Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashid Khan: 6 ಎಸೆತಗಳಲ್ಲಿ 22 ರನ್: GT vs SRH ನಡುವಣ ಕೊನೆಯ ರೋಚಕ ಓವರ್ ಹೇಗಿತ್ತು ನೋಡಿ

Rahul Tewatia, GT vs SRH IPL 2022: ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೊನೆಯ 6 ಎಸೆತಗಳಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಗೆಲ್ಲಲು 22 ರನ್​ಗಳು ಬೇಕಾಗಿದ್ದಾಗ ರಾಹುಲ್ ತೇವಾಟಿಯ ಹಾಗೂ ರಶೀದ್ ಖಾನ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೊನೆಯ ಓವರ್​ನಲ್ಲಿ 4 ಸಿಕ್ಸರ್ ಸಿಡಿಸಿ ತಂಡಕ್ಕೆ ಊಹಿಸಲಾಗದ ರೀತಿಯಲ್ಲಿ ಜಯ ತಂದಿಟ್ಟರು.

Rashid Khan: 6 ಎಸೆತಗಳಲ್ಲಿ 22 ರನ್: GT vs SRH ನಡುವಣ ಕೊನೆಯ ರೋಚಕ ಓವರ್ ಹೇಗಿತ್ತು ನೋಡಿ
Rashid Khan and Rahul Tewatia SRH vs GT
Follow us
TV9 Web
| Updated By: Vinay Bhat

Updated on: Apr 28, 2022 | 7:39 AM

ಎರಡೂ ತಂಡದ ಆಟಗಾರರು ಭರ್ಜರಿ ಫಾರ್ಮ್​​ನಲ್ಲಿದ್ದರೆ ಎರಡು ಬಲಿಷ್ಠ ಟೀಮ್​ಗಳ ನಡುವಣ ಕಾದಾಟ ಹೇಗಿರುತ್ತೆ ಎಂಬುದಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ಬುಧವಾರ ನಡೆದ ಗುಜರಾತ್ ಟೈಟಾನ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ (GT vs SRH) ನಡುವಣ ಪಂದ್ಯವೇ ಸಾಕ್ಷಿ. ಕೊನೆಯ 6 ಎಸೆತಗಳಲ್ಲಿ ಜಿಟಿ ತಂಡಕ್ಕೆ ಗೆಲ್ಲಲು 22 ರನ್​ಗಳು ಬೇಕಾಗಿದ್ದಾಗ ರಾಹುಲ್ ತೇವಾಟಿಯ (Rahul Tewatia) ಹಾಗೂ ರಶೀದ್ ಖಾನ್ (Rashid Khan) ಸ್ಫೋಟಕ ಬ್ಯಾಟಿಂಗ್ ನಡೆಸಿ ಕೊನೆಯ ಓವರ್​ನಲ್ಲಿ 4 ಸಿಕ್ಸರ್ ಸಿಡಿಸಿ ತಂಡಕ್ಕೆ ಊಹಿಸಲಾಗದ ರೀತಿಯಲ್ಲಿ ಜಯ ತಂದಿಟ್ಟರು. ಹೈ ಸ್ಕೋರ್ ಗೇಮ್​​ನಲ್ಲಿ 5 ವಿಕೆಟ್​ಗಳ ರೋಚಕ ಗೆಲುವು ಕಂಡ ಹಾರ್ದಿಕ್ ಪಾಂಡ್ಯ ಆಡಿದ ಎಂಟು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಸೋಲು ಏಳರಲ್ಲಿ ಗೆಲುವು ಕಂಡು ಪ್ಲೇ ಆಫ್ ಸ್ಥಾನವನ್ನು ಖಚಿತ ಪಡಿಸಿದೆ. ಇತ್ತ ಎಸ್​ಆರ್​ಹೆಚ್ ಪರ ಉಮ್ರಾನ್ ಮಲಿಕ್ 5 ವಿಕೆಟ್ ಕಿತ್ತು ಮಾರಕ ದಾಳಿ ಸಂಘಟಿಸಿದರೂ ಪ್ರಯೋಜನಕ್ಕೆ ಬರಲಿಲ್ಲ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ಪರ ಆರಂಭಿಕ ಆಟಗಾರರಾಗಿ ಅಭಿಷೇಕ್ ಶರ್ಮಾ ಮತ್ತು ನಾಯಕ ಕೇನ್ ವಿಲಿಯಮ್ಸನ್ ಕಣಕ್ಕಿಳಿದರು. ಈ ಪೈಕಿ ವಿಲಿಯಮ್ಸನ್ 5 ರನ್ ಗಳಿಸಿ ಔಟ್ ಆದರೆ, ಅಭಿಷೇಕ್ ಶರ್ಮಾ 42 ಎಸೆತಗಳಲ್ಲಿ 65 ರನ್ ಗಳಿಸಿ ಅಬ್ಬರಿಸಿದರು. ಇನ್ನುಳಿದಂತೆ ರಾಹುಲ್‌ ತ್ರಿಪಾಠಿ 16 ರನ್, ಏಡನ್ ಮಾರ್ಕ್ರಮ್ 56 ರನ್, ನಿಕೋಲಸ್ ಪೂರನ್ 3 ರನ್, ವಾಷಿಂಗ್ಟನ್ ಸುಂದರ್ 3 ರನ್ ಗಳಿಸಿದರೆ, ಮಾರ್ಕೊ ಜನ್ಸೆನ್ ಅಜೇಯ 8 ರನ್ ಮತ್ತು ಶಶಾಂಕ್ ಸಿಂಗ್ ಅಜೇಯ 25 ರನ್ ಗಳಿಸಿದರು.

