Muttiah Muralitharan: ರಶೀದ್ ಸಿಕ್ಸ್ ಕಂಡು ತಾಳ್ಮೆ ಕಳೆದುಕೊಂಡ ಮುರಳಿಧರನ್: ಡಗೌಟ್‌ನಲ್ಲಿ ಮಾಡಿದ್ದೇನು ನೋಡಿ
Muttiah Muralitharan loses cool, GT vcs SRH: ಐಪಿಎಲ್ 2022ರಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯದಲ್ಲಿ ಮುತ್ತಯ್ಯ ಮುರಳಿಧರನ್ ಕೋಪಗೊಂಡು ರೇಗಾಡಿದರು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಅದು 2014ರ ಇಂಡಿಯನ್ ಪ್ರೀಮಿಯರ್ ಲೀಗ್. ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ರೋಚಕ ಪಂದ್ಯ. ಇದರಲ್ಲಿ ಮುಂಬೈ 5 ವಿಕೆಟ್ಗಳಿಂದ ಊಹಿಸಲಾಗದ ರೀತಿ ಜಯ ಕಂಡಿತ್ತು. ಇದರಿಂದ ಕೋಪಗೊಂಡ ರಾಜಸ್ಥಾನ್ ಮೆಂಟರ್ ರಾಹುಲ್ ದ್ರಾವಿಡ್ ಡಗೌಟ್‌ನಲ್ಲಿ ತಮ್ಮ ಕ್ಯಾಪ್ ಅನ್ನು ಎಸೆದು ಆಕ್ರೋಶ ಹೊರಹಾಕಿದ್ದರು. ತಾಳ್ಮೆಗೆ ಇನ್ನೊಂದು ಹೆಸರೇ ದ್ರಾವಿಡ್ ಎಂದು ನಂಬಲಾಗಿದ್ದ ಆ ಸಂದರ್ಭದಲ್ಲಿ ರಾಹುಲ್ ಕೋಪಗೊಂಡಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈಗ ಅಂತಹದೆ ಘಟನೆ ಮರುಕಳಿಸಿದೆ. ಅದು ಐಪಿಎಲ್ 2022ರಲ್ಲಿ (IPL 2022) ಬುಧವಾರ ನಡೆದ ಗುಜರಾತ್ ಟೈಟಾನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ (GT vs SRH) ನಡುವಣ ಪಂದ್ಯದಲ್ಲಿ. ಇಲ್ಲಿ ಎಸ್ಆರ್ಹೆಚ್ ಸ್ಪಿನ್ ಕೋಚ್ ಮುತ್ತಯ್ಯ ಮುರಳಿಧರನ್ ಕೋಪಗೊಂಡು ರೇಗಾಡಿದರು. ಇದುವರೆಗೆ ಮುರಳಿಧರನ್ (Muttiah Muralitharan) ಆ ಮಟ್ಟಿಗೆ ತಾಳ್ಮೆ ಕಳೆದುಕೊಂಡಿದ್ದು ನೋಡಿಯೇ ಇರಲಿಲ್ಲ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. 196 ರನ್‌ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ತಂಡ 16 ಓವರ್‌ಗಳಲ್ಲಿ 140 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೊಳಗಾಗಿತ್ತು. ಇಲ್ಲಿ ಗೆಲುವು ಹೈದರಾಬಾದ್ ತಂಡದ್ದೇ ಎಂದು ಭಾವಿಸಲಾಗಿತ್ತು. ಆದರೆ ಮುರಿಯದ ಆರನೇ ವಿಕೆಟ್‌ಗೆ 24 ಎಸೆತಗಳಲ್ಲಿ 59 ರನ್‌ಗಳ ಜೊತೆಯಾಟ ಕಟ್ಟಿದ ಆಹುಲ್ ತೆವಾಟಿಯಾ ಹಾಗೂ ರಶೀದ್, ಹೈದರಾಬಾದ್ ಕೈಯಿಂದ ಗೆಲುವನ್ನು ಅಕ್ಷರಶಃ ಕಸಿದುಕೊಂಡರು. ಪ್ರಮುಖವಾಗಿ ಕೊನೆ ಓವರ್‌ನಲ್ಲಿ ಗೆಲುವಿಗಾಗಿ 22 ರನ್‌ಗಳ ಅಗತ್ಯವಿತ್ತು. ಈ ವೇಳೆ ಬೌಲಿಂಗ್ ದಾಳಿಗಿಳಿದ ಮಾರ್ಕೋ ಜಾನ್ಸನ್ ಅವರಿಗೆ, ತೇವಾಟಿಯಾ ಹಾಗೂ ರಶೀದ್ (6, 1, 6, 0, 6, 6) 25 ರನ್ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
22 ರನ್‌ಗಳಿಗೆ ಎದುರಾಳಿ ತಂಡವನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಮಾರ್ಕೊ ಯೆನ್ಸನ್‌ಗೆ ನೀಡಲಾಗಿತ್ತು. ಆದರೆ, ಒತ್ತಡದ ಸನ್ನಿವೇಶವನ್ನು ನಿಯಂತ್ರಿಸುವಲ್ಲಿ ಯೆನ್ಸನ್ ಸಂಪೂರ್ಣವಾಗಿ ವಿಫಲರಾದರು. ಲೆಂತ್ನಲ್ಲಿ ಸಂಪೂರ್ಣವಾಗಿ ಎಡವಿದ ಇವರು ಫುಲ್ ಟಾಸ್ ಅನ್ನು ಕೂಡ ಎದೆದರು. ಈ ವೇಳೆ ಡಗೌಟ್‌ನಲ್ಲಿ ಕುಳಿತಿದ್ದ ಮುತ್ತಯ್ಯ ಮುರಳಿಧರನ್ ತಾಳ್ಮೆ ಕಳೆದುಕೊಂಡು ಕೋಪದಲ್ಲಿ ಎದ್ದು ನಿಂತು ‘ಫುಲ್ ಎಸೆತ ಯಾಕೆ ಬೇಕಾಗಿತ್ತು?’ ಎಂದು ಯೆನ್ಸನ್ ವಿರುದ್ದ ಹರಿಹಾಯ್ದಿದಿದ್ದಾರೆ. ಮರಳಿಧರನ್ ತಾವುದೇ ಸಂದರ್ಭದಲ್ಲಿ ತಾಳ್ಮೆಯನ್ನು ಕಳೆದುಕೊಂಡಿದ್ದು ಅಭಿಮಾನಿಗಳು ಎಂದಿಗೂ ನೋಡಿರಲಿಕ್ಕಿಲ್ಲ. ಆದರೆ, ಬುಧವಾರದ ಪಂದ್ಯದಲ್ಲಿ ನಡೆದ ಘಟನೆಯ ವಿಡಿಯೋ ಕಂಡು ಎಲ್ಲರೂ ಶಾಕ್ ಆಗಿದ್ದಾರೆ.
This IPL is a great tournament pic.twitter.com/2sEhV2dRMP
— ChaiBiscuit (@Biscuit8Chai) April 27, 2022
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್ ತಂಡ ಯುವ ಆರಂಭಿಕ ಅಭಿಷೇಕ್ ಶರ್ಮ (65 ರನ್, 42 ಎಸೆತ, 6 ಬೌಂಡರಿ, 3 ಸಿಕ್ಸರ್) ಮತ್ತು ಏಡನ್ ಮಾರ್ಕ್ರಮ್ (56 ರನ್, 40 ಎಸೆತ, 2 ಬೌಂಡರಿ, 3 ಸಿಕ್ಸರ್) ಅರ್ಧಶತಕಗಳ ನೆರವಿನಿಂದ 6 ವಿಕೆಟ್‌ಗೆ 195 ರನ್ ಪೇರಿಸಿತು. ಅನುಭವಿ ವೇಗಿ ಮೊಹಮದ್ ಶಮಿ (39) ಬಿಗಿ ಬೌಲಿಂಗ್ ದಾಳಿಯ ನಡುವೆಯೂ ಸನ್‌ರೈಸರ್ಸ್ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಗುಜರಾತ್ ತಂಡ ವೃದ್ಧಿಮಾನ್ ಸಾಹ (68 ರನ್, 38 ಎಸೆತ, 11 ಬೌಂಡರಿ, 1 ಸಿಕ್ಸರ್) ಬಿರುಸಿನ ಆಟದಿಂದ ಉತ್ತಮ ಆರಂಭ ಪಡೆಯಿತು. ಕೊನೆಯಲ್ಲಿ ತೆವಾಟಿಯ-ರಶೀದ್ ಖಾನ್ ಮುರಿಯದ 6ನೇ ವಿಕೆಟ್‌ಗೆ 24 ಎಸೆತಗಳಲ್ಲಿ 59 ರನ್ ಸೇರಿಸಿದ ಪರಿಣಾಮ 5 ವಿಕೆಟ್‌ಗೆ 199 ರನ್ ಗಳಿಸಿ ಗೆಲುವು ಕಂಡಿತು. ಉಭಯ ತಂಡಗಳೂ ಸಂಪೂರ್ಣ 20 ಓವರ್ ಆಡಿದ್ದು ವಿಶೇಷ.
IPL 2022 Points Table: 14 ಅಂಕದೊಂದಿಗೆ ಗುಜರಾತ್ ಪ್ಲೇ ಆಫ್ ಹಾದಿ ಸುಗಮ: ಐಪಿಎಲ್ 2022 ಪಾಯಿಂಟ್ ಟೇಬಲ್ ಹೇಗಿದೆ?
Hardik Pandya: ರೋಚಕ ಪಂದ್ಯ ಮುಗಿದ ಬಳಿಕ ಹಾರ್ದಿಕ್-ರಶೀದ್ ಖಾನ್ ಆಡಿದ ಮಾತುಗಳೇನು ಕೇಳಿ