IPL 2022: RCB ಪಾಲಿಗೆ ನಿರ್ಣಾಯಕ ಪಂದ್ಯ

RCB vs PBKS: ಉಭಯ ತಂಡಗಳು ಇದುವರೆಗೆ 29 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಪಂಜಾಬ್ ಕಿಂಗ್ಸ್ ಗೆದ್ದಿರುವುದು ಬರೋಬ್ಬರಿ 16 ಬಾರಿ. ಹಾಗೆಯೇ ಆರ್​ಸಿಬಿ ಗೆದ್ದಿದ್ದು ಕೇವಲ 13 ಬಾರಿ ಮಾತ್ರ.

IPL 2022: RCB ಪಾಲಿಗೆ ನಿರ್ಣಾಯಕ ಪಂದ್ಯ
RCB
Updated By: ಝಾಹಿರ್ ಯೂಸುಫ್

Updated on: May 12, 2022 | 10:34 PM

ಐಪಿಎಲ್​ನ 60ನೇ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್ (RCB vs PBKS) ಮುಖಾಮುಖಿಯಾಗಲಿದೆ. ವಿಶೇಷ ಎಂದರೆ ಉಭಯ ತಂಡಗಳಿಗೂ ಇದು ನಿರ್ಣಾಯಕ ಪಂದ್ಯ. ಏಕೆಂದರೆ ಈ ಪಂದ್ಯದಲ್ಲಿ ಆರ್​ಸಿಬಿ ಗೆದ್ದರೆ ಪ್ಲೇಆಫ್​ ಹಾದಿ ಸುಲಭವಾಗಲಿದೆ. ಆದರೆ ಅತ್ತ ಪಂಜಾಬ್ ಕಿಂಗ್ಸ್ ಗೆದ್ದರೆ ಪ್ಲೇಆಫ್ ರೇಸ್​ನಲ್ಲೇ ಉಳಿಯಲಿದೆ. ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ, ಪಂಜಾಬ್ ಕಿಂಗ್ಸ್​ಗೆ​ ಇದಲ್ಲದೆ ಇನ್ನೂ 2 ಪಂದ್ಯಗಳಿವೆ. ಅಂದರೆ ಆರ್​ಸಿಬಿ ಈ ಪಂದ್ಯದಲ್ಲಿ ಸೋತು ಮುಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ದ ಗೆದ್ದರೂ, 16 ಪಾಯಿಂಟ್ ಆಗಲಿದೆ. ಆದರೆ ಇಲ್ಲಿ ಪಂಜಾಬ್ ಕಿಂಗ್ಸ್​ಗೆ ಇನ್ನು 2 ಪಂದ್ಯಗಳಿರುವ ಕಾರಣ, ಆ ಪಂದ್ಯಗಳನ್ನು ಗೆದ್ದು 16 ಪಾಯಿಂಟ್ಸ್​ಗಳಿಸಿ ನೆಟ್​ ರನ್​ರೇಟ್ ಮೂಲಕ ಪ್ಲೇಆಫ್​ಗೇರಬಹುದು.

ಹೀಗಾಗಿ ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್​ ಪಾಲಿಗೆ ಇದು ನಿರ್ಣಾಯಕ ಪಂದ್ಯ. ಏಕೆಂದರೆ ಆರ್​ಸಿಬಿ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಪಂಜಾಬ್ ಕಿಂಗ್ಸ್​ ತಂಡವನ್ನು ಪ್ಲೇಆಫ್ ರೇಸ್​ನಿಂದಲೇ ಹೊರಗಿಡಬಹುದು. ಏಕೆಂದರೆ ಉಳಿದ 2 ಮ್ಯಾಚ್​ಗಳನ್ನು ಪಂಜಾಬ್ ಗೆದ್ದರೂ 16 ಪಾಯಿಂಟ್ ಹೊಂದಿರುವ ಆರ್​ಸಿಬಿಗೆ ಯಾವುದೇ ತೊಂದರೆ ಆಗುವುದಿಲ್ಲ.

ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿ ಆರ್​ಸಿಬಿಗೆ ನೇರವಾಗಿ ಪ್ಲೇಆಫ್​ಗೆ ಎಂಟ್ರಿ ಕೊಡಬಹುದು. ಒಂದು ವೇಳೆ ಒಂದು ಪಂದ್ಯದಲ್ಲಿ ಸೋತರೆ ನೆಟ್ ರನ್​ ರೇಟ್​ನ ಮೊರೆ ಹೋಗಬೇಕಾಗುತ್ತದೆ. ಹೀಗಾಗಿ ಆರ್​ಸಿಬಿ ಪಾಲಿಗೆ ಈ ಪಂದ್ಯ ನಿರ್ಣಾಯಕವಾಗಲಿದೆ.

