IPL 2022: ಐಪಿಎಲ್​ ತಂಡಗಳ ಚಿಂತೆ ಹೆಚ್ಚಿಸಿದ ಸ್ಟಾರ್ ಆಟಗಾರರ ಗಾಯದ ಸಮಸ್ಯೆ..!

| Updated By: ಝಾಹಿರ್ ಯೂಸುಫ್

Updated on: Mar 17, 2022 | 5:32 PM

IPL 2022: ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡಗಳ ಕೆಲ ಆಟಗಾರರು ಗಾಯಗೊಂಡಿದ್ದಾರೆ.

IPL 2022: ಐಪಿಎಲ್​ ತಂಡಗಳ ಚಿಂತೆ ಹೆಚ್ಚಿಸಿದ ಸ್ಟಾರ್ ಆಟಗಾರರ ಗಾಯದ ಸಮಸ್ಯೆ..!
IPL 2022
Follow us on

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ (IPL 2022) 15 ಶುರುವಾಗಲು ಇನ್ನು ದಿನಗಳು ಮಾತ್ರ ಉಳಿದಿವೆ. ಈಗಾಗಲೇ ಬಹುತೇಕ ತಂಡಗಳು ಅಭ್ಯಾಸಗಳನ್ನು ಆರಂಭಿಸಿದೆ. ಇದಾಗ್ಯೂ ರಾಷ್ಟ್ರೀಯ ತಂಡದಲ್ಲಿರುವ ಕೆಲ ಸ್ಟಾರ್ ಆಟಗಾರರು ಐಪಿಎಲ್​ ತಂಡಗಳನ್ನು ಕೂಡಿಕೊಂಡಿಲ್ಲ. ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ ತಂಡಗಳು ಸರಣಿ ಆಡುತ್ತಿದ್ದು, ಹೀಗಾಗಿ ಈ ತಂಡಗಳಲ್ಲಿರುವ ಕೆಲ ಆಟಗಾರರು ಐಪಿಎಲ್​ನ ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಫ್ರಾಂಚೈಸಿಗಳಿಗೆ ಈ ಚಿಂತೆ ಒಂದೆಡೆಯಾದರೆ ಮತ್ತೊಂದೆಡೆ ಆಟಗಾರರ ಗಾಯದ ಚಿಂತೆ ಕೂಡ ಶುರುವಾಗಿದೆ.

ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡಗಳ ಕೆಲ ಆಟಗಾರರು ಗಾಯಗೊಂಡಿದ್ದಾರೆ. ಈ ಆಟಗಾರರು ತಮ್ಮ ಫಿಟ್​ನೆಸ್​ ಕುರಿತಾದ ರಿಪೋರ್ಟ್​ ಅನ್ನು ಇನ್ನೂ ಕೂಡ ಸಲ್ಲಿಸಿಲ್ಲ. ಹೀಗಾಗಿ ಈ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಅಥವಾ ಹೊರಗುಳಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಹಾಗಿದ್ರೆ ಯಾವ ತಂಡದ ಯಾವ ಆಟಗಾರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ನೋಡೋಣ…

1- ಅನ್ರಿಕ್ ನೋಕಿಯಾ (ಡೆಲ್ಲಿ ಕ್ಯಾಪಿಟಲ್ಸ್): ಸೌತ್ ಆಫ್ರಿಕಾ ವೇಗಿ ಅನ್ರಿಕ್ ನೋಕಿಯಾರನ್ನು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿತ್ತು. ಆದರೆ ಮೆಗಾ ಹರಾಜು ಮುಗಿದು, ಐಪಿಎಲ್​ ಆರಂಭಕ್ಕೆ ದಿನ ಗಣನೆ ಶುರುವಾದರೂ ನೋಕಿಯಾ ಅವರ ಫಿಟ್​ನೆಸ್ ಅಪ್​ಡೇಟ್​ಗಳು ಬಂದಿಲ್ಲ. ಸೊಂಟದ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ನೋಕಿಯಾ ಇನ್ನೂ ಕೂಡ ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿಯೇ ಸೌತ್ ಆಫ್ರಿಕಾ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಐಪಿಎಲ್ ಕೂಡ ಆಡುವುದು ಅನುಮಾನ ಎನ್ನಲಾಗಿದೆ.

