IPL 2022: ಕೊರೋನಾ ಕಾಣಿಸಿಕೊಂಡರೂ ಐಪಿಎಲ್ ನಡೆಯುತ್ತೆ: ಇದಕ್ಕೂ ಇದೆ ಹೊಸ ನಿಯಮ
IPL 2022: ಕೊರೋನಾ ಪಾಸಿಟಿವ್ ಕಂಡು ಬಂದರೂ ಈ ಬಾರಿ ಐಪಿಎಲ್ ಅನ್ನು ಮುಂದೂಡುವ ಸಾಧ್ಯತೆ ತುಂಬಾ ಕಡಿಮೆ. ಏಕೆಂದರೆ ಈ ಬಾರಿ ಕೊರೋನಾತಂಕದ ಕಾರಣ ಬಿಸಿಸಿಐ ಹೊಸ ನಿಯಮಗಳನ್ನು ರೂಪಿಸಿದೆ.
IPL 2022: ಐಪಿಎಲ್ನಲ್ಲಿ ಮತ್ತೆ ಕೊರೋನಾ ಆತಂಕ ಎದುರಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಮೂವರಲ್ಲಿ ಕೊರೋನಾ ಸೋಂಕು ಕಂಡು ಬಂದಿದೆ. ಇವರಲ್ಲಿ ಇಬ್ಬರು ತಂಡದ ಸಿಬ್ಬಂದಿಗಳಾದರೆ, ಒಬ್ಬರು ವಿದೇಶಿ ಆಟಗಾರ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಡೆಲ್ಲಿ ತಂಡದ ಉಳಿದ ಆಟಗಾರರನ್ನು ರ್ಯಾಪಿಡ್ ಟೆಸ್ಟ್ಗೆ ಒಳಪಡಿಸಲಾಗಿದೆ. ಸದ್ಯ ಪುಣೆಗೆ ತೆರಳಬೇಕಿದ್ದ ರಿಷಭ್ ಪಂತ್ ಪಡೆ ಕ್ವಾರಂಟೈನ್ನಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂದಿನ ಪಂದ್ಯವನ್ನು ಏಪ್ರಿಲ್ 20 ರಂದು ಪಂಜಾಬ್ ಕಿಂಗ್ಸ್ ವಿರುದ್ದ ಆಡಲಿದೆ. ಆದರೆ ಅದಕ್ಕೂ ಮುನ್ನ ಆಟಗಾರರ ಕೋವಿಡ್ ಟೆಸ್ಟ್ ರಿಪೋರ್ಟ್ ಬರಲಿದ್ದು, ಆ ಬಳಿಕ ಮುಂದಿನ ಪಂದ್ಯ ನಡೆಯಲಿದೆಯಾ ಎಂಬುದು ನಿರ್ಧಾರವಾಗಲಿದೆ.
ಆದರೆ ಆಟಗಾರರಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದರೂ ಈ ಬಾರಿ ಐಪಿಎಲ್ ಅನ್ನು ಮುಂದೂಡುವ ಸಾಧ್ಯತೆ ತುಂಬಾ ಕಡಿಮೆ. ಏಕೆಂದರೆ ಈ ಬಾರಿ ಕೊರೋನಾತಂಕದ ಕಾರಣ ಬಿಸಿಸಿಐ ಹೊಸ ನಿಯಮಗಳನ್ನು ರೂಪಿಸಿದೆ. ಈ ನಿಯಮದಂತೆ ಒಂದು ತಂಡದಲ್ಲಿ 12 ಆಟಗಾರರಿದ್ದರೂ ಪಂದ್ಯ ನಡೆಯಲಿದೆ. ಅಂದರೆ ಪ್ಲೇಯಿಂಗ್ 11 ಗೆ ಆಟಗಾರರಿದ್ದು, ಒಬ್ಬ ಬದಲಿ ಆಟಗಾರನಿದ್ದರೆ ಪಂದ್ಯವನ್ನು ನಡೆಸಲಾಗುತ್ತದೆ.
ಏನಿದು 12 ಆಟಗಾರರ ನಿಯಮ? ಪ್ಲೇಯಿಂಗ್ನಲ್ಲಿ 11 ಆಟಗಾರರು (ಅದರಲ್ಲಿ ಏಳು ಮಂದಿ ಭಾರತೀಯ ಆಟಗಾರರು ಇರಬೇಕು) ಮತ್ತು ಒಬ್ಬ ಬದಲಿ ಆಟಗಾರ ಸೇರಿದಂತೆ ಒಟ್ಟು ಒಂದು ತಂಡದಲ್ಲಿ 12 ಆಟಗಾರರು ಇರಬೇಕು. ಒಂದು ವೇಳೆ ಕೊರೋನಾ ಸೋಂಕಿಗೆ ಒಳಗಾಗಿ ಬಹುತೇಕ ಆಟಗಾರರು ಕ್ವಾರಂಟೈನ್ ಒಳಗಾದರೆ, ಆ ತಂಡದಲ್ಲಿ 12 ಆಟಗಾರರು ಇಲ್ಲದಿದ್ದರೆ ಅಂದಿನ ಪಂದ್ಯವನ್ನು ಕೈಬಿಡಲಾಗುತ್ತದೆ. ಅಂದರೆ ಒಂದು ತಂಡದಲ್ಲಿ 12 ಆಟಗಾರರು ಇಲ್ಲದಿದ್ದರೆ ಮಾತ್ರ ಕೊರೋನಾ ಕಾರಣದಿಂದ ಪಂದ್ಯವನ್ನು ಮುಂದೂಡಲಾಗುತ್ತದೆ.
ಅಷ್ಟೇ ಅಲ್ಲದೆ ಆ ತಂಡದ ಪಂದ್ಯವನ್ನು ಮುಂದೂಡಿ ಬೇರೊಂದು ದಿನ ಆಡಿಸಲು ಬಿಸಿಸಿಐ ನಿಯಮ ರೂಪಿಸಿದೆ. ಅದರಂತೆ ಕೋವಿಡ್ ಸೋಂಕು ಕಾಣಿಸಿಕೊಂಡು ಸಮಸ್ಯೆ ಎದುರಾದರೆ, ಒಂದು ತಂಡದಲ್ಲಿ ಬದಲಿ ಆಟಗಾರ ಸೇರಿ ಒಟ್ಟು 12 ಆಟಗಾರರು ಇದ್ದರೆ ಪಂದ್ಯ ನಡೆಯುವುದು ಖಚಿತ. 12 ಆಟಗಾರರು ಲಭ್ಯವಿಲ್ಲದಿದ್ದರೆ ಆ ಪಂದ್ಯವನ್ನು ಮರುವೇಳಾಪಟ್ಟಿಯಲ್ಲಿ ಆಯೋಜಿಸಲು ಐಪಿಎಲ್ ಟೆಕ್ನಿಕಲ್ ಸಮಿತಿ ಕ್ರಮ ಕೈಗೊಳ್ಳಲಿದೆ. ಹೀಗಾಗಿ ಕೊರೋನಾತಂಕ ಎದುರಾದರೂ ತಂಡದಲ್ಲಿ 12 ಆಟಗಾರರಿದ್ದರೆ ಪಂದ್ಯ ನಡೆಯುವುದು ಖಚಿತ ಎಂದೇ ಹೇಳಬಹುದು.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