IPL 2022: RCB ಪ್ಲೇಆಫ್ ಹಾದಿ ಮತ್ತಷ್ಟು ಕಠಿಣ..!
IPL 2022: RCB ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್
IPL 2022: ಐಪಿಎಲ್ ಸೀಸನ್ 15 ನ ಮೊದಲಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಆರ್ಸಿಬಿ (RCB) ದ್ವಿತಿಯಾರ್ಧದಲ್ಲಿ ಬ್ಯಾಕ್ ಟು ಬ್ಯಾಕ್ ಸೋಲು ಕಂಡಿದೆ. ಏಕೆಂದರೆ ಮೊದಲಾರ್ಧದಲ್ಲಿ 7 ಪಂದ್ಯಗಳಲ್ಲಿ 5 ಜಯ ಸಾಧಿಸಿದ್ದ ಆರ್ಸಿಬಿ, 2ನೇ ಹಂತದ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದೆ. ಅಂದರೆ ಆಡಿರುವ 9 ಪಂದ್ಯಗಳಲ್ಲಿ 4 ಮ್ಯಾಚ್ನಲ್ಲಿ ಸೋಲನುಭವಿಸಿದೆ. ಅದರಲ್ಲೂ ಎಸ್ಆರ್ಹೆಚ್ (SRH) ಹಾಗೂ ರಾಜಸ್ಥಾನ್ ರಾಯಲ್ಸ್ (RR) ವಿರುದ್ದ ಸೋಲುವ ಮೂಲಕ ಸಂಕಷ್ಟಕ್ಕೆ ಸಿಲುಕಿದೆ ಎಂದೇ ಹೇಳಬಹುದು. ಏಕೆಂದರೆ ಇನ್ನು ಆರ್ಸಿಬಿಗೆ ಉಳಿದಿರುವುದು 5 ಮ್ಯಾಚ್ ಮಾತ್ರ. ಇತ್ತ ಪ್ಲೇಆಫ್ ರೇಸ್ನಲ್ಲಿ ಇನ್ನೂ ಕೂಡ 8 ತಂಡಗಳಿವೆ. ಹೀಗಾಗಿ ಆರ್ಸಿಬಿಗೆ ಮುಂದಿನ ಪಂದ್ಯಗಳು ಮಹತ್ವದಾಗಿದೆ.
ಏಕೆಂದರೆ ಮುಂದಿನ ಐದು ಪಂದ್ಯಗಳಲ್ಲಿ 4 ರಲ್ಲಿ ಗೆದ್ದರೆ ಮಾತ್ರ ಪ್ಲೇಆಫ್ ಕನ್ಫರ್ಮ್ ಮಾಡಿಕೊಳ್ಳಬಹುದು. ಅಂದರೆ ಒಟ್ಟು 18 ಪಾಯಿಂಟ್ಗಳಿಸಿ ಪ್ಲೇಆಫ್ ಪ್ರವೇಶವನ್ನು ಖಚಿತಪಡಿಸಿಕೊಳ್ಳಬಹುದು. ಇನ್ನು ಮೂರಲ್ಲಿ ಮಾತ್ರ ಗೆದ್ದರೆ ಒಟ್ಟು 16 ಪಾಯಿಂಟ್ ಆಗಲಿದೆ. ಆದರೆ ಈಗಾಗಲೇ ಗುಜರಾತ್ ಟೈಟನ್ಸ್ 14 ಪಾಯಿಂಟ್ಸ್ ಪಡೆದಿದೆ. ರಾಜಸ್ಥಾನ್ ರಾಯಲ್ಸ್ 12 ಪಾಯಿಂಟ್ಸ್ ಹೊಂದಿದೆ. ಗುಜರಾತ್ ತಂಡವು 2 ಮ್ಯಾಚ್ ಗೆದ್ದರೆ ಪ್ಲೇ ಆಫ್ ಆಡುವುದು ಖಚಿತವಾಗಲಿದೆ. ಹಾಗೆಯೇ ರಾಜಸ್ಥಾನ್ ರಾಯಲ್ಸ್ ಇನ್ನೆರಡು ಮ್ಯಾಚ್ ಗೆದ್ದರೆ 16 ಪಾಯಿಂಟ್ ಆಗಲಿದೆ. ಅಂದರೆ ರಾಜಸ್ಥಾನ್ ರಾಯಲ್ಸ್ ಕೂಡ ಪ್ಲೇಆಫ್ ಆಡುವುದನ್ನು ಬಹುತೇಕ ಖಚಿತಪಡಿಸಿಕೊಳ್ಳಬಹುದು.
ಇನ್ನುಳಿದಂತೆ ಎಸ್ಆರ್ಹೆಚ್, ಲಕ್ನೋ ತಂಡಗಳು 10 ಪಾಯಿಂಟ್ ಪಡೆದಿರುವ ಕಾರಣ 3 ಮತ್ತು 4ನೇ ಸ್ಥಾನಕ್ಕೆ ಭರ್ಜರಿ ಪೈಪೋಟಿ ನಡೆಸಲಿದೆ. ಏಕೆಂದರೆ ಆರ್ಸಿಬಿ ಕೂಡ ಗಳಿಸಿರುವುದು 10 ಪಾಯಿಂಟ್ ಮಾತ್ರ. ಅಂದರೆ 10 ಪಾಯಿಂಟ್ ಪಡೆದಿರುವ 3 ತಂಡಗಳು ಅಂಕಪಟ್ಟಿಯಲ್ಲಿ ಟಾಪ್ 5 ನಲ್ಲಿ ಕಾಣಿಸಿಕೊಂಡಿದೆ. ಇನ್ನು 8 ಪಾಯಿಂಟ್ಸ್ ಪಡೆದಿರುವ ಪಂಜಾಬ್ ಕಿಂಗ್ಸ್, ತಲಾ 6 ಪಾಯಿಂಟ್ಸ್ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೆಕೆಆರ್ ಕೂಡ ಪ್ಲೇಆಫ್ ರೇಸ್ನಲ್ಲಿದ್ದಾರೆ. ಇಲ್ಲಿ ಆರ್ಸಿಬಿ 9 ಪಂದ್ಯಗಳಿಂದ 10 ಪಾಯಿಂಟ್ ಪಡೆದರೆ, ಡೆಲ್ಲಿ 7 ಪಂದ್ಯಗಳಿಂದ 8 ಪಾಯಿಂಟ್ಸ್ಗಳಿಸಿದೆ. ಅಂದರೆ ಮುಂದಿನ ಮ್ಯಾಚ್ ಅನ್ನು ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೆ 10 ಪಾಯಿಂಟ್ಸ್ ಹೊಂದಿರುವ ನಾಲ್ಕು ತಂಡಗಳು ಪಾಯಿಂಟ್ ಟೇಬಲ್ನಲ್ಲಿ ಕಾಣಿಸಿಕೊಳ್ಳಲಿದೆ. ಅಲ್ಲದೆ ಎಲ್ಲಾ ತಂಡಗಳು ಮುಂದಿನ 6 ಮ್ಯಾಚ್ ಮೂಲಕ ಪ್ಲೇಆಫ್ ಎಂಟ್ರಿಗೆ ಶ್ರಮಿಸಲಿದೆ.
ಆದರೆ ಕೇವಲ 5 ಮ್ಯಾಚ್ ಮಾತ್ರ ಉಳಿದಿರುವ ಆರ್ಸಿಬಿ ಮುಂದಿನ 4 ಪಂದ್ಯಗಳನ್ನೂ ಗೆಲ್ಲುವ ಮೂಲಕ ಪ್ಲೇ ಆಫ್ ಅನ್ನು ಖಚಿತಪಡಿಸಿಕೊಳ್ಳಬೇಕಿದೆ. ಒಂದು ವೇಳೆ 5 ರಲ್ಲಿ 3 ಮ್ಯಾಚ್ ಗೆದ್ದರೆ 16 ಪಾಯಿಂಟ್ ಸಿಗಲಿದೆ. ಹಾಗೆಯೇ ಉಳಿದ ತಂಡಗಳು ಕೂಡ 16 ಪಾಯಿಂಟ್ಸ್ಗಳಿಸಿ 3ನೇ ಮತ್ತು ನಾಲ್ಕನೇ ಸ್ಥಾನ ಪಡೆದರೆ ಆರ್ಸಿಬಿ ಪ್ಲೇ ಆಫ್ ಪ್ರವೇಶಿಸಲು ನೆಟ್ ರನ್ ರೇಟ್ನ ಮೊರೆ ಹೋಗಬೇಕಾಗಿ ಬರಬಹುದು. ಹೀಗಾಗಿ ಆರ್ಸಿಬಿ ತಂಡವು ಮುಂದಿನ 4 ಪಂದ್ಯಗಳನ್ನು ಗೆದ್ದರೆ ಮಾತ್ರ ಸೇಫ್ ಆಗಿ ಪ್ಲೇಆಫ್ ಪ್ರವೇಶಿಸಬಹುದು.
ಒಟ್ಟಿನಲ್ಲಿ ಬ್ಯಾಕ್ ಟು ಬ್ಯಾಕ್ 2 ಮ್ಯಾಚ್ ಸೋತಿರುವ ಆರ್ಸಿಬಿ ಮುಂದಿನ 4 ಪಂದ್ಯ ಗೆದ್ದು ಈ ಬಾರಿ ಪ್ಲೇಆಫ್ ಆಡಲಿದೆಯಾ ಕಾದು ನೋಡಬೇಕಿದೆ.
RCB ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.
ಇದನ್ನೂ ಓದಿ: IPL 2022 VIDEO: ಏನೋ ಮಾಡ್ತೀಯಾ..? ಮೈದಾನದಲ್ಲೇ ಜಗಳಕ್ಕಿಳಿದ ಹರ್ಷಲ್-ಪರಾಗ್
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
Published On - 2:48 pm, Thu, 28 April 22