AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: Rcb ಪ್ರಮುಖ ಆಟಗಾರರನ್ನು ಯಾಕೆ ಉಳಿಸಿಕೊಂಡಿಲ್ಲ ಗೊತ್ತಾ?

Ipl 2022 Rcb Released Players: ಯುಜ್ವೇಂದ್ರ ಚಾಹಲ್, ದೇವದತ್ ಪಡಿಕ್ಕಲ್, ಹರ್ಷಲ್ ಪಟೇಲ್, ಡೇನಿಯಲ್ಸ್ ಸ್ಯಾಮ್ಸ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಶಹಬಾಜ್ ಅಹ್ಮದ್, ಜೋಶ್ ಫಿಲಿಪ್, ಪವನ್ ದೇಶಪಾಂಡೆ

IPL 2022: Rcb ಪ್ರಮುಖ ಆಟಗಾರರನ್ನು ಯಾಕೆ ಉಳಿಸಿಕೊಂಡಿಲ್ಲ ಗೊತ್ತಾ?
Rcb
TV9 Web
| Edited By: |

Updated on: Dec 01, 2021 | 2:38 PM

Share

ಮುಂದಿನ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್​ಗಾಗಿ (IPL 2022 Mega Auction) ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತಂಡ ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಒಟ್ಟು ನಾಲ್ಕು ಆಟಗಾರರನ್ನು ಉಳಿಸಿಕೊಳ್ಳುವ ಆಯ್ಕೆಯಿದ್ದರೂ ಆರ್​ಸಿಬಿ (RCB) ಮೂವರನ್ನು ಮಾತ್ರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಆಟಗಾರರನ್ನು ಉಳಿಸಿಕೊಳ್ಳಬೇಕಿದ್ದರೆ ಆಟಗಾರರ ಜೊತೆ ಕೂಡ ಫ್ರಾಂಚೈಸಿ ಮಾತುಕತೆ ನಡೆಸುತ್ತದೆ. ಅದರಂತೆ ಆರ್​ಸಿಬಿ ನೀಡಿದ ಆಫರ್​ ಒಪ್ಪಿರುವುದು ವಿರಾಟ್ ಕೊಹ್ಲಿ (Virat Kohli), ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಮತ್ತು ಮೊಹಮ್ಮದ್ ಸಿರಾಜ್ (Mohammed Siraj) ಮಾತ್ರ. ಅಂದರೆ ಉಳಿದ ಆಟಗಾರರು ಹೆಚ್ಚಿನ ಮೊತ್ತದ ಬೇಡಿಕೆಯಿಟ್ಟಿದ್ದರು.

ಕೆಲ ಮೂಲಗಳ ಮಾಹಿತಿ ಪ್ರಕಾರ, ಆರ್​ಸಿಬಿ ನಾಲ್ಕನೇ ಆಟಗಾರನನ್ನು ಕೂಡ ಉಳಿಸಿಕೊಳ್ಳುವ ಇರಾದೆಯಲ್ಲಿತ್ತು. ಆದರೆ ಆಟಗಾರರ ನಡುವಣ ಮಾತುಕತೆ ಫಲಪ್ರದವಾಗಿರಲಿಲ್ಲ. ಕಳೆದ ಸೀಸನ್​ನಲ್ಲಿ 20 ಲಕ್ಷ ರೂ. ಪಡೆದಿದ್ದ ದೇವದತ್ ಪಡಿಕ್ಕಲ್ (Devdutt Padikkal) ಹಾಗೂ ಹರ್ಷಲ್ ಪಟೇಲ್ (Harshal Patel) ಆರ್​ಸಿಬಿ ಲೀಸ್ಟ್​ನಲ್ಲಿದ್ದರು. ಆದರೆ ಈ ಇಬ್ಬರು ಆಟಗಾರರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದ ಕಾರಣ ಹೆಚ್ಚಿನ ಮೊತ್ತ ನೀಡಬೇಕಾಗಿತ್ತು. ಅಂದರೆ ಇಲ್ಲಿ 42 ಕೋಟಿಯಲ್ಲಿ ನಾಲ್ವರನ್ನು ಉಳಿಸಿಕೊಳ್ಳುವ ಅವಕಾಶವಿತ್ತು.

