AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ishan Kishan, IPL 2022 Auction: ಇಶಾನ್ ಕಿಶನ್ ಬಲು ದುಬಾರಿ! ದಾಖಲೆಯ ಮೊತ್ತಕ್ಕೆ ಖರೀದಿಸಿದ ಮುಂಬೈ

Ishan Kishan Auction Price: ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ 15. 25 ಕೋಟಿ ರೂ. ಗೆ ಖರೀದಿಸಿದೆ. ಭಾರತ ತಂಡವನ್ನು ಪ್ರವೇಶಿಸಿದ ಈ ಎಡಗೈ ಬ್ಯಾಟ್ಸ್‌ಮನ್‌ನನ್ನು ಕಳೆದ ವರ್ಷವಷ್ಟೇ ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿತ್ತು.

Ishan Kishan, IPL 2022 Auction: ಇಶಾನ್ ಕಿಶನ್ ಬಲು ದುಬಾರಿ! ದಾಖಲೆಯ ಮೊತ್ತಕ್ಕೆ ಖರೀದಿಸಿದ ಮುಂಬೈ
ಇಶಾನ್ ಕಿಶನ್
TV9 Web
| Updated By: ಪೃಥ್ವಿಶಂಕರ|

Updated on:Feb 12, 2022 | 4:47 PM

Share

ಐಪಿಎಲ್ 2022 ರ ಹರಾಜಿನಲ್ಲಿ (IPL 2022 Auction ) ಹೆಚ್ಚು ಗಮನ ಸೆಳೆದ ಆಟಗಾರರಲ್ಲಿ ಒಬ್ಬರು ಭಾರತದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ (Ishan Kishan). 23 ವರ್ಷದ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಈ ಬಾರಿಯ ಹರಾಜಿನಲ್ಲಿ ಅತ್ಯಂತ ‘ಹಾಟ್ ಪಿಕ್’ ಎಂದು ಪರಿಗಣಿಸಲ್ಪಟ್ಟರು. ಇದಕ್ಕಾಗಿ ಫ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿಯನ್ನು ನಿರೀಕ್ಷಿಸಲಾಗಿತ್ತು. ಕೊನೆಗೂ ಊಹೆ ನಿಜ ಆಗಿದೆ. ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ 15. 25 ಕೋಟಿ ರೂ. ಗೆ ಖರೀದಿಸಿದೆ. ಭಾರತ ತಂಡವನ್ನು ಪ್ರವೇಶಿಸಿದ ಈ ಎಡಗೈ ಬ್ಯಾಟ್ಸ್‌ಮನ್‌ನನ್ನು ಕಳೆದ ವರ್ಷವಷ್ಟೇ ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿತ್ತು. ಮುಂಬೈ ಇಂಡಿಯನ್ಸ್ ಅವರನ್ನು ಮೊದಲು ಬಿಡ್ ಮಾಡಿತು. ನಂತರ ಪಂಜಾಬ್ ಕಿಂಗ್ಸ್ ಅಖಾಡಕ್ಕಿಳಿಯಿತು. ಇದರೊಂದಿಗೆ ಬಿಡ್ ತಕ್ಷಣವೇ ಆರು ಕೋಟಿಗೆ ಏರಿತು. ನಂತರ ಗುಜರಾತ್ ಟೈಟಾನ್ಸ್ ಬೆಟ್ಟಿಂಗ್ ಮಾಡಿ 10 ಕೋಟಿ ಗಡಿ ದಾಟಿಸಿತು.

ಭಾರತೀಯ ಕ್ರಿಕೆಟ್‌ನ ಭವಿಷ್ಯದ ಉಜ್ವಲ ತಾರೆಗಳಲ್ಲಿ ಒಬ್ಬರಾದ ಮತ್ತು ಐಪಿಎಲ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿರುವ ಇಶಾನ್ ಕಿಶನ್ ಈ ಹರಾಜಿನಲ್ಲಿ ತಮ್ಮ ಮೂಲ ಬೆಲೆಯನ್ನು ಅತ್ಯಧಿಕ ಬ್ರಾಕೆಟ್‌ನಲ್ಲಿ ಇರಿಸಿದ್ದರು – ಅಂದರೆ 2 ಕೋಟಿ ರೂ. ನಿಸ್ಸಂಶಯವಾಗಿ, ಇಶಾನ್‌ಗೆ ಮೊದಲಿನಿಂದಲೂ ಹೆಚ್ಚಿನ ಬಿಡ್ಡಿಂಗ್ ನಿರೀಕ್ಷಿಸಲಾಗಿತ್ತು. 2016ರಲ್ಲಿ ವಿಶ್ವಕಪ್‌ನಲ್ಲಿ ಭಾರತ ಅಂಡರ್-19 ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದ ಇಶಾನ್ ಕಿಶನ್ ಕಳೆದ 4 ವರ್ಷಗಳಲ್ಲಿ ಈ ಲೀಗ್‌ನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ.