2- ದೀಪಕ್ ಚಹರ್ (ಚೆನ್ನೈ ಸೂಪರ್ ಕಿಂಗ್ಸ್​): ಚೆನ್ನೈ ಸೂಪರ್ ಕಿಂಗ್ಸ್‌ ಈ ಬಾರಿ 14 ಕೋಟಿ ನೀಡಿ ದೀಪಕ್ ಚಹರ್ ಅವರನ್ನು ಖರೀದಿಸಿತ್ತು. ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ವೇಳೆ ಚಹರ್ ಗಾಯಗೊಂಡಿದ್ದರು. ಇದೀಗ ಎನ್​ಸಿಎ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಹರ್ ಐಪಿಎಲ್​ ಆಡುವುದು ಇನ್ನೂ ಕೂಡ ಕನ್ಫರ್ಮ್​ ಆಗಿಲ್ಲ. ಹೀಗಾಗಿ ಐಪಿಎಲ್​ನ ಮೊದಲಾರ್ಧದದಲ್ಲಿ ಚಹರ್ ಸಿಎಸ್​ಕೆ ಪರ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗಿದೆ.

3- ಕೇನ್ ವಿಲಿಯಮ್ಸನ್ (ಸನ್ ರೈಸರ್ಸ್ ಹೈದರಾಬಾದ್): ಎಸ್​ಆರ್​ಹೆಚ್​ ತಂಡ ನಾಯಕನಾಗಿರುವ ಕೇನ್ ವಿಲಿಯಮ್ಸನ್ ಕೊನೆಯ ಬಾರಿ ಮೈದಾನದಲ್ಲಿ ಕಾಣಿಸಿಕೊಂಡಿದ್ದು ಕಳೆದ ವರ್ಷ ನವೆಂಬರ್‌ನಲ್ಲಿ. ಅಂದರೆ ಭುಜದ ನೋವಿನ ಕಾರಣ ವಿಲಿಯಮ್ಸನ್ ದೀರ್ಘಾವಧಿವರೆಗೆ ವಿಶ್ರಾಂತಿ ಪಡೆದಿದ್ದಾರೆ. ಇದಾಗ್ಯೂ ವಿಲಿಯಮ್ಸನ್ ಐಪಿಎಲ್ ಆಡುವುದು ಖಚಿತವಾಗಿದೆ. ಆದರೆ ಗಾಯದ ಸಮಸ್ಯೆಯ ಕಾರಣ ಆರಂಭಿಕ ಪಂದ್ಯಗಳಲ್ಲಿ ಆಡಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

4- ಸೂರ್ಯಕುಮಾರ್ ಯಾದವ್ (ಮುಂಬೈ ಇಂಡಿಯನ್ಸ್): ಮುಂಬೈ ಇಂಡಿಯನ್ಸ್‌ ತಂಡದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡ ಇತ್ತೀಚೆಗೆ ಗಾಯಗೊಂಡಿದ್ದರು. ಹೀಗಾಗಿ ಶ್ರೀಲಂಕಾ ವಿರುದ್ದದ ಸರಣಿಯಿಂದ ಹೊರಗುಳಿದಿದ್ದರು. ಇದೀಗ ಹೆಬ್ಬೆರಳಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಸೂರ್ಯ ಕುಮಾರ್ ಯಾದವ್ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ. ಅಲ್ಲದೆ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡರೆ ಮಾತ್ರ 2ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: PSL vs IPL Prize Money: ಪಾಕಿಸ್ತಾನ್ ಸೂಪರ್ ಲೀಗ್ ಗೆದ್ರೆ ಸಿಗುವ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್

(IPL 2022: DC, CSK, SRH, MI awaiting ‘reports on injury status’ of key players)