IPL 2023 Auction: ಐಪಿಎಲ್ ಮಿನಿ ಹರಾಜಿಗೆ ಡೇಟ್ ಫಿಕ್ಸ್

| Updated By: ಝಾಹಿರ್ ಯೂಸುಫ್

Updated on: Oct 16, 2022 | 5:31 PM

IPL 2023 Auction: ಆಯಾ ಫ್ರಾಂಚೈಸಿಗಳ ತವರು ಮೈದಾನದಲ್ಲೇ 2 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯ ನಡೆಯಲಿದೆ. ಈ ಹಿಂದೆ ಇದೇ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿತ್ತು.

IPL 2023 Auction: ಐಪಿಎಲ್ ಮಿನಿ ಹರಾಜಿಗೆ ಡೇಟ್ ಫಿಕ್ಸ್
IPL 2023 Auction
Follow us on

IPL 2023 Auction: ಟಿ20 ವಿಶ್ವಕಪ್​ ಶುರುವಾದ ಬೆನ್ನಲ್ಲೇ ಇತ್ತ ಬಿಸಿಸಿಐ ಐಪಿಎಲ್ (IPL 2023) ಸೀಸನ್ 16 ಗೆ ತಯಾರಿಗಳನ್ನು ಆರಂಭಿಸಿದೆ. ಇದರ ಮೊದಲ ಹೆಜ್ಜೆ ಎಂಬಂತೆ ಇದೀಗ ಐಪಿಎಲ್ 2023 ರ ಹರಾಜಿಗಾಗಿ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಈ ವರ್ಷ ಡಿಸೆಂಬರ್ 16 ರಂದು ಬೆಂಗಳೂರಿನಲ್ಲಿ ಆಟಗಾರರ ಹರಾಜು ನಡೆಸಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ. ನವೆಂಬರ್ 13 ರಂದು ಟಿ20 ವಿಶ್ವಕಪ್ ಮುಕ್ತಾಯವಾಗಲಿದ್ದು, ಇದಾಗಿ ಒಂದು ತಿಂಗಳಲ್ಲೇ ಆಟಗಾರರ ಹರಾಜು ನಡೆಯಲಿರುವುದು ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಟಿ20 ವಿಶ್ವಕಪ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಈ ಬಾರಿ ಐಪಿಎಲ್​ನಲ್ಲಿ ಡೀಲ್ ಕುದುರಿಸಿಕೊಳ್ಳುವ ಅವಕಾಶ ಆಟಗಾರರಿಗೆ ಇರಲಿದೆ.

ಮಿನಿ ಹರಾಜು:

ಈ ಬಾರಿ ಐಪಿಎಲ್​ನಲ್ಲಿ ಮಿನಿ ಹರಾಜು ನಡೆಯಲಿದೆ. ಕಳೆದ ಬಾರಿ ಮೆಗಾ ಹರಾಜು ನಡೆದಿರುವ ಹಿನ್ನಲೆಯಲ್ಲಿ ಈ ಸಲ ಆಯಾ ತಂಡವು ಬಿಡುಗಡೆ ಮಾಡುವ ಆಟಗಾರರ ಸ್ಥಾನಕ್ಕಾಗಿ ಹರಾಜು ಪ್ರಕ್ರಿಯೆ ನಡೆಯಲಿದೆ. ಅದಕ್ಕೂ ಮುನ್ನ ಎಲ್ಲಾ ತಂಡಗಳು ಉಳಿಸಿಕೊಳ್ಳುವ ಹಾಗೂ ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿಗೆ ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ
T20 World Cup 2022: ಟಿ20 ವಿಶ್ವಕಪ್​ನಲ್ಲಿ ವಿದೇಶಿ ತಂಡದ ಪರ ಆಡುತ್ತಿರುವ ಭಾರತೀಯ ಮೂಲದವರು ಯಾರೆಲ್ಲಾ ಗೊತ್ತಾ?
T20 World Cup 2022 All Squad: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
T20 World Cup 2022: ಭಾರತ-ಪಾಕ್ ಅಲ್ಲ, ಈ ಬಾರಿ ಸೂರ್ಯ vs ರಿಜ್ವಾನ್..!
Team India: ಟೀಮ್ ಇಂಡಿಯಾದ ಮೊದಲ ಟಿ20 ತಂಡದಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?

