IPL 2022: CSK-KKR ನಡುವೆ ಮೊದಲ ಪಂದ್ಯ! ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ; ಪೂರ್ಣ ಮಾಹಿತಿ ಇಲ್ಲಿದೆ

IPL 2022: ಐಪಿಎಲ್ 2022 ರ ವೇಳಾಪಟ್ಟಿಯನ್ನು ಬಿಸಿಸಿಐ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ ಮೊದಲ ಪಂದ್ಯವು ಮಾರ್ಚ್ 26 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ.

IPL 2022: CSK-KKR ನಡುವೆ ಮೊದಲ ಪಂದ್ಯ! ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ; ಪೂರ್ಣ ಮಾಹಿತಿ ಇಲ್ಲಿದೆ
ಬ್ರಿಜೆಷ್ ಪಟೇಲ್, ಗಂಗೂಲಿ
Follow us
TV9 Web
| Updated By: ಪೃಥ್ವಿಶಂಕರ

Updated on:Mar 06, 2022 | 5:23 PM

ಐಪಿಎಲ್ 2022 ರ ವೇಳಾಪಟ್ಟಿ (IPL 2022 Schedule)ಯನ್ನು ಬಿಸಿಸಿಐ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ ಮೊದಲ ಪಂದ್ಯವು ಮಾರ್ಚ್ 26 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (Chennai Super Kings and Kolkata Knight Riders on 26 March at Wankhede) ನಡುವೆ ನಡೆಯಲಿದೆ. ಈ ಎರಡೂ ತಂಡಗಳು IPL 2021 ರ ಫೈನಲಿಸ್ಟ್‌ಗಳಾಗಿದ್ದವು. IPL 2022 ರ ವೇಳಾಪಟ್ಟಿಯನ್ನು IPL ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ. ಇದರ ಪ್ರಕಾರ, ಎರಡು ಹೊಸ ಐಪಿಎಲ್ ತಂಡಗಳಾದ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಮ್ಮ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಈ ಪಂದ್ಯ ಮಾರ್ಚ್ 28 ರಂದು ವಾಂಖೆಡೆಯಲ್ಲಿ ನಡೆಯಲಿದೆ. ಐಪಿಎಲ್ 2022 ರಲ್ಲಿ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿವೆ. ಮುಂಬೈ ಮತ್ತು ಪುಣೆಯಲ್ಲಿ ಟೂರ್ನಿ ನಡೆಯಲಿದೆ. ಟೂರ್ನಿಯು 65 ದಿನಗಳ ಕಾಲ ನಡೆಯಲಿದ್ದು, ನಾಲ್ಕು ಪ್ಲೇಆಫ್ ಪಂದ್ಯಗಳನ್ನು ಒಳಗೊಂಡಿರುತ್ತದೆ.

IPL 2022 ರಲ್ಲಿ 12 ಡಬಲ್ ಹೆಡರ್ (ಒಂದು ದಿನದಲ್ಲಿ ಎರಡು ಪಂದ್ಯಗಳು) ಪಂದ್ಯಗಳು ಇರಲಿವೆ. ಮೊದಲ ಡಬಲ್ ಹೆಡರ್ ಮಾರ್ಚ್ 27 ರಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ. ಈ ಪಂದ್ಯ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಅದೇ ದಿನ ಸಂಜೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಎರಡನೇ ಪಂದ್ಯ ನಡೆಯಲಿದೆ. ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಐಪಿಎಲ್ 2022 ರ ಕೊನೆಯ ಲೀಗ್ ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಮೇ 22 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.

ಐಪಿಎಲ್ ವೇಳಾಪಟ್ಟಿಯ ಪ್ರಕಾರ ತಲಾ 20 ಪಂದ್ಯಗಳು ವಾಂಖೆಡೆ ಮತ್ತು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಅದೇ ಸಮಯದಲ್ಲಿ, ಪುಣೆಯ ಬ್ರಬೋರ್ನ್ ಮತ್ತು ಎಂಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ತಲಾ 15 ಪಂದ್ಯಗಳು ನಡೆಯಲಿವೆ. ಮಧ್ಯಾಹ್ನದ ಪಂದ್ಯಗಳು 3.30ಕ್ಕೆ ಆರಂಭವಾದರೆ, ಸಂಜೆ 7.30ರಿಂದ ಪಂದ್ಯಗಳು ಆರಂಭವಾಗಲಿವೆ.

ಕೊರೊನಾ ಭೀತಿಯಿಂದಾಗಿ ಬಿಸಿಸಿಐ ಈ ಬಾರಿ ಸೀಮಿತ ಸ್ಥಳಗಳಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಯೋಜಿಸಿದೆ. ಈ ಕಾರಣಕ್ಕಾಗಿ ಮುಂಬೈ ಮತ್ತು ಪುಣೆಯಲ್ಲಿ ಲೀಗ್ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಪ್ಲೇಆಫ್ ಪಂದ್ಯಗಳು ಅಹಮದಾಬಾದ್​ನಲ್ಲಿ ನಡೆಯಬಹುದು ಎಂಬ ಮಾಹಿತಿ ಇದೆ.

ಇದನ್ನೂ ಓದಿ:IND vs SL: 222 ರನ್​ಗಳಿಂದ ಸೋತ ಶ್ರೀಲಂಕಾ! ಕೊಹ್ಲಿಗೆ ಗೆಲುವಿನ ಗಿಫ್ಟ್ ಕೊಟ್ಟ ಟೀಂ ಇಂಡಿಯಾ

Published On - 5:13 pm, Sun, 6 March 22