35 ಲಕ್ಷದಿಂದ ಆರಂಭ

ಇಶಾನ್ ಕಿಶನ್ 2018 ರಿಂದ ನಿರಂತರವಾಗಿ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದರು. ಆದಾಗ್ಯೂ, 2016 ರ ಹರಾಜಿನಲ್ಲಿ ಅವರನ್ನು ಮೊದಲು ಗುಜರಾತ್ ಲಯನ್ಸ್ ಖರೀದಿಸಿತು. ಕೇವಲ ಎರಡು ವರ್ಷಗಳ ಕಾಲ ಐಪಿಎಲ್‌ನ ಭಾಗವಾಗಿದ್ದ ಅಹಮದಾಬಾದ್ ಮೂಲದ ಫ್ರಾಂಚೈಸಿ ನಂತರ 18 ವರ್ಷದ ಇಶಾನ್ ಅವರನ್ನು 20 ಲಕ್ಷ ಮೂಲ ಬೆಲೆಗೆ 35 ಲಕ್ಷ ಬಿಡ್‌ನಲ್ಲಿ ಖರೀದಿಸಿತ್ತು. ಅವರು ಎರಡು ವರ್ಷಗಳ ಕಾಲ ಈ ಫ್ರಾಂಚೈಸಿಯ ಭಾಗವಾಗಿದ್ದರು, ಆದರೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶವನ್ನು ಪಡೆಯಲಿಲ್ಲ. ನಂತರ 2018 ರ ದೊಡ್ಡ ಹರಾಜು ಬಂದಿತು, ಅಲ್ಲಿ ಮುಂಬೈ ಇಂಡಿಯನ್ಸ್ ಇಶಾನ್ ಅವರನ್ನು 6.20 ಕೋಟಿ ರೂಪಾಯಿಗಳಿಗೆ ಖರೀದಿಸಿತು.

ಇದುವರೆಗಿನ ಇಶಾನ್ ಆಟ

ಭಾರತ ಕ್ರಿಕೆಟ್ ತಂಡದ ಪರ 2 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಿರುವ ಇಶಾನ್ ಕಿಶನ್ ಪ್ರದರ್ಶನ ಐಪಿಎಲ್ ನಲ್ಲಿ ಇದುವರೆಗೂ ಏರುಪೇರಾಗಿದೆ. 2018 ಮತ್ತು 2019ರಲ್ಲಿ ಅವರ ಬ್ಯಾಟ್‌ನಿಂದ 275 ಮತ್ತು 101 ರನ್‌ಗಳು ಬಂದಿದ್ದವು. ಆದರೆ ಇಶಾನ್ 2020 ರ ಋತುವಿನಲ್ಲಿ ಯುಎಇಯಲ್ಲಿ ಅಬ್ಬರಿಸಿದ್ದರು. ಮುಂಬೈ ಪರ 14 ಪಂದ್ಯಗಳಲ್ಲಿ ಇಶಾನ್ 516 ರನ್ ಗಳಿಸಿದರು, ಸರಾಸರಿ 57.33 ಮತ್ತು ಸ್ಟ್ರೈಕ್ ರೇಟ್ 145.76. ಟೂರ್ನಿಯಲ್ಲಿ ಇಶಾನ್ 30 ಸಿಕ್ಸರ್‌ಗಳನ್ನು ಬಾರಿಸಿದ್ದರು. ಆದಾಗ್ಯೂ, ಕಳೆದ ಋತುವಿನಲ್ಲಿ ಅವರು ಕೇವಲ 241 ರನ್ ಗಳಿಸಲು ಸಾಧ್ಯವಾಯಿತು. ಒಟ್ಟಾರೆಯಾಗಿ, ಈ ಯುವ ಬ್ಯಾಟ್ಸ್‌ಮನ್ 61 ಪಂದ್ಯಗಳಲ್ಲಿ 1452 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಸ್ಟ್ರೈಕ್ ರೇಟ್ 136, ಅವರು 9 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ:Devdutt Padikkal, IPL 2022 Auction: ಆರ್​ಸಿಬಿಗೆ ಬರಲಿಲ್ಲ! ರಾಜಸ್ಥಾನ ಸೇರಿದ ಕನ್ನಡಿಗ ದೇವದತ್ ಪಡಿಕ್ಕಲ್

Published On - 4:39 pm, Sat, 12 February 22

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