IPL 2022: ಪಂಜಾಬ್ ಪರ ಯುವಿ ಜೆರ್ಸಿ ನಂಬರ್ನಲ್ಲಿ ಕಣಕ್ಕಿಳಿಯಲಿದ್ದಾರೆ ಯುವ ಆಟಗಾರ
IPL 2022: ಪಂಜಾಬ್ ಕಿಂಗ್ಸ್ ತಂಡ ಹೀಗಿದೆ: ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಜಾನಿ ಬೈರ್‌ಸ್ಟೋವ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಪ್ರಭಾಸಿಮ್ರಾನ್ ಸಿಂಗ್, ಒಡಿಯನ್ ಸ್ಮಿತ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್
ಐಪಿಎಲ್ (IPL 2022) ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಈಗಾಗಲೇ ಎಲ್ಲಾ ತಂಡಗಳ ಟೂರ್ನಿಗೆ ಬೇಕಾದ ಸಿದ್ದತೆಗಳನ್ನು ಆರಂಭಿಸಿದೆ. ಅದರಂತೆ ಇದೀಗ ಪಂಜಾಬ್ ಕಿಂಗ್ಸ್ (PBKS) ತಂಡವು ತನ್ನ ಆಟಗಾರರ ಜೆರ್ಸಿ ನಂಬರ್ ಅನ್ನು ಫೈನಲ್ ಮಾಡಿದೆ. ತಂಡದ ನಾಯಕ ಮಯಾಂಕ್ ಅಗರ್ವಾಲ್ 16 ನಂಬರ್ನ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಪಂಜಾಬ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಜೆರ್ಸಿ ನಂಬರ್ ಅನ್ನು ಈ ಬಾರಿ ಯುವ ಆಟಗಾರ ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಯುವರಾಜ್ ಸಿಂಗ್ ಅವರ ಅಪ್ಪಟ ಅಭಿಮಾನಿಯಾಗಿರುವ ರಾಜ್ ಬಾವಾ ಈ ಸಲ ಯುವಿ ಕಾಣಿಸಿಕೊಳ್ಳುತ್ತಿದ್ದ 12 ನಂಬರ್ ಜೆರ್ಸಿಯಲ್ಲಿ ಮೈದಾನಕ್ಕಿಳಿಯಲಿದ್ದಾರೆ.
ನಾನು ಯುವರಾಜ್ ಸಿಂಗ್ ಅವರ ಬಿಗ್ ಫ್ಯಾನ್. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಹಿಂದೆ ಪಂಜಾಬ್ ತಂಡದಲ್ಲಿದ್ದಾಗ ಯುವರಾಜ್ ಸಿಂಗ್ ಧರಿಸುತ್ತಿದ್ದ ಜೆರ್ಸಿ ನಂಬರ್ ಅನ್ನು ಆಯ್ಕೆ ಮಾಡಿಕೊಂಡಿರುವುದು ರಾಜ್ ಬಾವಾ ತಿಳಿಸಿದ್ದಾರೆ. ಅದರಂತೆ ಈ ಸಲ ಪಂಜಾಬ್ ಕಿಂಗ್ಸ್ 12 ನಂಬರ್ ಜೆರ್ಸಿಯಲ್ಲಿ ಬಾವಾ ಹೆಸರು ಕಾಣಿಸಿಕೊಳ್ಳಲಿದೆ.
ಈ ಬಾರಿಯ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು ರಾಜ್ ಬಾವಾ ಅವರನ್ನು ಬರೋಬ್ಬರಿ 2 ಕೋಟಿ ನೀಡಿ ಖರೀದಿಸಿದೆ. ಈ ಹಿಂದೆ ಅಂಡರ್ 19 ವಿಶ್ವಕಪ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಬಾವಾ ಅವರ ತಂದೆ ಸುಖ್ವಿಂದರ್ ಯುವರಾಜ್ ಸಿಂಗ್ ಅವರಿಗೂ ಬಾಲ್ಯದಲ್ಲಿ ಕೋಚ್ ಆಗಿದ್ದರು.
ಈ ಬಗ್ಗೆ ಮಾತನಾಡಿರುವ ರಾಜ್ ಬಾವಾ, “ ನನ್ನ ತಂದೆ ಯುವರಾಜ್ ಸಿಂಗ್ ಅವರಿಗೆ ತರಬೇತಿ ನೀಡಿದ್ದರು. ನಾನು ಚಿಕ್ಕವನಿದ್ದಾಗ ಅವರನ್ನು ನೋಡುತ್ತಿದ್ದೆ. ಬ್ಯಾಟಿಂಗ್ ಮಾಡುವಾಗ ಯುವರಾಜ್ ಸಿಂಗ್ ಅವರನ್ನು ಅನುಕರಿಸುತ್ತಿದ್ದೆ. ನಾನು ಅವರ ಬ್ಯಾಟಿಂಗ್ ವಿಡಿಯೋಗಳನ್ನು ಹೆಚ್ಚಾಗಿ ನೋಡುತ್ತೇನೆ. ಅವರು ನನ್ನ ರೋಲ್ ಮಾಡೆಲ್,” ಎಂದು ತಿಳಿಸಿದ್ದಾರೆ.
ಇದೀಗ ಪಂಜಾಬ್ ಕಿಂಗ್ಸ್ ತಂಡದಲ್ಲಿ ಅದೃಷ್ಟವಶಾತ್ ರಾಜ್ ಬಾವಾಗೆ ಈ ಹಿಂದೆ ಯುವರಾಜ್ ಸಿಂಗ್ ಧರಿಸುತ್ತಿದ್ದ ಜೆರ್ಸಿ ನಂಬರ್ ಸಿಕ್ಕಿದೆ. ಏಕೆಂದರೆ ಕಳೆದ ಸೀಸನ್ನಲ್ಲಿ ಪಂಜಾಬ್ ಪರ 12 ನಂಬರ್ ಜೆರ್ಸಿಯಲ್ಲಿ ಆಸ್ಟ್ರೇಲಿಯಾ ವೇಗಿ ರಿಲೆ ಮೆರೆಡಿತ್ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ಅವರು ಮುಂಬೈ ಇಂಡಿಯನ್ಸ್ ಪಾಲಾದ ಕಾರಣ ಆ ನಂಬರ್ ಖಾಲಿಯಿತ್ತು. ಅದರಂತೆ ತನ್ನ ರೋಲ್ ಮಾಡೆಲ್ ನಂಬರ್ನಲ್ಲಿ ಕಣಕ್ಕಿಳಿಯುವ ಖುಷಿಯಲ್ಲಿದ್ದಾರೆ ರಾಜ್ ಬಾವಾ.
ಪಂಜಾಬ್ ಕಿಂಗ್ಸ್ ತಂಡ ಹೀಗಿದೆ: ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಜಾನಿ ಬೈರ್‌ಸ್ಟೋವ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಪ್ರಭಾಸಿಮ್ರಾನ್ ಸಿಂಗ್, ಒಡಿಯನ್ ಸ್ಮಿತ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ರಾಹುಲ್ ಚಹರ್, ಅರ್ಷ್‌ದೀಪ್ ಸಿಂಗ್, ಇಶಾನ್ ಪೊರೆಲ್, ಸಂದೀಪ್ ಶರ್ಮಾ, ಅಥರ್ವ ಪತ್ರಾ, ವೈಭವ್, ರಾಜ್ ಅಂಗದ್ ಬಾವಾ, ಬೆನ್ನಿ ಹೋವೆಲ್, ರಿಷಿ ಧವನ್, ಭಾನುಕಾ ರಾಜಪಕ್ಸೆ, ಬಲ್ತೇಜ್ ಸಿಂಗ್, ರಿತಿಕ್ ಚಟರ್ಜಿ, ನಾಥನ್ ಎಲ್ಲಿಸ್, ಪ್ರೇರಕ್ ಮಂಕಡ್.
ಇದನ್ನೂ ಓದಿ: PSL vs IPL Prize Money: ಪಾಕಿಸ್ತಾನ್ ಸೂಪರ್ ಲೀಗ್ ಗೆದ್ರೆ ಸಿಗುವ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?
ಇದನ್ನೂ ಓದಿ: IPL 2022: ಐಪಿಎಲ್ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್