AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022 Points Table: ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ 1 ಯಾರು? ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?

IPL 2022 Orange Cap- Purple Cap: ಮಾರ್ಚ್ 26ರ ಶನಿವಾರದಂದು ಪ್ರಾರಂಭವಾದ ಪಂದ್ಯಾವಳಿಯಲ್ಲಿ, ಎಲ್ಲಾ 10 ತಂಡಗಳು ಮಾರ್ಚ್ 29 ಮಂಗಳವಾರದವರೆಗೆ ನಾಲ್ಕು ದಿನಗಳ ಅವಧಿಯಲ್ಲಿ ತಮ್ಮ ಮೊದಲ ಪಂದ್ಯಗಳನ್ನು ಆಡಿವೆ. ತಂಡಗಳ ಪಾಯಿಂಟ್ಸ್ ಪಟ್ಟಿ, ಆರೆಂಜ್ ಕ್ಯಾಪ್ ಹಾಗೂ ಪರ್ಪಲ್ ಕ್ಯಾಪ್ ಕುರಿತ ಮಾಹಿತಿ ಇಲ್ಲಿದೆ.

IPL 2022 Points Table: ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ 1 ಯಾರು? ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?
ಪ್ರಾತಿನಿಧಿಕ ಚಿತ್ರ
TV9 Web
| Updated By: shivaprasad.hs|

Updated on:Mar 30, 2022 | 9:18 AM

Share

IPL 2022 ಋತುವಿನ (IPL 2022) ಭರ್ಜರಿಯಾಗಿ ಆರಂಭವಾಗಿದ್ದು, ಹಲವು ಅನಿರೀಕ್ಷಿತ ಫಲಿತಾಂಶಗಳು ದಾಖಲಾಗಿವೆ. ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿದ್ದ ತಂಡಗಳು ಸೋತು ನೆಲಕಚ್ಚಿವೆ. ಕೆಲವು ತಂಡಗಳು ಭರ್ಜರಿ ಆರಂಭ ಪಡೆದಿದ್ದು, ಉಳಿದ ತಂಡಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿವೆ. ಗುಜರಾತ್ ಟೈಟಾನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್​​ ತಂಡಗಳ ಪ್ರವೇಶದಿಂದ ತಂಡಗಳ ಸಂಖ್ಯೆ ಹತ್ತಕ್ಕೇರಿದ್ದು, ಈವರೆಗೆ ಒಟ್ಟು 5 ಪಂದ್ಯಗಳು ನಡೆದಿವೆ. ಮಾರ್ಚ್ 26ರ ಶನಿವಾರದಂದು ಪ್ರಾರಂಭವಾದ ಪಂದ್ಯಾವಳಿಯಲ್ಲಿ, ಎಲ್ಲಾ 10 ತಂಡಗಳು ಮಾರ್ಚ್ 29 ಮಂಗಳವಾರದವರೆಗೆ ನಾಲ್ಕು ದಿನಗಳ ಅವಧಿಯಲ್ಲಿ ತಮ್ಮ ಮೊದಲ ಪಂದ್ಯಗಳನ್ನು ಆಡಿವೆ. ಇದರಲ್ಲಿ ಕೆಲವು ರೋಚಕ ಪಂದ್ಯಗಳಿಗೂ ವೀಕ್ಷಕರು ಸಾಕ್ಷಿಯಾಗಿದ್ದಾರೆ. ಈಗ ಎಲ್ಲಾ ತಂಡಗಳು ತಮ್ಮ ತಮ್ಮ ಮೊದಲಪಂದ್ಯ ಗಳನ್ನು ಆಡಿದ್ದು, ಪಾಯಿಂಟ್ಸ್​ ಪಟ್ಟಿ, ಆರೆಂಜ್ ಕ್ಯಾಪ್ ಹಾಗೂ ಪರ್ಪಲ್ ಕ್ಯಾಪ್ ವಿವರ ಇಲ್ಲಿದೆ.

ಐಪಿಎಲ್​ 2022 ಪಾಯಿಂಟ್ಸ್ ಪಟ್ಟಿ:

ಮೊದಲ ಸುತ್ತಿನ ಪಂದ್ಯ ದ ನಂತರ, ಕೋಲ್ಕತ್ತಾ ನೈಟ್​ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಪಂದ್ಯಗಳನ್ನು ಗೆದ್ದು ತಮ್ಮ ಖಾತೆಯಲ್ಲಿ ಎರಡು ಅಂಕಗಳನ್ನು ಹೊಂದಿವೆ. ನೆಟ್​​ ರನ್​ರೇಟ್ ಆಧಾರದ ಮೇಲೆ ಈಗ ಪಾಯಿಂಟ್ಸ್​​ ಪಟ್ಟಿಯಲ್ಲಿ ಸ್ಥಾನ ನಿರ್ಧಾರಿತವಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡವು ಸನ್​ರೈಸರ್ಸ್​​ ಹೈದರಾಬಾದ್ ತಂಡವನ್ನು 61 ರನ್​ಗಳ ಬೃಹತ್ ಅಂತರದಿಂದ ಸೋಲಿಸಿದ್ದರಿಂದ ಅತ್ಯುತ್ತಮ ನೆಟ್​​ ರನ್​ರೇಟ್ (+3.050) ಹೊಂದಿದ್ದು, ಮೊದಲ ಸ್ಥಾನದಲ್ಲಿದೆ.

ಎರಡನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇದ್ದು, +0.914 ನೆಟ್​​ ರನ್​ರೇಟ್ ಹೊಂದಿದೆ. +0.697 ನೆಟ್​​ರನ್​ರೇಟ್​ನೊಂದಿಗೆ ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಮೂರನೇ ಸ್ಥಾನದಲ್ಲಿದೆ. ಕೆಕೆಆರ್ ನೆಟ್​ರನ್​ರೇಟ್ ಕೂಡ ಉತ್ತಮವಾಗಿದ್ದು, +0.639 ಹೊಂದಿದ್ದು ನಾಲ್ಕನೇ ಸ್ಥಾನದಲ್ಲಿದೆ. ಗುಜರಾತ್ ಟೈಟಾನ್ಸ್​​ 5ನೇ ಸ್ಥಾನ ಪಡೆದಿದ್ದು, +0.286 ನೆಟ್​​ರನ್​ರೇಟ್ ಹೊಂದಿದೆ.

ಉಳಿದ ತಂಡಗಳು ಇನ್ನಷ್ಟೇ ಖಾತೆ ತೆರೆಯಬೇಕಿದ್ದು, ಆರ್​ಸಿಬಿ -0.697 ನೆಟ್​​ರನ್​ರೇಟ್​ನೊಂದಿಗೆ 8ನೇ ಸ್ಥಾನ ಪಡೆದಿದೆ. ಲಕ್ನೋ 6ನೇ ಸ್ಥಾನ, ಚೆನ್ನೈ 7ನೇ ಸ್ಥಾನ, ಮುಂಬೈ 9ನೇ ಸ್ಥಾನದಲ್ಲಿವೆ. ರಾಜಸ್ಥಾನ್ ವಿರುದ್ಧದ ಹೀನಾಯ ಸೋಲಿನ ನಂತರ ಸನ್​ರೈಸರ್ಸ್​​ ಕೊನೆಯ ಸ್ಥಾನ ಪಡೆದಿದ್ದು, ನೆಟ್​ರನ್​ರೇಟ್ -3.050 ಇದೆ.

ಆರೆಂಜ್ ಕ್ಯಾಪ್ ಯಾರಿಗೆ?

5ನೇ ಪಂದ್ಯದ ನಂತರ ಆರೆಂಜ್ ಕ್ಯಾಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ತಾನ ಫಾಫ್ ಡು ಪ್ಲೆಸಿಸ್ ಬಳಿಯೇ ಉಳಿದುಕೊಂಡಿದೆ. ಮೊದಲ ಪಂದ್ಯದಲ್ಲಿ 88 ರನ್​ಗಳಿಸಿದ್ದ ಅವರು, ಇಂದು (ಮಾ.30) ನಡೆಯುವ ಪಂದ್ಯದಲ್ಲಿ ಮತ್ತಷ್ಟು ಮೊತ್ತ ಪೇರಿಸುವ ನಿರೀಕ್ಷೆ ಇದೆ. ಇಶಾನ್ ಕಿಶನ್ 81 ರನ್, ಏಡನ್ ಮರ್ಕ್ರಮ್ 57 ರನ್, ಸಂಜು ಸ್ಯಾಮ್ಸನ್ 55 ರನ್, ದೀಪಕ್ ಹೂಡ 55 ರನ್​ಗಳಿಸಿ ನಂತರದ ಸ್ಥಾನಗಳಲ್ಲಿದ್ದಾರೆ.

ಪರ್ಪಲ್ ಕ್ಯಾಪ್ ಯಾರಿಗೆ?

ಭರ್ಜರಿ ಕಮ್​ಬ್ಯಾಕ್ ಮಾಡಿರುವ ಪ್ರತಿಭಾವಂತ ಸ್ಪಿನ್ನರ್ ಕುಲದೀಪ್ ಯಾದವ್ 3 ವಿಕೆಟ್​ಗಳೊಂದಿಗೆ ಪರ್ಪಲ್ ಕ್ಯಾಪ್ ತೊಟ್ಟಿದ್ದಾರೆ. ಈ ಪಟ್ಟಿಯಲ್ಲಿ ಡ್ವೇನ್ ಬ್ರಾವೋ, ಯಜುವೇಂದ್ರ ಚಾಹಲ್, ಮೊಹಮ್ಮದ್ ಶಮಿ ಹಾಗೂ ಬಸಿಲ್ ಥಂಪಿ 3 ವಿಕೆಟ್​ಗಳನ್ನೇ ಪಡೆದಿದ್ದು, ನಂತರದ ಸ್ಥಾನಗಳಲ್ಲಿದ್ದಾರೆ. ಸರಾಸರಿ ಆಧಾರದಲ್ಲಿ ಪ್ರಸ್ತುತ ಕುಲದೀಪ್ ಯಾದವ್ ಮೊದಲ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:

RR vs SRH: ಸನ್​ರೈಸರ್ಸ್​​ ವಿರುದ್ಧ ಭರ್ಜರಿ ಜಯಗಳಿಸಿ ​ವಿಶೇಷ ದಾಖಲೆ ಬರೆದ ರಾಜಸ್ಥಾನ್​; ಉಳಿದ ತಂಡಗಳಿಗೆ ನಡುಕ ಶುರು

IPL 2022: ಐಪಿಎಲ್​ನಲ್ಲಿ ಕಠಿಣ ನಿಯಮ ಜಾರಿ ಮಾಡಲು ಮುಂದಾದ ಬಿಸಿಸಿಐ

Published On - 9:16 am, Wed, 30 March 22