IPL 2022 Auction: ಭರ್ಜರಿ ಮೊತ್ತಕ್ಕೆ ಸಿಎಸ್ಕೆ ಪಾಲಾದ ದೀಪಕ್ ಚಹರ್
IPL 2022 Auction: ಇದಕ್ಕೂ ಮುನ್ನ ಸಿಎಸ್ಕೆ ತಂಡವು ಡ್ವೇನ್ ಬ್ರಾವೊ ( 4.40 ಕೋಟಿ) ಹಾಗೂ ರಾಬಿನ್ ಉತ್ತಪ್ಪ (2 ಕೋಟಿ) ಅವರನ್ನು ಖರೀದಿಸಿತ್ತು.
ಐಪಿಎಲ್ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ವೇಗಿ ದೀಪಕ್ ಚಹರ್ ಅವರನ್ನು ಭರ್ಜರಿ ಮೊತ್ತಕ್ಕೆ ಖರೀದಿಸಿದೆ. ಕಳೆದ ಸೀಸನ್ನಲ್ಲಿ ಸಿಎಸ್ಕೆ ಪರ ಆಡಿದ್ದ ಚಹರ್ ಅವರನ್ನು ಈ ಬಾರಿ 14 ಕೋಟಿ ನೀಡಿ ತನ್ನಲ್ಲೇ ಉಳಿಸಿಕೊಂಡಿದೆ. ರಾಜಸ್ಥಾನ್ ರಾಯಲ್ಸ್, ಸನ್ರೈಸರ್ಸ್ ಹೈದರಾಬಾದ್ ಹಾಗೂ ಸಿಎಸ್ಕೆ ನಡುವೆ ದೀಪಕ್ ಚಹರ್ ಖರೀದಿಗಾಗಿ ಭರ್ಜರಿ ಪೈಪೋಟಿ ಏರ್ಪಟ್ಟಿತ್ತು. ಇದಾಗ್ಯೂ ಚಹರ್ ಅವರನ್ನು ತನ್ನಲ್ಲೇ ಉಳಿಸಿಕೊಳ್ಳಲು ಸಿಎಸ್ಕೆ ತಂಡವು ಬರೋಬ್ಬರಿ 14 ಕೋಟಿ ರೂ. ನೀಡಿದೆ. ಈ ಮೂಲಕ ಮೆಗಾ ಹರಾಜಿನ ಮೊದಲ ದಿನ ಅತೀ ಹೆಚ್ಚಿನ ಮೊತ್ತಕ್ಕೆ ಹರಾಜಾದ ಬೌಲರ್ ಎನಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಮೊದಲ ದಿನದಲ್ಲಿ ಅತೀ ಹೆಚ್ಚು ಮೊತ್ತ ಪಡೆದ 2ನೇ ಆಟಗಾರ ಕೂಡ ದೀಪಕ್ ಚಹರ್. ಇದಕ್ಕೂ ಮುನ್ನ ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು ಬರೋಬ್ಬರಿ 15 ಕೋಟಿ 25 ಲಕ್ಷ ರೂ. ನೀಡಿ ಮತ್ತೆ ಖರೀದಿಸಿದೆ. ಕಳೆದ ಸೀಸನ್ನಲ್ಲಿ ಕಿಶನ್ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಇದೀಗ ಮತ್ತೆ ದಾಖಲೆ ಬೆಲೆಗೆ ಮುಂಬೈ ಇಂಡಿಯನ್ಸ್ ಪಾಲಗಿದ್ದಾರೆ. ಈ ಮೂಲಕ ಮೊದಲ ದಿನದ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಸಿಎಸ್ಕೆ ತಂಡವು ಡ್ವೇನ್ ಬ್ರಾವೊ ( 4.40 ಕೋಟಿ) ಹಾಗೂ ರಾಬಿನ್ ಉತ್ತಪ್ಪ (2 ಕೋಟಿ) ಅವರನ್ನು ಖರೀದಿಸಿತ್ತು. ಇದೀಗ ದೀಪಕ್ ಚಹರ್ ಅವರನ್ನು ಕೂಡ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಕಳೆದ ಸೀಸನ್ನಲ್ಲಿ ಆಡಿದ್ದ ಮೂವರು ಆಟಗಾರರನ್ನು ಮತ್ತೆ ತಂಡದಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: IPL 2022: ಐಪಿಎಲ್ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತ ಖರ್ಚು ಮಾಡಿದ ತಂಡ ಯಾವುದು ಗೊತ್ತಾ?
ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
(IPL 2022 Auction: Deepak Chahar SOLD to CSK)