ಇತ್ತ ಟಿ20 ವಿಶ್ವಕಪ್ ಜರುಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಫ್ರಾಂಚೈಸಿಗಳಿಗೆ ಆಟಗಾರರ ಫಾರ್ಮ್​ ಅನ್ನು ಕೂಡ ಗಣನೆಗೆ ತೆಗೆದುಕೊಳ್ಳಬಹುದು. ಈ ಮೂಲಕ ಯಾರನ್ನು ತಂಡದಲ್ಲೇ ಉಳಿಸಿಕೊಳ್ಳಬೇಕು ಮತ್ತು ಬಿಡುಗಡೆ ಮಾಡಬೇಕು ಎಂಬುದನ್ನು ನಿರ್ಧರಿಸಬಹುದು.

ಹರಾಜು ಮೊತ್ತ ಹೆಚ್ಚಳ:

ಕಳೆದ ಬಾರಿ ಮೆಗಾ ಹರಾಜಿನಲ್ಲಿ ಪ್ರತಿ ತಂಡಗಳಿಗೆ 90 ಕೋಟಿ ರೂ. ನಿಗದಿ ಮಾಡಲಾಗಿತ್ತು. ಆದರೆ ಈ ಬಾರಿ ಈ ಮೊತ್ತವನ್ನು 95 ಕೋಟಿಗೆ ಏರಿಸಲಾಗುತ್ತದೆ ಎಂದು ವರದಿಯಾಗಿದೆ. ಈ ಮೂಲಕ ಆಟಗಾರರ ಖರೀದಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲು ಐಪಿಎಲ್ ಆಡಳಿತ ಮಂಡಳಿ ಚಿಂತಿಸಿದೆ.

ಹೋಮ್ & ಅವೇ ಮ್ಯಾಚ್:

ಐಪಿಎಲ್ 2023 ಅನ್ನು ಭಾರತದಲ್ಲೇ ನಡೆಸಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲದೆ ಪ್ರೇಕ್ಷಕರಿಗೆ ಸ್ಟೇಡಿಯಂನಲ್ಲೇ ಪಂದ್ಯ ವೀಕ್ಷಿಸಲು ಅವಕಾಶ ನೀಡಲಿದೆ. ವಿಶೇಷ ಎಂದರೆ ಈ ಹಿಂದಿನಂತೆ ಮುಂದಿನ ಸೀಸನ್​ನಲ್ಲಿ ಹೋಮ್ ಗ್ರೌಂಡ್ ಹಾಗೂ ಅವೇ ಗ್ರೌಂಡ್​ಗಳಲ್ಲಿ ಪಂದ್ಯ ನಡೆಯಲಿದೆ.

ಅಂದರೆ ಆಯಾ ಫ್ರಾಂಚೈಸಿಗಳ ತವರು ಮೈದಾನದಲ್ಲೇ 2 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯ ನಡೆಯಲಿದೆ. ಈ ಹಿಂದೆ ಇದೇ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ ಕಳೆದ ಎರಡು ಸೀಸನ್​ಗಳಿಂದ ಕೊರೋನಾ ಕಾರಣದಿಂದಾಗಿ ನಿಗದಿತ ಮೈದಾನದಲ್ಲೇ ಮಾತ್ರ ಪಂದ್ಯ ಆಯೋಜಿಸಲಾಗುತ್ತಿದೆ. ಈ ಬಾರಿ ಮತ್ತೆ ಆಯಾ ತಂಡಗಳ ತವರಿನಲ್ಲೇ ಮೈದಾನದಲ್ಲೇ ಪಂದ್ಯಗಳು ನಡೆಯಲಿದೆ.