IPL 2022: ಸೋಲಿನ ಸುಳಿಯಲ್ಲಿ ಸಿಲುಕಿರುವ RCB ಮುಂದಿದೆ ದೊಡ್ಡ ಸವಾಲು
IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್,
IPL 2022: ಸತತವಾಗಿ ಮೂರು ಪಂದ್ಯ ಸೋತಿರುವ ಆರ್ಸಿಬಿ (RCB) ಮುಂದಿನ 4 ಪಂದ್ಯಗಳನ್ನು ಗೆದ್ದು ಪ್ಲೇಆಫ್ಗೆ ಎಂಟ್ರಿ ಕೊಡಬೇಕಿದೆ. ಒಂದು ವೇಳೆ 3 ಪಂದ್ಯ ಗೆದ್ದರೆ ಪ್ಲೇಆಫ್ ಪ್ರವೇಶಿಸಲು ನೆಟ್ ರನ್ ರೇಟ್ ಮೊರೆ ಹೋಗಬೇಕಾಗುತ್ತದೆ. ಹೀಗಾಗಿ ಆರ್ಸಿಬಿ ಪಾಲಿಗೆ ಮುಂದಿನ 4 ಪಂದ್ಯಗಳು ನಿರ್ಣಾಯಕ. ಆದರೆ ಮುಂದಿನ 4 ಪಂದ್ಯಗಳಲ್ಲಿ ಗೆಲ್ಲೋದು ಸುಲಭವಲ್ಲ. ಏಕೆಂದರೆ ಆರ್ಸಿಬಿ ಯಾವ ತಂಡಗಳ ವಿರುದ್ದ ಮೊದಲ ಸುತ್ತಿನಲ್ಲಿ ಸೋತಿದೆಯೋ ಅದೇ ತಂಡಗಳ ವಿರುದ್ದ ಮತ್ತೆ ಆಡಬೇಕಿದೆ.
ಅಂದರೆ ಆರ್ಸಿಬಿ ಮೇ 4 ರಂದು ಸಿಎಸ್ಕೆ ವಿರುದ್ದ ಆಡಬೇಕಿದೆ. ಈ ಬಾರಿಯ ಐಪಿಎಲ್ನಲ್ಲಿ ಸಿಎಸ್ಕೆ ಕಳಪೆ ಪ್ರದರ್ಶನ ನೀಡಿದರೂ ಆರ್ಸಿಬಿ ವಿರುದ್ದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿತ್ತು. ಹೀಗಾಗಿ ಈ ಪಂದ್ಯ ಕೂಡ ಆರ್ಸಿಬಿಗೆ ಸವಾಲಾಗಲಿದೆ. ಇನ್ನು ಮೇ 8 ರಂದು ಆರ್ಸಿಬಿ ಎಸ್ಆರ್ಹೆಚ್ ವಿರುದ್ದ ಆಡಲಿದೆ. ಈ ಬಾರಿಯ ಮೊದಲ ಪಂದ್ಯದಲ್ಲಿ ಎಸ್ಆರ್ಹೆಚ್ ವಿರುದ್ದವೇ ಆರ್ಸಿಬಿ ಕೇವಲ 68 ರನ್ಗಳಿಗೆ ಆಲೌಟ್ ಆಗಿತ್ತು.
ಇನ್ನು ಮೇ 13 ರಂದು ಪಂಜಾಬ್ ಕಿಂಗ್ಸ್ ವಿರುದ್ದ ಆಡಬೇಕಿದೆ. ವಿಶೇಷ ಎಂದರೆ ಆರ್ಸಿಬಿ ಈ ಬಾರಿ ಪಂಜಾಬ್ ಕಿಂಗ್ಸ್ ವಿರುದ್ದ ಸೋಲುವ ಮೂಲಕ ಐಪಿಎಲ್ ಅಭಿಯಾನ ಆರಂಭಿಸಿತ್ತು. ಹಾಗೆಯೇ ಮೇ 19 ರಂದು ನಡೆಯಲಿರುವ ಕೊನೆಯ ಪಂದ್ಯದಲ್ಲಿ ಆರ್ಸಿಬಿ ಆಡಬೇಕಿರುವುದು ಗುಜರಾತ್ ಟೈಟನ್ಸ್ ವಿರುದ್ದ. ಶನಿವಾರ ನಡೆದ ಪಂದ್ಯದಲ್ಲಿ ಗುಜರಾತ್ ವಿರುದ್ದ ಆರ್ಸಿಬಿ ಹೀನಾಯವಾಗಿ ಸೋತಿದೆ. ಅಂದರೆ ಆರ್ಸಿಬಿ ಯಾವ ತಂಡಗಳ ವಿರುದ್ದ ಸೋತಿದೆಯಾ ಅದೇ ತಂಡಗಳ ವಿರುದ್ದ ನಿರ್ಣಾಯಕ ಪಂದ್ಯಗಳನ್ನು ಆಡಬೇಕಿದೆ. ಹೀಗಾಗಿ ಆರ್ಸಿಬಿ ತಂಡಕ್ಕೆ ಗೆಲುವು ಸುಲಭವಲ್ಲ ಎಂದೇ ಹೇಳಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.