AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL Auction 2022: ಕುಸಿದು ಬಿದ್ದ ಹ್ಯೂ ಎಡ್ಮಿಡ್ಸ್; ಬದಲಿ ಹರಾಜುದಾರರಾಗಿ ಬಂದ ಆರ್​ಸಿಬಿಯ ಮಾಜಿ ಸಿಇಒ

IPL Auction 2022: ಚಾರು ಶರ್ಮಾ ಭಾರತೀಯ ಕಾಮೆಂಟೇಟರ್ ಆಗಿರುವುದರ ಜೊತೆಗೆ ಕ್ವಿಜ್ ಮಾಸ್ಟರ್ ಕೂಡ ಆಗಿದ್ದಾರೆ. ಅಷ್ಟೇ ಅಲ್ಲ, 2008ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿಇಒ ಆಗಿದ್ದರು.

IPL Auction 2022: ಕುಸಿದು ಬಿದ್ದ ಹ್ಯೂ ಎಡ್ಮಿಡ್ಸ್; ಬದಲಿ ಹರಾಜುದಾರರಾಗಿ ಬಂದ ಆರ್​ಸಿಬಿಯ ಮಾಜಿ ಸಿಇಒ
ಚಾರು ಶರ್ಮಾ
TV9 Web
| Edited By: |

Updated on:Feb 12, 2022 | 4:02 PM

Share

ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ ಹರಾಜು 2022 (IPL Auction 2022) ರಲ್ಲಿ, ಹರಾಜುದಾರ ಹ್ಯೂ ಎಡ್ಮಿಡ್ಸ್ (Hugh Adams) ಬಿಡ್ಡಿಂಗ್ ಸಮಯದಲ್ಲಿ ವೇದಿಕೆ ಮೇಲಿಂದ ಕುಸಿದು ಬಿದ್ದಿದ್ದರಿಂದ ಗೊಂದಲ ಉಂಟಾಗಿತ್ತು. ಎಡ್ಮಿಡ್ಸ್ ಶ್ರೀಲಂಕಾದ ಆಲ್‌ರೌಂಡರ್ ಹಸರಂಗ ಅವರನ್ನು ಬಿಡ್ ಮಾಡುವಾಗ ತಲೆತಿರುಗಿ ಕೆಳಕ್ಕೆ ಬಿದ್ದರು. ಹೀಗಾಗಿ ಹರಾಜನ್ನು ರದ್ದುಗೊಳಿಸಲಾಯಿತು. ಎಡ್ಮಿಡ್ಸ್ ಈಗ ಆರೋಗ್ಯವಾಗಿದ್ದರೂ, ವಾಸ್ತವವಾಗಿ ಅವರ ರಕ್ತದೊತ್ತಡ ಕಡಿಮೆಯಾಗಿದೆ. ಇದರಿಂದಾಗಿ ಎಡ್ಮಿಡ್ಸ್ ಅವರ ಹದಗೆಡುತ್ತಿರುವ ಆರೋಗ್ಯದ ದೃಷ್ಟಿಯಿಂದ IPL ಹರಾಜು 2022 ರ ಹರಾಜುದಾರರನ್ನು ಕೂಡ ಬದಲಿಸಲಾಗಿದೆ. ಈಗ ಹ್ಯೂ ಎಡ್ಮಿಡ್ಸ್ ಬದಲಿಗೆ ಚಾರು ಶರ್ಮಾ (Charu Sharma) ಹರಾಜು ನಡೆಸಲಿದ್ದಾರೆ.

