರಲ್ಲಿ ಎಸ್​ಆರ್​ಹೆಚ್​ ತಂಡದ ನಾಯಕರಾಗಿ ಬ್ಯಾಕ್ ಟು ಬ್ಯಾಕ್ 600 ಪ್ಲಸ್ ಗಳಿಸಿದ್ದರು. ಇದೀಗ 2020 ರ ಮತ್ತು 2021 ಐಪಿಎಲ್​ ಮೂಲಕ ಕೆಎಲ್ ರಾಹುಲ್ ಕೂಡ ಈ ವಿಶೇಷ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇದೀಗ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಕಣಕ್ಕಿಳಿಯಲಿರುವ ಕೆಎಲ್ ರಾಹುಲ್, ಈ ಬಾರಿ 600+ ರನ್ ಬಾರಿಸಿದರೆ ಹೊಸ ದಾಖಲೆ ನಿರ್ಮಾಣವಾಗಲಿದೆ. ಇದರೊಂದಿಗೆ ಹ್ಯಾಟ್ರಿಕ್ 600+ ರನ್​ ಬಾರಿಸಿದ ಮೊದಲ ಐಪಿಎಲ್​ ನಾಯಕ ಎಂಬ ಹೆಗ್ಗಳಿಕೆಗೂ ಕೆಎಲ್​ಆರ್​ ಪಾತ್ರರಾಗಲಿದ್ದಾರೆ.

ಆದರೆ ಮತ್ತೊಂದೆಡೆ ಐಪಿಎಲ್​ನಲ್ಲಿ ನಾಯಕರಾಗಿ ಮಿಂಚಿದ್ದ ಡೇವಿಡ್ ವಾರ್ನರ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕೇವಲ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ನಾಯಕನಾಗಿ ಮತ್ತೊಂದು 600+ ರನ್ ಬಾರಿಸುವ ಅವಕಾಶ ಕೈತಪ್ಪಿದೆ. ಹೀಗಾಗಿ ಕೆಎಲ್ ರಾಹುಲ್ ನಾಯಕನಾಗಿ ಐಪಿಎಲ್​ನಲ್ಲಿ ಹೊಸ ಇತಿಹಾಸ ಬರೆಯಲಿದ್ದಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅಂದು ಪರ್ಪಲ್ ಕ್ಯಾಪ್ ವಿನ್ನರ್, ಇಂದು ನೆಟ್ ಬೌಲರ್..!

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಇವರೇ..!

ಇದನ್ನೂ ಓದಿ: IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್​ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?