IPL 2022: RCB ಗೆದ್ದರೂ ಡೆಲ್ಲಿ ಕ್ಯಾಪಿಟಲ್ಸ್​ ಚಾನ್ಸ್, ಯಾಕೆ ಗೊತ್ತಾ?

IPL 2022: RCB Playoff Chances: ಗುಜರಾತ್ ಟೈಟನ್ಸ್ ವಿರುದ್ದ ಇಂದು ಆರ್​ಸಿಬಿ ಗೆದ್ದರೆ ಪಾಯಿಂಟ್ಸ್ ಟೇಬಲ್​​ನಲ್ಲಿ 4ನೇ ಸ್ಥಾನಕ್ಕೇರಲಿದೆ. ಇದಾಗ್ಯೂ ಪ್ಲೇಆಫ್​ ಆಡುವುದು ಖಚಿತವಾಗುವುದು ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ನಡುವಣ ಫಲಿತಾಂಶದ ಬಳಿಕ ಎಂಬುದು ವಿಶೇಷ.

IPL 2022: RCB ಗೆದ್ದರೂ ಡೆಲ್ಲಿ ಕ್ಯಾಪಿಟಲ್ಸ್​ ಚಾನ್ಸ್, ಯಾಕೆ ಗೊತ್ತಾ?
RCB
Edited By:

Updated on: May 19, 2022 | 4:01 PM

IPL 2022: ಗುಜರಾತ್ ಟೈಟನ್ಸ್ ವಿರುದ್ದ ಆರ್​ಸಿಬಿ (RCB vs GT) ತಂಡವು ಇಂದು ನಿರ್ಣಾಯಕ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಆರ್​ಸಿಬಿ (RCB) ಪ್ಲೇಆಫ್ ರೇಸ್​ನಲ್ಲಿ ಉಳಿಯಲಿದೆ. ಇದಾಗ್ಯೂ ಈ ಪಂದ್ಯದಲ್ಲಿ ಗೆದ್ದ ಮಾತ್ರಕ್ಕೆ ಆರ್​ಸಿಬಿ ತಂಡದ ನಾಕೌಟ್‌ನ ಹಾದಿ ಸುಲಭವಲ್ಲ. ಏಕೆಂದರೆ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ತಂಡವು 13 ಪಂದ್ಯಗಳಿಂದ 14 ಅಂಕಗಳನ್ನು ಕಲೆಹಾಕಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ. ಅತ್ತ ಇಷ್ಟೇ ಪಾಯಿಂಟ್ಸ್ ಕಲೆಹಾಕಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4ನೇ ಸ್ಥಾನದಲ್ಲಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್​ಸಿಬಿ ನಡುವೆ 4ನೇ ಸ್ಥಾನಕ್ಕಾಗಿ ಪೈಪೋಟಿ ಕಂಡು ಬಂದಿದೆ. ವಿಶೇಷ ಎಂದರೆ ಉಭಯ ತಂಡಗಳಿಗೂ ಇನ್ನು ಒಂದು ಪಂದ್ಯವಿದ್ದು, ಈ ಪಂದ್ಯದ ಮೂಲಕ ಪ್ಲೇಆಫ್ ಆಡುವ ತಂಡ ಯಾವುದೆಂದು ನಿರ್ಧಾರವಾಗಲಿದೆ.

ಇಂದಿನ ಪಂದ್ಯದಲ್ಲಿ ಆರ್​ಸಿಬಿ ತಂಡವು ಗುಜರಾತ್ ಟೈಟನ್ಸ್ ವಿರುದ್ದ ಆಡಲಿದೆ. ಈ ಪಂದ್ಯದಲ್ಲಿ ಆರ್​ಸಿಬಿ ತಂಡವು ಗುಜರಾತ್ ಟೈಟನ್ಸ್ ವಿರುದ್ದ ಭರ್ಜರಿ ಜಯ ಸಾಧಿಸಿದರೆ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ. ಇದಾಗ್ಯೂ ಪ್ಲೇಆಫ್ ಆಡುವುದು ಖಚಿತವಾಗುವುದಿಲ್ಲ. ಒಂದು ವೇಳೆ ಸಾಧಾರಣ ಗೆಲುವು ಕಂಡರೆ ಪ್ಲೇಆಫ್ ಹಾದಿ ಕಠಿಣವಾಗಲಿದೆ. ಏಕೆಂದರೆ ಅತ್ತ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಮುಂಬೈ ವಿರುದ್ದ ಸೋತರೆ ಮಾತ್ರ ಆರ್​ಸಿಬಿಗೆ ಪ್ಲೇಆಫ್​ ಪ್ರವೇಶಿಸುವ ಅವಕಾಶ ಇರಲಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೆಟ್​ ರನ್​ ರೇಟ್​ ಅನ್ನು ಹಿಂದಿಕ್ಕುವಂತೆ ಗುಜರಾತ್ ಟೈಟನ್ಸ್ ವಿರುದ್ದ ಆರ್​ಸಿಬಿ ಗೆಲ್ಲಬೇಕು. ಅಂದರೆ ಕನಿಷ್ಠ 80 ರನ್​ಗಳ ಅಂತರದಿಂದ ಗುಜರಾತ್ ಟೈಟನ್ಸ್ ವಿರುದ್ದ ಆರ್​ಸಿಬಿ ಗೆದ್ದರೆ ಆರ್​ಸಿಬಿ ಮತ್ತೆ ಪಾಯಿಂಟ್ಸ್​ ಟೇಬಲ್​ನಲ್ಲಿ ನಾಲ್ಕನೇ ಸ್ಥಾನಕ್ಕೇರಬಹುದು. ಈ ಮೂಲಕ ನೆಟ್ ರನ್ ರೇಟ್​ ಸಹಾಯದಿಂದ ಪ್ಲೇಆಫ್​ ಪ್ರವೇಶಿಸಬಹುದು.