ಚಾರು ಶರ್ಮಾ ಭಾರತೀಯ ಕಾಮೆಂಟೇಟರ್ ಆಗಿರುವುದರ ಜೊತೆಗೆ ಕ್ವಿಜ್ ಮಾಸ್ಟರ್ ಕೂಡ ಆಗಿದ್ದಾರೆ. ಅಷ್ಟೇ ಅಲ್ಲ, 2008ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿಇಒ ಆಗಿದ್ದರು. ಮೊದಲ ಸೀಸನ್​ನಲ್ಲಿ ವಿರಾಟ್ ಕೊಹ್ಲಿಯನ್ನೂ ತಂಡಕ್ಕೆ ಸೇರಿಸಿಕೊಂಡಿದ್ದರು. ಆದಾಗ್ಯೂ, IPL 2008 ರಲ್ಲಿ RCB ನ ಪ್ರದರ್ಶನವು ತುಂಬಾ ಕಳಪೆಯಾಗಿತ್ತು, ನಂತರ ಚಾರು ಶರ್ಮಾ ಅವರನ್ನು CEO ಹುದ್ದೆಯಿಂದ ತೆಗೆದುಹಾಕಲಾಯಿತು.

ಚಾರು ಶರ್ಮಾ ಬಗ್ಗೆ ಒಂದಿಷ್ಟು

ಆರ್​ಸಿಬಿಯ ಸಿಇಒ ಹುದ್ದೆಯಿಂದ ಕೆಳಗಿಳಿದ ಬಳಿಕ ಚಾರು ಶರ್ಮಾ ಫ್ರಾಂಚೈಸಿ ವಿರುದ್ಧ ಹೇಳಿಕೆ ನೀಡಿದ್ದರು. ಚಾರು ಶರ್ಮಾ ಪ್ರಕಾರ, ಅವರು ಕಷ್ಟಪಟ್ಟು ಕೆಲಸ ಮಾಡಿದರು ಆದರೆ ತಂಡವು ಮೊದಲ ಕೆಲವು ಪಂದ್ಯಗಳಲ್ಲಿ ಸೋತ ನಂತರ RCB ತಂಡದಲ್ಲಿ ಒತ್ತಡವು ಬಹಳಷ್ಟು ಹೆಚ್ಚಾಯಿತು. ಇದರಿಂದ ತಂಡ ಹೀನಾಯ ಪ್ರದರ್ಶನ ನೀಡಿತ್ತು ಎಂದು ಹೇಳಿಕೊಂಡಿದ್ದರು.

ಚಾರು ಶರ್ಮಾ ಪ್ರೊ ಕಬಡ್ಡಿ ಲೀಗ್‌ನ ಸಂಸ್ಥಾಪಕರೂ ಹೌದು. 2014 ರಲ್ಲಿ ಅವರು 8 ತಂಡಗಳ ಈ ಲೀಗ್ ಅನ್ನು ಪ್ರಾರಂಭಿಸಿದರು. ಆದಾಗ್ಯೂ, ನಂತರ ಸ್ಟಾರ್ ಇಂಡಿಯಾ ಅವರ ಕಂಪನಿಯ ಶೇಕಡಾ 74 ರಷ್ಟು ಷೇರುಗಳನ್ನು ಖರೀದಿಸಿತು.

ಕ್ರಿಕೆಟ್ ಜೊತೆಗೆ ಕಬಡ್ಡಿ,  ಗಾಲ್ಫ್‌ನಲ್ಲಿ ಚಾರು ಶರ್ಮಾ ಕಾಮೆಂಟರಿ ಮಾಡುತ್ತಾರೆ. ಅವರು ಟಿವಿಯಲ್ಲಿ ಅನೇಕ ರಸಪ್ರಶ್ನೆ ಕಾರ್ಯಕ್ರಮಗಳನ್ನು ಸಹ ಆಯೋಜಿಸಿದ್ದಾರೆ. ಚಾರು ಶರ್ಮಾ ಅವರ ತಂದೆ ಎನ್‌ಸಿ ಶರ್ಮಾ ಅವರು ಪ್ರಸಿದ್ಧ ಶಿಕ್ಷಣತಜ್ಞರಾಗಿದ್ದರು. ಅವರು ಅಜ್ಮೀರ್‌ನ ಪ್ರಸಿದ್ಧ ಮೇಯೊ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಕೂಡ ಆಗಿದ್ದರು.

Published On - 3:42 pm, Sat, 12 February 22

ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು