DC vs RR, IPL 2022 Head to Head: ಡೆಲ್ಲಿ-ರಾಜಸ್ಥಾನ ಜಿದ್ದಾಜಿದ್ದಿನ ಪಂದ್ಯ! ಅಂಕಿ ಅಂಶ ಹೇಳುವುದೇನು?
DC vs RR, IPL 2022 Head to Head: ಉಭಯ ತಂಡಗಳ ನಡುವೆ ಇದುವರೆಗೆ 24 ಪಂದ್ಯಗಳು ನಡೆದಿವೆ. ಈ 24 ಪಂದ್ಯಗಳಲ್ಲಿ ಉಭಯ ತಂಡಗಳು ಸಮಾನ ಜಯ ಸಾಧಿಸಿವೆ. ಕಳೆದ ಋತುವಿನಲ್ಲಿಯೂ ಇಬ್ಬರೂ ಪರಸ್ಪರ ಎರಡು ಪಂದ್ಯಗಳನ್ನು ಆಡಿದ್ದು ತಲಾ 1 ಪಂದ್ಯವನ್ನು ಗೆದ್ದಿದ್ದರು.
ಕೊರೊನಾ ವಿರುದ್ಧ ಹೋರಾಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು ಶುಕ್ರವಾರ ಐಪಿಎಲ್ 2022 (IPL 2022)ರಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ಅನ್ನು ಎದುರಿಸಲಿದೆ. ಎರಡೂ ತಂಡಗಳು ತಮ್ಮ ಕೊನೆಯ ಪಂದ್ಯಗಳನ್ನು ಗೆದ್ದಿವೆ. ರಾಜಸ್ಥಾನ್ ರಾಯಲ್ಸ್ ತನ್ನ ಕೊನೆಯ ಪಂದ್ಯದಲ್ಲಿ ಕೆಕೆಆರ್ ಅನ್ನು ಏಳು ರನ್‌ಗಳಿಂದ ಸೋಲಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಬಗ್ಗೆ ಮಾತನಾಡುವುದಾದರೆ, ತಮ್ಮ ಕೊನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಒಂಬತ್ತು ವಿಕೆಟ್‌ಗಳಿಂದ ಏಕಪಕ್ಷೀಯ ರೀತಿಯಲ್ಲಿ ಸೋಲಿಸಿತು. ಶುಕ್ರವಾರ ಎರಡೂ ತಂಡಗಳು ವಾಂಖೆಡೆ ಕ್ರೀಡಾಂಗಣದಲ್ಲಿ ಗೆಲುವಿಗಾಗಿ ಹೋರಾಡಲಿವೆ. ಪಾಯಿಂಟ್ಸ್ ಟೇಬಲ್ ಬಗ್ಗೆ ಮಾತನಾಡುವುದಾದರೆ, ಡೆಲ್ಲಿ ಕ್ಯಾಪಿಟಲ್ಸ್ ಆರು ಪಂದ್ಯಗಳಲ್ಲಿ ಮೂರು ಗೆಲುವು ಮತ್ತು ಮೂರು ಸೋಲುಗಳೊಂದಿಗೆ ಆರು ಅಂಕಗಳನ್ನು ಪಡೆದಿದೆ. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ತಂಡ ಅಗ್ರ ನಾಲ್ಕರಲ್ಲಿ ಮುಂದುವರಿದಿದೆ. ಏಳು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಎಂಟು ಅಂಕ ಗಳಿಸಿದೆ. ಶುಕ್ರವಾರ ರಾಜಸ್ಥಾನ ತಂಡ ಗೆದ್ದರೆ ಅಗ್ರಸ್ಥಾನಕ್ಕೇರುವ ಅವಕಾಶವಿದೆ.