ಇದನ್ನೂ ಓದಿ: IPL 2022: ಏನಿದು RCB ಹಾಲ್ ಆಫ್ ಫೇಮ್ ಪ್ರಶಸ್ತಿ?

ಇದನ್ನೂ ಓದಿ
IPL 2022: ಎಬಿಡಿ, ಕ್ರಿಸ್ ಗೇಲ್​ಗೆ RCB ಯ ಹಾಲ್ ಆಫ್ ಫೇಮ್ ಗೌರವ
IPL 2022: ಇಬ್ಬರು ಯುವ ಆಟಗಾರರ ಪ್ರದರ್ಶನಕ್ಕೆ ಗಂಗೂಲಿ ಫಿದಾ..!
Virat Kohli: ಕಳಪೆ ಫಾರ್ಮ್​ ನಡುವೆಯೂ 2 ದಾಖಲೆ ಬರೆದ ಕಿಂಗ್ ಕೊಹ್ಲಿ
IPL 2022: RCB ತಂಡದ ಸೋಲಿಗೆ ಇವರಿಬ್ಬರೇ ಕಾರಣ..!

ಆದರೆ ಇಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ಕೊನೆಯ ಪಂದ್ಯವನ್ನು ಶನಿವಾರ ಆಡಲಿದೆ. ಅಂದರೆ ಆರ್​ಸಿಬಿ ತಂಡವು ಗುಜರಾತ್ ಟೈಟನ್ಸ್ ವಿರುದ್ದ ಗೆದ್ದರೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಂದಿನ ಟಾರ್ಗೆಟ್ ಬಗ್ಗೆ ಸ್ಪಷ್ಟತೆ ಸಿಗಲಿದೆ. ಅದರಂತೆ ಆರ್​ಸಿಬಿ ತಂಡದ ನೆಟ್ ರನ್​ ರೇಟ್​ ಅನ್ನು ಹಿಂದಿಕ್ಕಲು ಬೇಕಾದ ಪ್ಲ್ಯಾನ್ ರೂಪಿಸಬಹುದು. ಅಲ್ಲದೆ ಸ್ಪಷ್ಟ ಗುರಿಯನ್ನು ರೂಪಿಸುವ ಮೂಲಕ ಗೆಲುವು ಪಡೆಯಬಹುದು.

ಮುಖ್ಯವಾಗಿ ಆರ್​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನೆಟ್​ ರನ್​ ರೇಟ್​ನಲ್ಲಿನ ವ್ಯತ್ಯಾಸವು ಇಂದಿನ ಪಂದ್ಯದ ಫಲಿತಾಂಶದಿಂದ ಗೊತ್ತಾಗಲಿದೆ. ಇಲ್ಲಿ ಆರ್​ಸಿಬಿ ಗುಜರಾತ್ ಟೈಟನ್ಸ್ ವಿರುದ್ದ ಗೆದ್ದರೆ, ಡೆಲ್ಲಿ ತಂಡದ ಮುಂದಿನ ಟಾರ್ಗೆಟ್ ಸ್ಪಷ್ಟವಾಗಿರಲಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ವಿರುದ್ದ ಡೆಲ್ಲಿ ತಂಡವು ಚೇಸ್ ಮಾಡಿದರೆ ಇಂತಿಷ್ಟು ಓವರ್​ಗಳಲ್ಲಿ ಟಾರ್ಗೆಟ್ ಬೆನ್ನತ್ತುವ ಮೂಲಕ ನೆಟ್ ರನ್​ ರೇಟ್ ಹೆಚ್ಚಿಸಿಕೊಳ್ಳಬಹುದು. ಒಂದು ವೇಳೆ ಮೊದಲು ಬ್ಯಾಟ್ ಮಾಡಿದರೆ ಬೃಹತ್ ಮೊತ್ತ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡವನ್ನು ನಿರ್ದಿಷ್ಟ ರನ್​ಗಳ ಒಳಗೆ ನಿಯಂತ್ರಿಸಿ ಉತ್ತಮ ನೆಟ್ ರನ್​ ಪಡೆಯಬಹುದು. ಈ ಮೂಲಕ ಆರ್​ಸಿಬಿ ತಂಡವನ್ನು ನೆಟ್ ರನ್​ ರೇಟ್ ಮೂಲಕ ಹಿಂದಿಕ್ಕಿ ಡೆಲ್ಲಿ ಕ್ಯಾಪಿಟಲ್ಸ್​ ಪ್ಲೇಆಫ್ ಪ್ರವೇಶಿಸಬಹುದು.

ಹೀಗಾಗಿ ಗುಜರಾತ್ ಟೈಟನ್ಸ್ ವಿರುದ್ದ ಇಂದು ಆರ್​ಸಿಬಿ ಗೆದ್ದರೆ ಪಾಯಿಂಟ್ಸ್ ಟೇಬಲ್​​ನಲ್ಲಿ 4ನೇ ಸ್ಥಾನಕ್ಕೇರಲಿದೆ. ಇದಾಗ್ಯೂ ಪ್ಲೇಆಫ್​ ಆಡುವುದು ಖಚಿತವಾಗುವುದು ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ನಡುವಣ ಫಲಿತಾಂಶದ ಬಳಿಕ ಎಂಬುದು ವಿಶೇಷ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.

 

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:57 pm, Thu, 19 May 22