ಐಪಿಎಲ್ ಸೀಸನ್ 15 ಮೆಗಾ ಹರಾಜು ಭರದಿಂದ ಸಾಗುತ್ತಿದೆ. ಈಗಾಗಲೇ ಮಾರ್ಕ್ಯೂ ಲೀಸ್ಟ್ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು,ಅದರಂತೆ ಮೊದಲ ಸುತ್ತಿನ ಹರಾಜು ಮುಗಿದೆ. ಮೊದಲ ಸುತ್ತಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕ್ವಿಂಟನ್ ಡಿಕಾಕ್ ( 6.75 ಕೋಟಿ) ಅವರನ್ನು ಖರೀದಿಸಿದೆ. ಇದಾದ ಬಳಿಕ 2ನೇ ಸುತ್ತಿನಲ್ಲಿ ಕನ್ನಡಿಗ ಮನೀಷ್ ಪಾಂಡೆ(4.60 ಕೋಟಿ) ಯನ್ನು ಸಹ ಖರೀದಿಸಿತು. ಅಷ್ಟೇ ಅಲ್ಲದೆ 2ನೇ ಮತ್ತು 3ನೇ ಸುತ್ತಿನಲ್ಲೂ ಲಕ್ನೋ ಸೂಪರ್ ಜೈಂಟ್ಸ್ ಸ್ಟಾರ್ ಆಟಗಾರನ್ನು ಟಾರ್ಗೆಟ್ ಮಾಡಿಕೊಂಡಿದೆ. ಅದರಂತೆ ಇದೀಗ ವೆಸ್ಟ್ ಇಂಡೀಸ್ನ ಜೇಸನ್ ಹೋಲ್ಡರ್ ಕೂಡ 8.75 ಕೋಟಿಗೆ ಲಕ್ನೋ ಪಾಲಾಗಿದೆ. ಹಾಗೆಯೇ ಟೀಮ್ ಇಂಡಿಯಾ ಆಟಗಾರ ದೀಪಕ್ ಹೂಡಾ ( 5.75 ಕೋಟಿ) ಕೂಡ ಲಕ್ನೋ ಸೂಪರ್ ಜೈಂಟ್ಸ್ ಪಾಲಾಗಿದ್ದಾರೆ. ವಿಶೇಷ ಎಂದರೆ ದೀಪಕ್ ಹೂಡಾ ಹಾಗೂ ಜೇಸನ್ ಹೋಲ್ಡರ್ ಆಲ್ರೌಂಡರ್ಗಳು. ಇದೀಗ ಕೃನಾಲ್ ಪಾಂಡ್ಯರನ್ನು ಕೂಡ 8.25 ಕೋಟಿ ನೀಡಿ ಲಕ್ನೋ ಖರೀದಿಸಿದೆ.
ಇದರೊಂದಿಗೆ ಲಕ್ನೋ ತಂಡಕ್ಕೆ ನಾಲ್ವರು ಆಲ್ರೌಂಡರ್ಗಳು ಆಯ್ಕೆಯಾಗಿದ್ದಾರೆ. ಈ ಹಿಂದೆ ಲಕ್ನೋ ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ ರನ್ನು ಆಯ್ಕೆ ಮಾಡಿಕೊಂಡಿತು. ಇದೀಗ ಜೇಸನ್ ಹೋಲ್ಡರ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ ಕೂಡ ಲಕ್ನೋ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಕೆಎಲ್ ರಾಹುಲ್ ಇದ್ದಾರೆ.. ಇದೀಗ ಡಿಕಾಕ್, ಮನೀಷ್ ಪಾಂಡೆ, ಜೇಸನ್ ಹೋಲ್ಡರ್ ದೀಪಕ್ ಹೂಡಾ, ಹಾಗೂ ಕೃನಾಲ್ ಪಾಂಡ್ಯ ಲಕ್ನೋ ತಂಡದ ಪಾಲಾಗಿದ್ದಾರೆ. ಹಾಗೆಯೇ ಸ್ಪೆಷಲ್ ಪಿಕ್ ಆಯ್ಕೆಯ ಮೂಲಕ ರವಿ ಬಿಷ್ನೋಯ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಇನ್ನು ತಂಡದ ಕೋಚ್ ಆಗಿ ಜಿಂಬಾಬ್ವೆಯ ಮಾಜಿ ಆಟಗಾರ ಆ್ಯಂಡಿ ಫ್ಲವರ್ ಇದ್ದಾರೆ. ಜೊತೆಗೆ ತಂಡದ ಮೆಂಟರ್ ಆಗಿ ಗೌತಮ್ ಗಂಭೀರ್ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: IPL 2022: ಐಪಿಎಲ್ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತ ಖರ್ಚು ಮಾಡಿದ ತಂಡ ಯಾವುದು ಗೊತ್ತಾ?
ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
(IPL 2022 Mega Auction: krunal pandya SOLD to LSG)
Published On - 4:36 pm, Sat, 12 February 22