ಇದನ್ನೂ ಓದಿ
MS Dhoni: ಸೂಪರ್ ಬೆಡಗಿ ಜೊತೆ ಸಿನಿಮಾ ನಿರ್ಮಿಸಲು ಮುಂದಾದ ಧೋನಿ..!
IPL 2022: ಸೋಲುತ್ತೆ ನಿಜ, ಆದರೆ ಇದು?, LSG ಆಟಗಾರರ ವಿರುದ್ದ ಗಂಭೀರ್ ಗರಂ
IPL 2022: ಅಂದು ಲಯನ್ಸ್, ಇಂದು ಟೈಟನ್ಸ್: ಗುಜರಾತ್ ತಂಡದ ಫ್ಯಾನ್ಸ್​ಗೆ ಹೊಸ ಚಿಂತೆ ಶುರು..!
AB De Villiers: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್: ಮತ್ತೆ ಬರ್ತಾರಂತೆ ABD

ಇದಾಗ್ಯೂ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ಮೊದಲಾರ್ಧದ ಪಂದ್ಯದಲ್ಲಿ ಆರ್​ಸಿಬಿ ವಿರುದ್ದ ಪಂಜಾಬ್ ಗೆದ್ದಿತ್ತು. ಅಷ್ಟೇ ಅಲ್ಲದೆ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್​ ಕಳಪೆ ಪ್ರದರ್ಶನ ನೀಡಿದ್ರೂ ಆರ್​ಸಿಬಿ ವಿರುದ್ದ ಮಾತ್ರ ಅತ್ಯುತ್ತಮ ಪ್ರದರ್ಶನ ನೀಡಿದೆ. ಏಕೆಂದರೆ ಉಭಯ ತಂಡಗಳು ಇದುವರೆಗೆ 29 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಪಂಜಾಬ್ ಕಿಂಗ್ಸ್ ಗೆದ್ದಿರುವುದು ಬರೋಬ್ಬರಿ 16 ಬಾರಿ. ಹಾಗೆಯೇ ಆರ್​ಸಿಬಿ ಗೆದ್ದಿದ್ದು ಕೇವಲ 13 ಬಾರಿ ಮಾತ್ರ.

ಇನ್ನು ಈ ಬಾರಿಯ ಮೊದಲ ಪಂದ್ಯದಲ್ಲೂ ಆರ್​ಸಿಬಿ ವಿರುದ್ದ ಪಂಜಾಬ್ ಕಿಂಗ್ಸ್​ 5 ವಿಕೆಟ್​ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಹೀಗಾಗಿಯೇ ಆರ್​ಸಿಬಿಗೆ ಪಂಜಾಬ್ ಕಿಂಗ್ಸ್​ ತಂಡವನ್ನು ಸೋಲಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಇದಾಗ್ಯೂ ಪ್ಲೇಆಫ್​ಗೇರುವ ಹಾದಿಯಲ್ಲಿರುವ ಆರ್​ಸಿಬಿ ಈ ಪಂದ್ಯದಲ್ಲಿ ಗೆಲ್ಲಲೇಬೇಕು. ಈ ಮೂಲಕ ಮುಂದಿನ ಪಂದ್ಯವನ್ನು ಗೆದ್ದು ನೇರವಾಗಿ ಪ್ಲೇಆಫ್​ಗೆ ಎಂಟ್ರಿ ಕೊಡಬಹುದು.
ಆದರೆ ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿಗೆ ಸೋಲುಣಿಸಿರುವ ಪಂಜಾಬ್ ವಿರುದ್ದ ಈ ಬಾರಿ ಆರ್​ಸಿಬಿ ಸೇಡು ತೀರಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.

ಪಂಜಾಬ್ ಕಿಂಗ್ಸ್ (PBKS): ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಜಾನಿ ಬೈರ್‌ಸ್ಟೋವ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಪ್ರಭಾಸಿಮ್ರಾನ್ ಸಿಂಗ್, ಒಡಿಯನ್ ಸ್ಮಿತ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ರಾಹುಲ್ ಚಹರ್, ಅರ್ಷ್‌ದೀಪ್ ಸಿಂಗ್, ಇಶಾನ್ ಪೊರೆಲ್, ಸಂದೀಪ್ ಶರ್ಮಾ, ಅಥರ್ವ ಪತ್ರಾ, ವೈಭವ್‌, ರಾಜ್ ಅಂಗದ್ ಬಾವಾ, ಬೆನ್ನಿ ಹೋವೆಲ್, ರಿಷಿ ಧವನ್, ಭಾನುಕಾ ರಾಜಪಕ್ಸೆ, ಬಲ್ತೇಜ್ ಸಿಂಗ್, ರಿತಿಕ್ ಚಟರ್ಜಿ, ನಾಥನ್ ಎಲ್ಲಿಸ್, ಪ್ರೇರಕ್ ಮಂಕಡ್.

 

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.