ವಿರಾಟ್ ಕೊಹ್ಲಿ ಹಾಗೂ ಮ್ಯಾಕ್ಸ್​ವೆಲ್​ ಅವರನ್ನು ಆರ್​ಸಿಬಿ ಮೊದಲೇ ಫಿಕ್ಸ್​ ಮಾಡಿದ್ದರು. ಇದಾಗ್ಯೂ ಆರ್​ಸಿಬಿ ಲೀಸ್ಟ್​ನಲ್ಲಿ ದೇವದತ್ ಪಡಿಕ್ಕಲ್, ಚಹಲ್, ಸಿರಾಜ್, ಹರ್ಷಲ್ ಪಟೇಲ್ ಹಾಗೂ ಕೆಎಸ್ ಭರತ್ ಇದ್ದರು. ಆದರೆ ಕಳೆದ ಸೀಸನ್​ನಲ್ಲಿ ಯುಜುವೇಂದ್ರ ಚಹಲ್ 7 ಕೋಟಿ ಪಡೆದಿದ್ದ ಪರಿಣಾಮ ಈ ಬಾರಿ ಹೆಚ್ಚಿನ ಮೊತ್ತದ ನಿರೀಕ್ಷೆಯಲ್ಲಿದ್ದರು. ಇನ್ನೊಂದೆಡೆ ಪಡಿಕ್ಕಲ್ ಹಾಗೂ ಹರ್ಷಲ್ ಪಟೇಲ್ ಕೂಡ ದೊಡ್ಡ ಮೊತ್ತವನ್ನು ನಿರೀಕ್ಷಿಸಿದ್ದರು. ಹೀಗಾಗಿ ಆಟಗಾರರು ಹಾಗೂ ಫ್ರಾಂಚೈಸಿ ನಡುವೆ ಹಲವು ಬಾರಿ ಮಾತುಕತೆ ನಡೆದಿದೆ ಎನ್ನಲಾಗಿದೆ. ಆದರೆ ಅಂತಿಮವಾಗಿ ಸಿರಾಜ್ ಮಾತ್ರ ಆರ್​ಸಿಬಿ ಆಫರ್ ಒಪ್ಪಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಅವರನ್ನು ಮಂಗಳವಾರ ರಿಟೈನ್ ಲೀಸ್ಟ್​ಗೆ ಸೇರಿಸಲಾಗಿತ್ತು. ಉಳಿದ ಆಟಗಾರರು ಹೆಚ್ಚಿನ ಮೊತ್ತ ಬೇಡಿಕೆಯಿಟ್ಟ ಪರಿಣಾಮ 4ನೇ ಆಟಗಾರನ ಆಯ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಈ ಆಟಗಾರರು ಮೆಗಾ ಹರಾಜಿನಲ್ಲಿ ಹೆಸರು ನೀಡಲು ಮುಂದಾಗಿದ್ದಾರೆ.

ರಿಟೈನ್ ಪ್ರಕ್ರಿಯೆಯಲ್ಲಿ ಹಳೆಯ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಫ್ರಾಂಚೈಸಿ ಜೊತೆ ಆಟಗಾರರು ಕೂಡ ಮನಸ್ಸು ಮಾಡಬೇಕು. ಒಂದು ತಂಡದಲ್ಲೇ ಉಳಿದುಕೊಳ್ಳಲು ಅಥವಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ಆಟಗಾರರು ಕೂಡ ಸ್ವತಂತ್ರರು. ಇಲ್ಲಿ ಆಟಗಾರರ ಬೇಡಿಕೆ ಹಾಗೂ ಫ್ರಾಂಚೈಸಿಯ ಆಫರ್​ ಸರಿದೂಗಿದರೆ ಮಾತ್ರ ರಿಟೈನ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅದರಂತೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ನಾಲ್ಕನೇ ಆಟಗಾರನನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ ಮೂವರನ್ನು ರಿಟೈನ್ ಮಾಡಿಕೊಳ್ಳಲಾಗಿದೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ಉಳಿಸಿಕೊಂಡಿರುವ ಆಟಗಾರರು:

1- ವಿರಾಟ್ ಕೊಹ್ಲಿ – 15 ಕೋಟಿ 2- ಗ್ಲೆನ್ ಮ್ಯಾಕ್ಸ್​ವೆಲ್- 11 ಕೋಟಿ 3- ಮೊಹಮ್ಮದ್ ಸಿರಾಜ್ – 7 ಕೋಟಿ.

ಆರ್​ಸಿಬಿ ಬಿಡುಗಡೆ ಮಾಡಿರುವ ಆಟಗಾರರು:

ಯುಜ್ವೇಂದ್ರ ಚಾಹಲ್, ದೇವದತ್ ಪಡಿಕ್ಕಲ್, ಹರ್ಷಲ್ ಪಟೇಲ್, ಡೇನಿಯಲ್ಸ್ ಸ್ಯಾಮ್ಸ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಶಹಬಾಜ್ ಅಹ್ಮದ್, ಜೋಶ್ ಫಿಲಿಪ್, ಪವನ್ ದೇಶಪಾಂಡೆ, ರಜತ್ ಪಟಿದಾರ್, ಮೊಹಮ್ಮದ್ ಅಜರುದ್ದೀನ್, ಕೈಲ್ ಜೇಮಿಸನ್, ಡಾನ್ ಕ್ರಿಶ್ಚಿಯನ್, ಸುಯೇಶ್ ಪ್ರಭುದೇಸಾಯಿ, ಕೆ.ಎಸ್.ಭರತ್

(ipl 2022: why harshal patel did not get retained in rcb)

ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ
ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