ಶಶಾಂಕ್ ಶರ್ಮಾ ಫೆರ್ಗ್ಯುಸನ್ ಎಸೆದ ಅಂತಿಮ ಓವರ್‌ನ ಕೊನೆಯ 3 ಎಸೆತಗಳಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ಅಬ್ಬರಿಸಿದರು. ಒಟ್ಟು 6 ಎಸೆತಗಳಲ್ಲಿ ಅಜೇಯ 25 ರನ್ ಬಾರಿಸಿದರು. ಈ ಮೂಲಕ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 195 ರನ್ ಗಳಿಸಿತು. ಜಿಟಿ ಪರ ದುಬಾರಿಯಾದರೂ ಮೊಹಮ್ಮದ್ ಶಮಿ 3 ವಿಕೆಟ್ ಕಿತ್ತರು.

196 ರನ್​ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ವೃದ್ಧಿಮಾನ್ ಸಾಹ ಹಾಗೂ ಶುಭ್ಮನ್ ಗಿಲ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 46 ಎಸೆತಗಳಲ್ಲಿ 69 ರನ್ ಪೇರಿಸಿದರು. ಈ ಹಂತದಲ್ಲಿ ದಾಳಿಗಿಳಿದ ಸ್ಪೀಡ್ ಸ್ಟಾರ್ ಉಮ್ರಾನ್ ಮಲಿಕ್ ಡಬಲ್ ಆಘಾತ ನೀಡಿದರು. ಗಿಲ್ (22) ಜೊತೆಗೆ ನಾಯಕ ಹಾರ್ದಿಕ್ ಪಾಂಡ್ಯರನ್ನು (10) ಪೆವಿಲಿಯನ್‌ಗೆ ಅಟ್ಟಿದರು. ಬಳಿಕ ಸಾಹ 28 ಅವರಿಗೆ ಡೇವಿಡ್ ಮಿಲ್ಲರ್ ಅವರಿಂದ ಉತ್ತಮ ಬೆಂಬಲ ದೊರಕಿತು. ಇನ್ನಿಂಗ್ಸ್‌ನ 14ನೇ ಓವರ್‌ನಲ್ಲಿ ಮಗದೊಮ್ಮೆ ದಾಳಿಗಿಳಿದ ಮಲಿಕ್ ಸಾಹರನ್ನು ಕ್ಲೀನ್ ಬೌಲ್ಡ್ ಮಾಡಿದರು. 38 ಎಸೆತಗಳನ್ನು ಎದುರಿಸಿದ ಸಹಾ 11 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 68 ರನ್ ಗಳಿಸಿದರು.

ಗುಜರಾತ್ ಒಂದು ಹಂತದಲ್ಲಿ 16 ಓವರ್‌ಗಳಲ್ಲಿ 140 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೊಳಗಾಗಿತ್ತು. ಆದರೆ ಮುರಿಯದ ಆರನೇ ವಿಕೆಟ್‌ಗೆ 24 ಎಸೆತಗಳಲ್ಲಿ 59 ರನ್‌ಗಳ ಜೊತೆಯಾಟ ಕಟ್ಟಿದ ತೆವಾಟಿಯಾ ಹಾಗೂ ರಶೀದ್, ಹೈದರಾಬಾದ್ ಕೈಯಿಂದ ಗೆಲುವನ್ನು ಅಕ್ಷರಶಃ ಕಸಿದುಕೊಂಡರು. ತೇವಾಟಿಯಾ 40* ರನ್‌(21 ಬಾಲ್‌, 4 ಬೌಂಡರಿ, 2 ಸಿಕ್ಸ್‌) ಹಾಗೂ ರಶೀದ್‌ ಖಾನ್‌ 31* ರನ್‌(11 ಬಾಲ್‌, 4 ಸಿಕ್ಸ್‌) ಸ್ಪೋಟಕ ಆಟವಾಡಿದರು. ಪ್ರಮುಖವಾಗಿ ಕೊನೆ ಓವರ್‌ನಲ್ಲಿ ಗೆಲುವಿಗಾಗಿ 22 ರನ್‌ಗಳ ಅಗತ್ಯವಿತ್ತು. ಈ ವೇಳೆ ಬೌಲಿಂಗ್‌ ದಾಳಿಗಿಳಿದ ಮಾರ್ಕೋ ಜಾನ್ಸನ್‌ ಅವರಿಗೆ, ತೇವಾಟಿಯಾ ಹಾಗೂ ರಶೀದ್‌ (6, 1, 6, 0, 6, 6) 25 ರನ್‌ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

DC vs KKR Prediction Playing XI: ಸೋಲಿನ ಸುಳಿಯಲ್ಲಿರುವ ಉಭಯ ತಂಡಗಳಲ್ಲಿ ಬದಲಾವಣೆ ಖಚಿತ! ಯಾರಿಗೆ ಅವಕಾಶ?

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್