Ranji Trophy: ರಣಜಿಯಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ ಯಶ್ ಧುಲ್! ಪಂದ್ಯಾವಲಿಯಿಂದ ಹೊರಬಿದ್ದ ದೆಹಲಿ

Yash Dhull: ಈ ಋತುವಿನ 6 ಇನ್ನಿಂಗ್ಸ್‌ಗಳಲ್ಲಿ, ಧುಲ್ 3 ಶತಕಗಳನ್ನು ಒಳಗೊಂಡಂತೆ 119 ರ ಸರಾಸರಿಯಲ್ಲಿ 479 ರನ್ ಗಳಿಸಿದರು. ಜೊತೆಗೆ ದೆಹಲಿಯ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಎಂದು ಸಾಬೀತುಪಡಿಸಿದರು.

Ranji Trophy: ರಣಜಿಯಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ ಯಶ್ ಧುಲ್! ಪಂದ್ಯಾವಲಿಯಿಂದ ಹೊರಬಿದ್ದ ದೆಹಲಿ
ಯಶ್ ಧುಲ್
Follow us
TV9 Web
| Updated By: ಪೃಥ್ವಿಶಂಕರ

Updated on: Mar 06, 2022 | 6:40 PM

ಯಶ್ ಧುಲ್ (Yash Dhull)… ಕಳೆದ ಒಂದೂವರೆ ತಿಂಗಳಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಬಹಳ ಚರ್ಚೆಯಾದ ಹೆಸರು. ಭಾರತದಲ್ಲಿ ಮಾತ್ರವಲ್ಲ, ವಿಶ್ವ ಕ್ರಿಕೆಟ್‌ನಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ. ಕೇವಲ ಒಂದು ತಿಂಗಳ ಹಿಂದೆ, ಫೆಬ್ರವರಿ 5 ರಂದು, ಯಶ್ ಧುಲ್ ಅವರು ತಮ್ಮ ನಾಯಕತ್ವದಲ್ಲಿ ಭಾರತವನ್ನು ಅಂಡರ್-19 ಕ್ರಿಕೆಟ್‌ನ ವಿಶ್ವ ಚಾಂಪಿಯನ್ (Under-19 cricket) ಆಗಿ ಮಾಡಿದರು. ದೆಹಲಿ ಕ್ರಿಕೆಟ್ ತಂಡದ ಈ ಬ್ಯಾಟ್ಸ್‌ಮನ್ ತಮ್ಮ ನಾಯಕತ್ವದಿಂದ ಮಾತ್ರವಲ್ಲದೆ ತಮ್ಮ ಬ್ಯಾಟ್‌ನಿಂದಲೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಉಜ್ವಲ ಭವಿಷ್ಯದ ನೋಟವನ್ನು ತೋರಿಸಿದ್ದರು. ಆ ಐತಿಹಾಸಿಕ ದಿನದ ನಂತರ, ಮುಂದಿನ ಒಂದು ತಿಂಗಳೊಳಗೆ, ಯಶ್ ಧುಲ್ ಅವರು ಲಾಂಗ್ ರೇಸ್ ಕುದುರೆ ಎಂದು ಸಾಬೀತುಪಡಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದನ್ನು ಸಾಭೀತುಪಡಿಸಿದ್ದಾರೆ. 19 ವರ್ಷದ ಭಾರತೀಯ ಬ್ಯಾಟ್ಸ್‌ಮನ್ ತನ್ನ ಮೂರನೇ ರಣಜಿ ಟ್ರೋಫಿ (Ranji Trophy) ಪಂದ್ಯದಲ್ಲಿ ಸ್ಮರಣೀಯ ದ್ವಿಶತಕ ಗಳಿಸುವ ಮೂಲಕ ತನ್ನ ಅದ್ಭುತ ಆಟ ಪ್ರದರ್ಶಿಸಿದ್ದಾರೆ.

ರಣಜಿ ಟ್ರೋಫಿ 2022 ರ ಋತುವಿನಲ್ಲಿ, ದೆಹಲಿ ತಂಡವು ಗ್ರೂಪ್ ಹಂತದಲ್ಲೇ ಹೊರ ನಡೆದಿದೆ. ತಮ್ಮ ಕೊನೆಯ ಗುಂಪಿನ ಪಂದ್ಯದಲ್ಲಿ, ಡೆಲ್ಲಿ ತಂಡವು ಛತ್ತೀಸ್‌ಗಢವನ್ನು ಸೋಲಿಸಲು ವಿಫಲವಾಯಿತು. ಈ ಮೂಲಕ ಪಾಯಿಂಟ್‌ ಪಟ್ಟಿಯಲ್ಲಿ ಕೊನೆಯ ಸ್ಥಾನ ಗಳಿಸಿತು. ಆದಾಗ್ಯೂ, ತಂಡದ ಪರ ಉತ್ತಮ ಆಟ ಪ್ರದರ್ಶಿಸಿದ ಯಶ್, ಭವಿಷ್ಯದ ಟೀಂ ಇಂಡಿಯಾದ ಸ್ಟಾರ್ ಆಟಗಾರನಾಗುವ ಸುಳಿವು ನೀಡಿದರು. ಗುವಾಹಟಿಯಲ್ಲಿ ನಡೆದ ತಮ್ಮ ಎಲೈಟ್ ಗ್ರೂಪ್-ಎಚ್ ಪಂದ್ಯದ ಕೊನೆಯ ದಿನವಾದ ಭಾನುವಾರ, ಮಾರ್ಚ್ 6 ರಂದು, ಡೆಲ್ಲಿ ತಂಡವು 2 ವಿಕೆಟ್ ನಷ್ಟಕ್ಕೆ 396 ರನ್ ಗಳಿಸಿ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು ಮತ್ತು ಇದರೊಂದಿಗೆ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

ಫಾಲೋ ಆನ್ ನಂತರ ಅದ್ಭುತ ದ್ವಿಶತಕ ಯಶ್ ಧುಲ್ ಪಂದ್ಯದ ಕೊನೆಯ ಚೆಂಡನ್ನು ಆಡಿ ಒಂದು ರನ್ ಗಳಿಸಿದರು. ಜೊತೆಗೆ ಸ್ಮರಣೀಯ ಇನ್ನಿಂಗ್ಸ್ ಅನ್ನು ಸುಂದರವಾದ ಮುಕ್ತಾಯಕ್ಕೆ ತಂದರು. ಈ ಒಂದು ರನ್‌ನೊಂದಿಗೆ, ಧುಲ್ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದ ಮೊದಲ ದ್ವಿಶತಕವನ್ನು ಗಳಿಸಿದರು. ಇದೇ ಋತುವಿನಲ್ಲಿ ಡೆಲ್ಲಿ ಪರ ಪದಾರ್ಪಣೆ ಮಾಡಿದ್ದ ಧುಲ್ ತಂಡಕ್ಕೆ ಆರಂಭಿಕರಾಗಿದ್ದರು. ಫಾಲೋ-ಆನ್ ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಡೆಲ್ಲಿ ಆರಂಭಿಕ ಆಟಗಾರ ಛತ್ತೀಸ್‌ಗಢ ಬೌಲರ್‌ಗಳನ್ನು ಸುಸ್ತಾಗಿಸಿ ದ್ವಿಶತಕ ಗಳಿಸಿದರು. ಧುಲ್ ಕೇವಲ 261 ಎಸೆತಗಳಲ್ಲಿ 26 ಬೌಂಡರಿಗಳ ನೆರವಿನಿಂದ ಅಜೇಯ 200 ರನ್ ಗಳಿಸಿದರು.

ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಇಡೀ ತಂಡದಂತೆ ವಿಫಲರಾದರು, ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ತಮ್ಮ ಆರಂಭಿಕ ಪಾಲುದಾರ ಧ್ರುವ ಶೌರಿ ಅವರೊಂದಿಗೆ ಬಲವಾದ ಬೆಂಬಲದೊಂದಿಗೆ ಪ್ರಾರಂಭಿಸಿದರು. ಶೌರಿ ಸತತ ಎರಡನೇ ಪಂದ್ಯದಲ್ಲೂ ಶತಕ ಬಾರಿಸಿದರು. 100 ರನ್ ಗಳಿಸಿ ಔಟಾದರು. ಇವರಿಬ್ಬರ ನಡುವೆ 246 ರನ್‌ಗಳ ಜೊತೆಯಾಟವಿತ್ತು.

ಯಶ್ ಧುಲ್ ಅವರ ಉತ್ತಮ ಚೊಚ್ಚಲ ಸೀಸನ್ ಚೊಚ್ಚಲ ಸೀಸನ್ ಯಶ್ ಧುಲ್​ಗೆ ಅದ್ಭುತವಾಗಿತ್ತು. ವಿಶ್ವಕಪ್ ಗೆಲುವಿನ ಅಲೆಯನ್ನು ಪ್ರಶ್ನಿಸಿದ ಧುಲ್ ಮೊದಲ ಪಂದ್ಯದಿಂದಲೇ ಡೆಲ್ಲಿ ಪರ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿ ಶತಕ ಸಿಡಿಸಿದ್ದರು. ಅಷ್ಟೇ ಅಲ್ಲ ಈ ಚೊಚ್ಚಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿದ್ದರು. ಧುಲ್ ಎರಡೂ ಇನ್ನಿಂಗ್ಸ್‌ಗಳಲ್ಲಿ 113 ರನ್ ಗಳಿಸಿದರು. ಎರಡನೇ ಪಂದ್ಯ ಅವರಿಗೆ ಉತ್ತಮವಾಗಿರಲಿಲ್ಲ. ಆದರೆ ಮೂರನೇ ಪಂದ್ಯದಲ್ಲಿ ಅವರು 29 ಮತ್ತು ಔಟಾಗದೆ 200 ರನ್ ಗಳಿಸಿದರು. ಈ ಋತುವಿನ 6 ಇನ್ನಿಂಗ್ಸ್‌ಗಳಲ್ಲಿ, ಧುಲ್ 3 ಶತಕಗಳನ್ನು ಒಳಗೊಂಡಂತೆ 119 ರ ಸರಾಸರಿಯಲ್ಲಿ 479 ರನ್ ಗಳಿಸಿದರು. ಜೊತೆಗೆ ದೆಹಲಿಯ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಎಂದು ಸಾಬೀತುಪಡಿಸಿದರು.

ಇದನ್ನೂ ಓದಿ:Ranji Trophy: ಕೇವಲ 6 ಇನ್ನಿಂಗ್ಸ್​ನಲ್ಲಿ 3ನೇ ಭರ್ಜರಿ ಶತಕ! ರಣಜಿಯಲ್ಲಿ ವಿಶ್ವಕಪ್ ಹೀರೋ ಯಶ್ ಧುಲ್ ಅಬ್ಬರ