IPL 2022 Auction: ಮೆಗಾ ಹರಾಜಿನಲ್ಲಿ ಈ ಮೂವರು ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿದೆ ರಾಜಸ್ಥಾನ

| Updated By: ಪೃಥ್ವಿಶಂಕರ

Updated on: Feb 11, 2022 | 5:08 PM

IPL 2022 Auction: ಬಿಸಿಸಿಐ ಇತ್ತೀಚೆಗೆ ಹರಾಜಿಗಾಗಿ 590 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಈ ಪೈಕಿ 10 ಆಟಗಾರರನ್ನು 2 ಕೋಟಿ ರೂ.ಗಳ ಮೂಲ ಬೆಲೆಯೊಂದಿಗೆ ಮಾರ್ಕ್ಯೂ ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ.

IPL 2022 Auction: ಮೆಗಾ ಹರಾಜಿನಲ್ಲಿ ಈ ಮೂವರು ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿದೆ ರಾಜಸ್ಥಾನ
ಬೋಲ್ಟ್, ಧವನ್, ಡುಪ್ಲೆಸಿಸ್
Follow us on

ಐಪಿಎಲ್ 15ನೇ ಸೀಸನ್‌ಗೂ ಮುನ್ನ ಮೆಗಾ ಹರಾಜು (IPL 2022 Auction) ನಡೆಯಲಿದೆ. ಐಪಿಎಲ್ ಇತಿಹಾಸದಲ್ಲಿ ಇದು ಐದನೇ ಮೆಗಾ ಹರಾಜು ಆಗಿದೆ. ಈ ಮೆಗಾ ಹರಾಜಿನ ಬಗ್ಗೆ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ IPL 2022 ಮೆಗಾ ಹರಾಜು 590 ಆಟಗಾರರ ಭವಿಷ್ಯವನ್ನು ನಿರ್ಧರಿಸುತ್ತದೆ. ಮೆಗಾ ಹರಾಜು ಕೆಲವು ಅನುಭವಿಗಳು ಮತ್ತು ಪ್ರಮುಖ ಹೆಸರುಗಳನ್ನು ಸಹ ಒಳಗೊಂಡಿದೆ. ಈ ಆಟಗಾರರು ಕಳೆದ ಕೆಲವು ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುತ್ತಿರುವುದರಿಂದ ಎಲ್ಲಾ ತಂಡಗಳು ಕೂಡ ಈ ಆಟಗಾರರತ್ತ ಮುಖಮಾಡಿವೆ. ಬಿಸಿಸಿಐ ಇತ್ತೀಚೆಗೆ ಹರಾಜಿಗಾಗಿ 590 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಈ ಪೈಕಿ 10 ಆಟಗಾರರನ್ನು 2 ಕೋಟಿ ರೂ.ಗಳ ಮೂಲ ಬೆಲೆಯೊಂದಿಗೆ ಮಾರ್ಕ್ಯೂ ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಎಲ್ಲಾ ತಂಡಗಳು ಉತ್ತಮ ಆಟಗಾರರನ್ನು ಖರೀದಿಸುವ ಬರದಲ್ಲಿದ್ದು ರಾಜಸ್ಥಾನ ರಾಯಲ್ಸ್ (Rajasthan Royals) ಕೂಡ ಹಿಂದೆ ಬಿದ್ದಿಲ್ಲ. ಆದಾಗ್ಯೂ, ಹೆಚ್ಚಿನ ತಂಡಗಳು ಮೂವರು ಆಟಗಾರರಾದ ಸಂಜು ಸ್ಯಾಮ್ಸನ್ (Sanju Samson), ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ತೆಗೆದುಕೊಳ್ಳಲು ಎದುರು ನೋಡುತ್ತಿವೆ. ಆದರೆ, ರಾಜಸ್ಥಾನ ರಾಯಲ್ಸ್ ಯೋಜನೆಯೆ ಬೇರೆಯದ್ದಾಗಿದೆ.

ಟ್ರೆಂಟ್ ಬೌಲ್ಟ್ ..
ನ್ಯೂಜಿಲೆಂಡ್‌ನ ಎಡಗೈ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಸಾರ್ವಕಾಲಿಕ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರು. ಹೊಸ ಚೆಂಡಿನೊಂದಿಗೆ ಟ್ರೆಂಟ್ ಬೌಲ್ಟ್ ತುಂಬಾ ಮಾರಕವಾಗುವ ಶಕ್ತಿ ಹೊಂದಿದ್ದಾರೆ. ಬೋಲ್ಟ್ ಕಳೆದ ಎರಡು ಋತುಗಳಲ್ಲಿ ಮುಂಬೈ ಇಂಡಿಯನ್ ತಂಡದ ಭಾಗವಾಗಿದ್ದರು. ಅವರು ಮುಂಬೈ ಇಂಡಿಯನ್ಸ್ ಜೆರ್ಸಿ ಧರಿಸಿದಾಗಿನಿಂದಲೂ ಮಿಂಚುತ್ತಿದ್ದಾರೆ. ಅವರು 2020 ರ ಋತುವಿನಲ್ಲಿ 25 ವಿಕೆಟ್ಗಳನ್ನು ಪಡೆದರು. ಆದರೆ ಮುಂಬೈ ಈ ಬಾರಿ ಅವರನ್ನು ಉಳಿಸಿಕೊಳ್ಳಲಿಲ್ಲ. ಅಂತಹ ಸನ್ನಿವೇಶದಲ್ಲಿ ರಾಜಸ್ಥಾನ್ ರಾಯಲ್ಸ್ ಜೊತೆಗಿನ ಹರಾಜಿನಲ್ಲಿ ವಿದೇಶಿ ವೇಗದ ಬೌಲರ್‌ಗಳ ಸ್ಲಾಟ್‌ನಲ್ಲಿ ಬೋಲ್ಟ್ ಉತ್ತಮ ಆಯ್ಕೆ ಎಂದು ಸಾಬೀತುಪಡಿಸಬಹುದು.

