ಟೀಮ್ ಇಂಡಿಯಾ ಕಳೆದ ಕೆಲ ವರ್ಷಗಳಿಂದ ವೇಗದ ಬೌಲರ್ನನ್ನು ಎದುರು ನೋಡುತ್ತಿದೆ. ಇನ್ಸ್ವಿಂಗ್, ಔಟ್ ಸ್ವಿಂಗ್ ಮೂಲಕ ಜಾದೂ ಮಾಡುವ ಅನೇಕ ಬೌಲರ್ಗಳು ಭಾರತ ತಂಡದಲ್ಲಿ ಕಾಣಿಸಿಕೊಂಡರೂ ಬೌನ್ಸರ್ ಎಸೆಯುವ ಘಾತಕ ವೇಗಿಯಾಗಿ ಯಾರು ಕೂಡ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿರಲಿಲ್ಲ. ಅದರಲ್ಲೂ ಅಂತಹ ಬೌಲರ್ಗಳು ಭಾರತದಲ್ಲಿಲ್ಲ ಎಂಬ ಮಾತುಗಳು ಆಗಾಗ್ಗೆ ಕೇಳಿ ಬರುತ್ತಿತ್ತು. ಆದರೀಗ ಈ ಕೊರತೆಯನ್ನು ನೀಗಿಸುವ ಹೊಸ ಭರವಸೆ ಹುಟ್ಟು ಹಾಕಿದ್ದಾರೆ ಜಮ್ಮು ಕಾಶ್ಮೀರದ ಯುವ ವೇಗಿ ಉಮ್ರಾನ್ ಮಲಿಕ್. ಈ ಬಾರಿ ಮೆಗಾ ಹರಾಜಿಗೂ ಮುನ್ನ ಉಮ್ರಾನ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ತಂಡವು 4 ಕೋಟಿ ನೀಡಿ ರಿಟೈನ್ ಮಾಡಿಕೊಂಡು ಅಚ್ಚರಿ ಮೂಡಿಸಿತು. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ದದ ಮೊದಲ ಪಂದ್ಯದಲ್ಲಿ ಮೊದಲ ಓವರ್ ಎಸೆದ ಮಲಿಕ್ ಬೌಲಿಂಗ್ ನೋಡಿ ಅಚ್ಚರಿಗೊಂಡಿದ್ದರು. ಏಕೆಂದರೆ ಉಮ್ರಾನ್ ಮಲಿಕ್ ತನ್ನ ಮೊದಲ ಓವರ್ನಲ್ಲಿ ನೀಡಿದ್ದು ಬರೋಬ್ಬರಿ 21 ರನ್ಗಳು.
ಆದರೆ ಆ ಬಳಿಕ ಮಾಡಿದ 3 ಓವರ್ಗಳಲ್ಲಿ ನೀಡಿದ್ದು ಕೇವಲ 18 ರನ್ ಮಾತ್ರ. ಅಂದರೆ 21 ರನ್ ನೀಡಿದ ಬಳಿಕ ಅದ್ಭುತವಾಗಿ ಕಂಬ್ಯಾಕ್ ಮಾಡಿದ ಉಮ್ರಾನ್ 3 ಓವರ್ನಲ್ಲಿ 18 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಈ ವೇಳೆ 150ರ ವೇಗದಲ್ಲಿ ಚೆಂಡೆಸೆದ ಮಲಿಕ್ ಬ್ಯಾಟ್ಸ್ಮನ್ಗಳನ್ನು ಇಕ್ಕಟಿಗೆ ಸಿಲುಕಿಸಿದ್ದರು. ಅದರಲ್ಲೂ ದೇವದತ್ ಪಡಿಕ್ಕಲ್ ಅವರನ್ನು ಕಣ್ಣು ಬಿಡುವಷ್ಟರಲ್ಲಿ ಕ್ಲೀನ್ ಬೌಲ್ಡ್ ಮಾಡುವ ಎಲ್ಲರನ್ನು ನಿಬ್ಬೆರಗಾಗಿಸಿದ್ದರು.
WHAT A BOWL UMRAN MALIK pic.twitter.com/9lemvZ8SGK
— gautam (@itzgautamm) March 29, 2022
ಇದೀಗ ಉಮ್ರಾನ್ ಮಲಿಕ್ ಪಡಿಕ್ಕಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಅನೇಕ ಮಾಜಿ ಕ್ರಿಕೆಟಿಗರು 22 ವರ್ಷದ ಯುವ ವೇಗಿಯ 150ರ ವೇಗಕ್ಕೆ ಮಾರುಹೋಗಿದ್ದಾರೆ. ಅಷ್ಟೇ ಅಲ್ಲದೆ ಉಮ್ರಾನ್ ಮಲಿಕ್ ಇಂತಹ ಅದ್ಭುತ ಬೌಲಿಂಗ್ ಪ್ರದರ್ಶನ ಮುಂದುವರೆಸಿದರೆ ಟೀಮ್ ಇಂಡಿಯಾದ ವೇಗದ ಬೌಲರ್ ಕೊರತೆ ನೀಗಲಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ 150.ಕಿ.ಮೀ ವೇಗದಲ್ಲಿ ಸತತವಾಗಿ ಬೌಲಿಂಗ್ ಮಾಡುವ ಮೂಲಕ ಉಮ್ರಾನ್ ಮಲಿಕ್ ಇದೀಗ ಹೊಸ ಭರವಸೆ ಹುಟ್ಟುಹಾಕಿದ್ದಾರೆ.
ಟೀಮ್ ಇಂಡಿಯಾದ ನೆಟ್ ಬೌಲರ್:
22 ವರ್ಷದ ಉಮ್ರಾನ್ ಮಲಿಕ್ ಕಳೆದ ಐಪಿಎಲ್ ಸೀಸನ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಟಿ ನಟರಾಜನ್ ಕೊರೋನಾ ಪಾಸಿಟಿವ್ ಆದ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದಾದ ಬಳಿಕ ಭರ್ಜರಿ ಬೌಲಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ವಿಶೇಷ ಎಂದರೆ ಉಮ್ರಾನ್ ವೇಗದ ಬೌಲಿಂಗ್ಗೆ ವಿರಾಟ್ ಕೊಹ್ಲಿ ಅಚ್ಚರಿ ವ್ಯಕ್ತಪಡಿಸಿದ್ದರು. ಆ ಬಳಿಕ ಯುವ ವೇಗಿಯನ್ನು ಟಿ20 ವಿಶ್ವಕಪ್ ವೇಳೆ ಟೀಮ್ ಇಂಡಿಯಾದ ನೆಟ್ ಬೌಲರ್ ಆಗಿ ಆಯ್ಕೆ ಮಾಡಲಾಗಿತ್ತು.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು