IPL 2022 Auction: ಹರಾಜು ಮುಗಿದ ಬೆನ್ನಲ್ಲೇ ನಾಯಕನ ಘೊಷಣೆಗೆ ಸಿದ್ಧವಾದ ಪಂಜಾಬ್ ಕಿಂಗ್ಸ್: ಯಾರು ಗೊತ್ತೇ ಕ್ಯಾಪ್ಟನ್?

| Updated By: Vinay Bhat

Updated on: Feb 14, 2022 | 10:39 AM

Punjab Kings 2022 Players List: ಬಹುನಿರೀಕ್ಷಿತ ಐಪಿಎಲ್ 2022 ಮೆಗಾ ಹರಾಜಿಗೆ ತೆರೆ ಬಿದ್ದಿದೆ. ಅನಿಲ್ ಕುಂಬ್ಳೆ ಮುಖ್ಯ ಕೋಚ್ ಆಗಿರುವ ಪಂಜಾಬ್ ಕಿಂಗ್ಸ್​ ಕೂಡ ಸ್ಟಾರ್ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಒಟ್ಟಾರೆಯಾಗಿ ಪಂಜಾಬ್ ತಂಡದಲ್ಲಿ ಈಗ 25 ಆಟಗಾರರಿದ್ದಾರೆ.

IPL 2022 Auction: ಹರಾಜು ಮುಗಿದ ಬೆನ್ನಲ್ಲೇ ನಾಯಕನ ಘೊಷಣೆಗೆ ಸಿದ್ಧವಾದ ಪಂಜಾಬ್ ಕಿಂಗ್ಸ್: ಯಾರು ಗೊತ್ತೇ ಕ್ಯಾಪ್ಟನ್?
PBKS IPL 2022
Follow us on

ಕಳೆದ ಎರಡು ದಿನಗಳಿಂದ ಕ್ರಿಕೆಟ್ ಪ್ರೇಮಿಗಳ ಮತ್ತು ಆಟಗಾರರ ನಿದ್ದೆ ಕೆಡೆಸಿದ್ದ ಬಹುನಿರೀಕ್ಷಿತ ಐಪಿಎಲ್ 2022 ಮೆಗಾ ಹರಾಜಿಗೆ (IPL 2022 Auction) ತೆರೆ ಬಿದ್ದಿದೆ. ಕಳೆದ ಕೆಲವು ವರ್ಷಗಳಿಂದ ಒಂದೇ ತಂಡದಲ್ಲಿದ್ದ ಆಟಗಾರರು ಇದೀಗ ಬೇರೆ ತಂಡಕ್ಕೆ ಸೇರ್ಪಡೆಯಾದರೆ, ಅಚ್ಚರಿ ಎಂಬಂತೆ ಕೆಲ ಸ್ಟಾರ್ ಪ್ಲೇಯರ್ಸ್ ಅನ್​ಸೋಲ್ಡ್ ಆದರು. ಹರಾಜಿನಲ್ಲಿ ಬಿಕರಿಯಾದ ಒಟ್ಟು 204 ಆಟಗಾರರ ಸಲುವಾಗಿ 10 ಫ್ರಾಂಚೈಸಿಗಳು ದಾಖಲೆಯ 551.7 ಕೋಟಿ ರೂ. ಗಳ ಹಣದ ಹೊಳೆಯನ್ನು ಹರಿಸಿವೆ. ಅನಿಲ್ ಕುಂಬ್ಳೆ (Anil Kumble) ಮುಖ್ಯ ಕೋಚ್ ಆಗಿರುವ ಪಂಜಾಬ್ ಕಿಂಗ್ಸ್ (Punjab Kings)​ ಕೂಡ ಸ್ಟಾರ್ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಮಯಾಂಕ್ ಅಗರ್ವಾಲ್ ಮತ್ತು ಅರ್ಶ್​ದೀಪ್ ಸಿಂಗ್​ರನ್ನು ತನ್ನಲ್ಲೇ ಉಳಿಸಿಕೊಂಡು ಈ ಬಾರಿಯ ಹರಾಜಿನಲ್ಲಿ ಒಟ್ಟು 23 ಆಟಗಾರರನ್ನು ಪಂಜಾಬ್ ಖರೀದಿ ಮಾಡಿದೆ. ಒಟ್ಟಾರೆಯಾಗಿ ಪಂಜಾಬ್ ತಂಡದಲ್ಲಿ ಈಗ 25 ಆಟಗಾರರಿದ್ದಾರೆ. ಅಷ್ಟೇ ಅಲ್ಲದೆ ಇವರ ಬಳಿ ಇನ್ನೂ 3.45 ಕೋಟಿ ರೂಪಾಯಿ ಬಾಕಿಯಿದೆ.

ಪಂಜಾಬ್ ಹರಾಜಿನಲ್ಲಿ ಹಣದ ಹೊಳೆ ಹರಿಸಿದ್ದು ಇಂಗ್ಲೆಂಡ್‌ನ ಆಲ್‌ರೌಂಡರ್‌ ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರಿಗೆ. ಇವರನ್ನು ಭಾರಿ ಪೈಪೋಟಿ ನಡುವೆ ಬರೋಬ್ಬರಿ 11.50 ಕೋಟಿ ರೂ. ನೀಡಿ ಬುಟ್ಟಿಗೆ ಹಾಕಿಕೊಂಡಿತು. ಮಾರಕ ವೇಗಿ ಖಗಿಸೊ ರಬಾಡ ಅವರಿಗೆ 9.25 ಕೋಟಿ ರೂ. ನೀಡಿತು. ಶಾರುಖ್‌ ಖಾನ್​ಗೆ 9 ಕೋಟಿ ರೂ. ಮತ್ತು ಟೀಮ್ ಇಂಡಿಯಾ ಓಪನರ್ ಶಿಖರ್‌ ಧವನ್​ಗೆ 8.25 ಕೋಟಿ ರೂ. ನೀಡಿ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಹೀಗಿರುವಾಗ ಪಂಜಾಬ್ ಕಿಂಗ್ಸ್ ತಂಡದ ನಾಯಕ ಯಾರು ಎಂಬ ಪ್ರಶ್ನೆ ಇದೀಗ ಎದ್ದಿದೆ. ಇದಕ್ಕೆ ಸದ್ಯದಲ್ಲೇ ಫ್ರಾಂಚೈಸಿ ಸ್ಪಷ್ಟನೆ ನೀಡಲಿದೆಯಂತೆ.

ಇನ್​ಸೈಡ್ ಸ್ಫೋರ್ಟ್ಸ್ ಮಾಡಿರುವ ವರದಿಯ ಪ್ರಕಾರ, ಪಂಜಾಬ್ ಕಿಂಗ್ಸ್ ಶಿಖರ್ ಧವನ್ ಅವರನ್ನು ತಂಡದ ನಾಯಕನಾಗಿ ಸದ್ಯದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆಯಂತೆ. ಪಂಜಾಬ್ ತಂಡಕ್ಕೆ ಹತ್ತಿರವಾದವರು ಈ ಬಗ್ಗೆ ಮಾಹಿತಿ ನೀಡಿದ್ದು, ಶಿಖರ್ ಧವನ್ ತಂಡ ಸೇರಿಕೊಂಡಿರುವುದರಿಂದ ಸಮತೋಲನದಿಂದ ಕೂಡಿದೆ. ಇವರು ಸಾಕಷ್ಟು ಅನುಭವ ಇರುವ ಆಟಗಾರ, ಪಂಜಾಬ್ ತಂಡವನ್ನು ಮುನ್ನಡೆಸಲು ಸೂಕ್ತವಾದವರು ಎಂದು ಹೇಳಿದ್ದಾರಂತೆ.

ಲಿವಿಂಗ್‌ಸ್ಟೋನ್​ಗೆ ಅಚ್ಚರಿಯ ಬಿಡ್ಡಿಂಗ್:

ದ್ವಿತೀಯ ದಿನದ ಬಿಡ್ಡಿಂಗ್‌ನಲ್ಲಿ ಇಂಗ್ಲೆಂಡಿನ ಬಿಗ್‌ ಹಿಟ್ಟಿಂಗ್‌ ಆಲ್‌ರೌಂಡರ್‌ ಲಿಯಮ್‌ ಲಿವಿಂಗ್‌ಸ್ಟೋನ್‌ ದಶಕೋಟಿ ಒಡೆಯರ ಯಾದಿಗೆ ಸೇರ್ಪಡೆಗೊಂಡರು. ಅವರನ್ನು ಪಂಜಾಬ್‌ ಕಿಂಗ್ಸ್‌ 11.50 ಕೋಟಿ ರೂ. ನೀಡಿ ಬುಟ್ಟಿಗೆ ಹಾಕಿಕೊಂಡಿತು. ಕಳೆದ ವರ್ಷ ಮೂಲಬೆಲೆ 75 ಲಕ್ಷ ರೂ. ಗೆ ಇವರನ್ನು ರಾಜಸ್ಥಾನ್‌ ರಾಯಲ್ಸ್‌ ಖರೀದಿಸಿತ್ತು. ಅವರು 5 ಪಂದ್ಯಗಳಿಂದ ಕೇವಲ 42 ರನ್‌ ಮಾಡಿದ್ದರು. ಆದರೆ, ಈ ಬಾರಿ ಅಚ್ಚರಿ ಎಂಬಂತೆ ಇವರ ಮೇ;ಎ ಸನ್‌ರೈಸರ್ಸ್‌ ಹೈದರಾಬಾದ್ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳು ಬಿಡ್ಡಿಂಗ್‌ ವಾರ್‌ ಆರಂಭಿಸಿದವು. ಆರಂಭದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಆಸಕ್ತಿ ತೋರಿದರೂ ಕೊನೆಗೆ ಪಂಜಾಬ್‌ ಮತ್ತು ಹೈದರಾಬಾದ್‌ ತಂಡಗಳ ನಡುವೆ ಜಟಾಪಟಿ ನಡೆಯುತು.

