Virat Kohli: ಈ ಸಲ RCB ಕಪ್​ ಗೆದ್ದರೆ…ಕಿಂಗ್ ಕೊಹ್ಲಿ ಭಾವುಕ ಮಾತು

| Updated By: ಝಾಹಿರ್ ಯೂಸುಫ್

Updated on: Mar 29, 2022 | 5:23 PM

IPL 2022: ಎಬಿ ಡಿವಿಲಿಯರ್ಸ್ ಐಪಿಎಲ್​​ನಲ್ಲಿ 184 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 151.69 ಸ್ಟ್ರೈಕ್ ರೇಟ್‌ನಲ್ಲಿ 5162 ರನ್ ಗಳಿಸಿದ್ದಾರೆ. ಅಲ್ಲದೆ ಕಳೆದ ಸೀಸನ್​ನಲ್ಲೂ ಉತ್ತಮವಾಗಿ ಬ್ಯಾಟ್ ಬೀಸಿದ್ದ ಎಬಿಡಿ ದಿಢೀರಣೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು.

Virat Kohli: ಈ ಸಲ RCB ಕಪ್​ ಗೆದ್ದರೆ...ಕಿಂಗ್ ಕೊಹ್ಲಿ ಭಾವುಕ ಮಾತು
Virat Kohli - AB de Villiers
Follow us on

RCB ಈ ಬಾರಿಯ ಐಪಿಎಲ್​ ಅನ್ನು ಭರ್ಜರಿಯಾಗಿ ಆರಂಭಿಸಿದೆ. ಪಂಜಾಬ್ ಕಿಂಗ್ಸ್​ ವಿರುದ್ದದ ಮೊದಲ ಪಂದ್ಯದಲ್ಲಿ ಸೋತರೂ ಆರ್​ಸಿಬಿ ಬ್ಯಾಟ್ಸ್​ಮನ್​ಗಳು 205 ರನ್​ ಕಲೆಹಾಕುವ ಮೂಲಕ ಅಬ್ಬರಿಸಿದ್ದಾರೆ. ಈ ಬೃಹತ್ ಮೊತ್ತ ಮೂಡಿಬರುತ್ತಿದ್ದಂತೆ ಆರ್​ಸಿಬಿ ಅಭಿಮಾನಿಗಳಲ್ಲಿ ಮೂಡಿದ ಪ್ರಶ್ನೆಯೆಂದರೆ ಎಬಿಡಿ ಇಲ್ಲದೆ 205 ರನ್ ಬಾರಿಸಿದ್ದಾರೆ. ಹಾಗಿದ್ರೆ ಆರ್​ಸಿಬಿ ತಂಡದಲ್ಲಿ ಎಬಿಡಿ ಇದ್ದಿದ್ರೆ ಇನ್ನಷ್ಟು ರನ್​ಗಳ ಸುರಿಮಳೆಯಾಗುತ್ತಿತ್ತು ಎಂಬ ಚರ್ಚೆಗಳನ್ನು ಶುರು ಮಾಡಿಕೊಂಡಿದ್ದರು. ಅಂತಹದೊಂದು ಹವಾ ಸೃಷ್ಟಿಸಿ ಆರ್​ಸಿಬಿಗೆ ಎಬಿಡಿ ವಿದಾಯ ಹೇಳಿದ್ದಾರೆ. ಇದಾಗ್ಯೂ ನೋವಿನ ಸಂಗತಿ ಎಂದರೆ ಎಬಿಡಿ ಐಪಿಎಲ್ ಟ್ರೋಫಿ ಗೆಲ್ಲದೆ ವಿದಾಯ ಹೇಳಿರುವುದು. ಹೀಗಾಗಿಯೇ ವಿರಾಟ್ ಕೊಹ್ಲಿ  ಈ ಸಲ ಆರ್​ಸಿಬಿ ಕಪ್ ಗೆದ್ದರೆ ನಾವು ಎಬಿ ಡಿವಿಲಿಯರ್ಸ್ ಅವರನ್ನು ನೆನೆಸಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.

