IPL 2022: ಹಾರ್ದಿಕ್ ಪಾಂಡ್ಯಗೆ ಅಹಮದಾಬಾದ್ ನಾಯಕತ್ವ! ರಶೀದ್ಗೂ ಮಣೆ ಹಾಕಿತಾ ಫ್ರಾಂಚೈಸಿ?
IPL 2022: ಹೊಸ ಫ್ರಾಂಚೈಸಿ ಅಹಮದಾಬಾದ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಲು ನಿರ್ಧರಿಸಿದೆ. ಈ ಹಿಂದೆ ಈ ತಂಡದ ನಾಯಕತ್ವವನ್ನು ಶ್ರೇಯಸ್ ಅಯ್ಯರ್ ವಹಿಸಿಕೊಳ್ಳಲಿದ್ದಾರೆ ಎಂದು ವರದಿಗಳು ಬಂದಿದ್ದವು.
ಐಪಿಎಲ್ 2022 ರ ಮೆಗಾ ಹರಾಜಿನ ಮೊದಲು ದೊಡ್ಡ ಸುದ್ದಿ ಹೊರಬದ್ದಿದೆ. ಹೊಸ ಫ್ರಾಂಚೈಸಿ ಅಹಮದಾಬಾದ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಲು ನಿರ್ಧರಿಸಿದೆ. ಈ ಹಿಂದೆ ಈ ತಂಡದ ನಾಯಕತ್ವವನ್ನು ಶ್ರೇಯಸ್ ಅಯ್ಯರ್ ವಹಿಸಿಕೊಳ್ಳಲಿದ್ದಾರೆ ಎಂದು ವರದಿಗಳು ಬಂದಿದ್ದವು. ಆದರೆ ಇದೀಗ ಮಾಧ್ಯಮ ವರದಿಗಳ ಪ್ರಕಾರ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕರಾಗಲಿದ್ದಾರೆ. ಹಾರ್ದಿಕ್ ಮಾತ್ರವಲ್ಲ, ರಶೀದ್ ಖಾನ್ ಕೂಡ ಅಹಮದಾಬಾದ್ ಫ್ರಾಂಚೈಸಿ ಸೇರಲಿದ್ದಾರೆ ಎಂದು ವರದಿಯಾಗಿದೆ.
ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿಲ್ಲ. ಜೊತೆಗೆ ಬೆನ್ನುನೋವಿನಿಂದಾಗಿ ಪಾಂಡ್ಯ ಮೊದಲಿನಂತೆ ಬೌಲಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಅವರ ಫಾರ್ಮ್ ಕೂಡ ಕೆಟ್ಟದಾಗಿದೆ. ಹೀಗಾಗಿ ಅವರನ್ನು ಟೀಮ್ ಇಂಡಿಯಾದಿಂದ ಕೈಬಿಡಲಾಯಿತು. ಆದಾಗ್ಯೂ, ಐಪಿಎಲ್ 2022 ರ ಮೊದಲು, ಅಹಮದಾಬಾದ್ ಫ್ರಾಂಚೈಸ್ ಅವರಿಗೆ ದೊಡ್ಡ ಜವಾಬ್ದಾರಿಯನ್ನು ವಹಿಸಲು ಮನಸ್ಸು ಮಾಡಿದೆ. ಹಾರ್ದಿಕ್ ಪಾಂಡ್ಯ ಅವರು 92 ಐಪಿಎಲ್ ಪಂದ್ಯಗಳ ಅನುಭವವನ್ನು ಹೊಂದಿದ್ದಾರೆ. ಈ ಸಮಯದಲ್ಲಿ ಅವರ ಬ್ಯಾಟ್‌ನಿಂದ 1476 ರನ್ ಗಳಿಸಿದ್ದಾರೆ. ಪಾಂಡ್ಯ ಸರಾಸರಿ 27.33 ಆಗಿದ್ದು, ಐಪಿಎಲ್‌ನಲ್ಲಿ ಅತ್ಯುತ್ತಮ ಫಿನಿಶರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಇದಲ್ಲದೇ ಪಾಂಡ್ಯ ಬೌಲಿಂಗ್ನಲ್ಲಿ 42 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಜೊತೆಗೆ ಅತ್ಯುತ್ತಮ ಫೀಲ್ಡರ್ ಕೂಡ ಆಗಿದ್ದಾರೆ.
ಅಹಮದಾಬಾದ್ ಸೇರಲಿದ್ದಾರಾ ರಶೀದ್ ಖಾನ್? ಐಪಿಎಲ್‌ನ ಅತ್ಯುತ್ತಮ ಲೆಗ್ ಸ್ಪಿನ್ನರ್‌ಗಳಲ್ಲಿ ಒಬ್ಬರು ಮತ್ತು ಬಿಗ್ ಮ್ಯಾಚ್ ವಿನ್ನರ್ ರಶೀದ್ ಖಾನ್ ಕೂಡ ಅಹಮದಾಬಾದ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅಹಮದಾಬಾದ್‌ನೊಂದಿಗಿನ ಅವರ ಮಾತುಕತೆಯನ್ನು ಅಂತಿಮಗೊಳಿಸಲಾಗಿದೆ. ಮೆಗಾ ಹರಾಜಿಗೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ರಶೀದ್ ಖಾನ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ನಿರಾಕರಿಸಿತ್ತು. ರಶೀದ್ ಖಾನ್ ಅವರ ಐಪಿಎಲ್ ದಾಖಲೆ ಅದ್ಭುತವಾಗಿದೆ. ಈ ಲೆಗ್ ಸ್ಪಿನ್ನರ್ 76 ಪಂದ್ಯಗಳಲ್ಲಿ 93 ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು ರನ್ ರೇಟ್ ಪ್ರತಿ ಓವರ್‌ಗೆ ಕೇವಲ 6.33 ರನ್ ಆಗಿದೆ.