IPL 2022 Mega Auction: ಒಂದು ವಿಕೆಟ್ ಪಡೆಯದ ಬೌಲರ್​ಗೆ 10.75 ಕೋಟಿ ನೀಡಿದ RCB..!

| Updated By: ಝಾಹಿರ್ ಯೂಸುಫ್

Updated on: Feb 12, 2022 | 4:10 PM

IPL 2022 Mega Auction: ಈ ಹಿಂದೆ ಆರ್​ಸಿಬಿ ತಂಡವು ರಿಟೈನ್ ಆಯ್ಕೆಯ ಮೂಲಕ ಗ್ಲೆನ್ ಮ್ಯಾಕ್ಸ್​ವೆಲ್, ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಿದೆ.

IPL 2022 Mega Auction: ಒಂದು ವಿಕೆಟ್ ಪಡೆಯದ ಬೌಲರ್​ಗೆ 10.75 ಕೋಟಿ ನೀಡಿದ RCB..!
RCB
Follow us on

ಐಪಿಎಲ್ ಮೆಗಾ ಹರಾಜಿನಲ್ಲಿ ಆರ್​ಸಿಬಿ ತಂಡವು ಮೂರನೇ ಆಟಗಾರನನ್ನು ಕೂಡ ಖರೀದಿಸಿದೆ. ಅಚ್ಚರಿ ಎಂದರೆ ಕಳೆದ ಸೀಸನ್​ನಲ್ಲಿ ಬದಲಿ ಆಟಗಾರನಾಗಿ ಆರ್​ಸಿಬಿ ತಂಡದಲ್ಲಿ ಸ್ಥಾನ ಪಡೆದಿದ್ದ ಆಟಗಾರನಿಗೆ ಈ ಬಾರಿ 10.75 ಕೋಟಿ ನೀಡಿರುವುದು. ಹೌದು, ಆರ್​ಸಿಬಿ ಮೆಗಾ ಹರಾಜಿನಲ್ಲಿ 10.75 ಕೋಟಿ ರೂ. ನೀಡಿ ಶ್ರೀಲಂಕಾದ ವನಿಂದು ಹಸರಂಗ ಅವರನ್ನು ಆಯ್ಕೆ ಮಾಡಿಕೊಂಡಿದೆ. ಆದರೆ ಇಲ್ಲಿ ಮತ್ತೊಂದು ಅಚ್ಚರಿ ಎಂದರೆ ಕಳೆದ ಸೀಸನ್​ನಲ್ಲಿ ಆರ್​ಸಿಬಿ ಪರ ಆಡಿದ್ದ ಹಸರಂಗ 2 ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಕಬಳಿಸಿರಲಿಲ್ಲ ಎಂಬುದು. ಅಲ್ಲದೆ 6 ಓವರ್ ಬೌಲ್ ಮಾಡಿ 60 ರನ್​ ಬಿಟ್ಟುಕೊಟ್ಟಿದ್ದರು.

ಇದಾಗ್ಯೂ ಆರ್​ಸಿಬಿ ತಂಡವು ಶ್ರೀಲಂಕಾ ಆಲ್​ರೌಂಡರ್ ಖರೀದಿಗೆ ಬರೋಬ್ಬರಿ 10.75 ಕೋಟಿ ವ್ಯಯಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಏಕೆಂದರೆ ಕಳೆದ ಬಾರಿ 32 ವಿಕೆಟ್ ಪಡೆದ ಹರ್ಷಲ್ ಪಟೇಲ್ ಅವರನ್ನು ಕೂಡ ಆರ್​ಸಿಬಿ 10.75 ನೀಡಿ ಈ ಬಾರಿ ಖರೀದಿಸಿದೆ. ಇದೀಗ ಅಷ್ಟೇ ಮೊತ್ತವನ್ನು ಲಂಕಾ ಆಟಗಾರನಿಗೂ ವ್ಯಯಿಸಿದೆ. ಇದಕ್ಕೂ ಮುನ್ನ ಆರ್​ಸಿಬಿ ತಂಡವು ಫಾಫ್ ಡುಪ್ಲೆಸಿಸ್ ಅವರನ್ನು 7 ಕೋಟಿ ರೂ. ನೀಡಿ ಖರೀದಿಸಿದೆ.

ಇಲ್ಲಿ ಮತ್ತೊಂದು ವಿಶೇಷ ಎಂದರೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡ ವಿಶ್ವದ ಅತ್ಯುತ್ತಮ ಆಲ್​ರೌಂಡರ್ ಶಕೀಬ್ ಅಲ್ ಹಸನ್ ಅವರನ್ನು ಯಾವುದೇ ತಂಡ ಖರೀದಿಸಿಲ್ಲ. ಕೇವಲ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾರಣಿಸಿಕೊಂಡ ಶಕೀಬ್ ಅನ್​ಸೋಲ್ಡ್ ಆಗಿದ್ದಾರೆ. ಇನ್ನೊಂದೆಡೆ ವನಿಂದು ಹಸರಂಗ ಭರ್ಜರಿ ಮೊತ್ತಕ್ಕೆ ಹರಾಜಾಗುವ ಮೂಲಕ ಗಮನ ಸೆಳೆದಿದ್ದಾರೆ.

ಅದರಂತೆ ಇದೀಗ ಆರ್​ಸಿಬಿ ತಂಡದಲ್ಲಿ 6 ಆಟಗಾರರು ಇದ್ದಾರೆ. ಈ ಹಿಂದೆ ಆರ್​ಸಿಬಿ ತಂಡವು ರಿಟೈನ್ ಆಯ್ಕೆಯ ಮೂಲಕ ಗ್ಲೆನ್ ಮ್ಯಾಕ್ಸ್​ವೆಲ್, ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಿದೆ. ಇದೀಗ ಹರ್ಷಲ್ ಪಟೇಲ್, ವನಿಂದು ಹಸರಂಗ ಹಾಗೂ ಫಾಫ್ ಡುಪ್ಲೆಸಿಸ್ ಕೂಡ ಆರ್​ಸಿಬಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: IPL 2022: ಐಪಿಎಲ್​ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತ ಖರ್ಚು ಮಾಡಿದ ತಂಡ ಯಾವುದು ಗೊತ್ತಾ?

ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

(IPL 2022 Mega Auction: Wanindu Hasaranga SOLD to RCB)