ರಾಜಸ್ಥಾನ್ ರಾಯಲ್ಸ್ ಮತ್ತು ದೆಹಲಿಯ ಹೆಡ್ ಟು ಹೆಡ್ ರೆಕಾರ್ಡ್ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಆರಂಭದಿಂದಲೂ ಲೀಗ್‌ನ ಭಾಗವಾಗಿವೆ. ಉಭಯ ತಂಡಗಳ ನಡುವೆ ಇದುವರೆಗೆ 24 ಪಂದ್ಯಗಳು ನಡೆದಿವೆ. ಈ 24 ಪಂದ್ಯಗಳಲ್ಲಿ ಉಭಯ ತಂಡಗಳು ಸಮಾನ ಜಯ ಸಾಧಿಸಿವೆ. ಕಳೆದ ಋತುವಿನಲ್ಲಿಯೂ ಇಬ್ಬರೂ ಪರಸ್ಪರ ಎರಡು ಪಂದ್ಯಗಳನ್ನು ಆಡಿದ್ದು ತಲಾ 1 ಪಂದ್ಯವನ್ನು ಗೆದ್ದಿದ್ದರು. ಕಳೆದ ಬಾರಿ ಎರಡೂ ತಂಡಗಳು ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದ್ದವು. ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಈ ಪಂದ್ಯವನ್ನು ಗೆದ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಆರು ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತ್ತು. ತಂಡದ ಪರ ಶ್ರೇಯಸ್ ಅಯ್ಯರ್ 43 ಮತ್ತು ಶಿಮ್ರಾನ್ ಹೆಟ್ಮೆಯರ್ 28 ರನ್ ಗಳಿಸಿದರು. ಅದೇ ಹೊತ್ತಿಗೆ ಇದಕ್ಕೆ ಉತ್ತರವಾಗಿ ರಾಜಸ್ಥಾನ ತಂಡ 121 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ನಾಯಕ ಸಂಜು ಸ್ಯಾಮ್ಸನ್ ಅವರ 70 ರನ್‌ಗಳ ಇನ್ನಿಂಗ್ಸ್ ವ್ಯರ್ಥವಾಯಿತು.
ಪಂದ್ಯದಲ್ಲಿ ರನ್‌ಗಳ ಮಳೆ ಸುರಿಯಲಿದೆ ಎರಡು ತಂಡಗಳ ನಡುವಿನ ಪಂದ್ಯಗಳಲ್ಲಿ 611 ರನ್ ಗಳಿಸಿರುವ ಅಜಿಂಕ್ಯ ರಹಾನೆ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲಿಗರಗಿದ್ದಾರೆ. ಎರಡನೇ ಸ್ಥಾನದಲ್ಲಿ ದೆಹಲಿ ನಾಯಕ ರಿಷಭ್ ಪಂತ್ 300 ರನ್ ಗಳಿಸಿದ್ದಾರೆ. ಅವರೂ ಉತ್ತಮ ಲಯದಲ್ಲಿದ್ದು, ತಂಡ ಅವರಿಂದ ಮತ್ತೊಮ್ಮೆ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸುತ್ತಿದೆ. ಮತ್ತೊಂದೆಡೆ, ಉಭಯ ತಂಡಗಳ ನಡುವೆ ನಡೆದ 24 ಪಂದ್ಯಗಳಲ್ಲಿ ಅಮಿತ್ ಮಿಶ್ರಾ ಗರಿಷ್ಠ 20 ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಇವರ ನಂತರ ಕಗಿಸೊ ರಬಾಡ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ ಉಭಯ ತಂಡಗಳಿಂದ ರನ್‌ಗಳ ಸುರಿಮಳೆಯಾಗುತ್ತಿದ್ದು, ಅಭಿಮಾನಿಗಳ ಮನಸೂರೆಗೊಳ್ಳಲಿದೆ.
ಇದನ್ನೂ ಓದಿ: IPL 2022 DC vs RR Live Streaming: ಡೆಲ್ಲಿ-ರಾಜಸ್ಥಾನ ಮುಖಾಮುಖಿ; ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