ಶಿಖರ್ ಧವನ್ ..
ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಅತ್ಯಂತ ಬಲಿಷ್ಠ ಮತ್ತು ವಿಶಿಷ್ಟ ಆಟಗಾರ. ಶಿಖರ್ ಧವನ್ ಕೆಲವು ವರ್ಷಗಳಿಂದ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಮೊದಲ ಸೀಸನ್‌ನಿಂದ ಈ ಲೀಗ್‌ನ ಭಾಗವಾಗಿದ್ದಾರೆ. ಅಂದಿನಿಂದ ಅವರು ಚೆನ್ನಾಗಿಯೇ ಆಡಿದ್ದಾರೆ. ಧವನ್ ಇದುವರೆಗೆ 192 ಐಪಿಎಲ್ ಪಂದ್ಯಗಳನ್ನು ಆಡಿದ್ದು, 5784 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಧವನ್ ಹಲವು ಫ್ರಾಂಚೈಸಿಗಳೊಂದಿಗೆ ಆಡಿದ್ದರು.

ಆದಾಗ್ಯೂ, ಅವರ ಅತ್ಯುತ್ತಮ ಪ್ರದರ್ಶನವು ಡೆಲ್ಲಿ ಕ್ಯಾಪಿಟಲ್ಸ್‌ ಪರ ಇದೆ. ಧವನ್ ಅವರನ್ನು ಉಳಿಸಿಕೊಳ್ಳದ ಕಾರಣ ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಧವನ್ ಅವರನ್ನು ಖರೀದಿಸಬಹುದು. ಆದಾಗ್ಯೂ, ಜೋಸ್ ಬಟ್ಲರ್ ಅವರೊಂದಿಗೆ ಇನ್ನಿಂಗ್ಸ್ ತೆರೆಯಲು ಅವರು ಉತ್ತಮ ಆಯ್ಕೆಯಾಗಿರಬಹುದು. ಇಂತಹ ಸನ್ನಿವೇಶದಲ್ಲಿ ರಾಜಸ್ಥಾನ್ ರಾಯಲ್ಸ್ ಈ ಅನುಭವಿ ಬ್ಯಾಟ್ಸ್ ಮನ್ ಖರೀದಿಸುವುದರಲ್ಲಿ ಸಂಶಯವಿಲ್ಲ.

ಫಾಫ್ ಡು ಪ್ಲೆಸಿಸ್..
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಮತ್ತು ಲೆಜೆಂಡರಿ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ಅವರು 2018 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಮರಳಿದ ನಂತರ ನಾಲ್ಕು ಋತುಗಳಲ್ಲಿ ಎರಡು ಬಾರಿ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಫಾಫ್ ಅತ್ಯಂತ ಪ್ರತಿಭಾವಂತ ಬ್ಯಾಟ್ಸ್‌ಮನ್. ಅವರು 2018 ಮತ್ತು 2021 ರ ದೊಡ್ಡ ಪಂದ್ಯಗಳಲ್ಲಿ ತಮ್ಮ ಪ್ರದರ್ಶನಗಳೊಂದಿಗೆ ಉತ್ತಮ ಫಿನಿಶರ್ ಎಂದು ಸಾಬೀತುಪಡಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ಫಾಫ್ ಡು ಪ್ಲೆಸಿಸ್ ಅವರನ್ನು ಉಳಿಸಿಕೊಳ್ಳಲಿಲ್ಲ. ಹೀಗಾಗಿ ಅವರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡು ಪ್ಲೆಸಿಸ್ ಕಳೆದ ಋತುವಿನಲ್ಲಿ ಎರಡನೇ ಅತಿ ಹೆಚ್ಚು ಸ್ಕೋರರ್ ಆಗಿದ್ದರು. ಈ ಬ್ಯಾಟ್ಸ್‌ಮನ್‌ ಅಗ್ರ ಕ್ರಮಾಂಕದ ಜೊತೆಗೆ ಯಾವುದೇ ಕ್ರಮಾಂಕದಲ್ಲಿ ಆಡಬಹುದು. ಅವರ ಅನುಭವವು ಯಾವುದೇ ತಂಡಕ್ಕೆ ಪ್ರಯೋಜನವನ್ನು ನೀಡುತ್ತದೆ. ರಾಜಸ್ಥಾನ್ ರಾಯಲ್ಸ್ ತಂಡ ಫಾಫ್ ಅವರನ್ನು ಕರೆತರುವ ಮೂಲಕ ತಮ್ಮ ತಂಡವನ್ನು ಬಲಪಡಿಸಲು ಬಯಸಿದೆ.

ಇದನ್ನೂ ಓದಿ:IND vs WI, 3rd ODI, LIVE Cricket Score: ಶತಕ ವಂಚಿತ ಶ್ರೇಯಸ್ ; ಭಾರತದ 7ನೇ ವಿಕೆಟ್ ಪತನ