ಇನ್ನೇನು ಲಿವಿಂಗ್‌ಸ್ಟೋನ್‌ ಸನ್‌ರೈಸರ್ಸ್‌ ತಂಡ ಸೇರೇ ಬಿಟ್ಟರು ಎನ್ನುವಷ್ಟರಲ್ಲಿ ಪಂಜಾಬ್‌ ತಂಡ ಗಟ್ಟಿ ಮನಸ್ಸಿನಿಂದ 11.5 ಕೋಟಿ ರೂ.ಗಳ ಭಾರಿ ಬೆಲೆಯ ಬಿಡ್ಡಿಂಗ್‌ ಕೂಗಿತು. ಸನ್‌ರೈಸರ್ಸ್‌ ಬಿಡ್ಡಿಂಗ್‌ ನಿಲ್ಲಿಸಿದ ಪರಿಣಾಮ ಎರಡನೇ ದಿನ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ ಎಂಬ ಹೆಗ್ಗಳಿಕೆಯೊಂದಿಗೆ ಲಿಯಾಮ್‌ ಇವಿಂಗ್‌ಸ್ಟೋನ್‌ ಪಂಜಾಬ್‌ ಕಿಂಗ್ಸ್‌ ಸೇರಿದರು. ಈ ಮೂಲ ಪ್ರಸಕ್ತ ಮೆಗಾ ಆಕ್ಷನ್‌ನಲ್ಲಿ ಗರಿಷ್ಠ ಬೆಲೆ ಪಡೆದ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ.

ಪಂಜಾಬ್‌ ಕಿಂಗ್ಸ್‌ 2022: ಮಯಾಂಕ್ ಅಗರ್ವಾಲ್, ಅರ್ಷದೀಪ್ ಸಿಂಗ್, ಶಿಖರ್ ಧವನ್, ಕಗಿಸೊ ರಬಾಡ, ಜಾನಿ ಬೈರ್‌ಸ್ಟೋವ್, ರಾಹುಲ್ ಚಹರ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ಪ್ರಭಸಿಮ್ರನ್ ಸಿಂಗ್, ಜಿತೇಶ್ ಶರ್ಮಾ, ಇಶಾನ್ ಪೊರೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಓಡಿಯನ್ ಸ್ಮಿತ್, ಸಂದೀಪ್ ಶರ್ಮಾ, ರಾಜ್ ಅಂಗದ್ ಬಾವಾ, ರಿಷಿ ಧವನ್, ಪ್ರೇರಕ್‌ ಮಂಕಡ್, ವೈಭವ್ ಅರೋರಾ, ರಿತಿಕ್ ಚಟರ್ಜಿ, ಬಲ್ತೇಜ್ ಧಂಡಾ, ಅನ್ಶ್ ಪಟೇಲ್, ನಾಥನ್ ಎಲ್ಲಿಸ್, ಅಥರ್ವ ತಾಯ್ದೆ, ಭಾನುಕಾ ರಾಜಪಕ್ಸ, ಬೆನ್ನಿ ಹೋವೆಲ್.

Pro Kabaddi League: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ಗೆ ರೋಚಕ ಜಯ

RCB Playing XI 2022: ಆರ್​​ಸಿಬಿಯಲ್ಲಿ ಸಿದ್ಧವಾಗಿದೆ ಕಣಕ್ಕಿಳಿಯುವ ಆಟಗಾರರು: ಇಲ್ಲಿದೆ ನೋಡಿ ಸಂಭಾವ್ಯ ಪ್ಲೇಯಿಂಗ್ XI