2011 ರಿಂದ ಆರ್​ಸಿಬಿ ಪರ ಆಡಿದ್ದ ಎಬಿಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ವೇಳೆ ತಂಡವು 2 ಬಾರಿ ಫೈನಲ್​ಗೆ ಪ್ರವೇಶಿಸಿದರೂ ಕಪ್ ಗೆಲ್ಲಲು ಮಾತ್ರ ಸಾಧ್ಯವಾಗಲಿಲ್ಲ. ಇದಾಗ್ಯೂ 11 ಸೀಸನ್​ನಲ್ಲಿ ಆರ್​ಸಿಬಿ ಪರ ಕಾಣಿಸಿಕೊಂಡ ಎಬಿಡಿ 360 ಡಿಗ್ರಿ ಬ್ಯಾಟಿಂಗ್ ಮೂಲಕ ಮನರಂಜನೆಯ ರಸದೌತಣ ಒದಗಿಸಿದ್ದರು. ಅಷ್ಟೇ ಅಲ್ಲದೆ ಕಳೆದ ವರ್ಷ ನವೆಂಬರ್​ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು.

ಇದಾಗ್ಯೂ ಆರ್​ಸಿಬಿ ಅಭಿಮಾನಿಗಳು ಇನ್ನೂ ಕೂಡ ಎಬಿಡಿ ಜಪ ಮಾಡುತ್ತಿರುವುದು ಅವರ ಮೇಲಿರುವ ಅಭಿಮಾನಕ್ಕೆ ಸಾಕ್ಷಿ. ಅಭಿಮಾನಿಗಳು ಮಾತ್ರವಲ್ಲ ಖುದ್ದು ವಿರಾಟ್ ಕೊಹ್ಲಿ ಕೂಡ ಎಬಿಡಿಯ ಗುಂಗಿನಲ್ಲಿದ್ದಾರೆ. ಹೀಗಾಗಿಯೇ ಈ ಬಾರಿ ಆರ್​ಸಿಬಿ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದರೆ ನಾನು ಮೊದಲು ಎಬಿ ಡಿವಿಲಿಯರ್ಸ್ ಅವರನ್ನು ತುಂಬಾ ಭಾವನಾತ್ಮಕವಾಗಿ ನೆನಪಿಸಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ.

ನನ್ನ ಪಾಲಿಗೆ ಎಬಿಡಿ ವಿಶೇಷ ವ್ಯಕ್ತಿ. ಅವರು ನಿವೃತ್ತರಾಗಲು ನಿರ್ಧರಿಸಿದಾಗ ನನಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದರು. ಆಗಷ್ಟೇ ನಾನು ವಿಶ್ವಕಪ್ ಮುಗಿಸಿ ದುಬೈನಿಂದ ಬರುತ್ತಿದ್ದೆವು. ಆ ಸಂದೇಶ ಕೇಳಿ ನಾನು ತುಂಬಾ ಭಾವುಕನಾದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಎಬಿ ಡಿವಿಲಿಯರ್ಸ್ ಐಪಿಎಲ್​​ನಲ್ಲಿ 184 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 151.69 ಸ್ಟ್ರೈಕ್ ರೇಟ್‌ನಲ್ಲಿ 5162 ರನ್ ಗಳಿಸಿದ್ದಾರೆ. ಅಲ್ಲದೆ ಕಳೆದ ಸೀಸನ್​ನಲ್ಲೂ ಉತ್ತಮವಾಗಿ ಬ್ಯಾಟ್ ಬೀಸಿದ್ದ ಎಬಿಡಿ ದಿಢೀರಣೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಇದೀಗ ಆರ್​ಸಿಬಿ ಅಭಿಮಾನಿಗಳು ಎಬಿಡಿಯನ್ನು ಮಿಸ್ ಮಾಡಿಕೊಳ್ಳುತ್ತಿದೆ. ಅದರಲ್ಲೂ ಕಿಂಗ್ ಕೊಹ್ಲಿ ಎಬಿಡಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಕಿಂಗ್ ಕೊಹ್ಲಿಯ ಆಸೆಯಂತೆ ಈ ಬಾರಿ ಆರ್​ಸಿಬಿ ಕಪ್ ಗೆಲ್ಲುವ ಮೂಲಕ ಅದನ್ನು ಎಬಿ ಡಿವಿಲಿಯರ್ಸ್​ಗೆ ಅರ್ಪಿಸಲಿ ಎಂದು ಆಶಿಸೋಣ.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು